Asianet Suvarna News Asianet Suvarna News

ಪತ್ನಿಯ ಬರ್ತ್‌ಡೇ ಸಪ್ರೈಸ್ ನೀಡಿದ ಪತಿ, ವಿಚ್ಛೇದನಕ್ಕೆ ಕಾರಣವಾಯ್ತು ಕೊಟ್ಟ ಆ ಗಿಫ್ಟ್

ಪತಿ – ಪತ್ನಿ ಸಂಬಂಧ ಬಹಳ ಸೂಕ್ಷ್ಮವಾಗಿದ್ದು. ಒಬ್ಬರು ದಾರಿ ತಪ್ಪಿದ್ರೂ ದಾಂಪತ್ಯ ಹಾಳಾಗುತ್ತದೆ. ಈ ಪತಿ ಅದ್ಯಾವ ಉದ್ದೇಶದಿಂದ ಗಿಫ್ಟ್ ನೀಡಿದ್ನೋ ಗೊತ್ತಿಲ್ಲ, ಅದೇ ಉಡುಗೊರೆ ಪತ್ನಿ ದೂರವಾಗಲು ಕಾರಣವಾಗಿದೆ. 
 

Husband Gift Wife Doorbell With Secret Camera On Birthday roo
Author
First Published Nov 4, 2023, 12:39 PM IST

ಪ್ರತಿ ವರ್ಷ ಬರುವ ವಿಶೇಷ ದಿನಗಳಲ್ಲಿ ಹುಟ್ಟುಹಬ್ಬ ಕೂಡ ಒಂದು. ಆ ದಿನವನ್ನು ಎಲ್ಲರೂ ಸಂಭ್ರಮದಿಂದ ಆಚರಿಸ್ತಾರೆ. ಪ್ರೀತಿಯಲ್ಲಿರುವಾಗ, ಮದುವೆಯಾದ್ಮೇಲೆ ಈ ಹುಟ್ಟುಹಬ್ಬ ಮತ್ತಷ್ಟು ಮಹತ್ವವನ್ನು ಪಡೆಯುತ್ತದೆ. ನಮ್ಮ ಬರ್ತ್ ಡೇ ನೆನಪಿಲ್ಲವೆಂದ್ರೂ ಸಂಗಾತಿ ಹುಟ್ಟುಹಬ್ಬ ನೆನಪಿರಬೇಕು. ಇಲ್ಲವೆಂದ್ರೆ ದೊಡ್ಡ ಗಲಾಟೆ ನಡೆಯೋದು ಗ್ಯಾರಂಟಿ. ಅನೇಕ ಬಾರಿ ಸಂಗಾತಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿಲ್ಲ ಎನ್ನುವ ಕಾರಣಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡುತ್ತದೆ.

ಹುಟ್ಟುಹಬ್ಬ (Birthday) ನೆನಪಿಟ್ಟುಕೊಂಡು ವಿಶ್ ಮಾಡಿದ್ರೆ ಸಾಲದು ಉಡುಗೊರೆ ನೀಡಬೇಕು. ಗಿಫ್ಟ್ (Gift) ನೀಡಿದ್ರೂ ಅದ್ರಲ್ಲಿ ಕೆಲವೊಂದು ಸಮಸ್ಯೆಗಳಿರುತ್ತವೆ. ಸಂಗಾತಿಗೆ ಇಷ್ಟವಾಗುವ ಉಡುಗೊರೆ ನೀಡಿದ್ರೆ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಅದೇ ಅವರಿಗೆ ಗಿಫ್ಟ್ ಇಷ್ಟವಾಗಿಲ್ಲವೆಂದ್ರೆ ಮತ್ತೆ ಸಮಸ್ಯೆ ಶುರುವಾಗುತ್ತದೆ. ಇಲ್ಲೊಂದು ದಂಪತಿಗೆ ಬರ್ತ್ ಡೇಯಲ್ಲಿ ಪತಿ ನೀಡಿದ ಉಡುಗೊರೆಯೇ ಶಾಪವಾಗಿದೆ. ಇಬ್ಬರು ವಿಚ್ಛೇದನ ಪಡೆಯಲು ಈ ಗಿಫ್ಟ್ ಕಾರಣವಾಗಿದೆ. ಅಲಿಸಿಟಿಕೌಂಟರ್ ಹೆಸರಿನ ಡೇಟಿಂಗ್ ವೆಬ್ಸೈಟ್ (Website) ನಲ್ಲಿ ವ್ಯಕ್ತಿಯೊಬ್ಬ ಇವರಿಬ್ಬರ ಕಥೆಯನ್ನು ಹಂಚಿಕೊಂಡಿದ್ದಾನೆ. ಇದಕ್ಕೆ ಸಾಕಷ್ಟು ಕಮೆಂಟ್ ಕೂಡ ಬಂದಿದೆ.

