Asianet Suvarna News Asianet Suvarna News

ಮಸಲ್ಸ್ ಬೆಳೆಸೋಕೆ ಎದೆ ಹಾಲು ಕುಡಿತಾರಂತೆ ಪುರುಷರು..!

ಈಗಿನ ಸುದ್ದಿ ಏನೆಂದರೆ ಪುರುಷರು ಮಸಲ್ಸ್ ಹೆಚ್ಚಿಸಿಕೊಳ್ಳಲು ಎದೆ ಹಾಲು ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಂಬಲು ಕಷ್ಟವಾಗ್ತಿದ್ಯಾ..? ಆದರೆ ಇದು ನಿಜ.

Some men are now drinking breastmilk to build muscles
Author
Bangalore, First Published Sep 6, 2020, 2:50 PM IST
  • Facebook
  • Twitter
  • Whatsapp

ಎದೆಹಾಲು ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಖನಿ. ಇನ್ಫೆಕ್ಷನ್, ರೋಗ ನಿರೋಧಕ ಶಕ್ತಿ, ಅಗತ್ಯ ಫಾಟ್, ಪ್ರೊಟೀನ್ ಎಲ್ಲವೂ ತಾಯಿಯ ಎದೆ ಹಾಲಲ್ಲಿ ಅಡಕವಾಗಿದೆ. ಹಾಗಾಗಿ ಮಕ್ಕಳಿಗೆ ಎದೆ ಹಾಲುಣಿಸುವುದು ಸೂಪರ್ ಹೆಲ್ತಿ ಎಂದೇ ಪರಿಗಣಿಸಲಾಗುತ್ತದೆ.

ಈಗಿನ ಸುದ್ದಿ ಏನೆಂದರೆ ಪುರುಷರು ಫಿಟ್‌ನೆಸ್‌ಗಾಗಿ ಮಸಲ್ಸ್ ಹೆಚ್ಚಿಸಿಕೊಳ್ಳಲು ಎದೆ ಹಾಲು ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಂಬಲು ಕಷ್ಟವಾಗ್ತಿದ್ಯಾ..? ಆದರೆ ಇದು ನಿಜ.

ಮಗು Lefty ನಾ Righty? ತಾಯಿ ಎದೆ ಹಾಲುಣಿಸುವಾಗ್ಲೇ ಗೊತ್ತಾಗುತ್ತೆ!

ಇದನ್ನು ವಿಲಕ್ಷಣ ಆರೋಗ್ಯ ಪ್ರವೃತ್ತಿ ಎಂದೇ ಕರೆಯಬಹುದೇನೋ.. ಬಾಡಿ ಬಿಲ್ಡರ್ಸ್ ಮತ್ತು ಫಿಟ್‌ನೆಸ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಝ್ ಇರೋರು ತಮ್ಮ ಸ್ನಾಯುಗಳನ್ನು ಬಲಪಡಿಸಲು ಹೆಲ್ತ್‌ ಬ್ಯಾಂಕಿಗ್‌ಗಳ ಮೂಲಕ ಎದೆ ಹಾಲಿಗೆ ಮೊರೆ ಹೋಗುತ್ತಿದ್ದಾರೆ.

Some men are now drinking breastmilk to build muscles

ಎದೆ ಹಾಲು ನೀಡುವವರಿಂದ ಹಾಲು ಪಡೆದು ಕುಡಿದು ಬಾಡಿ ಬಿಲ್ಡರ್ಸ್ ತಮ್ಮ ಸ್ನಾಯು ಬಲ ಪಡಿಸುವ ಒಂದು ಚಿತ್ರಣವನ್ನು ವೆನ್ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದೆ. ಬಾಡಿ ಬಿಲ್ಡರ್ ಜೆಜೆ ರಿಟೆನೋರ್ ಇದರ ಹಿಂದಿನ ಕಾರಣ ತಿಳಿಸಿ, ಉತ್ತಮ ನ್ಯೂಟ್ರಿಷಿಯನ್ ಪಡೆಯಲು ಈ ರೀತಿ ಮಾಡಲಾಗುತ್ತದೆ. ಎದೆ ಹಾಲನ್ನು ಕುಡಿಯುವುದು ದೇಹವನ್ನು ಫಿಟ್ ಮಾಡುತ್ತದೆ ಎಂದಿದ್ದಾರೆ.

ಇವುಗಳನ್ನು ತಪ್ಪಿಯೂ ನಿಮ್ಮ ಗ್ರೀನ್‌ ಟೀಗೆ ಸೇರಿಸಬೇಡಿ..!

Some men are now drinking breastmilk to build muscles

ವಿಲಕ್ಷಣ ಮತ್ತು ಕೇಳದ ಈ ರೀತಿಯ ಟ್ರೆಂಡ್ ಈ ರೀತಿ ಎದೆಹಾಲು ಕುಡಿಯುವ ಬಗ್ಗೆ ನಾವು ಕೇಳುವುದು ಮೊದಲ ಬಾರಿಗಲ್ಲ. ಹಾಗಾದರೆ ಸ್ತನ್ಯಪಾನವು ವಯಸ್ಕರಿಗೆ ಆರೋಗ್ಯಕರವಾಗಿರಬಹುದೇ?

Follow Us:
Download App:
  • android
  • ios