ಗರ್ಲ್‌ಫ್ರೆಂಡ್ ಜೊತೆ ರಹಸ್ಯವಾಗಿ ಮೋಮೋಸ್ ಡೇಟಿಂಗ್ ಮಾಡಿದ ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇಬ್ಬರು ಕಾರಿನಲ್ಲಿ ಕುಳಿತು ಮೋಮೋಸ್ ತಿನ್ನುತ್ತಿರುವಾಗಲೇ ಪತ್ನಿಯ ಎಂಟ್ರಿಯಾಗಿದೆ ಮುಂದೆ ನಡೆದಿದ್ದೇನು?
ಮೀರತ್ (ಅ.03) ಮನೆಯಲ್ಲಿ ಪತ್ನಿ, ಹೊರಗಡೆ ಗರ್ಲ್‌ಫ್ರೆಂಡ್ ಜೊತೆ ಸುತ್ತಾಡುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಅದೆಷ್ಟೇ ರಹಸ್ಯವಾಗಿಟ್ಟರೂ ಹಲವು ಬಾರಿ ಸಣ್ಣ ಕಾರಣಗಳಿಂದ ಹೊರಬಂದಿದೆ. ಇದೀಗ ಪತ್ನಿಗೆ ಗೊತ್ತಿಲ್ಲದ ಗರ್ಲ್‌ಫ್ರೆಂಡ್ ಜೊತೆ ಸುತ್ತಾಟ ಆರಂಭಿಸಿದ್ದಾನೆ. ಗರ್ಲ್‌ಫ್ರೆಂಡ್ ಜೊತೆ ಡಿನ್ನರ್ ಡೇಟ್, ಹಲವು ತಾಣಗಳಿಗೆ ಸುತ್ತಾಡಿದ್ದಾನೆ. ಪತಿಯ ಮೇಲೆ ಅನುಮಾನ ಹೆಚ್ಚಾಗುತ್ತಿದ್ದಂತೆ ಪತ್ನಿ ಪತ್ತೆ ಹೆಚ್ಚಲು ಅಖಾಡಕ್ಕೆ ಇಳಿದಿದ್ದಾಳೆ. ಹೀಗೆ ಗರ್ಲ್‌ಫ್ರೆಂಡ್ ಜೊತೆ ಕಾರಿನಲ್ಲಿ ಕುಳಿತು ಮೋಮೋಸ್ ತಿನ್ನುತ್ತಿರುವಾಗಲೇ ಪತ್ನಿ ಎಂಟ್ರಿಕೊಟ್ಟಿದ್ದಾಳೆ. ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆದರೆ ಮುಂದೆ ನಡೆದ ಘಟನೆಯಿಂದ ಇದೀಗ ಪತಿ ಹಾಗೂ ಗರ್ಲ್‌ಫ್ರೆಂಡ್ ಇಬ್ಬರ ಮೇಲೂ ಕೇಸ್ ದಾಖಲಾಗಿದ್ದು,ಅರೆಸ್ಟ್ ಆಗಿದ್ದಾರೆ.
ಗಂಡನ ಬೆದರಿಕೆಗೆ ಸುಮ್ಮನಾಗಿದ್ದ ಪತ್ನಿ
ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿದೆ. ಮಯಾಂಕ್ ಹಾಗೂ ಸುನಿತಾಗೆ ಗಂಡ, ಹೆಂಡತಿ. ಮದುವೆಯಾಗಿ ವರ್ಷಗಳು ಉರುಳಿದೆ. ಆದರೆ ಮಯಾಂಕ್ ಕಳೆದ ಕೆಲ ತಿಂಗಳುಗಳಿಂದ ಬೇರೊಬ್ಬಳ ಜೊತೆ ಸುತ್ತಾಡುತ್ತಿರುವ ವಿಚಾರ ಪತ್ನಿ ಗಮನಕ್ಕೂ ಬಂದಿದೆ. ಈ ಕುರಿತು ಪತಿಯನ್ನು ಕೇಳಿದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಇಷ್ಟೇ ಅಲ್ಲ ಕಚೇರಿಯಲ್ಲಿ ಎಲ್ಲರ ಜೊತೆಗೆ ಮಾತನಾಡಲೇಬೇಕು, ಇದನ್ನು ಅನುಮಾನದಿಂದ ನೋಡಿದರೆ ಹೇಗೆ ಎಂದು ಗದರಿಸಿದ್ದಾನೆ. ಅಲ್ಲಿಗೆ ಪತ್ನಿ ಕೂಡ ಸುಮ್ಮನಾಗಿದ್ದಾಳೆ.
