Asianet Suvarna News Asianet Suvarna News

Womanizer: ಹೆಣ್ಮಕ್ಕಳ ಹಿಂದೆ ಹೋಗುವ ಸ್ವಭಾವ ನಿಮ್ಮ ಸಂಗಾತಿಗಿದೆಯಾ? ಹೀಗೆ ಪತ್ತೆ ಮಾಡಿ

ನನ್ನ ಸಂಗಾತಿ ನನ್ನೊಬ್ಬನನ್ನೇ ಪ್ರೀತಿಸ್ತಾನೆ ಎಂಬ ಗುಂಗಿನಲ್ಲಿ ಅನೇಕರಿರ್ತಾರೆ. ಆದ್ರೆ ಅವರಿಗೆ ಮೋಸ ಮಾಡಿ,ಇನ್ನೊಬ್ಬರ ಜೊತೆ ಆತ ಸುತ್ತುತ್ತಿರುತ್ತಾನೆ. ಇಬ್ಬರ ಸಂಬಂಧ ಬೆಡ್ ರೂಮಿನವರೆಗೂ ಬಂದಿರುತ್ತದೆ. ಪ್ರೇಮಿಯ ಈ ಚಟ ಪತ್ತೆ ಮಾಡದೆ ಹೋದ್ರೆ ಆಪತ್ತು ನಿಶ್ಚಿತ.  
 

How To Know If Your Boyfriend Is A Womanizer?
Author
Bangalore, First Published Jan 20, 2022, 12:54 PM IST


ಯೌವನದಲ್ಲಿ ಮನಸ್ಸು ಎಲ್ಲೆ ಮೀರಿ ಓಡುತ್ತಿರುತ್ತದೆ. ಆಗ ಆಕರ್ಷಣೆ(Attraction )ಸಾಮಾನ್ಯ. ಈ ಆಕರ್ಷಣೆಯನ್ನೇ ಅನೇಕರು ಪ್ರೀತಿ (Love) ಎಂದುಕೊಳ್ತಾರೆ. ಆದ್ರೆ ಅನೇಕ ದಿನಗಳ ಕಾಲ ಈ ಆಕರ್ಷಣೆ ಉಳಿಯುವುದಿಲ್ಲ. ಅವರನ್ನು ಬಿಟ್ಟು ಮತ್ತೊಬ್ಬರನ್ನು ಮನಸ್ಸು ಬಯಸುತ್ತಿರುತ್ತದೆ. ಇದನ್ನು ಪ್ರೀತಿ ಎನ್ನಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ಪ್ರೀತಿಸಿದ ವ್ಯಕ್ತಿ ಬಿಟ್ಟು ಮತ್ತ್ಯಾರನ್ನೂ ಮನಸ್ಸು ಬಯಸುವುದಿಲ್ಲ.

ಒಬ್ಬ ವ್ಯಕ್ತಿ  ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಜನರೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಒಲವು ತೋರಿದಾಗ ಅದು ಪ್ರೀತಿಯಲ್ಲ. ಇತ್ತೀಚಿನ ದಿನಗಳಲ್ಲಿ ಹುಕ್ಅಪ್ ಸಂಸ್ಕೃತಿ (Hookup Culture)ಅಥವಾ ಒನ್ ನೈಟ್ ಸ್ಟ್ಯಾಂಡ್ (One Night Stand)  ಸಾಮಾನ್ಯವಾಗಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಾಮಾಣಿಕವಾಗಿದ್ದಾಗ ಮತ್ತು ಅವರ ಗಮನ ಬೇರೆಡೆಯಿದ್ದಾಗ ನೀವು ಜಾಗರೂಕರಾಗಿರಬೇಕು. ಇದು ಕೇವಲ ಭಾವನಾತ್ಮಕ ಒತ್ತಡವನ್ನು ಹೆಚ್ಚಿಸುವುದಿಲ್ಲ. ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.ಹೆಚ್ ಐವಿ,ಏಡ್ಸ್ ಸಹ ಕಾಡಬಹುದು. ಹಾಗಾಗಿ, ವುಮೆನ್‌ಲೈಸರ್ (Womanizer) ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. 

