ಹಾಸಿಗೆಯಲ್ಲಿ ಹುಲಿ ಥರಾ ಗರ್ಜಿಸಬೇಕಾದರೆ ಗಂಡಸರು ಹೀಗೆ ಮಾಡಬೇಕು!

ಹಾಸಿಗೆಯಲ್ಲಿ ಆನಂದ ದೊರೆಯದಿದ್ದರೆ, ಸಾಮರ್ಥ್ಯ ತೋರಿಸದಿದ್ದರೆ, ಹಲವು ಪುರುಷರಿಗೆ ಜೀವನವೇ ಮುಗಿದಂತೆ ಅನಿಸುತ್ತದೆ. ಆದರೆ ಇದಕ್ಕೆ ಪರಿಹಾರವಿದೆ. ಉತ್ತಮ ಲೈಂಗಿಕ ಚಟುವಟಿಕೆ ತೋರಿಸಿ, ಹಾಸಿಗೆಯಲ್ಲಿ ನೀವೂ ಆನಂದ ಹೊಂದಿ, ಸಂಗಾತಿಗೂ ಆನಂದ ಕಲ್ಪಿಸುವುದು ಹೇಗೆ? 
 

How to show energetic performance in bed some tips for men bni

ತುಂಬಾ ಮಂದಿ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯದ ಬಗ್ಗೆ ಕೊರಗು ಹೊಂದಿರುತ್ತಾರೆ. ಸಂಗಾತಿಯನ್ನು ತೃಪ್ತಿ ಪಡಿಸಲಾಗಲಿಲ್ಲ ಎಂದೋ, ಬಹಳ ಬೇಗನೆ ಸ್ಖಲನವಾಗುತ್ತಿದೆ ಎಂದೋ, ಬಯಸಿದಷ್ಟು ಹೊತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗಲಾಗಲಿಲ್ಲ ಎಂದೋ- ಹೀಗೆಲ್ಲ ಅನೇಕ ಸಮಸ್ಯೆಗಳು. ಈ ಸಮಸ್ಯೆಗಳಿಂದ ಆಚೆ ಬಂದು, ಉತ್ತಮ ಲೈಂಗಿಕ ಚಟುವಟಿಕೆ ತೋರಿಸಿ, ಹಾಸಿಗೆಯಲ್ಲಿ ನೀವೂ ಆನಂದ ಹೊಂದಿ, ಸಂಗಾತಿಗೂ ಆನಂದ ಕಲ್ಪಿಸುವುದು ಹೇಗೆ? 

ಗಂಡಸರ ಲೈಂಗಿಕ ಸಾಮರ್ಥ್ಯ ಕೊರತೆಗೆ ಮುಖ್ಯ ಕಾರಣ ಲೈಫ್‌ಸ್ಟೈಲ್‌ನ ಸಮಸ್ಯೆಗಳು. ನಿದ್ರೆ ಕೆಡುವುದು, ಪೌಷ್ಟಿಕ ಆಹಾರ ಸೇವಿಸದಿರುವುದು, ಮದ್ಯಪಾನ, ಧೂಮಪಾನ, ಸಂಗಾತಿ ಜೊತೆಗೆ ಕ್ವಾಲಿಟಿ ಟೈಮ್‌ ಕಳೆಯದಿರುವುದು ಇತ್ಯಾದಿ. ಇದಕ್ಕೆ ಪರಿಹಾರಗಳು ಇಲ್ಲಿವೆ. 