ಅಮ್ಮ ಎಂದ್ರೆ ಹೀಗಿರ್ಬೇಕು ನೋಡಿ... ಒಲವಿನ ನಿಲ್ದಾಣದ ಪ್ರಾಚಿ ತಾಯಿಗೆ ಭೇಷ್​ ಭೇಷ್​ ಅಂತಿದ್ದಾರೆ ನೆಟ್ಟಿಗರು

ಪತ್ನಿ ಹುಟ್ಟುಹಬ್ಬಕ್ಕೆ ಪತಿ ನೀಡಿದ್ದ ಈ ಗಿಫ್ಟ್ : ಪತ್ನಿಯ ಹುಟ್ಟುಹಬ್ಬಕ್ಕೆ ಆಭರಣ, ಬಟ್ಟೆ, ಮೇಕಪ್ ಕಿಟ್, ಬ್ಯಾಗ್ ಹೀಗೆ ಆಕೆಗೆ ಇಷ್ಟವಾಗುವ ವಸ್ತುಗಳನ್ನು ನೀಡೋದು ಸಾಮಾನ್ಯ. ಕೆಲವರು ಟ್ರಿಪ್, ಲಾಂಗ್ ಡ್ರೈವ್ ಅಂತಾ ಪತ್ನಿಗೆ ಇಷ್ಟವಾಗುವ ಕೆಲಸ ಮಾಡ್ತಾರೆ. ಸ್ನೇಹಿತರನ್ನು ಕರೆದು ದೊಡ್ಡ ಪಾರ್ಟಿ ಏರ್ಪಡಿಸ್ತಾರೆ. ಆದ್ರೆ ಈ ವ್ಯಕ್ತಿ ಪತ್ನಿಗೆ ಈ ಎಲ್ಲ ಉಡುಗೊರೆ ಬಿಟ್ಟು ಡೋರ್ ಬೆಲ್ ನೀಡಿದ್ದಾನೆ. ಡೋರ್ ಬೆಲ್ ಸಾಮಾನ್ಯದ್ದಲ್ಲ. ಇದು ಬಾಗಿಲಿಗೆ ಬರುವ ವ್ಯಕ್ತಿಗಳ ಫೋಟೋ, ವಿಡಿಯೋ ಸೆರೆ ಹಿಡಿಯುವಂತಹದ್ದು. ಅಂದ್ರೆ ಡೋರ್ ಬೆಲ್ ಗೆ ಕ್ಯಾಮರಾ ಅಳವಡಿಸಲಾಗಿತ್ತು. ಪತಿ ನೀಡಿದ ಡೋರ್ ಬೆಲ್ ಸ್ವೀಕರಿಸಿದ ಪತ್ನಿ ಅದನ್ನು ಮನೆ ಮುಂದೆ ಹಾಕಿದ್ದಾಳೆ. 

