Asianet Suvarna News Asianet Suvarna News

ಥೂ ಇದೆಂಥಾ ನರಕ, ಗಂಡನ ಜೊತೆ ಮಾತ್ರವಲ್ಲ ದಿನಾ ಮೈದುನನ ಜೊತೆನೂ ಮಲಗ್ಬೇಕಂತೆ !

ಮದುವೆ ಅನ್ನೋದು ಸುಂದರವಾದ ಸಂಬಂಧ. ಆದ್ರೆ ಕೆಲವೊಬ್ಬರ ಪಾಲಿಗಿದು ಅಕ್ಷರಶಃ ನರಕಸದೃಶವಾಗಿಬಿಡುತ್ತದೆ. ಗಂಡನ ಕಿರುಕುಳ ಅಥವಾ ಅತ್ತೆಯ ಕಿರುಕುಳ ತಾಳಲಾರದೆ ಒದ್ದಾಡುವಂತಾಗುತ್ತದೆ. ಹಾಗೆಯೇ ಇದೆ ಇಲ್ಲೊಬ್ಬಳ ಸ್ಥಿತಿ. ರಾತ್ರಿ ಮೈದುನನ ಜೊತೆ ಮಲಗ್ಬೇಕು ಅನ್ನೋದು ಗಂಡನ ಒತ್ತಾಯವಂತೆ. ಆಗಲ್ಲ ಅನ್ತಿರೋ ಪತ್ನಿಗೆ ಡಿವೋರ್ಸ್ ಕೊಡ್ತೀನಿಂತ ಧಮ್ಕಿ ಹಾಕ್ತಾನಂತೆ.

Husband Forces wife to sleep with his brother, Unless will give Divorce Vin
Author
First Published Jan 12, 2023, 11:36 AM IST

ಮದ್ವೆ ಆದ ಬಳಿಕ ಕೆಲವೊಬ್ಬರ ದಾಂಪತ್ಯ ಜೀವನ ತುಂಬಾ ಚೆನ್ನಾಗಿದ್ದರೆ, ಇನ್ನು ಕೆಲವರು ಹಲವರು ಒಂದಲ್ಲಾ ಒಂದು ಸಮಸ್ಯೆ ಅನುಭವಿಸುತ್ತಾರೆ. ಕೆಲವೊಬ್ಬರಿಗೆ ಅತ್ತೆಯ ಕಾಟವಾದರೆ, ಇನ್ನು ಕೆಲವರಿಗೆ ಗಂಡನ ಕಾಟ. ಕೆಲವೊಬ್ಬರು ವರದಕ್ಷಿಣಗೆ ಕಾಟ ಕೊಟ್ರೆ, ಇನ್ನು ಕೆಲವರು ಮಕ್ಕಳನ್ನು ಮಾಡಿಕೊಳ್ಳುವಂತೆ, ಮನೆ ಗೆಲಸ ಮಾಡವಂತೆ ಕಾಟ ಕೊಡುತ್ತಾರೆ. ಇದಲ್ಲದೆ ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡು ಹೆಂಡತಿಗೆ ಕಾಟ ಕೊಡೋ ಗಂಡಂದಿರೂ ಇದ್ದಾರೆ. ಹಾಗೆಯೇ ಇಲ್ಲೊಬ್ಬ ಪತಿ, ತನ್ನ ತಮ್ಮನ ಜೊತೆಗೆ ಹಾಸಿಗೆಯಲ್ಲಿ ಮಲಗುವಂತೆ ಒತ್ತಾಯಿಸಿ ಹೆಂಡ್ತಿಗೆ ಕಾಟ ಕೊಡ್ತಿದ್ದಾನಂತೆ. ಉತ್ತರ ಪ್ರದೇಶದ ರಾಯ್ ಬರೇಲಿಯ ಮಹಿಳೆ ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾಳೆ. ಮೈದುನನ ಜೊತೆ ಮಲಗೋಲ್ಲ ಅನ್ನೋ ಹೆಂಡ್ತಿಗೆ ಡಿವೋರ್ಸ್ ಕೊಡ್ತೀನಿಂತ ಬೆದರಿಕೆ ಬೇರೆ ಹಾಕ್ತಿದ್ದಾನಂತೆ. 

