Hug Day : ತಬ್ಬಿ ಕೊಳ್ಳಲೂ ದಿನವೊಂದಿದೆ, ದಿನಾ ತಬ್ಬಿಕೊಂಡ್ರೆ ಲಾಭ ಅಪಾರ!
ಸಂಗಾತಿಯನ್ನು ನೀವು ಪ್ರತಿ ದಿನ ತಬ್ಬಿಕೊಳ್ತಿರಬಹುದು. ಸ್ನೇಹಿತರು ಸಿಕ್ಕಾಗ ಹಗ್ ಮಾಡಿ ಶುಭಕೋರುತ್ತಿರಬಹುದು. ಆದ್ರೆ ಎಷ್ಟು ಬಾರಿ ತಬ್ಬಿಕೊಂಡ್ರೆ ಏನೇನು ಪ್ರಯೋಜನವಿದೆ ಅನ್ನೋದು ನಿಮಗೆ ಗೊತ್ತಿಲ್ಲದೆ ಇರಬಹುದು. ಹಗ್ ಡೇ ಬಗ್ಗೆ ನಾವು ಕೆಲ ವಿಷ್ಯ ನಿಮಗೆ ಹೇಳ್ತೆವೆ.
ಪ್ರೇಮಿಗಳ ವೀಕ್ ನ 6ನೇ ದಿನ ಅಂದ್ರೆ ಫೆಬ್ರವರಿ 12ರಂದು ಹಗ್ ಡೇ ಆಚರಣೆ ಮಾಡಲಾಗುತ್ತದೆ. ದಂಪತಿ, ಸಂಗಾತಿ ಮಾತ್ರವಲ್ಲ ಸ್ನೇಹಿತರು, ಅಪರೂಪಕ್ಕೆ ಸಿಕ್ಕ ವ್ಯಕ್ತಿಗಳು ಕೂಡ ಪರಸ್ಪರ ಹಗ್ ಮಾಡಿ ವಿಶ್ ಮಾಡಿಕೊಳ್ಳೋದನ್ನು ನೀವು ನೋಡಿರಬಹುದು. ಈ ಅಪ್ಪುಗೆಯಿಂದ ಸಾಕಷ್ಟು ಪ್ರಯೋಜನವಿದೆ. ಯಾರನ್ನಾದರೂ ಭೇಟಿಯಾದಾಗ, ಯಾರನ್ನಾದರೂ ಸಮಾಧಾನಪಡಿಸುವಾಗ ಅಥವಾ ಸಂತೋಷವನ್ನು ಹಂಚಿಕೊಳ್ಳುವಾಗ ವ್ಯಕ್ತಿಗಳನ್ನು ತಬ್ಬಿಕೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ನಾವಿಂದು ಹಗ್ ಡೇಗೆ ಸಂಬಂಧಿಸಿದ ಕೆಲ ಮಾಹಿತಿಯನ್ನು ನಿಮಗೆ ನೀಡ್ತೇವೆ.
ಹಗ್ ಡೇ (Hugh Day) ಯನ್ನು ಏಕೆ ಆಚರಣೆ ಮಾಡಲಾಗುತ್ತದೆ? : ಯಾರನ್ನಾದರೂ ತಬ್ಬಿಕೊಂಡಾಗ ನಮ್ಮ ದೇಹದಲ್ಲಿ ಅನೇಕ ಹಾರ್ಮೋನು (Hormone) ಗಳು ಬಿಡುಗಡೆಯಾಗುತ್ತವೆ. ಅದು ನಮ್ಮ ಆರೋಗ್ಯ (Health) ಕ್ಕೆ ಒಳ್ಳೆಯದು. ಪ್ರೇಮಿಗಳ ವಾರದಲ್ಲಿ ಹಗ್ ಡೇ ಆಚರಣೆ ಮಾಡ್ತಿರೋದ್ರಿಂದ ಇದು ಪ್ರೇಮಿಗಳಿಗೆ ವಿಶೇಷವಾಗಿದೆ. ಈ ದಿನ ಪ್ರೀತಿ ಪಾತ್ರರನ್ನು ಹಗ್ ಮಾಡಿದ್ರೆ ನಾವು ಪ್ರೀತಿಸುವವರ ಮೇಲೆ ನಮ್ಮ ಪ್ರೀತಿ (love) ಮತ್ತು ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ.
