ಜೋಡಿಗಳ ಮಧ್ಯೆ ಜಗಳ ಸಾಮಾನ್ಯ. ಸಣ್ಣಪುಟ್ಟ ವಿಷಯಕ್ಕೂ ಜಗಳವಾಡುವವರು ಹಲವರು. ಇನ್ನು ಕೆಲವರು ತಾವು ಬುದ್ಧಿವಂತಿಕೆ ಮೆರೆದು ಜಗಳವನ್ನು ದೂರವಿಡುವ ಸಲುವಾಗಿ ಮೌನದ ಮೊರೆ ಹೋಗುತ್ತಾರೆ. ಜಗಳವಾಗುವ ವಿಷಯಗಳಿಂದಲೇ ದೂರವುಳಿಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜಗಳದಿಂದ ಜೀವನಕ್ಕೆ ಹಾನಿ ಎಂದು ನಂಬಿರುವವರು ಇವರು. ಎಷ್ಟೋ ಜಗಳವಾಡುವ ಜೋಡಿಗಳಿಗೆ ಕೂಡಾ ದಿನಾ ಜಗಳವಾಡಿ ಮನಸ್ಸು ಕೆಡಿಸಿಕೊಳ್ಳುವುದಕ್ಕಿಂತ ಈ ಸೆಲೆಕ್ಟಿವ್ ಮೌನದ ಸ್ಟ್ರ್ಯಾಟಜಿ ಬೆಸ್ಟ್, ಇದನ್ನೇ ಅನುಸರಿಸಬೇಕೆನಿಸುತ್ತದೆ. ಆದರೆ ಅದು ಅವರ ಸ್ವಭಾವಕ್ಕೆ ವಿರುದ್ಧವಾದ ಕಾರಣ ಸಾಧ್ಯವಾಗುತ್ತಿರುವುದಿಲ್ಲ. ಆದರೆ, ನೀವು ನಂಬ್ಲೇಬೇಕು, ಜಗಳವಾಡದ ಜೋಡಿಗಳಿಗಿಂತ ಜಗಳವಾಡುವ ಜೋಡಿಗಳು ಹೆಚ್ಚು ಖುಷಿಯಾಗಿರುತ್ತಾರಂತೆ! 

ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ, ಅಧ್ಯಯನ ವರದಿ ಹೇಳುತ್ತಿದೆ. 

ವಾದ ಮಾಡೋರೇ ಸಂತೋಷವಾಗಿರೋದು!

ಸುಮಾರು 1000 ಮಂದಿ ಈ ಸರ್ವೆಯಲ್ಲಿ ಭಾಗವಹಿಸಿದ್ದು, ಜಗಳವಾಗುತ್ತೆಂದು ವಿಷಯವನ್ನು ಅವಾಯ್ಡ್ ಮಾಡುವವರಿಗಿಂತ ಜಗಳ ಮಾಡುವ ಜೋಡಿಗಳು 10 ಪಟ್ಟು ಹೆಚ್ಚು ಖುಷಿಯಾಗಿರುತ್ತಾರೆಂದು ಅಧ್ಯಯನ ವರದಿ ನೀಡಿದೆ. ಈ ಕುರಿತು 'ಕ್ರೂಶಿಯಲ್ ಕಾನ್ವರ್ಸೇಶನ್ಸ್' ಎಂಬ ಪುಸ್ತಕ ಬರೆದಿರುವ ಜೋಸೆಫ್ ಜೆನ್ನಿ, ಸೂಕ್ಷ್ಮ ವಿಷಯಗಳ ಕುರಿತ ಚರ್ಚೆಯಿಂದ ದೂರವುಳಿಯುವುದರಿಂದ ವಾದವನ್ನು ದೂರವಿಟ್ಟು ಸಂಬಂಧ ಉಳಿಸಿಕೊಂಡೆ ಎಂದು ಬೀಗುವುದು ಭ್ರಮೆಯಷ್ಟೇ ಎಂದಿದ್ದಾರೆ. 

ದಂಪತಿಯು ಎಡವುದೆಲ್ಲಿ?