ಡಿವೋರ್ಸ್ ಕೊಡ್ಬಾರ್ದು ಅಂದ್ರೆ ಮೈದುನನ ಜೊತೆ ಮಲಗು ಅಂದ ಗಂಡ
ಗಂಡನಿಂದ ತನಗಾಗ್ತಿರೋ ತೊಂದರೆಯ ಬಗ್ಗೆ ಮಹಿಳೆಯೇ (Woman) ಹೇಳ್ಕೊಂಡಿದ್ದಾಳೆ. 'ನಾನು ಮದುವೆಯಾದಾಗ ನನಗೆ 18 ವರ್ಷ. ಎರಡು-ಮೂರು ತಿಂಗಳ ನಂತರ, ಪತಿ ನಿಂದನೆ ಮತ್ತು ಜಗಳ ಆರಂಭಿಸಿದರು. ತರಕಾರಿಯಲ್ಲಿ ಉಪ್ಪು ಕಡಿಮೆ ಇದ್ದರೆ, ಮಸಾಲೆಯುಕ್ತವಾಗಿದ್ದರೆ ಎಸೆಯುತ್ತಿದ್ದರು. ತವರು ಮನೆಗೆ ಹಿಂತಿರುಗಲು ಅವರು ಬಿಡುತ್ತಿಲ್ಲ. ನಾನು ಎಲ್ಲವನ್ನೂ ಸಹಿಸಿಕೊಂಡು ಕಷ್ಟಪಟ್ಟು ಜೀವನ (Life) ಸಾಗಿಸುತ್ತಿದ್ದೆ. ಆದರೆ ಇತ್ತೀಚಿಗೆ ಗಂಡ ಡಿವೋರ್ಸ್ ನೀಡಿ ನನ್ನನ್ನೂ ನನ್ನ ಮಗುವನ್ನೂ ಮನೆಯಿಂದ ಹೊರ ಹಾಕಲು ಮುಂದಾದರು. ನಾನು ಕೈ ಕಾಲು ಹಿಡಿದು ಹಾಗೆ ಮಾಡದಂತೆ ಬೇಡಿಕೊಂಡೆ. ನನ್ನ ಜೀವನ ಹಾಳಾಗುತ್ತದೆ ಎಂದು ಅಲವತ್ತುಕೊಂಡೆ. ಅದಕ್ಕೆ ಗಂಡ, ಡಿವೋರ್ಸ್ ನೀಡುವುದಿಲ್ಲ. ಆದರೆ ದಿನವೂ ಮೈದುನನ ಜೊತೆ ಮಲಗಬೇಕು ಎಂಬ ಷರತ್ತನ್ನು ಒಡ್ಡಿದರು' ಎಂದು ಮಹಿಳೆ ಹೇಳಿದ್ದಾಳೆ.

ಗಂಡ ಬೇಡ, ಅವ್ನೇ ಸಾಕು..ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!

ಮೂರು ತಿಂಗಳ ಕಾಲ ಗಂಡನ ದಬ್ಬಾಳಿಕೆ ಸಹಿಸಿದ ಮಹಿಳೆ
'ಪೊಲೀಸರ ಮೊರೆ ಹೋಗಿದ್ದರೆ ಪತಿಗೆ ಜೈಲು ಶಿಕ್ಷೆಯಾಗುತ್ತಿತ್ತು. ಆದರೆ ಸಂಬಂಧ (Relationship) ಉಳಿಸಲು ನಾನು ಮೈದುನನ ಜೊತೆ ಸಂಬಂಧ ಇಟ್ಟುಕೊಳ್ಳಲು ಒಪ್ಪಿಕೊಂಡೆ. ಮೈದುನ ದಿನಾ ನನ್ನೊಂದಿಗೆ ಸಂಭೋಗಿಸುತ್ತಿದ್ದ. ರಾತ್ರಿ ನಾನು ತುಂಬಾ ಅಳುತ್ತಿದ್ದೆ. ತುಂಬಾ ಕೊಳಕು ಅನಿಸಿತು. ನನ್ನ ಬಗ್ಗೆ ನನಗೆ ಅಸಹ್ಯ ಅನಿಸತೊಡಗಿತು. ಎಲ್ಲರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆ. ತಿನ್ನುವುದರಲ್ಲಿಯೂ ಆಸಕ್ತಿ ಕಡಿಮೆಯಾಯಿತು. ಆದರೆ ಮುಂದೆ ಏನು ಮಾಡಬೇಕೆಂದು ತಿಳಿದಿರಲ್ಲಿಲ್ಲ. ಮೈದುನನ ಜೊತೆ ಸಂಬಂಧ ಇಟ್ಟುಕೊಳ್ಳುವುದೇ ನನೆ ದಾಂಪತ್ಯವನ್ನು ಉಳಿಸಿಕೊಳ್ಳುವ ಏಕೈಕ ಮಾರ್ಗವಾಗಿತ್ತು. ಮೈದುನನ ದಬ್ಬಾಳಿಕೆ ಮೂರು ತಿಂಗಳ ಕಾಲ ಮುಂದುವರೆಯಿತ' ಎಂದು ಮಹಿಳೆ ತಿಳಿಸಿದ್ದಾಳೆ. 

