ಹಳೆಪ್ರೇಮಿ ಇನ್ನೂ ಮೆಸೇಜ್ ಮಾಡೋದ್ಯಾಕೆ?

ಸಂಬಂಧ ಮುರಿದು ಬಿದ್ದ ಮೇಲೂ ನಿಮ್ಮ ಎಕ್ಸ್ ಇನ್ನೂ ಮೆಸೇಜ್ ಮಾಡುತ್ತಿದ್ದಾರೆಂದರೇನರ್ಥ? ಅದಕ್ಕೆ ನೀವು ಪ್ರತಿಕ್ರಿಯಿಸಬೇಕಾ ಅಥವಾ ಸುಮ್ಮನಿದ್ದು ಬಿಡಬೇಕಾ? 

how  to stop ex partner from texting

ನೀವು ಹಾಗೂ ನಿಮ್ಮ ಎಕ್ಸ್- ಎಕ್ಸ್ ಆಗದಿದ್ದಾಗ ಸಾವಿರಾರು ಸಂದೇಶಗಳನ್ನು ಕಳುಹಿಸಿಕೊಂಡಿರಬಹುದು. ಆದರೆ ಬ್ರೇಕಪ್ ಬಳಿಕ ಮೆಸೇಜ್ ಎಂಡ್ ಆಗಬೇಕಲ್ಲವೇ? ಆದರೂ ಕೂಡಾ ನಿಮ್ಮ ಎಕ್ಸ್ ನಿಮಗೆ ಪದೇ ಪದೆ ಮೆಸೇಜ್ ಮಾಡುತ್ತಿದ್ದಾನೆಂದರೆ, ಅವನ ಮನಸ್ಸಿನಲ್ಲಿ ಏನಿರಬಹುದು ಎಂಬ ಹುಳ ನಿಮ್ಮನ್ನು ಕಾಡುತ್ತಿದೆ. ಆತ ಕೇವಲ ಫ್ರೆಂಡ್‌ಶಿಪ್‌ಗಾಗಿ ಮೆಸೇಜ್ ಮಾಡುತ್ತಿದ್ದಾನೆಯೇ ಅಥವಾ ಮತ್ತೆ ಪ್ಯಾಚಪ್ ಆಗಲು ಬಯಸಿದ್ದಾನೆಯೇ ಇಲ್ಲವೇ ಸುಮ್ಮನೆ ನಾನು ಅವನ ನೆನಪಿನಲ್ಲಿರಲಿ ಎಂದು ಮೆಸೇಜ್ ಮಾಡುತ್ತಿರಬಹುದೆ ಎಂದೆಲ್ಲ ಯೋಚಿಸುತ್ತಿದ್ದೀರಲ್ಲವೇ? ಈಗ ರಿಪ್ಲೈ ಮಾಡಬೇಕೋ ಬೇಡವೋ, ಮತ್ತೆ ಕಾಂಟ್ಯಾಕ್ಟ್‌ನಲ್ಲಿ ಇರಬೇಕೆ ಅಥವಾ ಆತನೊಂದಿಗಿನ ಎಲ್ಲ ರೀತಿಯ ಕಾಂಟ್ಯಾಕ್ಟ್ನಿಂದ ದೂರ ಬರಬೇಕೆ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. 

ಸಂದೇಶದಲ್ಲಿ ಏನಿದೆ, ಎಷ್ಟು ಬಾರಿ ಸಂದೇಶ ಬರುತ್ತಿದೆ  ಮುಂತಾದವುಗಳನ್ನು ಆಧರಿಸಿ ಆತ ನಿಮ್ಮೊಂದಿಗೆ ಸುಮ್ಮನೆ ಒಳ್ಳೆಯ ವ್ಯಕ್ತಿಯಾಗಿ ಉಳಿಯಲು ನೋಡುತ್ತಿದ್ದಾನಾ ಅಥವಾ ಬೇರೆ ಉದ್ದೇಶಗಳನ್ನು ಹೊಂದಿದ್ದಾನಾ ಎಂಬುದನ್ನು ಯೋಚಿಸಬೇಕಾಗುತ್ತದೆ. ಇವೆಲ್ಲಕ್ಕಿಂತ ಮುಂಚೆ ಆತ ಏಳು ಏಳರಲ್ಲಿ ಒಂದು ಕಾರಣಕ್ಕಾಗಿ ನಿಮಗೆ ಸಂದೇಶ ಕಳುಹಿಸುತ್ತಿರಬಹುದು. ಅವು ಯಾವುವು ನೋಡಿ.

ದೇವರೇ ಅವಳು ಸಿಗದಿರಲಿ; ಪ್ರೀತಿಸಿದವನ ಹಾಯ್ಕುಗಳು

ಆತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ.

