Asianet Suvarna News Asianet Suvarna News

Childhood Effects: ಬಾಲ್ಯದ ಪ್ರಭಾವಳಿ ನಿಮ್ಮ ಮೇಲೆ ಎಷ್ಟಿದೆ ಗೊತ್ತಾ?

ಬಾಲ್ಯದ ಘಟನೆಗಳು, ಪಾಲಕರ ದೈನಂದಿನ ಅಭ್ಯಾಸಗಳು ಮುಂದಿನ ಜೀವನದ ಮೇಲೆ ನಾವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚಿನ ಪರಿಣಾಮ ಬೀರುತ್ತವೆ. ದೊಡ್ಡವರಾದ ಬಳಿಕ ವರ್ತನೆಯ ಮೇಲೆ ಬಾಲ್ಯದ ಪರಿಣಾಮಗಳು ಅಗಾಧವಾಗಿರುತ್ತವೆ. 

How your childhood affects your adulthood behavior
Author
Bangalore, First Published Jan 10, 2022, 10:44 PM IST

ಅಪ್ಪ (Father) ಮತ್ತು ಅಣ್ಣಂದಿರು ಅಮ್ಮ ಮಾಡಿದ ಅಡುಗೆಯನ್ನು ಯಾವುದೊಂದು ಕೊಂಕು (Comment) ಮಾತಿಲ್ಲದೆ, “ಉಪ್ಪು ಬೇಕಾಗಿತ್ತು, ಹುಳಿ ಕಡಿಮೆಯಾಯಿತು, ಖಾರ ಹೆಚ್ಚಾಯ್ತು’ ಎನ್ನುವ ಯಾವುದೇ ಕಮೆಂಟ್ ಗಳಿಲ್ಲದೆ ಊಟ ಮಾಡುತ್ತಿದ್ದುದನ್ನು ಕಂಡಿದ್ದ ಲಾವಣ್ಯ ಮದುವೆ ಬಳಿಕ ಗಂಡನ ಮನಗೆ ಬಂದಾಗ ಅಲ್ಲಿಯ ಪದ್ಧತಿ ವಿಚಿತ್ರವೆನಿಸುತ್ತಿತ್ತು. ಮಾಡಿದ ಪ್ರತಿಯೊಂದು ಅಡುಗೆ(Food)ಯನ್ನೂ ಏನಾದರೊಂದು ಕಮೆಂಟ್ ಇಲ್ಲದೆ ಊಟ ಮಾಡಿ ಅಭ್ಯಾಸವಿಲ್ಲದ ಪತಿ, ಅತ್ತೆ, ಮಾವಂದಿರ ನಡತೆಗೆ ರೋಸಿ ಹೋಗಿದ್ದಳು. ಭಾವನ ಚಿಕ್ಕ ಮಕ್ಕಳಿಗೂ ಇದೇ ಅಭ್ಯಾಸ.

ಕೊನೆಗೆ ಧೈರ್ಯ ಮಾಡಿ ಪತಿಗೆ ಪದೇ ಪದೆ ಈ ವಿಷಯವನ್ನು ಹೇಳುತ್ತ ಮನದಟ್ಟು ಮಾಡಿಸಿದಳು. ಅತ್ತೆ-ಮಾವನೆದುರು ನೇರವಾಗಿಯೇ “ಹೀಗೆ ಕಮೆಂಟ್ ಮಾಡುತ್ತಿದ್ದರೆ ಹೇಗೆ ಅಡುಗೆ ಮಾಡಬೇಕೆಂದೇ ತಿಳಿಯುವುದಿಲ್ಲ’ ಎಂದು ಹೇಳಲು ಆರಂಭಿಸಿದಳು. ಆದರೆ, ಈ ನಡುವೆ ಅವಳಿಗೆ ಪತಿಯ ಮನೆಯವರ ಊಟ-ತಿಂಡಿಗೆ ಸಂಬಂಧಿಸಿದ ನಡವಳಿಕೆ ರೇಜಿಗೆ ತರಿಸಲು ಆರಂಭವಾಗಿದ್ದರಿಂದ “ಬೇರೆ ಮನೆ ಮಾಡೋಣ’ ಎಂದು ದುಂಬಾಲು ಬೀಳಲು ಆರಂಭಿಸಿದ್ದಳು. ಇಲ್ಲಿ ಲಾವಣ್ಯಳಿಗೆ ತಂದೆಯ ಮನೆಯ ಪದ್ಧತಿ (Life Style) ಜೀವನದ ಪಾಠವಾಗಿತ್ತು. 

