ಪ್ರಶ್ನೆ: ವಯಸ್ಸು ಮೂವತ್ತು. ಮೂರು ತಿಂಗಳ ಹಿಂದೆ ನನ್ನ ಚೊಚ್ಚಲ ಮಗು ಹುಟ್ಟಿತು. ಮಗುವಿಗೆ ಹಾಲೂಡಿಸುತ್ತಿದ್ದೇನೆ. ಆದರೆ, ಮಗುವಿಗೆ ಹೆಚ್ಚು ಹಾಲು ಉಣಿಸುವುದರಿಂದ ಮತ್ತು ಹೆರಿಗೆಯ ನಂತರ ಸಹಜವಾಗಿಯೇ ಸ್ತನಗಳೂ ಜೋತು ಬೀಳುತ್ತವೆ ಎಂದು ಗೆಳತಿಯರು ಹೇಳುವುದನ್ನು ಕೇಳಿದ್ದೇನೆ. ಹೀಗೆ ಆಗಿಬಿಟ್ಟರೆ ನನ್ನ ಗಂಡನ ಕಣ್ಣಿನಲ್ಲಿ ನಾನು ಅನಾಕರ್ಷಕ ಆಗಿಬಿಟ್ಟೇನು ಎಂಬ ಆತಂಕ ಕಾಡುತ್ತಿದೆ. ಸ್ತನಗಳು ಜೋತು ಬೀಳದಿರಲು ಏನು ಮಾಡಬೇಕು?

ಉತ್ತರ: ಮಗುವಿಗೆ ಎದೆ ಹಾಲುಣಿಸುವುದು ನಿಜಕ್ಕೂ ತಾಯಿಗೆ ಆನಂದ ನೀಡುವ ಕಾರ್ಯ. ಹಾಗೆಯೇ, ಮಗು ಹೆತ್ತ ಮೇಲೂ ನಿಮ್ಮ ದೇಹದ ಬಿಗಿ, ಫಿಟ್‌ನೆಸ್‌ ಉಳಿಸಿಕೊಳ್ಳಬೇಕು ಎಂಬ ನಿಮ್ಮ ಬಯಕೆಯೂ ಸಹಜವಾದ್ದೇ. ಅನೇಕರಿಗೆ ಇದರ ಅರಿವು ಇಲ್ಲದೆ, ದೇಹ ಅಡ್ಡಾದಿಡ್ಡಿಯಾಗಿ ಬೆಳೆದುಬಿಡುತ್ತದೆ. ಕೆಲವು ಸಣ್ಣಪುಟ್ಟ ಮುನ್ನೆಚ್ಚರಿಕೆಗಳಿಂದ ಇದನ್ನು ತಡೆಗಟ್ಟಬಹುದು.

ಮಗುವಿನ ಬೆಳವಣಿಗೆಗೆ ತಾಯಿಯ ಎದೆ ಹಾಲು ಅತ್ಯಂತ ಅಗತ್ಯ ಹಾಗೂ ಅದರಷ್ಟು ಪೌಷ್ಟಿಕ ಇನ್ನೊಂದಿಲ್ಲ. ಹೀಗಾಗಿ ಕನಿಷ್ಠ ಆರು ತಿಂಗಳವರೆಗೆ ಎದೆ ಹಾಲು ನೀಡಿ. ಗರ್ಭಾವಸ್ಥೆಯಿಂದಲೇ ಮಹಿಳೆಯ ದೇಹದಲ್ಲಿ ಬದಲಾವಣೆಯಾಗಲು ಆರಂಭವಾಗಿರುತ್ತದೆ. ಸ್ತನದ ಗಾತ್ರ ಹೆಚ್ಚಾಗಿರುತ್ತದೆ. ಎದೆ ಹಾಲು ಉತ್ಪತ್ತಿಯಾಗುವಾಗ ಸ್ತನದ ಗಾತ್ರ ಮತ್ತಷ್ಟು ದೊಡ್ಡದಾಗುವುದು. ಈ ಸಮಯದಲ್ಲಿ ಸ್ತನಗಳು ಜೋತು ಬೀಳಲಾರಂಭಿಸುತ್ತದೆ. ಈ ಸಮಯದಲ್ಲಿ ಸ್ತನಗಳ ಆರೈಕೆ ಮಾಡದಿದ್ದರೆ, ಹಾಲುಣಿಸುವುದು ನಿಲ್ಲಿಸಿದ ಬಳಿಕ ಸ್ತನಗಳು ಸಡಿಲವಾಗಬಹುದು. 

ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ? 
ಕೆಲವರು ಮಗುವಿಗೆ ಆಗಾಗ ಹಾಲುಣಿಸಬೇಕೆಂದು ಬ್ರಾ ಧರಿಸುವುದಿಲ್ಲ. ಸ್ತನಗಳು ಜೋತು ಬೀಳಲು ಇದೊಂದು ಕಾರಣ. ಎದೆ ಹಾಲುಣಿಸುವಾಗ ಸ್ತನಗಳು ಭಾರವಾಗಿರುವುದರಿಂದ ಬ್ರಾ ಧರಿಸದಿದ್ದರೆ ಬೆನ್ನು ನೋವು ಬರುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಗರ್ಭಾವಸ್ಥೆಯಿಂದಲೇ ಗುಣಮಟ್ಟದ ಸಪೋರ್ಟಿವ್ ಬ್ರಾ ಧರಿಸಿ. ಗರ್ಭಾವಸ್ಥೆಯಲ್ಲಿ ಹಾಗೂ ಎದೆ ಹಾಲುಣಿಸುವಾಗ ಬಳಸಲು ಅನುಕೂಲಕರವಾದ ಬ್ರಾಗಳು ದೊರೆಯುತ್ತವೆ. ಅವುಗಳನ್ನು ಬಳಸುವುದರಿಂದ ಎದೆ ಹಾಲು ಸುಲಭವಾಗಿ ನೀಡಬಹುದು ಹಾಗೂ ಸ್ತನಗಳ ಶೇಪ್ ಕಾಪಾಡಬಹುದು. 
ಬಹುತೇಕ ತಾಯಂದಿರು ಎದೆ ಹಾಲುಣಿಸುವಾಗ ಮಗುವಿನ ಕಡೆ ಬಾಗಿ ಎದೆ ಹಾಲುಣಿಸುತ್ತಾರೆ. ಇದು ಸ್ತನಗಳು ಜೋತು ಬೀಳಲು ಒಂದು ಕಾರಣ. ಮಗುವಿಗೆ ಎದೆ ಹಾಲುಣಿಸುವಾಗ ನೀವು ಕೂರುವ ಭಂಗಿ ಸರಿಯಾಗಿ ಇರಲಿ. ನರ್ಸಿಂಗ್ ಪಿಲ್ಲೋ ಬಳಸಿ, ಆಗ ಮಗುವನ್ನು ನಿಮ್ಮ ಎದೆಯ ಹತ್ತಿರಕ್ಕೆ ತಂದು ಕುಡಿಸಲು ಸಹಕಾರಿಯಾಗುವುದು. ಈ ಭಂಗಿಯಲ್ಲಿ ಕುಳಿತು ಎದೆ ಹಾಲುಣಿಸುವುದರಿಂದ ಸ್ತನಗಳು ಜೋತು ಬೀಳುವುದನ್ನು ತಪ್ಪಿಸಬಹುದು. 
ಬಿಸಿ ನೀರು ಹಾಗೂ ತಣ್ಣೀರು ಬಳಸಿ ಆಗಾಗ ಮಸಾಜ್ ಮಾಡಿಕೊಳ್ಳಿ. ಬಿಸಿ ನೀರು ರಕ್ತ ಸಂಚಾರಕ್ಕೆ ಸಹಕಾರಿಯಾದರೆ ತಣ್ಣೀರು ತ್ವಚೆ ಬಿಗಿಯಾಗಲು ಸಹಾಯ ಮಾಡುತ್ತದೆ. ಸ್ನಾನವಾದ ಬಳಿಕ ಸ್ತನಗಳಿಗೆ ಬಿಸಿ ನೀರು ಹಾಗೂ ತಣ್ಣೀರು ಹಾಕಿ. ಇದರಿಂದ ಕಟ್ಟಿದ ಹಾಲು ಕೂಡ ಸುರಿದು ಹೋಗುವುದು, ಸ್ತನಗಳಿಗೂ ಉತ್ತಮ ಮಸಾಜ್ ಸಿಗುವುದು. ಇದರಿಂದ ಸ್ತನಗಳು ಬಿಗಿಯಾಗಿರುತ್ತವೆ. ಎದೆ ಹಾಲುಣಿಸುವ ತಾಯಂದಿರು ಸ್ತನಗಳು ಮಾಯಿಶ್ಚರೈಸ್ ಆಗಿರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಇ ಇರುವ ಕೋಕಾ ಬಟರ್ ದಿನದಲ್ಲಿ ಎರಡು ಬಾರಿ ಹಚ್ಚುವುದು ಒಳ್ಳೆಯದು. ಇದು ಸ್ಟ್ರೆಚ್ ಮಾರ್ಕ್ಸ್ ಕೂಡ ಹೋಗಲಾಡಿಸುವುದು. ಮಸಾಜ್ ಮಾಡುವಾಗ ಸ್ತನಗಳ ತೊಟ್ಟಿನ ಭಾಗಕ್ಕೆ ಹಚ್ಚಬೇಡಿ, ಹಾಗೂ ಮಗುವಿಗೆ ಹಾಲುಣಿಸುವಾಗ ಸ್ತನಗಳ ತೊಟ್ಟಿನ ಭಾಗ ಒದ್ದೆ ಬಟ್ಟೆಯಲ್ಲಿ ಒರೆಸಿ ನಂತರ ಹಾಲುಣಿಸಿ.

