Asianet Suvarna News Asianet Suvarna News

ಆಸ್ಟ್ರೇಲಿಯಾದಲ್ಲಿ ಅನುಶ್ರೀ: ಮಾನವನಾಗಿ ಹುಟ್ಟಿದ ಮೇಲೆ ಏನೇನ್​ ಕಂಡೆ ಎಂದ ಕುಡ್ಲ ಬೆಡಗಿಗೆ ಫ್ಯಾನ್ಸ್​ ರಿಪ್ಲೈ ಹೀಗಿದೆ

ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರುವ ಆ್ಯಂಕರ್​ ಅನುಶ್ರೀ ಅಲ್ಲಿಯ ಸ್ಕೈಪಾಯಿಂಟ್​ ಬಳಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಫ್ಯಾನ್ಸ್​ ಹೇಳಿದ್ದೇನು?
 

Anchor Anushree in Australia giving pose in front of SkyPoint Fans reacts  suc
Author
First Published Nov 14, 2023, 1:05 PM IST

ಜೀ ಕುಟುಂಬ ಅವಾರ್ಡ್ಸ್​ ಫಂಕ್ಷನ್​ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ಅತಿ ಸುಂದರವಾಗಿ ನಿರೂಪಣೆ ಮಾಡಿ, ಬೆಸ್ಟ್​ ಆ್ಯಂಕರ್​ ಪ್ರಶಸ್ತಿಯನ್ನೂ ಪಡೆದ ನಟಿ ಆ್ಯಂಕರ್​ ಅನುಶ್ರೀ ಈಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಅಲ್ಲಿ ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು, ಅವುಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. What did I see after being born as a human ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಕನ್ನಡದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಏನೇನ್​ ಕಂಡೆ ಎಂದು ಕೇಳಿದ್ದಾರೆ. ಡಾ.ರಾಜ್​ಕುಮಾರ್​ ಅವರು ಜೋಗದ ಕುರಿತು ಹೇಳಿದ ಈ ಸಾಲನ್ನು ಅನುಶ್ರೀ ಅವರು ಆಸ್ಟ್ರೇಲಿಯಾದ ಸ್ಕೈಪಾಯಿಂಟ್​ ಎದುರು ಫೋಟೋಗೆ ಪೋಸ್​ ಕೊಟ್ಟು ಹೇಳಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿದ್ದರೆ, ಹಲವರು ನಾವು ಇಲ್ಲಿ ಕುಡ್ಲ ಬೆಡಗಿಯ ನಗು ಕಂಡೆವು ಎಂದಿದ್ದಾರೆ. ಇನ್ನು ಕೆಲವರು ಆಸ್ಟ್ರೇಲಿಯಾದಲ್ಲಿ ಮಂಗಳೂರು ನಗುವುದನ್ನು ಕಂಡೆವು ಎಂದಿದ್ದಾರೆ. ಇನ್ನು ಹಲವರು ಸೋ ಸ್ವೀಟ್​ ಎಂದು ಕಮೆಂಟ್​ ಮಾಡಿದ್ದಾರೆ.

ಸ್ಕೈ ಪಾಯಿಂಟ್​ ಇದು ಆಸ್ಟ್ರೇಲಿಯಾದ ಅತಿ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. ಸ್ಕೈಸ್ಯಾಪರ್​ ಆಸ್ಟ್ರೇಲಿಯಾದ ಅತ್ಯಂತ ಎತ್ತರದ ಕಟ್ಟಡ ಎನಿಸಿದ್ದರೆ, ಸ್ಕೈಪಾಯಿಂಟ್ ಕೂಡ ಅದರಲ್ಲಿ ಒಂದು. ಸ್ಕೈಸ್ಯಾಪರ್​  ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್ ಕೋಸ್ಟ್‌ನಲ್ಲಿರುವ Q1 ಗಗನಚುಂಬಿ ಕಟ್ಟಡ ಎಂದೇ ಪ್ರಸಿದ್ಧಿ ಪಡೆದಿದ್ದು,  ಇದು 322.5 ಮೀಟರ್‌ಗಳಷ್ಟು ಎತ್ತರವಾಗಿದೆ. ಇದು Q1, ಐಫೆಲ್ ಟವರ್ ಮತ್ತು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಎತ್ತರವಾಗಿದೆ. ಇನ್ನು ಅನುಶ್ರೀ ಅವರು ಫೋಟೋಗೆ ಪೋಸ್​ ಕೊಟ್ಟಿರುವ ಸ್ಕೈಪಾಯಿಂಟ್ ಬಗ್ಗೆ ಹೇಳುವುದಾದರೆ, ಇದು  ಅತಿ ಎತ್ತರದ ಕಟ್ಟಡ ಎನಿಸಿರುವ Q1 ಕಟ್ಟಡದ 77 ಮತ್ತು 78 ನೇ ಹಂತದಲ್ಲಿದೆ. ಇದು ಎರಡು ಹಂತಗಳಲ್ಲಿ ಮ್ಯೂಸಿಯಂ, ಹವಾಮಾನ ಕೇಂದ್ರ, ಥಿಯೇಟರ್ ಮತ್ತು ಲಾಂಜ್ ಬಾರ್ ಅನ್ನು ಒಳಗೊಂಡಿದೆ. ಇದು ಆಸ್ಟ್ರೇಲಿಯಾದ ಏಕೈಕ ಕಡಲತೀರದ ವೀಕ್ಷಣಾ ಸ್ಥಳವಾಗಿದೆ. ಇಲ್ಲಿ ನಿಂತು ಕಡಲ ತೀರದ ಸೌಂದರ್ಯವನ್ನು ಸವಿಯಬಹುದು. ಇಲ್ಲಿ ಸುಮಾರು  400 ಜನರು ಒಟ್ಟಿಗೇ ಇದು ಸೌಂದರ್ಯ ವೀಕ್ಷಣೆ ಮಾಡಬಹುದಾಗಿದೆ.  