ಇದನ್ನೂ ಓದಿ: Haircare Tips: ಚಳಿಗಾಲದಲ್ಲಿ ಹೆಚ್ಚುವ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ..

ಅಂಥದ್ದೇ ಇನ್ನೊಂದು ಘಟನೆ. ಸದಾಕಾಲ ಖುಷಿಖುಷಿಯಾಗಿರುತ್ತಿದ್ದ ಅಂಜಲಿ ಮದುವೆಯ ಬಳಿಕವೂ ಸಂತಸದಿಂದಲೇ ಇರುತ್ತಾಳೆ ಎನ್ನುವ ಎಲ್ಲರ ಕಲ್ಪನೆಯನ್ನು ಮೀರಿ ಬದುಕನ್ನು ದುಸ್ತರಗೊಳಿಸಿಕೊಂಡಿದ್ದಳು. ಪತಿಯ ಮೇಲೆ ವಿಪರೀತ ಸಂಶಯ ಆಕೆಯದ್ದಾಗಿತ್ತು. ಯಾರೊಂದಿಗಾದರೂ ಮಾತನಾಡಿದರೆ ಕೊಂಕು, ಮನೆಗೆ ಬರುತ್ತಿದ್ದ ಹಾಗೆಯೇ ಏನಾದರೊಂದು ವಿಷಯ ತೆಗೆದು ಅಳುವುದು, ಒಮ್ಮೆ ಅತಿಯಾದ ಖುಷಿ, ಮತ್ತೊಮ್ಮೆ ತೀವ್ರ ದುಃಖ ಆಕೆಯ ಸ್ವಭಾವವಾಗಿತ್ತು. ಆಕೆಯ ಪತಿ ಅವಳನ್ನು ಆಪ್ತಸಮಾಲೋಚಕರ ಬಳಿ ಕರೆದೊಯ್ದಾಗ ತಿಳಿದುಬಂದಿದ್ದು, ಅವಳ ಅಮ್ಮನೂ ತನ್ನ ಪತಿಗೆ ಇದೇ ರೀತಿ ಪೀಡಿಸುತ್ತಿದ್ದರು ಎನ್ನುವುದು. ವಿದ್ಯಾವಂತೆಯಾಗಿದ್ದರೂ ಅಂಜಲಿ ಅರಿಯದೆಯೇ ಕೆಟ್ಟ ವರ್ತನೆ ರೂಢಿಸಿಕೊಂಡಿದ್ದಳು. 

ಹೌದು, ಬಾಲ್ಯ(Childhood) ದ ಯಾವುದೋ ಒಂದು ಘಟನೆ(Incident), ಅನುಭವ Experience), ಪಾಲಕರ ದಿನಚರಿ, ಬದುಕಿನ ಶೈಲಿ ಮಕ್ಕಳ ಬದುಕಿನ ಮೇಲೆ ತೀವ್ರ ಪ್ರಭಾವ (Influence) ಬೀರುತ್ತವೆ. ಅವರ ಜೀವನದುದ್ದಕ್ಕೂ ಇವು ಜತೆಯಾಗಿರುತ್ತವೆ, ಅಷ್ಟೇ ಅಲ್ಲ, ಅವರ ವರ್ತನೆ (behaviour) ಮೇಲೆಯೂ ಪರಿಣಾಮ ಬೀರುತ್ತಿರುತ್ತವೆ. ಇದು ಎಲ್ಲರೂ ಅರಿತಿರುವ ಸಂಗತಿಯೇ ಆಗಿದ್ದರೂ ಅಳವಡಿಸಿಕೊಳ್ಳಲು ಸಾಕಷ್ಟು ಜನ ಸೋಲುತ್ತಾರೆ. 