ಪೌಷ್ಟಿಕ ಆಹಾರ ಸೇವಿಸಿ: ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಆಹಾರ ಪದ್ಧತಿಯಲ್ಲಿ ಅತ್ಯುತ್ತಮ ತರಕಾರಿಗಳು, ಹಣ್ಣು, ಕಾಳು ಕಡಿ, ಒಣ ಬೀಜಗಳು ಸೇರಿರಲಿ. ಇದು ನಿಮ್ಮ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಧೂಮಪಾನ, ಮದ್ಯಪಾನ ಬಿಡಿ: ಧೂಮಪಾನ ಅಥವಾ ಮದ್ಯಪಾನ ಅಭ್ಯಾಸ ನಿಮ್ಮ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಮುಖ್ಯವಾಗಿ ಮದ್ಯಪಾನ ಮಾಡುವುದರಿಂದ ಪುರುಷರಿಗೆ ಸಂಬಂಧಪಟ್ಟ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗುತ್ತದೆ.
ಇದು ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ವೀರ್ಯಾಣುಗಳ ಗುಣಮಟ್ಟ ಕುಸಿಯಲು ಕೂಡ ಇದೇ ಕಾರಣ. ಪ್ರತಿದಿನ ಮದ್ಯಪಾನ ಮಾಡುವವರಿಗೆ ಲಿವರ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ವಿಟಮಿನ್ ಎ ಅಂಶವನ್ನು ಸರಿಯಾಗಿ ಸಂಸ್ಕರಿಸದೆ ಇರುವುದರಿಂದ ವೀರ್ಯಾಣು ಉತ್ಪತ್ತಿಯಾಗುವುದಿಲ್ಲ. ಧೂಮಪಾನ ಅಭ್ಯಾಸದಿಂದ ಕೂಡ ಇದೇ ರೀತಿ ಆಗುತ್ತದೆ.​

ಮಾನಸಿಕ ಒತ್ತಡ ದೂರವಿರಿಸಿ: ಸಾಧ್ಯವಾದಷ್ಟು ಮಾನಸಿಕವಾಗಿ ನೆಮ್ಮದಿಯಿಂದ ಇರಲು ಪ್ರಯತ್ನಿಸಿ. ಇದಕ್ಕಾಗಿ ಯೋಗ, ಧ್ಯಾನ ಇತ್ಯಾದಿಗಳನ್ನು ಅನುಸರಿಸಿ. ಉಸಿರಾಟದ ವ್ಯಾಯಾಮದ ಮೇಲೆ ಗಮನ ಹರಿಸಿ 10 ರಿಂದ 20 ನಿಮಿಷಗಳ ಕಾಲ ದೀರ್ಘ ಉಸಿರಾಟ ನಡೆಸಿ. ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಪಡೆದುಕೊಳ್ಳಿ. ನಿಮ್ಮ ಮನಸ್ಸಿಗೆ ಮುದ ನೀಡುವ ಸಂಗೀತ ಆಲಿಸಿ.

ಸೈಕ್ಲಿಂಗ್ ಕಡಿಮೆ ಮಾಡಿ: ನೀವು ಪ್ರತಿದಿನ ಜಿಮ್ ಗೆ ಹೋಗುವ ಅಭ್ಯಾಸ ಇದ್ದರೆ, ಅಥವಾ ಪ್ರತಿದಿನ ಓಡಾಡಲು ಬೈಕ್ ಬಳಸುತ್ತಿದ್ದರೆ, ಸ್ವಲ್ಪ ದಿನಗಳ ಕಾಲ ಆದ್ದರಿಂದ ದೂರವಿರಿ. ಏಕೆಂದರೆ ಈ ಪ್ರಕ್ರಿಯೆಗಳು ನಿಮ್ಮ ವೃಷಣಗಳನ್ನು ಹೀಟ್ ಮಾಡಬಹುದು ಮತ್ತು ಅದರಿಂದ ವೀರ್ಯಾಣುಗಳಿಗೆ ಹಾನಿಯಾಗಬಹುದು.

ವೆಯಿಟ್ ಲಿಫ್ಟಿಂಗ್ ಕಡಿಮೆ ಮಾಡಿ: ವೈಟ್ ಲಿಫ್ಟಿಂಗ್ ಅಭ್ಯಾಸವು ದೈಹಿಕವಾಗಿ ನಿಮ್ಮನ್ನು ಸದೃಢವಾಗಿಸುತ್ತದೆ ನಿಜ. ಆದರೆ ಕ್ರಮೇಣವಾಗಿ ನಿಮ್ಮ ವೀರ್ಯಾಣುಗಳ ಗುಣಮಟ್ಟ ಕುಸಿಯುವಂತೆ ಮಾಡುತ್ತದೆ. ತುಂಬಾ ಭಾರ ಎತ್ತುವುದು ನಿಮ್ಮ ವೀರ್ಯಾಣಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡಬಹುದು. ಹಾಗಾಗಿ ಮಕ್ಕಳು ಮಾಡಿಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ನೀವಿದ್ದರೆ, ಈ ವ್ಯಾಯಾಮದಿಂದ ಸ್ವಲ್ಪ ದೂರ ಇರಿ.