ಎಷ್ಟು ಬಾರಿ ಹಗ್ ಮಾಡೋದು ಒಳ್ಳೆಯದು? : ಸುಮ್ಮನೆ ಒಂದು ಬಾರಿ ತಬ್ಬಿಕೊಂಡಿದ್ರೆ ಅದ್ರ ಸಂಪೂರ್ಣ ಪ್ರಯೋಜನ ಸಿಗಲು ಸಾಧ್ಯವಿಲ್ಲ. ಒತ್ತಡವನ್ನು ಕಡಿಮೆ ಮಾಡಲು, ಸಂವಹನವನ್ನು ಸುಧಾರಿಸಲು, ಪ್ರೀತಿ ಹೆಚ್ಚಿಸಲು ಬಯಸಿದ್ರೆ ಕನಿಷ್ಠ ನಾಲ್ಕು ಬಾರಿ ತಬ್ಬಿಕೊಳ್ಳಬೇಕು. ಹೆಚ್ಚಿನ ಲಾಭ ಪಡೆಯಲು ನೀವು 8ರಿಂದ 12 ಬಾರಿ ತಬ್ಬಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಆರೋಗ್ಯವಾಗಿರಬೇಕೆಂದು ಬಯಸುವ ನೀವು ಆದಷ್ಟು ಹಗ್ ಮಾಡಿ ಎನ್ನುತ್ತಾರೆ ತಜ್ಞರು.
Valentine's day 2023: ಈ 4 ರಾಶಿಯವರು ಪ್ರೀತಿ ಪಡೆಯಲು ಯಾವ ಮಟ್ಟಕ್ಕಾದರೂ ಹೋಗಬಲ್ಲರು!
ಅಪ್ಪುಗೆಯಿಂದ ಇದೆ ಈ ಎಲ್ಲ ಪ್ರಯೋಜನ :
ಕಡಿಮೆಯಾಗುತ್ತೆ ಒತ್ತಡ (Stress) : ಕುಟುಂಬದ ಸದಸ್ಯರು, ಸ್ನೇಹಿತ ಅಥವಾ ಪರಿಚಯಸ್ಥರು ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಅಥವಾ ತೊಂದರೆಯಲ್ಲಿರುವಾಗ. ಅಂತಹ ಪರಿಸ್ಥಿತಿಯಲ್ಲಿ, ಅವನನ್ನು ತಬ್ಬಿಕೊಳ್ಳುವುದು ಅವನ ಒತ್ತಡವನ್ನು ಕಡಿಮೆ ಮಾಡುತ್ತದೆ. ವ್ಯಕ್ತಿಯನ್ನು ಸ್ಪರ್ಶಿಸಿದ್ರೆ ಅಥವಾ ತಬ್ಬಿಕೊಂಡ್ರೆ ಒತ್ತಡ ಕಡಿಮೆಯಾಗುತ್ತೆ ಎಂದು ತಜ್ಞರು ಹೇಳ್ತಾರೆ. ತಬ್ಬಿಕೊಂಡಾಗ ಮೆದುಳಿನ ಕೆಲವು ಭಾಗಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಲು ಶುರು ಮಾಡುತ್ತವೆ. ಇದ್ರಿಂದ ಮನಸ್ಸು ಶಾಂತವಾಗುತ್ತದೆ.