ಮೋಮೋಸ್ ಡೇಟ್
ಪತಿಯ ನಡೆಗಳು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಸುನೀತಾ ಅಖಾಡಕ್ಕೆ ಇಳಿದಿದ್ದಾಳೆ. ಪತಿಯನ್ನು ಹಿಂಬಾಲಿಸಲು ಆರಂಭಿಸಿದ್ದಾಳೆ. ಹೀಗೆ ಕೆಲಸದ ನಿಮಿತ್ತ ಹೋಗುವುದಾಗಿ ಕಾರಿನಲ್ಲಿ ಹೊರಟ ಪತಿಯನ್ನು ಸುನೀತಾ ಹಿಂಬಾಲಿಸಿದ್ದಾಳೆ. ಪತಿ ನೇರವಾಗಿ ತನ್ನ ಗರ್ಲ್‌ಫ್ರೆಂಡ್ ಬಳಿ ಬಂದು ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಮೋಮೋಸ್ ತಿನ್ನಲು ಹೋಗಿದ್ದಾನೆ.
ಮಯಾಂಕ್ ಹಾಗೂ ಆತನ ಗರ್ಲ್‌ಫ್ರೆಂಡ್ ಕಾರಿನಿಂದ ಇಳಿದಿಲ್ಲ. ಕಾರಿನೊಳಗೆ ಕೂತ ಮೋಮೋಸ್ ಖರೀದಿಸಿ ತಿನ್ನುತ್ತಿರುವಾಗಲೇ ಪತ್ನಿ ಎಂಟ್ರಿಕೊಟ್ಟಿದ್ದಾಳೆ. ಕಾರಿನ ಬಳಿ ಬಂದ ಪತ್ನಿ ಸುನೀತಾ ನೋಡಿ ಮಯಾಂಕ್ ಆತಂಕಗೊಂಡಿದ್ದಾನೆ. ಇಷ್ಟು ದಿನ ಏನಿಲ್ಲ, ಏನಿಲ್ಲ ಎನ್ನುತ್ತಿದ್ದ ಮಯಾಂಕ್ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಪತ್ನಿ ಕಾರಿನ ಹತ್ತಿರ ಬರುತ್ತಿದ್ದಂತೆ ಕಾರಿನ ವಿಂಡೋ ಏರಿಸಿ ಡೋರ್ ಲಾಕ್ ಮಾಡಿದ್ದಾನೆ. ಇತ್ತ ಪತ್ನಿ ಕಾರಿನ ವಿಂಡೋಗೆ ಗುದ್ದಿದ್ದಾಳೆ. ಕಾರಿನಿಂದ ಇಳಿಯುವಂತೆ ಸೂಚಿಸಿದ್ದಾಳೆ. ಅಷ್ಟರಲ್ಲೇ ಕಾರು ಸ್ಟಾರ್ಟ್ ಮಾಡಿದ ಪತಿ ಸ್ಥಳದಿಂದ ತೆರಳಲು ಪ್ಲಾನ್ ಮಾಡಿದ್ದಾನೆ. ಆದರೆ ಪತ್ನಿ ಕಾರಿನ ಮುಂದೆ ನಿಂತಿದ್ದಾಳೆ.
ಪತಿ ಮಯಾಂಕ್ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರಿನ ಬಾನೆಟ್ ಹಿಡಿದುಕೊಂಡು ಕಾರಿನ ಮೇಲೆ ಮಲಗಿದ್ದಾಳೆ. ಆದರೆ ಪತಿ ಕಾರು ಚಲಾಯಿಸಿಕೊಂಡು ಸಾಗಿದ್ದಾನೆ. 100 ಮೀಟರ್‌ಗೂ ಹೆಚ್ಚು ದೂರ ಹೀಗೆ ಸಾಗಿದ್ದಾನೆ. ಪತ್ನಿ ಕಾಪಾಡಿ ಕಾಪಾಡಿ ಎಂದು ಚೀರಾಡಿದರೂ ಪತಿ ನಿಲ್ಲಿಸಲಿಲ್ಲ. ಈ ವೇಳೆ ಸಾರ್ವಜನಿಕರು ಮಧ್ಯಪ್ರವೇಶಸಿದ್ದಾರೆ. ಕಾರಿಗೆ ಅಡ್ಡವಾಗಿ ವಾಹನ ತಂದಿದ್ದಾರೆ. ಹೀಗಾಗಿ ಪತಿ ಮಯಾಂಕ್ ಕಾರ ನಿಲ್ಲಿಸಿದ್ದಾನೆ. ಜಗಳ ತಾರಕಕ್ಕೇರಿದೆ. ಪೊಲೀಸರು ಆಗಮಿಸಿದ್ದಾರೆ. ಪತ್ನಿಯನ್ನು ಕೊಲ್ಲಲು ಯತ್ನಿಸಿದ ಕಾರಣಕ್ಕೆ ಪತಿ ಮಯಾಂಕ್ ಹಾಗೂ ಆತನ ಗರ್ಲ್‌ಫ್ರೆಂಡ್ ಮೇಲೆ ಕೇಸ್ ದಾಖಲಾದಿದೆ. ಜೊತೆಗೆ ಅಕ್ರಮ ಸಂಬಂಧ, ವಂಚನೆ ಪ್ರಕರಣ ಕೂಡ ದಾಖಲಾಗಿದೆ.