ದಂಪತಿ ಮಾಡುವ ಮೊದಲ ದೊಡ್ಡ ತಪ್ಪೇ ಯಾವುದಾದರೂ ವಿಷಯಗಳನ್ನು ಅವಾಯ್ಡ್ ಮಾಡುವುದು. ಆ ಕುರಿತ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಉಳಿಯುವುದು. ತಮಗೆ ಸಮಸ್ಯೆಯಾಗುತ್ತಿದ್ದರೂ ಹೇಳಿದರೆ ಎಲ್ಲಿ ಜಗಳವಾಗುತ್ತೋ ಎಂದು ಬಾಯಿ ಮುಚ್ಚಿಕೊಂಡು ಉಳಿಯುವ ನಡೆ ಧೀರ್ಘಕಾಲದಲ್ಲಿ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗಬಹುದು, ಇಲ್ಲವೇ ದೊಡ್ಡದಾಗಿ ಸ್ಫೋಟವಾಗಿ ಸಂಬಂಧದಲ್ಲಿ ಬಿರುಕು ತರಬಹುದು, ಮನಸ್ಸಿನಲ್ಲೇ ಕಹಿ ಎಲ್ಲವನ್ನೂ ಉಳಿಸಿಕೊಳ್ಳುವುದರಿಂದ ಇಬ್ಬರ ನಡುವೆ ಸಂಬಂಧ ನಿಧಾನವಾಗಿ ಫೇಡ್ ಆಗುತ್ತಾ ಸಾಗುತ್ತದೆ ಎನ್ನುತ್ತಾರೆ ಜೆನ್ನಿ. 

ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ!

ವಿಫಲ ಸಂಬಂಧ

ಸರ್ವೆಯಲ್ಲಿ ಭಾಗವಹಿಸಿದ ಪ್ರತಿ ಐವರಲ್ಲಿ ನಾಲ್ವರು ತಮ್ಮ ಸಂಗಾತಿಯೊಂದಿಗಿನ ವಿಫಲ ಸಂಬಂಧಕ್ಕೆ ಸಂವಹನ ಕೊರತೆ ಅಥವಾ ಸರಿಯಾಗಿ ಸಂವಹನ ನಡೆಸದಿರುವುದೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅಂದರೆ, ಕಾರಣ ಗೊತ್ತಿದ್ದೂ ಅದನ್ನು ಸರಿ ಮಾಡಿಕೊಳ್ಳುವಲ್ಲಿ ಬಹುತೇಕರು ಸೋಲುತ್ತಾರೆಂದಾಯಿತು. ಜೆನ್ನಿಯ ಪ್ರಕಾರ, ಬಹುತೇಕ ಜನರು ಕೆಲವೊಂದು ಸನ್ನಿವೇಶಗಳಲ್ಲಿ ತಮಗೇನನಿಸಿತು ಎಂಬುದನ್ನು ಸರಿಯಾಗಿ ಗ್ರಹಿಸಲು ಸೋತು, ಅದಕ್ಕಾಗಿ ಬೇರೆಯವರ ಮೇಲೆ ಆರೋಪ ಹಾಕುತ್ತಾರೆ. ಇದು ಗೊತ್ತಿಲ್ಲದೆಯೇ ಜೋಡಿಗಳ ನಡುವೆ ನಡೆಯುವ ತಪ್ಪು. ತಮ್ಮ ಫೀಲಿಂಗ್ಸ್ ಕುರಿತು ಭಾವನಾತ್ಮಕ ಜವಾಬ್ದಾರಿ ವಹಿಸಿಕೊಳ್ಳದ ಕಾರಣ ಈ ತಪ್ಪು ನಡೆಯುತ್ತದೆ ಎನ್ನುತ್ತಾರೆ ಅವರು. 

ಚರ್ಚೆಗೆ ಕಷ್ಟವಾಗುವ ವಿಷಯಗಳು

ದಂಪತಿಯ ನಡುವೆ ಯಾವೆಲ್ಲ ವಿಷಯಗಳು ವಾದ, ಜಗಳ ಹುಟ್ಟು ಹಾಕುತ್ತವೆ ಎಂಬ ಕುರಿತು ಅಭ್ಯಸಿಸಿದಾಗ ಸೆಕ್ಸ್, ಹಣ, ಕಿರಿಕಿರಿಗೊಳಿಸುವ ಅಭ್ಯಾಸಗಳು(ಒದ್ದೆ ಟವಲ್ ಹಾಸಿಗೆ ಮೇಲೆ ಹಾಕುವುದು ಇತ್ಯಾದಿ), ಇಬ್ಬರ ಹತ್ತಿರದ ಸಂಬಂಧದವರ ಕುರಿತ ಆರೋಪಗಳು, ಅರೊಂದಿಗೆ ವರ್ತಿಸುವ ರೀತಿ ಎಂದು ತಿಳಿದುಬಂದಿದೆ.

