Asianet Suvarna News Asianet Suvarna News

ಮನೆಯಿಂದ ಆಚೆ ಕಾಲಿಟ್ರಾ? ಹೋಮ್ ಸಿಕ್ ಆಗದಂತೆ ಕೇರ್ ತೆಗೆದುಕೊಳ್ಳಿ!

ಅದೇ ಮನೆಯಿಂದ ಹೊರಹೋಗುವ ವಿದ್ಯಾರ್ಥಿ ಅಥವಾ ಉದ್ಯೋಗಸ್ಥರಿಗೆ ಮನೆಯ ಗೀಳು ಕಾಡಿಸುವುದು ಸಹಜ. ಈ ನೋವನ್ನು ಹೆಚ್ಚು ಕಾಲ ಅನುಭವಿಸುವುದರಲ್ಲಿ ಅರ್ಥವಿಲ್ಲ. ಎಚ್ಚರಿಕೆಯಿಂದ ಮನೆಯ ಗೀಳನ್ನು ದಾಟಿದಾಗಲೇ ಹೊಸ ಜೀವನ ನಿಮ್ಮದಾಗುತ್ತದೆ.

 

How to manage homesickness after leaving home
Author
First Published Nov 1, 2022, 4:41 PM IST

ಅದುವರೆಗೆ ಮನೆಯಲ್ಲಿ ಅಪ್ಪ-ಅಮ್ಮನ ಮುದ್ದಿನ ಮಗನಾಗಿಯೋ, ಮಗಳಾಗಿಯೋ ಬೆಳೆದವರು ಏಕಾಏಕಿ ಅದೊಂದು ದಿನ ಹೊರಟು ನಿಲ್ಲುತ್ತಾರೆ. “ಅವರು ಹೇಗೆ ಎಲ್ಲವನ್ನೂ ತಾವೇ ಮಾಡಿಕೊಳ್ಳುತ್ತಾರೋ’ ಎನ್ನುವ ಆತಂಕ ಪಾಲಕರಿಗಾದರೆ, ಏನಾದರೂ ಸಾಧಿಸುವ ಛಲ, ಉತ್ಸಾಹದಲ್ಲಿರುವ ಮಕ್ಕಳಿಗೆ ಆ ಕ್ಷಣದಲ್ಲಿ ಹೆಚ್ಚೇನೂ ನೋವಾಗದಿದ್ದರೂ ನಂತರ ಕೆಲ ದಿನಗಳಲ್ಲೇ ಮನೆಯ ಹಂಬಲ (ಹೋಮ್ ಸಿಕ್ ನೆಸ್) ಕಾಡಿಸಲು ಶುರುವಾಗುತ್ತದೆ. ಓದಲು ಬೇರೆ ಊರಿಗೆ ಹೋಗುವ ವಿದ್ಯಾರ್ಥಿಗಳಿಗೆ, ಕೆಲಸಕ್ಕಾಗಿ ಪರವೂರಿನಲ್ಲಿ ನೆಲೆ ನಿಲ್ಲುವ ಉದ್ಯೋಗಿಗಳಿಗೆ ಇದೊಂದು ಪರಿತಾಪ ಅನಿವಾರ್ಯ. ಎಲ್ಲವೂ ಇದ್ದಲ್ಲೇ ಸಿಗುವುದಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡರೂ ಮನೆಯ ಹಂಬಲ ಗೀಳಾಗಿ ಪರಿವರ್ತನೆಯಾಗಬಹುದು. ಎಷ್ಟೋ ಮಕ್ಕಳು ದೂರದ ಕಾಲೇಜನ್ನು ತೊರೆದು ತಮ್ಮೂರಿನ ಕಾಲೇಜಿಗೇ ಸೇರಿಕೊಳ್ಳುವುದಿದೆ. ಉದ್ಯೋಗಕ್ಕಾಗಿ ತೆರಳಿದವರು “ಕೆಲಸವೂ ಬೇಡ, ಏನೂ ಬೇಡ, ಮನೆ ಸೇರಿದರೆ ಸಾಕು’ ಎನ್ನುವ ದುಃಖಕ್ಕೆ ಬೀಳುವುದಿದೆ. ಇದೊಂದು ಪರಿವರ್ತನೆಯ ಸಮಯ. ಮುಂದಿನ ಜೀವನಕ್ಕೆ ಅಣಿಯಾಗುವ ಹೊತ್ತು. ಈ ಸಮಯದಲ್ಲಾಗುವ ಇಂತಹ ನೋವನ್ನು ಸಹಿಸಿಕೊಂಡರೆ ಮಾತ್ರ ಮುಂದಿನ ಹಾದಿ ಸುಗಮವಾಗುತ್ತದೆ. ಆದರೂ ಅದು ಹೇಳಿಕೊಳ್ಳುವಷ್ಟು ಸುಲಭವಲ್ಲ. ಅದಕ್ಕಾಗಿ ಕೆಲವು ಮಾರ್ಗೋಪಾಯವನ್ನು ಅನುಸರಿಸಿ, ಕೆಲ ದಿನಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾಗುತ್ತದೆ. 