ನೀವಿಬ್ಬರೂ ಈಗಾಗಲೇ ಬಹಳಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದೀರಿ. ಹಾಗಾಗಿ, ಸಹಜವಾಗಿಯೇ ಆತ ನಿಮ್ಮ ಕಂಪನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ, ಸಂದೇಶ ಕಳುಹಿಸುವ ಮೂಲಕ ಆತ ತನ್ನನ್ನು ಕಂಫರ್ಟ್ ಆಗಿಟ್ಟುಕೊಳ್ಳಲು ನೋಡುತ್ತಿದ್ದಾನೆ. 

ಏಕಾಂಗಿತನ

ಬ್ರೇಕಪ್ ಬಳಿಕ ನಿಮ್ಮ ಎಕ್ಸ್ ಇನ್ನೂ ಸಿಂಗಲ್ ಆಗಿ ಉಳಿದಿದ್ದರೆ ಅವರಿಗೆ ಒಂಟಿತನ ಕಾಡುವ ಸಾಧ್ಯತೆಗಳು ಹೆಚ್ಚು. ಹಾಗಾಗಿ, ತಮ್ಮನ್ನು ಇಷ್ಟಪಡುವವರೊಡನೆ ಮಾತಾಡೋಣವೆನಿಸುತ್ತದೆ. ಹಿಂದೆ ನೀವು ಇಡೀ ದಿನ ಮೆಸೇಜ್ ಕಳುಹಿಸಿಕೊಳ್ಳುತ್ತಿದ್ದರೆ, ಈಗ ಆ ಸಂವಹನವಿಲ್ಲದೆ ಏನು ಮಾಡುವುದು ತಿಳಿಯುತ್ತಿರುವುದಿಲ್ಲ. ನೀವು ಒಂದು ಕಾಲದಲ್ಲಿ ಅವರಿಗಾಗಿ ಬಹಳಷ್ಟು ಕಾಳಜಿ ತೋರಿಸುತ್ತಿದ್ದಿರಾದ್ದರಿಂದ ಈಗಲೂ ಕೆಲ ಕಾಲ ತಮ್ಮನ್ನು ಕಂಫರ್ಟ್ ಮಾಡಲು ಮಾತಾಡಬಹುದು ಎಂದು ಅವರ ನಿರೀಕ್ಷೆ ಇರಬಹುದು.

ಅವರಿಗೆ ನೀವು ವಾಪಸ್ ಬೇಕಿರಬಹುದು

ನಿಮ್ಮ  ಜೊತೆ ಬ್ರೇಕಪ್ ಬಳಿಕ ನಿಮ್ಮ ಬೆಲೆ ಅರಿವಾಗಿ ನಿಮ್ಮನ್ನು ಅವರು ವಾಪಸ್ ಬಯಸುತ್ತಿರಬಹುದು. ಹೀಗಾಗಿ, ಮೆಸೇಜ್‌ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದನ್ನರಿತು ನಿಮ್ಮ ಮನಸ್ಸಿನಲ್ಲೇನಿದೆ ಎಂದು ಅರಿವ ಪ್ರಯತ್ನ ಇರಬಹುದು.

ವಂಚಿಸಿದ ಪಾರ್ಟ್ನರ್‌ಗೆ 2ನೇ ಅವಕಾಶ ನೀಡಿದಾಗ ಏನಾಯ್ತು? ಅನುಭಸ್ಥರ ಮಾತುಗಳಿವು

ಅಭ್ಯಾಸ ಬಲ

ಇತ್ತೀಚೆಗಷ್ಟೇ ಬ್ರೇಕಪ್ ಆಗಿದ್ದರೆ, ಇದುವರೆಗೂ ಮಾಡುತ್ತಿದ್ದಂತೆ ಅಭ್ಯಾಸಬಲದಿಂದ ಸಂದೇಶಗಳು ಬರುತ್ತಿರಬಹುದು. ಅದರಲ್ಲೂ ಒಳ್ಳೆ ರೀತಿಯಲ್ಲಿ ಬ್ರೇಕಪ್ ಆಗಿದ್ದರೆ ಈ ಸಾಧ್ಯತೆ ಹೆಚ್ಚು. 