ಇಬ್ಬರ ವಿಚ್ಛೇದನಕ್ಕೆ ಕಾರಣವಾಯ್ತು ಈ ವಿಷ್ಯ : ಡೋರ್ ಬೆಲ್ ಕ್ಯಾಮರಾ ಸೌಲಭ್ಯ ಹೊಂದಿದ್ದಲ್ಲದೆ ಅಲ್ಲಿ ಏನು ನಡಿತಿದೆ ಅನ್ನೋದು ಪತಿಯ ಮೊಬೈಲ್ ನಲ್ಲಿ ಕಾಣಿಸ್ತಿತ್ತು. ಆರಂಭದಲ್ಲಿ ಎಲ್ಲವೂ ಸರಿ ಇತ್ತು. ಆದ್ರೆ ಒಂದು ದಿನ ಮನೆಗೆ ಅಪರಿಚಿತ ವ್ಯಕ್ತಿ ಬಂದಿದ್ದನ್ನು ಪತಿ ಕ್ಯಾಮರಾ ಮೂಲಕ ನೋಡಿದ್ದಾನೆ. ಮೊದಲು ಮನೆ ಬಾಗಿಲು ಬೆಲ್ ಆಗಿದೆ. ನಂತ್ರ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಮನೆ ಬಾಗಿಲನ್ನು ತೆಗೆದ ಪತ್ನಿ ಹೊರಗೆ ಬಂದಿದ್ದಾಳೆ. ಅಷ್ಟೇ ಅಲ್ಲ ಬೆಲ್ಗೆ  ಹಾಕಿದ್ದ ಕ್ಯಾಮರಾ ಮುಂದೆಯೇ ಅಪರಿಚಿತ ವ್ಯಕ್ತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾಳೆ. ಪತ್ನಿಯ ಈ ವರ್ತನೆ ನೋಡಿ ಪತಿ ಕಂಗಾಲಾಗಿದ್ದಾನೆ. ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂಬ ಸತ್ಯ ಆತನಿಗೆ ಗೊತ್ತಾಗಿದೆ. ಮನೆಗೆ ಬಂದು ರಂಪ ಮಾಡಿದ್ದಲ್ಲದೆ ಪತ್ನಿಯಿಂದ ದೂರವಾಗುವ ಮಹತ್ವದ ನಿರ್ಧಾರಕ್ಕೆ ಬಂದಿದ್ದಾನೆ. ಪತಿ ಪ್ರೀತಿಯಿಂದ ಕೊಟ್ಟಿದ್ದ ಉಡುಗೊರೆಯೇ ದಾಂಪತ್ಯದ ಬಿರುಕಿಗೆ ಕಾರಣವಾಯ್ತು ಎಂದು ಡೇಟಿಂಗ್ ಸೈಟ್ ನಲ್ಲಿ ವ್ಯಕ್ತಿ ಬರೆದಿದ್ದಾನೆ.

ಪ್ರೆಗ್ನೆನ್ಸಿ ರೂಮರ್: ಜನರ ಬಾಯಿ ಮುಚ್ಚಿಸಿದ ಕತ್ರಿನಾ ಕೈಫ್

ಈ ಪೋಸ್ಟ್ ನೋಡಿ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಪತ್ನಿ ದ್ರೋಹ ಕ್ಯಾಮರಾದಿಂದ ಹೊರಬಂತು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಡೋರ್ ಬೆಲ್ ಬ್ಯಾನ್ ಮಾಡ್ಬೇಕು ಎಂದಿದ್ದಾರೆ. ಇನ್ನು ಕೆಲವರು ಡೋರ್ ಬೆಲ್ ನಲ್ಲಿ ಕ್ಯಾಮರಾ ಇದೆ ಎಂಬುದು ಗೊತ್ತಿದ್ದೂ ಯಾಕೆ ಆಕೆ ಹೀಗೆ ಮಾಡಿದ್ಲು ಎಂದು ಕಮೆಂಟ್ ಮಾಡಿದ್ದಾರೆ. 
 

Follow Us:
Download App:
  • android
  • ios