ರೋಗದಿಂದ ರಕ್ಷಣೆ : ಒತ್ತಡ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡ ಕಡಿಮೆಯಾದ್ರೆ ಮನುಷ್ಯ ಆರೋಗ್ಯವಂತನಾಗ್ತಾನೆ. ಹಗ್ ಮಾಡಿದಾಗ ಒತ್ತಡ ಕಡಿಮೆಯಾಗುತ್ತದೆ. 400ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ತಬ್ಬಿಕೊಳ್ಳುವುದ್ರಿಂದ ಖಾಯಿಲೆಗೆ ಒಳಗಾಗುವ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಡಿಮೆ ಎಂಬುದು ಗೊತ್ತಾಗಿದೆ.
ಹೃದಯದ ಆರೋಗ್ಯದಲ್ಲಿ ಸುಧಾರಣೆ (Heart Health) : ತಬ್ಬಿಕೊಳ್ಳುವುದು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಅಧ್ಯಯನದಿಂದ ಗೊತ್ತಾಗಿದೆ. 20 ನಿಮಿಷ ತಬ್ಬಿಕೊಂಡಿದ್ದವರ ರಕ್ತದೊತ್ತಡ ಕಡಿಮೆಯಾಗಿತ್ತು. ಹೃದಯದ ಬಡಿತ ಕೂಡ ನಿಧಾನವಾಗಿತ್ತು ಎಂದು ತಜ್ಞರು ಹೇಳಿದ್ದಾರೆ.
ಭಯ ದೂರ : ಪರಸ್ಪರ ಅಪ್ಪಿಕೊಳ್ಳೋದ್ರಿಂದ ಭಯ ದೂರವಾಗುತ್ತದೆ ಎನ್ನುತ್ತಾರೆ ತಜ್ಞರು. ಇದು ಆತಂಕವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಬರೀ ಟೆಡ್ಡಿ ಬೇರ್ ಹಗ್ ಮಾಡಿದ್ರೂ ಭಯ ದೂರವಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
ಸಂತೋಷ ಪ್ರಾಪ್ತಿ : ಯಾವುದೇ ವ್ಯಕ್ತಿ ಬಳಿ ಕುಳಿತ್ರೆ, ಆತನನ್ನು ಸ್ಪರ್ಶಿಸಿದ್ರೆ ಅಥವಾ ಆತನನ್ನು ತಬ್ಬಿಕೊಂಡ್ರೆ ಆಕ್ಸಿಟೋಸಿನ್ ಕೆಮಿಕಲ್ ಅಂದರೆ ಕಡ್ಲ್ ಹಾರ್ಮೋನ್ ಮಟ್ಟ ಹೆಚ್ಚುತ್ತದೆ. ಇದ್ರಿಂದ ವ್ಯಕ್ತಿಗೆ ಸಂತೋಷ ಸಿಗುತ್ತದೆ.
ಗಂಡಸರು ಹೀಗ್ ಹೇಳ್ತಾರೆ ಅಂದ್ರೆ ನಿಮ್ಮ ಮೇಲಿದೆ ಕಾಳಜಿ ಎಂದರ್ಥ!
ಕಡಿಮೆಯಾಗುತ್ತೆ ಶರೀರದ ನೋವು : ದೇಹದಾದ್ಯಂತ ನೋವನ್ನು ಉಂಟುಮಾಡುವ ಫೈಬ್ರೊಮ್ಯಾಲ್ಗಿಯ ಕಾಯಿಲೆಗೆ 6 ಚಿಕಿತ್ಸಾ ವಿಧಾನಗಳನ್ನು ನೀಡಲಾಗಿದೆ. ಅದ್ರಲ್ಲಿ ಹಗ್ ಕೂಡ ಸೇರಿದೆ. ನೋವಿನ ವ್ಯಕ್ತಿಯನ್ನು ತಬ್ಬಿಕೊಂಡಾಗ ಸ್ವಲ್ಪ ಮಟ್ಟಿಗೆ ನೋವು ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.