ತುಂಬಾ ಬಿಸಿನೀರಿನ ಸ್ನಾನ ಬೇಡ: ಅತಿಯಾದ ಬಿಸಿ ನೀರು ಕೂಡ ನಿಮ್ಮ ಲೈಂಗಿಕ ಶಕ್ತಿಯನ್ನು ಕುಸಿಯುವಂತೆ ಮಾಡುತ್ತದೆ ಮತ್ತು ವೃಷಣಗಳ ಗುಣಮಟ್ಟ ಕಡಿಮೆಯಾಗುವಂತೆ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಪದೇ ಪದೇ ಬಿಸಿನೀರು ಸ್ನಾನ ಮಾಡುವುದು ಕೂಡ ಮಗು ಪಡೆಯಲು ಕಷ್ಟವಾಗುವಂತೆ ಮಾಡಬಹುದು.

ರೆಡ್‌ ಮೀಟ್‌ ಬೇಡ: ಫಾಸ್ಟ್ ಫುಡ್ ಮತ್ತು ಕೆಂಪು ಮಾಂಸಹಾರ ಸೇವನೆ ಆರೋಗ್ಯಕ್ಕೆ ಹಾನಿಕರ. ಇದು ಮದ್ಯಪಾನ ಸೇವನೆ ಮಾಡಿದಷ್ಟೇ ಡೇಂಜರ್ ಎಂದು ಹೇಳುತ್ತಾರೆ. ನಿಮ್ಮ ಫಲವತ್ತತೆಯನ್ನು ಕಡಿಮೆ ಮಾಡುವಲ್ಲಿ ಮತ್ತು ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಕೆಂಪು ಮಾಂಸಹಾರ ಪ್ರಮುಖ ಪಾತ್ರ ವಹಿಸುತ್ತದೆ.

ಪೋರ್ನ್ ಚಟ, ದಿನಕ್ಕೆ 2-3 ಸಲ ದೈಹಿಕ ಸಂಬಂಧಕ್ಕೆ ಪತ್ನಿ ಒತ್ತಾಯ, ಸುಸ್ತಾಗಿ ಕೋರ್ಟ್ ಮೊರೆ ಹೋದ ಪತಿ
 

ನೆಮ್ಮದಿಯಾಗಿ ನಿದ್ರಿಸಿ: ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುವುದರಿಂದ ನಿಮ್ಮ ಆರೋಗ್ಯ ಸಾಕಷ್ಟು ಸರಿ ಹೋಗುತ್ತದೆ. ಇದು ನಿಮ್ಮ ಜನನಾಂಗದ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ಹೆಚ್ಚು ನೀರು ಕುಡಿಯಿರಿ: ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ದೂರ ಮಾಡುವ ಜೊತೆಗೆ ನಿಮ್ಮ ಆರೋಗ್ಯವನ್ನು ಸಮರ್ಪಕವಾಗಿ ರಕ್ಷಣೆ ಮಾಡುತ್ತದೆ ಮತ್ತು ಲೈಂಗಿಕ ಶಕ್ತಿ ಹಾಗೂ ವೀರ್ಯಾಣುಗಳ ಗುಣ ಮಟ್ಟವನ್ನು ಹೆಚ್ಚಿಸುತ್ತದೆ.

ಪೋಷಕರನ್ನು ರಹಸ್ಯವಾಗಿ ಮಕ್ಕಳು ದ್ವೇಷಿಸುವ 5 ವಿಷಯಗಳು!
 

Latest Videos
Follow Us:
Download App:
  • android
  • ios