ಫೀಲಿಂಗ್ಸ್ ಉಳಿದಿದೆ

ಬ್ರೇಕಪ್ ಆಗಿರಬಹುದು. ಆದರೆ, ಅವರಿಗೆ ನಿಮ್ಮ ಮೇಲಿನ ಫೀಲಿಂಗ್ಸ್ ಹಾಗೆಯೇ ಉಳಿದಿದೆ. ನೀವೇ ಸಂಬಂಧ ಮುರಿದಿರಬಹುದು. ಆಗ ಈಗೋಗೆ ಪೆಟ್ಟಾಗಿದ್ದಕ್ಕೆ ಅವರೂ ಸಮ್ಮತಿಸಿರಬಹುದು. ಆದರೆ, ಯಾವಾಗ ನೀವು ನಿಜವಾಗಿಯೂ ದೂರಾದಿರೋ ಅವರ ಪ್ರೀತಿ ದೂರಾಗಿಲ್ಲ. ಸಂಬಂಧ ರಿಪೇರಿಯಾಗಲಿ ಎಂಬ ಆಶಾಭಾವನೆಯಿಂದ ಅವರು ನಿಮಗೆ ಮೆಸೇಜ್ ಮಾಡುತ್ತಿರಬಹುದು. 

ಫ್ರೆಂಡ್ಸ್ ಆಗಿ ಉಳಿವ ಬಯಕೆ

ನಿಮ್ಮ ಎಕ್ಸ್ ನಿಮ್ಮೊಂದಿಗೆ ಕನಿಷ್ಠ ಫ್ರೆಂಡ್ ಆಗಿ ಇರೋಣ ಎಂದುಕೊಂಡಿರಬಹುದು. ನಿಮ್ಮ ಫ್ರೆಂಡ್‌ಶಿಪ್‌ಗೆ ಬೆಲೆ ಕೊಟ್ಟು ಅವರು, ಉಳಿದ ಫ್ರೆಂಡ್ಸ್‌ಗೆ ಮೆಸೇಜ್ ಮಾಡುವಂತೆಯೇ ನಿಮಗೂ ಮಾಡುತ್ತಿರಬಹುದು. 

ಪಾರ್ಟ್ನರ್ ಜೊತೆ ಆಗಾಗ ಜಗಳವಾಡೋದು ಸಂಬಂಧಕ್ಕೆ ಒಳ್ಳೆಯದಂತೆ!

ನೀವು ಅವರನ್ನು ಮರೆತಿದ್ದೀರಾ ಎಂದು ಪರೀಕ್ಷೆ

ಬಹಳಷ್ಟು ಸಮಯ ಎಕ್ಸ್‌ಗಳಿಗೆ ಅವರು ನಿಮ್ಮನ್ನು ಮರೆತರೂ ನೀವು ಮಾತ್ರ ಅವರ ನೆನಪಲ್ಲೇ ಉಳಿಯಲಿ ಎಂಬ ಆಸೆ ಇರುತ್ತದೆ. ಯಾರು ಕೂಡಾ ತಮ್ಮನ್ನು ಒಂದು ಕಾಲದಲ್ಲಿ ಬಯಸಿದ್ದವರು ಪೂರ್ತಿ ಮರೆತು ತಿರಸ್ಕರಿಸುವುದನ್ನು ಬಯಸುವುದಿಲ್ಲ, ಕನಿಷ್ಠ ಪಕ್ಷ ಅವರು ನಮ್ಮನ್ನು ನೆನೆಸಿಕೊಳ್ಳಲಿ ಎಂದು ಯೋಚಿಸುತ್ತಿರುತ್ತಾರೆ. ಅಲ್ಲದೆ, ನೀವು ಅವರನ್ನು ಬಿಟ್ಟ ಮೇಲೆ ಖುಷಿಯಾಗಿದ್ದೀರೇ ಇಲ್ಲವೇ, ಇನ್ನೂ ಸಿಂಗಲ್ ಆಗಿದ್ದೀರಾ ಅಥವಾ ಬೇರೆ ಬಾಯ್‌ಫ್ರೆಂಡ್ ಸಿಕ್ಕಿದ್ದಾನಾ ಎಂಬುದನ್ನೆಲ್ಲ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಇದಕ್ಕಾಗಿ ನಿಮಗೆ ಮೆಸೇಜ್ ಕಳುಹಿಸಿ ಏನಾದರೂ ಹಿಂಟ್ ಸಿಗಬಹುದಾ ನೋಡುತ್ತಿರುತ್ತಾರೆ. ಕೆಲವೊಮ್ಮೆ ಅವರು ಹೊಸ ಸಂಗಾತಿಯನ್ನು ಪಡೆದಿದ್ದು, ನೀವು ಕೂಡಾ ಸಂಗಾತಿಯನ್ನು ಪಡೆದಿರುವಿರೇ, ಪಡೆದಿದ್ದರೆ ತಾನು ಪಶ್ಚಾತ್ತಾಪದಿಂದ ಪಾರಾಗಬಹುದೆಂಬ ಒಳ್ಳೆಯ ಯೋಚನೆಯಿಂದಲೂ ಮೆಸೇಜ್ ಕಳುಹಿಸುತ್ತಿರಬಹುದು. 
 

Latest Videos
Follow Us:
Download App:
  • android
  • ios