Dating Scams : ಸಂಗಾತಿ ಹುಡುಕುವ ಆತುರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ
ಸಂಗಾತಿ (Partner)ಗಳ ಹುಡುಕಾಟ ಈಗ ಸುಲಭವಾಗಿದೆ. ಹಿಂದಿನ ಕಾಲದಂತೆ ಊರೂರು ಅಲೆದು ಜಾತಕ ಹೊಂದಿಸುವ ತಾಪತ್ರಯವಿಲ್ಲ. ಆನ್‌ಲೈನ್ (Online)ನಲ್ಲಿಯೇ ಸಂಗಾತಿ ಆಯ್ಕೆ ನಡೆಯುತ್ತದೆ. ಆದ್ರೆ ಈ ಡೇಟಿಂಗ್ ಅಪ್ಲಿಕೇಷನ್ (Dating Application) ಗಳನ್ನು ಕಣ್ಮುಚ್ಚಿ ನಂಬಿದ್ರೆ ಚೊಂಬೇ ಗತಿಯಾಗುತ್ತೆ ಎಚ್ಚರ.
ಜಗತ್ತು ಈಗ ಡಿಜಿಟಲ್ (Digital) ಆಗಿದೆ. ಇಂಟರ್ನೆಟ್ (Internet) ಹಳ್ಳಿ-ಹಳ್ಳಿಯನ್ನು ತಲುಪಿದೆ. ಜನರು ದಿನದ ಅತಿ ಹೆಚ್ಚು ಸಮಯವನ್ನು ಆನ್ಲೈನ್ (Online) ನಲ್ಲಿ ಕಳೆಯುತ್ತಿದ್ದಾರೆ. ಬಟ್ಟೆ,ಆಹಾರ,ವಸ್ತುಗಳ ಖರೀದಿಯಿಂದ ಹಿಡಿದು ಮದುವೆ,ತಿಥಿಯವರೆಗೆ ಎಲ್ಲವನ್ನೂ ಆನ್ಲೈನ್ ನಲ್ಲಿ ಮಾಡಿಸಲಾಗುತ್ತದೆ. ಆನ್ಲೈನ್ ಅನೇಕರನ್ನು ಒಂದು ಮಾಡಿದೆ. ಹಾಗೆ ಅನೇಕರನ್ನು ದೂರ ಮಾಡಿದೆ. ಈ ಡಿಜಿಟಲ್ ಜಗತ್ತಿನಲ್ಲಿ ಹೆಜ್ಜೆ ಇಡುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಅದ್ರಲ್ಲೂ ಸಂಗಾತಿ ಆಯ್ಕೆ ವಿಷ್ಯದಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಶನ್ (Dating App) ಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನರು ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಡೇಟಿಂಗ್ ಅಪ್ಲಿಕೇಷನ್ ಗಳನ್ನು ಹೆಚ್ಚಾಗಿ ನಂಬುತ್ತಿದ್ದಾರೆ. ಮೊದಲು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಸಂಗಾತಿ ಹುಡುಕುವ ಜನರು ಅಲ್ಲಿ ಸರಿಯಾದ ವ್ಯಕ್ತಿ ಸಿಕ್ಕಿಲ್ಲವೆಂದಾಗ ಬೇರೆ ದಾರಿ ನೋಡುತ್ತಾರೆ. ಈ ಹಿಂದೆ ಡೇಟಿಂಗ್ ಅಪ್ಲಿಕೇಷನ್ ಗಳು ಕೊನೆಯ ಆಯ್ಕೆಯಾಗಿದ್ದವು. ಕೊರೊನಾ ನಂತ್ರ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಸುದ್ದಿ ಮಾಡ್ತಿವೆ.
ಡೇಟಿಂಗ್ ಅಪ್ಲಿಕೇಷನ್ ಗಳು ಎಷ್ಟು ಸುರಕ್ಷಿತವೋ ಅಷ್ಟೇ ಅಪಾಯಕಾರಿ. ಅನೇಕ ಮೋಸದ ಘಟನೆಗಳು ಆಗಾಗ ವರದಿಯಾಗ್ತಿರುತ್ತವೆ. ಹಾಗಾಗಿ ಡೇಟಿಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಅದ್ರಲ್ಲಿ ನಿಮ್ಮೆಲ್ಲ ಮಾಹಿತಿ ಹಾಕಿ, ಅಲ್ಲಿ ಸಿಗುವ ವ್ಯಕ್ತಿಗಳನ್ನು ಕಣ್ಣುಮುಚ್ಚಿ ನಂಬುವು ಕೆಲಸಕ್ಕೆ ಹೋಗ್ಬೇಡಿ. ಡೇಟಿಂಗ್ ಅಪ್ಲಿಕೇಷನ್ ಬಳಸುವ ಮುನ್ನ ಕೆಲವೊಂದು ವಿಷ್ಯಗಳನ್ನು ತಿಳಿದಿರಿ.
ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಬಳಸುವ ಮೊದಲು ಇವಿಷ್ಟನ್ನು ತಿಳ್ಕೊಳ್ಳಿ
ಪ್ರೊಫೈಲ್ ರಚನೆ ಹೀಗಿರಲಿ: ಯಾವುದೇ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪ್ರೊಫೈಲ್ ರಚಿಸುವಾಗ ಕೆಲವೊಂದು ಸೂಕ್ಷ್ಮತೆ ತಿಳಿದಿರಬೇಕು. ನಿಮ್ಮೆಲ್ಲ ವೈಯಕ್ತಿಕ ವಿಷಯಗಳನ್ನು ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಹಂಚಿಕೊಳ್ಳಬಾರದು. ವಿಶೇಷವಾಗಿ ಇಮೇಲ್ ಐಡಿ, ಸಾಮಾಜಿಕ ಮಾಧ್ಯಮ, ಫೋನ್ ಸಂಖ್ಯೆ, ಐಡಿ ಇತ್ಯಾದಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಪಿತಪ್ಪಿಯೂ ಹಂಚಿಕೊಳ್ಳಬೇಡಿ. ಒಂದು ವೇಳೆ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ವ್ಯಕ್ತಿ ಇಷ್ಟವಾಗಿದ್ದು,ಅವರ ಜೊತೆ ಮಾತನಾಡಬೇಕೆಂದ್ರೆ ವೈಯಕ್ತಿಕವಾಗಿ ನಂಬರ್ ಹಂಚಿಕೊಳ್ಳಿ. ಯಾವುದೇ ಕಾರಣಕ್ಕೂ ಅಪ್ಲಿಕೇಷನ್ ನ ನಿಮ್ಮ ಪ್ರೊಫೈಲ್ ನಲ್ಲಿ ನಂಬರ್ ಹಾಕಬೇಡಿ.
ಫೋಟೋಗಳ ಬಗ್ಗೆ ಜಾಗೃತೆ: ಸಾಮಾಜಿಕ ಮಾಧ್ಯಮ ಅಥವಾ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಸುರಕ್ಷತೆ ಬಗ್ಗೆ ಗಮನ ನೀಡಬೇಕು. ಫೋಟೋಗಳನ್ನು ಎಂದಿಗೂ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು. ನಿಮ್ಮ ಸ್ನೇಹಿತರಿಗೆ ಮಾತ್ರ ಫೋಟೋ ಸಿಗುವ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಯಾಕೆಂದ್ರೆ ಬೇರೆಯವರು ನಿಮ್ಮ ಫೋಟೋ ಡೌನ್ಲೋಡ್ ಮಾಡಿ ಅದನ್ನು ತಪ್ಪಾಗಿ ಬಳಸುವ ಸಾಧ್ಯತೆಯಿರುತ್ತದೆ.
Love Story: 62 ವರ್ಷದ ತಂದೆಗೆ ಪಕ್ಕದ ಮನೆಯಾಕೆ ಮೇಲೆ ಪ್ರೀತಿ! ಗೊಂದಲದಲ್ಲಿ ಮಗ
ಆತುರ ಬೇಡ: ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸಂಗಾತಿ ಹುಡುಕಲು ಆತುರಪಡಬೇಡಿ. ವೀಡಿಯೊ ಕರೆಗಳಲ್ಲಿ ನಿಕಟ ದೃಶ್ಯಗಳನ್ನು ರೆಕಾರ್ಡ್ ಮಾಡಬೇಡಿ. ನಿಮ್ಮ ವೈಯಕ್ತಿಕ ಐಡಿ, ಮನೆ ವಿಳಾಸ, ಬ್ಯಾಂಕ್ ಖಾತೆ ವಿವರಗಳು ಹಂಚಿಕೊಳ್ಳಲು ಹೋಗಬೇಡಿ. ಇದು ನಿಮಗೆ ಆಪತ್ತು ತರಬಹುದು.
ನೋ ಎಂಬುದನ್ನು ಕಲಿಯಿರಿ: ನಿಮಗೆ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ವ್ಯಕ್ತಿಯ ಬಗ್ಗೆ ಅನುಮಾನ ಬಂದಲ್ಲಿ ಮುಜುಗರ ಬೇಡ. ನೇರವಾಗಿ ನೋ ಎನ್ನುವುದನ್ನು ಕಲಿಯಿರಿ. ಅಂಥವರ ಜೊತೆ ಅತಿಯಾಗಿ ಮಾತನಾಡಲು ಹೋಗಬೇಡಿ. ಪದೇ ಪದೇ ಸಂದೇಶ ಮತ್ತು ಕರೆ ಮಾಡುತ್ತಿದ್ದರೆ ಸೈಬರ್ ಸೆಲ್ ಗೆ ದೂರು ನೀಡಿ.
ಪತ್ನಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿದ್ರೆ No Problem ಅಂತಾನೆ ಈ ಪತಿ ಮಹಾಶಯ!
ಡೇಟಿಂಗ್ ಮೊದಲು ಎಚ್ಚರ: ಮೊದಲ ಬಾರಿ ಅಪರಿಚಿತ ವ್ಯಕ್ತಿಯ ಜೊತೆ ಹೊರಗೆ ಹೋಗ್ತಿದ್ದರೆ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಡಿ. ಜನಸಂದಣಿಯಿರುವ ಪ್ರದೇಶದಲ್ಲಿ ಅವರನ್ನು ಭೇಟಿಯಾಗಿ. ಇಲ್ಲವೆ ನಿಮ್ಮ ಜೊತೆ ನಿಮ್ಮ ಸ್ನೇಹಿತರನ್ನು ಕರೆದೊಯ್ಯುವುದು ಒಳ್ಳೆಯದ ಆಯ್ಕೆ. ಹಾಗೆಯೇ ಅಪರಿಚಿತ ವ್ಯಕ್ತಿಯಿಂದ ಯಾವುದೇ ಆಹಾರ ತೆಗೆದುಕೊಳ್ಳುವಾಗ್ಲೂ ಜಾಗರೂಕರಾಗಿರಿ.