ಸಂಬಂಧ ಉಳಿಸಿಕೊಳ್ಳಲು ನರಕಯಾತನೆ ಪಟ್ಟರೂ ಡಿವೋರ್ಸ್ ಕೊಟ್ಟ
ಮಾರ್ಚ್ 2017ರಲ್ಲಿ ಮದುವೆ (Marriage)ಯಾಯಿತು. ಮದ್ವೆಯ ಆರಂಭದ ದಿನಗಳು ಚೆನ್ನಾಗಿದ್ದವು. ನಂತರ ಅವಾಚ್ಯವಾಗಿ ಬೈಯಲು, ಹೊಡೆಯಲು ಆರಂಭಿಸಿದರು. ನಾನು ನನ್ನ ಅತ್ತೆಗೆ ದೂರು ನೀಡಿದರೆ ಅವರು ತೊಂದರೆ ಇಲ್ಲ ಎಂದು ಹೇಳುತ್ತಾರೆ. ಗಂಡ ಹೊಡೆಯುವುದು ಸಾಮಾನ್ಯ ಎಂದು ಹೇಳಿದರು. ನಾನು ಪೆಟ್ಟು, ಒದೆಯ ಮಧ್ಯೆ ಮಗಳನ್ನು ಸಾಕುತ್ತಿದ್ದೆ. ಎರಡು ವರ್ಷಗಳ ನಂತರ ಗಂಡ ವರದಕ್ಷಿಣೆಗಾಗಿ ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದನು. ನಿನ್ನ ತಂದೆಗೆ ಹಣ ಕೇಳು ಎಂದನು. ತಂದೆ ಈಗಾಗಲೇ ಸಾಲದಲ್ಲಿರುವ ಕಾರಣ ಇದು ಸಾಧ್ಯವಾಗಲ್ಲಿಲ್ಲ. ನಾನು ನನ್ನ ತಾಯಿಯ ಮನೆಗೆ ಹೋಗಲು ಪ್ರಯತ್ನಿಸಿದಾಗ, ನನಗೆ ಅವಕಾಶ ನೀಡಲಿಲ್ಲ. ನಾನು ಅಲ್ಲಿಗೆ ಹೋಗಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಅವರು ಭಾವಿಸಿದ್ದರು. ಮತ್ತೆ ತಮ್ಮನ ಜೊತೆ ಮಲಗು, ನಾನು ನಿನ್ನನ್ನು ಉಳಿಸಿಕೊಳ್ಳುತ್ತೇನೆ ಎಂದರು. ನನಗೆ ಆಯ್ಕೆ ಇರಲಿಲ್ಲ. ನಾನು ಮೂರು ತಿಂಗಳ ಕಾಲ ಮೈದುನನ ಜೊತೆ ಸಂಬಂಧ ಹೊಂದಿದ್ದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ.

ಮನೆಗೆ ಮಡದಿ, ಹೊರಗಡೆ ಪಿಂಕಿಯೂ ಜೊತೆಗಿರಬೇಕು ಅಂತಾನೆ ಗಂಡ, ಏನಪ್ಪಾ ಮಾಡೋದು?

ಇಷ್ಟೆಲ್ಲಾ ಆದರೂ ಗಂಡ ನನಗೆ ಡಿವೋರ್ಸ್ ನೀಡಿದನು. ಹೀಗಾಗಿ ನಾನು ಗಂಡನ (Husband) ವಿರುದ್ಧ ಪ್ರಕರಣ ದಾಖಲಿಸಿದೆ. ಎಂಟು ದಿನ ನಿರಂತರವಾಗಿ ಪೊಲೀಸ್ ಠಾಣೆಗೆ ಸುತ್ತಾಡುತ್ತಿದ್ದೆ. ನಂತರ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಕಳೆದ 8 ತಿಂಗಳಿನಿಂದ ಪತಿ ಜೈಲಿನಲ್ಲಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ. 

Follow Us:
Download App:
  • android
  • ios