Asianet Suvarna News Asianet Suvarna News

ಅಮ್ಮ ಎಂದ್ರೆ ಹೀಗಿರ್ಬೇಕು ನೋಡಿ... ಒಲವಿನ ನಿಲ್ದಾಣದ ಪ್ರಾಚಿ ತಾಯಿಗೆ ಭೇಷ್​ ಭೇಷ್​ ಅಂತಿದ್ದಾರೆ ನೆಟ್ಟಿಗರು

ಮಕ್ಕಳಿಗೆ ತಿದ್ದಿ ಬುದ್ಧಿ ಹೇಳುವ ಅಮ್ಮ ಹೇಗಿರಬೇಕು ಎಂದು ಒಲವಿನ ನಿಲ್ದಾಣದ ಪ್ರಾಚಿ ತಾಯಿಯನ್ನು ನೋಡಿ ಕಲಿಯಬೇಕು ಎಂದು ಹೇಳುತ್ತಿದ್ದಾರೆ. 
 

How should be the mother Olavina Nildana serial Prachis mother set example suc
Author
First Published Nov 3, 2023, 8:18 PM IST

ಮಕ್ಕಳು ದಾರಿ ತಪ್ಪಿದಾಗ ಅವರಿಗೆ ತಿದ್ದಿ ಬುದ್ಧಿ ಹೇಳುವಲ್ಲಿ ಪಾಲಕರ ಅದರಲ್ಲಿಯೂ ಮುಖ್ಯವಾಗಿ ಅಮ್ಮನ ಪಾತ್ರ ಬಹು ಮಹತ್ವದ್ದು. ಇಂದಿನ ಎಷ್ಟೋ ಮಕ್ಕಳು ಪಾಲಕರ ಮಾತು ಕೇಳುವುದಿಲ್ಲ, ಅವರ ಬುದ್ಧಿ ಮಾತಿಗೆ ಕಿವಿಗೊಡುವುದಿಲ್ಲ ಎನ್ನುವುದು ನಿಜವಾದರೂ, ಮಕ್ಕಳಿಗೆ ತಿಳಿಯುವ ಹಾಗೆ ತಿದ್ದಿ ಬುದ್ಧಿ ಹೇಳಿದರೆ, ಅವರಿಗೆ ಅವರದ್ದೇ ಆದ ಭಾಷೆಯಲ್ಲಿ ಬುದ್ಧಿ ಕಲಿಸಿದರೆ ಎಷ್ಟೋ ಮಕ್ಕಳು ಉದ್ಧಾರ ಆಗುವುದು ಉಂಟು. ಇದಕ್ಕೆ ಉದಾಹರಣೆ ಆಗಿದೆ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಒಲವಿನ ನಿಲ್ದಾಣ ಸೀರಿಯಲ್​ನ ಈ ಕಂತು. ಇನ್ನೊಬ್ಬಳ ಬದುಕಿನಲ್ಲಿ ಆಟವಾಡ್ತಿರೋ ಮಗಳಿಗೆ ಬುದ್ಧಿ ಹೇಳಿಕೊಟ್ಟ ಈ ಅಮ್ಮನ ಗುಣಗಾನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಅಮ್ಮ ಎಂದರೆ ಹೀಗಿರಬೇಕು, ಅಮ್ಮ ಸರಿಯಾಗಿದ್ದರೆ ಮಕ್ಕಳೂ ಸರಿಯಾಗಿರುತ್ತಾರೆ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆಯಾಗ್ತಿದೆ.

ಅಷ್ಟಕ್ಕೂ, ಆಗಿರೋದು ಏನೆಂದರೆ... ಈ ಸೀರಿಯಲ್​  ತಾರಿಣಿ ಮತ್ತು ಸಿದ್ಧಾಂತ್ ನಡುವಿನ ಪ್ರೇಮ, ಜಗಳ, ವಿರಹ, ನೋವಿನ ಕಥೆ ಇದೆ. ಇದೀಗ ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಕಾರಣ ಆಗಿದ್ದು ತಾರಿಣಿ ತಾತ. ಒಂದು ಕಾಲದಲ್ಲಿ ಪ್ರೇಮಿಸುತ್ತಿದ್ದ ತಾರಿಣಿ ಮತ್ತು ಸಿದ್ಧಾಂತ್‌ ಏನೇನೋ ಘಟನೆಗಳು ನಡೆದು ಸಪರೇಟ್ ಆಗಿರುತ್ತಾರೆ. ಕೆಟ್ಟ ಮನಸ್ಸಿನ ಧೀರಜ್ ಏನೇನೋ ಐಡಿಯಾ ಮಾಡಿ ತಾರಿಣಿಗೆ ಹತ್ತಿರಾಗುವ ಪ್ರಯತ್ನ ಮಾಡುತ್ತಾನೆ. ಕೊನೆಗೂ ಆಕೆಯ ಜೊತೆಗೆ ತನ್ನ ವಿವಾಹ ನಡೆಯುವ ಹಾಗೆ ನೋಡಿಕೊಳ್ಳುತ್ತಾನೆ. ಆದರೆ ತತ್ವಜ್ಞಾನಿಯಂತೆ ಇರುವ ತಾರಿಣಿಯ ಪ್ರೀತಿಯ ತಾತನಿಗೆ ತಾರಿಣಿ ಮತ್ತು ಸಿದ್ಧಾಂತ್ ನಡುವಿನ ನಿಜ ಪ್ರೀತಿಯ ಅರಿವಿದೆ. ಅವರಿಬ್ಬರನ್ನೂ ಒಂದು ಮಾಡುವ ಪ್ರಯತ್ನದಲ್ಲೇ ತಾತ ಇರುತ್ತಾರೆ.  