ನಿಮಗೆ ಗೊತ್ತೇ? ಮನೋತಜ್ಞರ ಪ್ರಕಾರ, ಮನೆಯ ಗೀಳು (Homesickness) ಕೆಲವೊಬ್ಬರಲ್ಲಿ ಮೂರು ವಾರಗಳ ಕಾಲ ಇದ್ದರೆ, ಕೆಲವರಲ್ಲಿ ಒಂದು ವರ್ಷದವರೆಗೂ ಮುಂದುವರಿಯಬಹುದು. ಅಧ್ಯಯನದ ಪ್ರಕಾರ, ಶೇ.94ರಷ್ಟು ವಿದ್ಯಾರ್ಥಿಗಳು (Students) ಮನೆ ಬಿಟ್ಟ ಮೊದಲ 10 ತಿಂಗಳಲ್ಲಿ ತೀವ್ರವಾದ ಹೋಮ್ ಸಿಕ್ ನೆಸ್ ಅನುಭವಿಸುತ್ತಾರೆ. ತಾಳ್ಮೆಯಿಂದ (Patience) ಈ ನೋವಿನಿಂದ ಆಚೆಗೆ ಬರಬೇಕಾಗುತ್ತದೆ, ಅದಕ್ಕಾಗಿ ನಿರ್ದಿಷ್ಟ ಪ್ರಯತ್ನ ಅಗತ್ಯ.

•    ಕ್ರಿಯಾಶೀಲರಾಗಿರಿ (Be Active)
ಮೊದಲನೆಯದಾಗಿ, ನೀವು ಕೊರಗಿದಷ್ಟೂ ಹೋಮ್ ಸಿಕ್ ನೆಸ್ ಹೆಚ್ಚುತ್ತದೆ. ಹೀಗಾಗಿ ಸುಮ್ಮನೆ ಮೂಲೆಯಲ್ಲಿ ಕೂರಬೇಡಿ. ವಿದ್ಯಾರ್ಥಿಗಳಾಗಿದ್ದರೆ ಬೇರೆ ಉತ್ತಮ ವಿದ್ಯಾರ್ಥಿಗಳ ಸ್ನೇಹ (Friendship) ಮಾಡಿ. ದೈಹಿಕ, ಆಟೋಟಗಳಲ್ಲಿ ಕ್ರಿಯಾಶೀಲರಾಗಿರಿ. ದಿನವೂ ವ್ಯಾಯಾಮ (Exercise) ಮಾಡಿ. ಉದ್ಯೋಗಸ್ಥರಾಗಿದ್ದರೂ ನಿಯಮಿತ ವ್ಯಾಯಾಮ ಮಾಡಲು ಮರೆಯದಿರಿ. ಬೆಳಗಿನ ವಾಕ್ ಮಾಡಿ.

Work Place Culture: ಯಶಸ್ವಿ ಬಾಸ್ ಆಗಬೇಕು ಅಂದ್ರೆ ಈ ರೂಲ್ಸ್ ಫಾಲೋ ಮಾಡಿ

•    ಪಿಜಿಯಾ? ಹಾಸ್ಟೆಲ್ಲಾ? ರೂಮಾ?
ನಿಮ್ಮ ಸ್ವಭಾವ ಹೇಗಿದೆ ಎನ್ನುವುದರ ಆಧಾರದ ಮೇಲೆ ನೀವು ಇರಬೇಕಾದ ತಾಣವನ್ನು (Place) ಆಯ್ಕೆ ಮಾಡಿಕೊಳ್ಳಿ. ನೀವು ಮನೆ ಅಡುಗೆಯನ್ನು ತೀವ್ರವಾಗಿ ಇಷ್ಟಪಡುವವರಾಗಿದ್ದು, ಬೇರೆ ಅಡುಗೆ ಸೇರುವುದಿಲ್ಲವೆಂದಾದರೆ ರೂಮ್ ಮಾಡಿಕೊಳ್ಳಿ. ಯಾರನ್ನಾದರೂ ಒಳ್ಳೆಯ ಸ್ನೇಹಿತರೊಂದಿಗೆ ರೂಮ್ ಮಾಡಿಕೊಳ್ಳಬಹುದು. ಆಗ ನೀವೇ ಅಡುಗೆ ಮಾಡಿಕೊಳ್ಳಬಹುದು. ಅದರಿಂದ ನಿಮಗೆ ಸಮಯವೂ ಚೆನ್ನಾಗಿ ಕಳೆದುಹೋಗುತ್ತದೆ. ಇನ್ನು, ಅಡುಗೆ ಮಾಡಲು ಬೋರ್ ಎನ್ನುವವರು ಪಿಜಿ ಅಥವಾ ಹಾಸ್ಟೆಲ್ (Hostel) ಮೊರೆ ಹೋಗಬಹುದು. ಎಲ್ಲೇ ಆದರೂ ಸೋಮಾರಿಯಾಗಿ (Lazy) ಕಾಲ ಕಳೆಯಬಾರದು. ಬೆಳಗ್ಗೆ ಬೇಗ ಎದ್ದು ವಾಕ್ ಹೋಗುವುದು ಅಗತ್ಯ.