ವುಮೆನ್‌ಲೈಸರ್ ಎಂದರೇನು? : ಒಬ್ಬ ಪುರುಷ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರೆ ಆತನನ್ನು ವುಮೆನ್ಲೈಸರ್ ಎನ್ನಲಾಗುತ್ತದೆ. ಈ ಸಂಬಂಧಗಳು ಹೆಚ್ಚಾಗಿ ಲೈಂಗಿಕವಾಗಿರುತ್ತವೆ. ಅವಿವಾಹಿತರೂ ಕೂಡ ಇದಕ್ಕೆ ಬಲಿಯಾಗ್ತಾರೆ. ವಿವಾಹಿತರೂ ವುಮೆನ್‌ಲೈಸರ್ ಆಗಿರ್ತಾರೆ. ಅವರು ಸಂಗಾತಿಗೆ ಸುಳ್ಳು ಹೇಳಿ,ಮೋಸ ಮಾಡುತ್ತಾರೆ.
ವುಮೆನ್‌ಲೈಸರ್,ಮಾತಿನಲ್ಲಿಯೇ ಮಹಿಳೆಯರನ್ನು ಮರಳು ಮಾಡ್ತಾರೆ. ಅವರ ಮಾತನ್ನು ನಂಬಿ,ಹುಡುಗಿಯರು ಸಂಬಂಧ ಬೆಳೆಸಲು ಮುಂದಾಗ್ತಾರೆ. ಆದ್ರೆ ಅವರ ಉದ್ದೇಶ ಬೇರೆಯಿರುತ್ತದೆ. ವುಮೆನ್‌ಲೈಸರ್ ಎರಡು, ಮೂರು ಮದುವೆ ಆಗುವುದುಂಟು.

 ನಿಮ್ಮ ಸಂಗಾತಿ ವುಮೆನ್‌ಲೈಸರ್ ಹೌದೋ ಅಲ್ಲವೋ ಎಂಬುದನ್ನು ಹೀಗೆ ಪತ್ತೆ ಮಾಡಿ 

ಫ್ಲರ್ಟ್ ಸ್ವಭಾವ : ಫ್ಲರ್ಟಿಂಗ್ ಮಾಡುವ ಎಲ್ಲರೂ ವುಮೆನ್ ಲೈಸರ್ ಎನ್ನಲು ಸಾಧ್ಯವಿಲ್ಲ. ಆದ್ರೆ ನಿಮ್ಮ ಸಂಗಾತಿ,ಪರ ಸ್ತ್ರೀಯನ್ನು  ಯಾವಾಗಲೂ ಗಮನಿಸುತ್ತಿದ್ದರೆ, ಅವರು ಜೊತೆ ಅತಿ ಸ್ನೇಹದಿಂದ ವರ್ತಿಸುತ್ತಿದ್ದರೆ ಇದು ವುಮನೈಸರ್ ಆಗಿರುವ ಸಂಕೇತವಾಗಿರಬಹುದು.

ಹಳೆಯ ಜೀವನ : ಸಾಮಾನ್ಯವಾಗಿ ಪ್ರೀತಿ ಮಾಡುವವರು ಸಂಗಾತಿಯ ಹಿಂದಿನ ಜೀವನವನ್ನು ಕೆದಕುವುದಿಲ್ಲ. ಹಿಂದೆ ಏನಾಗಿದೆ ಎಂಬುದು ಅವರಿಗೆ ಬೇಕಿರುವುದಿಲ್ಲ. ಆದ್ರೆ ಒಬ್ಬಿಬ್ಬರಲ್ಲ,ನಾಲ್ಕೈದು ಜನರ ಜೊತೆ ಸಂಗಾತಿ ಸಂಬಂಧ ಹೊಂದಿದ್ದ ಎಂಬುದು ನಿಮ್ಮ ಅರಿವಿಗೆ ಬಂದಲ್ಲಿ ಅಥವಾ ಬೇರೆ ಮಹಿಳೆಯರು ನಿಮ್ಮ ಸಂಗಾತಿ ಬಗ್ಗೆ ಮಾತನಾಡುವುದು ನಿಮ್ಮ ಕಿವಿಗೆ ಬಿದ್ದಲ್ಲಿ ಎಚ್ಚೆತ್ತುಕೊಳ್ಳಿ. ಯಾಕೆಂದ್ರೆ ಮುಂದೆ ಅವರಿಗೆ ಆದ ಸ್ಥಿತಿ ನಿಮಗೂ ಆಗಬಹುದು. 

Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್

ಗಿಫ್ಟ್, ಸಂಪತ್ತಿನ ಆಕರ್ಷಣೆ : ನಿಮ್ಮ ಸಂಗಾತಿ ಶ್ರೀಮಂತನಾಗಿದ್ದು, ಉಡುಗೊರೆ ನೀಡುವ ಮೂಲಕ ನಿಮ್ಮನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾನೆಯೇ ಎಂಬುದನ್ನು ಪರಿಶೀಲಿಸಿ. ನಿಮ್ಮಿಬ್ಬರ ಭೇಟಿ ಹೇಗಾಯ್ತು? ನಿಮ್ಮ ಸಂಗಾತಿ ಆಸ್ತಿ ಮೂಲಕ ನಿಮ್ಮನ್ನು ಸೆಳೆದರೇ ಎಂಬುದನ್ನು ಗಮನಿಸಿ. ಹಾಗೆ ಬೇರೆ ಮಹಿಳೆಯರ ಮುಂದೆಯೂ ನಿಮ್ಮ ಸಂಗಾತಿ, ಶ್ರೀಮಂತಿಕೆಯನ್ನು ಬಂಡವಾಳ ಮಾಡಿಕೊಳ್ಳುತ್ತಾರೆಯೇ ಎಂಬುದನ್ನು ಪರಿಶೀಲಿಸಿ. 

ವೈಯಕ್ತಿಕ ಜೀವನ : ಕೆಲ ಪುರುಷರು ತಮ್ಮ ವೈಯಕ್ತಿಕ ಜೀವನವನ್ನು ದಾಳ ಮಾಡಿಕೊಳ್ತಾರೆ. ಈವರೆಗೂ ಯಾವ ಮಹಿಳೆ ಕೂಡ ನನ್ನನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುತ್ತಿರುತ್ತಾರೆ. ಅಥವಾ ಮನಸ್ಸಿಗೆ ನಾಟುವ ಮಾತುಗಳನ್ನು ಆಡುವ ಮೂಲಕ ಮಹಿಳೆಯರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ ಇಂಥವರ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. 

New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ

ಮನುಷ್ಯ ಬದಲಾಗುತ್ತಿರುತ್ತಾನೆ. ಆತ ಹಿಂದಿನಂತೆ ಮುಂದಿರುವುದಿಲ್ಲ. ಹಳೆ ಸ್ವಭಾವ ಬಿಟ್ಟು ನಿಮ್ಮೊಂದಿಗೆ ಪ್ರಾಮಾಣಿಕವಾಗಿರಬಹುದು. ಹಾಗಾಗಿ ಸಂಗಾತಿ ಪ್ರತಿ ಹೆಜ್ಜೆಯನ್ನೂ ಅನುಮಾನಿಸಬೇಕಾಗಿಲ್ಲ. ಸಂದೇಶ ಬರುವ ವರ್ತನೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡಬೇಡಿ. ಇದು ಮಾನಸಿಕ ಆರೋಗ್ಯದ ಜೊತೆ ದೈಹಿಕ ಆರೋಗ್ಯ ಹಾಳು ಮಾಡುತ್ತದೆ ಎಂಬುದು ನೆನಪಿರಲಿ.
 

Follow Us:
Download App:
  • android
  • ios