ಪ್ರೆಗ್ನೆನ್ಸಿ ರೂಮರ್: ಜನರ ಬಾಯಿ ಮುಚ್ಚಿಸಿದ ಕತ್ರಿನಾ ಕೈಫ್
ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಗರ್ಭಧಾರಣೆಯ ಸುದ್ದಿಯ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಆದರೆ ಈಗ ಕತ್ರಿನಾ ಎಲ್ಲಾ ವದಂತಿಗಳು ಗಾಳಿಗೆ ತೂರುವಂತೆ ಮಾಡಿದ್ದಾರೆ. ಹೇಗೆ ಗೊತ್ತಾ?

ಸಾಮಾಜಿಕ ಮಾಧ್ಯಮಗಳಲ್ಲಿನ ವದಂತಿಗಳು ಬಾಲಿವುಡ್ ನಟಿ ಕತ್ರೀನಾ ಕೈಫ್ ಗರ್ಭಿಣಿಯಾಗಿದ್ದಾರೆ ಎನ್ನುತ್ತಿದ್ದವು. ಈ ಕಾರಣದಿಂದಾಗಿ ಅವರು ಸಡಿಲವಾದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಸುದ್ದಿಗಳು ಹರಿದಾಡುತ್ತಲೇ ಇವೆ.
ಇದುವರೆಗೂ ಕತ್ರಿನಾ ಕೈಫ್ ತನ್ನ ಪ್ರೆಗ್ನೆಂಸಿ ರೂಮರ್ಸ್ ಬಗ್ಗೆ ಮೌನವಹಿಸಿದ್ದರು. ಆದರೆ ಈಗ ಅವರು ಏನನ್ನೂ ಹೇಳದೆ ಸಖತ್ ಸ್ಟೈಲ್ ಆಗಿ ಜನರ ಬಾಯಿ ಮುಚ್ಚಿದ್ದಾರೆ.
ಕತ್ರಿನಾ ಕೈಫ್ ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಸೌಂದರ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹಸಿರು ಬಣ್ಣದ ಸೈಡ್ ಸ್ಲಿಟ್‌ನ ಬಾಡಿಕಾನ್ ಫಿಟ್-ರಾಪ್ ಉಡುಪನ್ನು ಧರಿಸಿ ಕಾಣಿಸಿಕೊಂಡಿದ್ದಾರೆ.
ಈ ಸಮಯದಲ್ಲಿ ಅವರು ಕನಿಷ್ಠ ಕಿವಿಯೋಲೆಗಳು ಮತ್ತು ಸಾಟಲ್ ಮೇಕ್ಅಪ್ ಜೊತೆಗೆ ತನ್ನ ನೋಟವನ್ನು ಪೂರ್ಣಗೊಳಿಸಿದರು. ಈ ನೋಟದಲ್ಲಿ ಕತ್ರಿನಾ ಸಖತ್ ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದರು.
ಈಗ ಕತ್ರಿನಾ ಅವರನ್ನು ಈ ಲುಕ್‌ನಲ್ಲಿ ನೋಡಿದ ನಂತರ ಅವರ ಗರ್ಭಧಾರಣೆಯ ರೂಮರ್‌ಗಳು ಕೂಡ ಕೊನೆಗೊಂಡಿದೆ.ಈ ಹಿಂದೆ ಕೆಲವು ದಿನಗಳವರೆಗೆ ಕತ್ರಿನಾ ಸಡಿಲವಾದ ಬಟ್ಟೆಗಳಲ್ಲಿ ಕಂಡುಬಂದಿದ್ದರು ಮತ್ತು ಇದು ಅವರು ತಾಯಿಯಾಗಲಿದ್ದಾರೆ. ಬೇಬಿ ಬಂಪ್ ಅನ್ನು ಮರೆ ಮಾಚುತ್ತಿದ್ದಾರೆ ಎಂದು ಜನರು ಊಹಿಸಿದ್ದರು.
ರಾಸಾರಿಯೊ ಬ್ರಾಂಡ್‌ನ ಕತ್ರಿನಾ ಅವರ ಈ ಡ್ರೆಸ್‌ನ ಬೆಲೆ $ 1,870 ಎನ್ನಲಾಗಿದೆ ಅಂದರೆ ಭಾರತೀಯ ರೂಪಾಯಿಗಳಲ್ಲಿ 1.55 ಲಕ್ಷಕ್ಕೆ ಸಮ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.