•    ಸಾಮಾಜಿಕ ಜಾಲತಾಣದಿಂದ (Social Media) ದೂರವಿರಿ
ಸಾಮಾಜಿಕ ಜಾಲತಾಣಗಳು ಮನಸ್ಸನ್ನು ಹಾಳು ಮಾಡುವಲ್ಲಿ ಮುಂಚೂಣಿಯಲ್ಲಿವೆ. ಇವುಗಳಿಂದ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಚಪಲವುಂಟಾಗುತ್ತದೆ. ಇದು ದುಃಖಕ್ಕೆ (Sadness) ದೂಡುತ್ತದೆ. ಸೀಮಿತವಾಗಿ ಆರೋಗ್ಯಕಾರಿ ಚಟುವಟಿಕೆಗೆ ಮಾತ್ರವೇ ಬಳಕೆ ಮಾಡಿಕೊಳ್ಳಬೇಕು. ನಿಮ್ಮ ಕಾಲೇಜಿನಲ್ಲೇ ವಿವಿಧ ಸಮಾಜ ಸೇವೆಯಲ್ಲಿ (Social Service) ಸಕ್ರಿಯವಾಗಿರುವ ಗುಂಪಿರಬಹುದು, ಅವರೊಂದಿಗೆ ಕೈ ಜೋಡಿಸಿ.

Sex Education: ಸಕಾಲಿಕ ಲೈಂಗಿಕ ಶಿಕ್ಷಣ ಹದಿಹರೆಯದವರಿಗೆ ಅಗತ್ಯ ಅನ್ನೋದ್ಯಾಕೆ?

•    ಮನೆಯನ್ನೇ ನೀವಿರುವಲ್ಲಿಗೆ ತಂದುಕೊಳ್ಳಿ!
ಅಂದರೆ, ನೀವು ಮನೆಯಲ್ಲಿ ಉಪಯೋಗಿಸುತ್ತಿದ್ದ ನಿಮಗೆ ಆಪ್ತವೆನಿಸುವ ಕೆಲವು ವಸ್ತುಗಳನ್ನು (Things) ನೀವಿರುವಲ್ಲಿಗೇ ತೆಗೆದುಕೊಂಡು ಹೋಗಿ. ಇದರಿಂದ ನಿಮಗೆ ಎಷ್ಟೋ ಹಾಯೆನಿಸುತ್ತದೆ. 

•    ಉತ್ತಮ ಹವ್ಯಾಸ (Good Habit)
ಓದುವಿಕೆಯಂತಹ (Reading) ಉತ್ತಮ ಹವ್ಯಾಸ ಬೇರೊಂದಿಲ್ಲ. ಅದರಲ್ಲಿ ತೊಡಗಿಸಿಕೊಳ್ಳಿ. ಉದ್ಯೋಗಸ್ಥರಾಗಿದ್ದರೆ “ಬೇರೆ ಕೆಲಸ ಇಲ್ಲ’ ಎಂದು ವರ್ಕೋಹಾಲಿಕ್ ಥರ ವರ್ತಿಸುವುದು ಬೇಕಾಗಿಲ್ಲ. ಉಳಿದ ಸಮಯವನ್ನು ಉತ್ತಮ ಚಟುವಟಿಕೆಗೆ ವಿನಿಯೋಗಿಸಿಕೊಳ್ಳಿ. 

•    ಸಹಾಯ ಕೇಳಲು (Ask Help) ಮುಜುಗರ ಬೇಡ
ಹೊಸ ಸ್ಥಳ, ಕೆಲಸಕ್ಕೆ ಹೊಂದಿಕೊಳ್ಳಲು ಕಷ್ಟವಾದಾಗ ಯಾರದ್ದಾದರೂ ಸಹಾಯ ಪಡೆದುಕೊಳ್ಳಿ. ನಿಮ್ಮ ಸುರಕ್ಷತೆ ಬಗ್ಗೆ ಎಚ್ಚರಿಕೆ ಇರಲಿ. ವಿದ್ಯಾಸಂಸ್ಥೆಗಳಲ್ಲಂತೂ ಕೌನ್ಸೆಲಿಂಗ್ ಸೇವೆ ಇರುತ್ತದೆ, ಅದರ ನೆರವು ಪಡೆದುಕೊಳ್ಳಲು ಹಿಂಜರಿಕೆ ಬೇಡ. ಮನೆಯವರೊಂದಿಗೆ ಸಂಪರ್ಕದಲ್ಲಿರಿ. 

Follow Us:
Download App:
  • android
  • ios