#Feelfree: ಗುಪ್ತಾಂಗದ ಕೂದಲು ಬೆಳೆಸಬೇಕೇ, ಉಳಿಸಬೇಕೇ? 
ಎದೆ ಹಾಲುಣಿಸುವ ತಾಯಂದಿರು ಆರೋಗ್ಯಕರ ಆಹಾರ ಸೇವಿಸಬೇಕು. ಅಧಿಕ ಹಣ್ಣುಗಳು ಹಾಗೂ ತರಕಾರಿ ಸೇವಿಸಬೇಕು. ಕಾರ್ಬೊಹೈಡ್ರೇಟ್, ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬಿನಂಶ ಆಹಾರಕ್ರಮದಲ್ಲಿರಬೇಕು. ಇದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು, ತ್ವಚೆ ಹೊಳಪು ಹೆಚ್ಚುವುದು, ಆರೋಗ್ಯವೂ ವೃದ್ಧಿಸುವುದು. 
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ನೀರು ಕುಡಿಯಿರಿ. ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು. ನೀರು ತುಂಬಾ ಕುಡಿಯುವುದರಿಂದ ತ್ವಚೆಯಲ್ಲಿನ ಸ್ಟ್ರೆಚ್‌ ಮಾರ್ಕ್ಸ್ ಮಾಯವಾಗುವುದು ಹಾಗೂ ಅಕಾಲಿಕ ನೆರೆ ಕೂಡ ತಪ್ಪಿಸಬಹುದು. ಹೆರಿಗೆಯ ಬಳಿಕ ದೇಹ ಮೊದಲಿನ ಆಕಾರಕ್ಕೆ ಬರಲು, ಹೆರಿಗೆ ಆರು ತಿಂಗಳ ಬಳಿಕ ವ್ಯಾಯಾಮ ಮಾಡಲು ಪ್ರಾರಂಭಿಸಿ. ಮೊದಲಿಗೆ ಸರಳವಾದ ವ್ಯಾಯಾಮಗಳೊಂದಿಗೆ ಆರಂಭಿಸಬೇಕು. ಒಂದು ವರ್ಷದೊಳಗೆ ದೇಹದ ಮೊದಲಿನ ಶೇಪ್ ಮರಳುತ್ತದೆ. 

ಮಸಲ್ಸ್ ಬೆಳೆಸೋಕೆ ಎದೆ ಹಾಲು ಕುಡಿತಾರಂತೆ ಪುರುಷರು..!