ಒಟ್ಟಿಗೆ ಕೂತು ಉಂಡರೆ ಕುಟುಂಬದಲ್ಲಿ ಒಗ್ಗಟ್ಟು !  

ಯಶಸ್ವೀ ಸಂಬಂಧದ ಗುಟ್ಟು

ಮನ ಬಿಚ್ಚಿ ಮಾತನಾಡುವುದು, ಜಗಳವಾದರೂ ಸರಿ ಎಂದು ಮನಸ್ಸಿನಲ್ಲಿರುವುದನ್ನು ಆಗಲೇ ಹೇಳಿಬಿಡುವುದು ಸಂಬಂಧಗಳ ನಡುವೆ ಸಂತೋಷದ ಗುಟ್ಟು ಎಂಬುದನ್ನು ಈ ಅಧ್ಯಯನ ದೃಢಪಡಿಸಿದೆ. ನಿಜವಾದ ಸಾಂಗತ್ಯ ಎಂಬುದು ಕೇವಲ ಪ್ರೀತಿಯಲ್ಲ, ಅಲ್ಲಿ ಸತ್ಯ, ಪ್ರಾಮಾಣಿಕತೆಗಳೂ ಇರಬೇಕು. ವಾದ, ಚರ್ಚೆ, ಜಗಳಗಳು ಇಂಥ ಎಲ್ಲ ನೆಗೆಟಿವ್ ಫೀಲಿಂಗ್‌ಗಳನ್ನು ಹೊರಹಾಕಿ ಸತ್ಯ ಬಹಿರಂಗಪಡಿಸುತ್ತವೆ. ಇದರಿಂದ ಒಬ್ಬರ ಮನಸ್ಸಿನಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂಬುದು ಇನ್ನೊಬ್ಬರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಅಲ್ಲದೆ ಜಗಳದ ಹೀಟ್ ಮುಗಿಯುತ್ತಿದ್ದಂತೆಯೇ ಅವರ ಮಾತಿನಲ್ಲಿದ್ದ ವಿಷಯವನ್ನು ಮನಸ್ಸು ಚೆನ್ನಾಗಿ ಗ್ರಹಿಸಿ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲುತೊಡಗುತ್ತದೆ.

ನಿಮ್ಮ ಲೈಫ್‌ನ ಈ ಆರು ಸೀಕ್ರೆಟ್‌ಗಳನ್ನು ಯಾರೊಟ್ಟಿಗೂ ಶೇರ್ ಮಾಡ್ಬೇಡಿ!

ಇದರಿಂದ ಒಬ್ಬರು ಮತ್ತೊಬ್ಬರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೀರಿ. ಇದು ಭದ್ರವಾದ ಸಂಬಂಧಕ್ಕೆ ಬುನಾದಿಯಾಗುತ್ತದೆ. ಹೀಗಾಗಿ, ಯಾವುದೇ ನೆಗೆಟಿವ್ ಎಮೋಶನ್ನನ್ನು ಮನಸ್ಸಿನಲ್ಲಿ ತುಂಬಿಕೊಳ್ಳಲು ಬಿಡಬೇಡಿ. ಆಗಾಗ ಅದನ್ನು ಹೊರಹಾಕಿಬಿಡಿ. ಇಲ್ಲವೇ ಆ ನೆಗೆಟಿವ್ ಭಾವನೆಯು ನಕಾರಾತ್ಮಕ ರೀತಿಯಲ್ಲಿ ಒಂದಿಲ್ಲೊಂದು ವಿಧದಲ್ಲಿ ಹೊರಬರಲು ತವಕಿಸುತ್ತದೆ. ಅದು ಹೊರ ಬಂದಾಗ ಫಲಿತಾಂಶ ನೀವು ಅಂದುಕೊಂಡದ್ದಕ್ಕಿಂತ ಕೆಟ್ಟದಾಗಿರುತ್ತದೆ.