ವಿರಹ... ಹುಲಿಯ ಉಗುರು ತರಹ... ಡ್ಯಾನ್ಸ್​ ಮೂಲಕ ನೋವು ತೋಡಿಕೊಂಡ ಆ್ಯಂಕರ್​ ಅನುಶ್ರೀ!

ಇದರ ಎದುರು ನಿಂತು ಆ್ಯಂಕರ್​ ಅನುಶ್ರೀ ಫೋಟೋಗೆ ಪೋಸ್ ನೀಡಿದ್ದಾರೆ. ಇದು ಈಕೆಯ ಫ್ಯಾನ್ಸ್​ಗೆ ಸಕತ್​ ಖುಷಿ ತಂದಿದ್ದು, ಆ್ಯಂಕರ್​ ಅನುಶ್ರೀಯವರ ಎನರ್ಜಿಗೆ ಭೇಷ್​ ಎನ್ನುತ್ತಿದ್ದಾರೆ. ಇನ್ನು ಅನುಶ್ರೀ ಅವರ ಆ್ಯಂಕರಿಂಗ್​ ಬಗ್ಗೆ ಅಂತೂ ಹೇಳುವುದೇ ಬೇಡ. ಆ್ಯಂಕರ್​ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್​ ಮಾಡುವಲ್ಲಿ ಅನುಶ್ರೀ ಸಕತ್​ ಫೇಮಸ್​. ಇದೀಗ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಅನುಶ್ರೀ ಅವರು ಆ್ಯಂಕರಿಂಗ್​ ಮಾಡುವಾಗ ಸಕತ್​ ಜೋಕ್​ ಮಾಡಿದ್ದರು. ಇದರ ಬಗ್ಗೆಯೂ ಕಮೆಂಟ್​ನಲ್ಲಿ ಉಲ್ಲೇಖಿಸಿರುವ ಫ್ಯಾನ್ಸ್​ ಅದಕ್ಕೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಅಂದಹಾಗೆ ಅನುಶ್ರೀ, ಅನುಶ್ರೀ ಮಂಗಳೂರಿನ ತುಳು ಕುಟುಂಬದಲ್ಲಿ ಜನಿಸಿದರು. ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ETV ಯಲ್ಲಿ ಶುರು ಮಾಡಿದ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ಇವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ತಂದು ಕೊಟ್ಟಿತು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ‘ಬೆಂಕಿಪೊಟ್ಣ’ ಸಿನಿಮಾ ಇವರ ಮೊದಲ ಸಿನಿಮಾ. ಈ ಚಿತ್ರದಲ್ಲಿ,  NAK ಮೀಡಿಯಾದಿಂದ Best debut Actress ಅವಾರ್ಡ್ ಪಡೆದರು. ‘ಮುರಳಿ ಮೀಟ್ಸ್ ಮೀರಾ’ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ. ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ. 

ನನ್ನನ್ನು ಸ್ಕೂಲ್​ನಿಂದ ಓಡಿಸಿಬಿಟ್ರು! ಬಾಲ್ಯದ ಗೆಳೆಯ ರವಿಚಂದ್ರನ್​ ಜತೆ ಡಿ.ಕೆ.ಶಿವಕುಮಾರ್​ ಸವಿ ನೆನಪು

 

Follow Us:
Download App:
  • android
  • ios