'ಸೀತಾ ರಾಮ' ತಂಡದ ಬಾಯಲ್ಲಿ ಕೇಳಿ ಸಪ್ತಸಾಗರದಾಚೆಯಲ್ಲೋ ಹಾಡು: ಸಿಹಿನೇ ಸೂಪರ್​ ಎಂದ ಫ್ಯಾನ್ಸ್​!

ಅದೇ ಇನ್ನೊಂದೆಡೆ,  ಪ್ರಾಚಿ ಎನ್ನುವ ಹೊಸ ಪಾತ್ರ ಎಂಟ್ರಿ ಆಗುತ್ತದೆ. ಮನೆ ಕಷ್ಟ ನಿಭಾಯಿಸಲು ಸಿದ್ಧಾಂತ್‍ಗೆ ಒಳ್ಳೆ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಅದಕ್ಕೆ ತುಂಬಾ ಖುಷಿಯಾಗಿದ್ದಾರೆ. ಇದು ಸಹ ತಾರಿಣಿ ಕೃಪೆಯಿಂದ ಸಿಕ್ಕಿರುವ ಕೆಲಸ, ಸಿದ್ಧಾಂತ್ ಇನ್ಮೇಲೆ ಮನೆ ನೋಡಿಕೊಳ್ಳಬಹುದು ಎಂದು ಖುಷಿಯಾಗಿದ್ದಾನೆ. ಆದರೆ ಸಿದ್ಧಾಂತ್ ಆಫೀಸ್‍ನಲ್ಲಿ ಒಬ್ರು ಲೇಡಿ ಬಾಸ್ ಇದ್ದಾಳೆ. ಅವಳೇ ಪ್ರಾಚಿ.  ಮೊದ ಮೊದಲು ಪ್ರಾಚಿಗೆ ಸಿದ್ಧಾಂತ್ ಮೇಲೆ ಅಷ್ಟು ಒಳ್ಳೆ ಒಪಿನಿಯನ್ ಇರುವುದಿಲ್ಲ. ಆದರೆ  ಪ್ರಾಜೆಕ್ಟ್ ಗೆ ಕೊಟ್ಟ ಐಡಿಯಾದಿಂದ ಪ್ರಾಚಿಗೆ ಇಷ್ಟ ಆಗಿದ್ದಾನೆ. ಈಗ ಸಿದ್ಧಾಂತ್​ ಮೇಲೆ ಪ್ರಾಚಿಗೆ ಇಷ್ಟವಾಗ್ತಿದೆ. 

ಈಗ ಪ್ರಾಚಿ ಹಳಿತಪ್ಪುತ್ತಿದ್ದಾಳೆ ಎನ್ನುವ ವಿಷ್ಯ ಅಮ್ಮನಿಗೆ ತಿಳಿದಿದೆ. ಅದಕ್ಕಾಗಿಯೇ ಆಕೆ ತಾರಿಣಿಯ ಜೊತೆ ಮಾಡಿರುವ ಅನ್ಯಾಯವನ್ನು ಸರಿಪಡಿಸುವಂತೆ ಹೇಳಿದ್ದಾಳೆ. ಮಗಳಿಗೆ ಬುದ್ಧಿ ಹೇಳಿದ ಅಮ್ಮ, ಹೀಗೆ ಮಾಡದಿದ್ದರೆ ತಾವು ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಾಳೆ. ಅಮ್ಮನ ಮಾತಿನ ಚಾಟಿ ಏಟು ಪ್ರಾಚಿಗೆ ತಾಗಿದೆ. ಅಮ್ಮನ ಮಾತಿಗೆ ವೀಕ್ಷಕರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಇದ್ದರೆ ಇಂಥ ಅಮ್ಮ ಇರಬೇಕು ಎನ್ನುತ್ತಿದ್ದಾರೆ. 

ಹಸಿರಿನಲ್ಲಿ ಕಂಗೊಳಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಕಂಠಿಯನ್ನೇ ಮದ್ವೆಯಾಗಿ ಮೆಸ್ಸು ಅಂತಿದ್ದಾರೆ ಫ್ಯಾನ್ಸ್‌!
 

Follow Us:
Download App:
  • android
  • ios