ಇದನ್ನೂ ಓದಿ: Yoga for Health : ಮಾಡಿ ಕುರ್ಚಿ ಭಂಗಿ ಯೋಗ, ಹತ್ತಿರ ಬಾರದು ಈ ರೋಗ

ನಾವು ಈಗೇನಾಗಿದ್ದೇವೆಯೋ ಅದು ನಮ್ಮ ಇತಿಹಾಸದ ಫಲ ಎನ್ನಲಾಗುತ್ತದೆ. ಅದು ನಿಜವೂ ಹೌದು. ಯಾವುದೇ ವ್ಯಕ್ತಿಯ ವರ್ತನೆ, ಸ್ವಭಾವದಲ್ಲಿ ಬಾಲ್ಯದ ಪ್ರಭಾವವನ್ನು ಗಾಢವಾಗಿ ಕಾಣಬಹುದು. ಕೆಲವರು ಮಾತ್ರವೇ ಧನಾತ್ಮಕ ಅನುಭವಗಳನ್ನಷ್ಟೇ ಸ್ಫೂರ್ತಿಯಾಗಿಟ್ಟುಕೊಂಡರೆ, ಮತ್ತಷ್ಟು ಜನರು ಕೇವಲ ಋಣಾತ್ಮಕ ಅನುಭವಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ಹೀಗೆ ಮನಸ್ಸನ್ನು ಕಹಿ ಮಾಡಿಕೊಳ್ಳುವವರು ಕ್ರಮೇಣ ಮಾನಸಿಕ ಸಮಸ್ಯೆ ಇರುವವರಂತೆ ವರ್ತಿಸಬಹುದು.

ಮಕ್ಕಳ ಮೇಲೆ ಪಾಲಕ(Parents)ರ ಪ್ರಭಾವ 

ಮಕ್ಕಳನ್ನು ಪ್ರತಿದಿನ ಏನಾದರೊಂದು ವಿಷಯಕ್ಕೆ ಟೀಕಿಸುತ್ತ, ಬೈಯುವ ಪಾಲಕರು ತಮ್ಮ ಅರಿವಿಲ್ಲದೆ ಮಕ್ಕಳ ಭವಿಷ್ಯವನ್ನು ಹಾಳುಗೆಡವುತ್ತಾರೆ. ಏಕೆಂದರೆ, ಅಂಥವರ ಮಕ್ಕಳು ಸಂಗಾತಿಯ ಆಯ್ಕೆಯಿಂದ ಹಿಡಿದು, ಜೀವನದ ಬಹುಮುಖ್ಯ ನಿರ್ಧಾರಗಳನ್ನು ಬಾಲ್ಯಕಾಲದ ಗಾಢ ಪ್ರಭಾವದಲ್ಲೇ ಕೈಗೊಳ್ಳುತ್ತಾರೆ. ಉದಾಹರಣೆಗೆ, ಮನೆಯಲ್ಲಿ ಸದಾಕಾಲ ಗಲಾಟೆಗಳಾಗುತ್ತಿದ್ದರೆ, ಮಕ್ಕಳಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗಿರುತ್ತದೆ. ಅಭದ್ರತೆಯ ಭಾವನೆಗೆ ತಕ್ಕಂತೆ ಸಂಗಾತಿ ಆಯ್ಕೆಯನ್ನು ಮಾಡುತ್ತಾರೆ. ಬಾಲ್ಯದ ಪ್ರಭಾವದಿಂದ ಸಿನಿಕರಾಗಿ ವರ್ತಿಸಬಹುದು ಅಥವಾ ಎಲ್ಲದರಲ್ಲಿಯೂ ನೆಗೆಟಿವಿಟಿ(Nagetivity)ಯನ್ನೇ ಕಾಣಬಹುದು.
ಅದಕ್ಕಾಗಿ, ಬಾಲ್ಯದ ಪ್ರಭಾವಳಿ ನಮ್ಮನ್ನು ಯಾವ ರೀತಿ ಆವರಿಸಿದೆ ಎನ್ನುವುದನ್ನು ಕೆಲವೊಮ್ಮೆಯಾದರೂ ಅವಲೋಕಿಸಿಕೊಳ್ಳಬೇಕು. ಜತೆಗೆ, ತಂದೆ-ತಾಯಿಯರ ಧನಾತ್ಮಕ (Possitive) ಸಂಗತಿಗಳನ್ನು ಅನುಸರಿಸಬೇಕೆ ಹೊರತು ಋಣಾತ್ಮಕ ಸಂಗತಿಯನ್ನಲ್ಲ. 

Follow Us:
Download App:
  • android
  • ios