ಪತ್ನಿಯ ಗಂಟು ಮುಖ ನೋಡಿ ಬೇಜಾರಾಗಿದೆ. ಸಂಸಾರದಲ್ಲಿ ಸುಖವೇ ಇಲ್ಲ ಎನ್ನುವವರನ್ನು ನೀವು ಕೇಳಿರಬಹುದು. ಸ್ವಾಮಿ, ಪತ್ನಿ ಕೋಪ ಮಾಡಿಕೊಳ್ಳೋಕೆ, ನಗು ಮರೆಯಾಗಿರೋದಕ್ಕೆ ನೀವೇ ಕಾರಣ. ಮೊದಲು ಅವರನ್ನು ಖುಷಿಯಾಗಿಡಿ. ನಂತ್ರ ಮ್ಯಾಜಿಕ್ ನೋಡಿ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಎನ್ನುವ ಹಾಡನ್ನು ನೀವು ಕೇಳಿರಬಹುದು. ಮನೆಯಲ್ಲಿರುವ ಮಹಿಳೆ ಖುಷಿಯಾಗಿದ್ರೆ ಆ ಮನೆಯಲ್ಲಿ ಸದಾ ನಗು, ಸಂತೋಷ, ಸಮೃದ್ಧಿ ತುಂಬಿರುತ್ತದೆ ಎಂಬ ನಂಬಿಕೆಯಿದೆ. ದುಡಿದು ಗಂಡ ಮನೆಗೆ ಬಂದಾಗ, ಪತ್ನಿ ನಗ್ತಾ ಬಾಗಿಲು ತೆರೆದ್ರೆ ಗಂಡನ ಸುಸ್ತು ಅರೆ ಕ್ಷಣದಲ್ಲಿ ಮಾಯವಾಗಿರುತ್ತದೆ. ಪತ್ನಿ ಸದಾ ಖುಷಿಯಾಗಿರಬೇಕೆಂದ್ರೆ ಪತಿಯ ಪಾಲೂ ಅದ್ರಲ್ಲಿ ಇದೆ. ಇಂದು ನಾವು ಪತ್ನಿ ಯಾವಾಗ್ಲೂ ಸಂತೋಷವಾಗಿರಬೇಕೆಂದ್ರೆ ಪತಿಯಾದವನು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ. ಅದಕ್ಕೂ ಮುನ್ನ, ಪತ್ನಿ ಖುಷಿಯಾಗಿದ್ರೆ ಏನೆಲ್ಲ ಲಾಭವಿದೆ ಎಂಬುದನ್ನು ನೀವು ತಿಳಿದುಕೊಳ್ಳಿ. ಲಾಭ ತಿಳಿದ್ಮೇಲೆ, ಪತ್ನಿಯನ್ನು ಸಂತೋಷವಾಗಿಡಲು ನೀವೂ ಕೆಳಗಿನ ಟಿಪ್ಸ್ ಫಾಲೋ ಮಾಡೇ ಮಾಡ್ತೀರಾ.
ಪತ್ನಿ (Wife) ಖುಷಿಯಾಗಿದ್ರೆ ಏನು ಲಾಭ ಗೊತ್ತಾ? : ಹೆಂಡತಿ ಸಂತೋಷ (Happiness) ವಾಗಿದ್ರೆ ವೈವಾಹಿಕ ಜೀವನ ತುಂಬಾ ಸಂತೋಷವಾಗಿರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಗಂಡ – ಹೆಂಡತಿ ಮಧ್ಯೆ ಪ್ರೀತಿ (love ) ಗಟ್ಟಿಯಾಗಿಬೇಕೆಂದ್ರೆ ಪತ್ನಿ ಸಂತೋಷವಾಗಿರುವುದು ಬಹಳ ಮುಖ್ಯ. ಮನೆ ಶಾಂತವಾಗಿರಬೇಕು, ಸಂಸಾರದಲ್ಲಿ ಜಗಳವಾಗ್ಬಾರದು ಅಂದ್ರೆ ಅದ್ರ ಗುಟ್ಟು ಕೂಡ ಪತ್ನಿಯ ಖುಷಿಯಲ್ಲಿದೆ. ದಾಂಪತ್ಯ ಜೀವನವನ್ನು ಚೆನ್ನಾಗಿ ಆನಂದಿಸಬೇಕೆಂದ್ರೆ ಸಂತೋಷ ಇಂಪಾರ್ಟೆಂಟ್. ನಿಮ್ಮ ಮಾತನ್ನು ನಿಮ್ಮ ಹೆಂಡತಿ ಕೇಳ್ಬೇಕೆಂದ್ರೆ ನೀವು ಅವಳನ್ನು ಸಂತೋಷವಾಗಿಡಬೇಕು.
ಓಕೆ ಇಷ್ಟೆಲ್ಲ ಲಾಭವಿದೆ ಅಂದ್ಮೇಲೆ ಹೆಂಡತಿಯನ್ನು ಹೇಗೆ ಸಂತೋಷವಾಗಿಡಬೇಕು ಅಂತಾ ತಿಳಿಲೇಬೇಕಲ್ವಾ?
ಐ ಲವ್ ಯು : ಈ ಐ ಲವ್ ಯುವಿನಲ್ಲಿ ಸಾಕಷ್ಟು ಶಕ್ತಿಯಿದೆ. ದಿನದ ಆರಂಭ ಹಾಗೂ ದಿನದ ಕೊನೆಯಲ್ಲಿ ನೀವು ಈ ಶಬ್ಧದ ಮೂಲಕ ಮುಗಿಸಬೇಕು. ಪತ್ನಿಗೆ ಬೆಳಿಗ್ಗೆ ಎದ್ದ ತಕ್ಷಣ ಮುತ್ತಿಟ್ಟು ಐ ಲವ್ ಯೂ ಅಂದ್ರೆ ಆಕೆ ಖುಷಿಯಾಗೋದ್ರಲ್ಲಿ ಡೌಟೇ ಇಲ್ಲ. ಪತಿ ತನ್ನನ್ನು ಪ್ರೀತಿಸ್ತಾನೆ, ತನಗೂ ಮಹತ್ವ ನೀಡ್ತಾನೆ ಎಂಬ ವಿಷ್ಯ ಪತ್ನಿಗೆ ಖುಷಿ ನೀಡುತ್ತದೆ. ದಿನದ ಆರಂಭ ಪ್ರಣಯದ ಜೊತೆ ಶುರುವಾದ್ರೆ ದಿನ ರೋಮ್ಯಾಂಟಿಕ್ ಹಾಗೂ ಸಂತೋಷವಾಗಿ ಕಳೆಯುತ್ತದೆ.
Love at First Sight ಆದರೂ ಮೊದಲ ಭೇಟಿಯಲ್ಲೇ ಫಸ್ಟ್ ನೈಟ್ ಮಾಡೋಣಾ ಅನ್ನೋದಾ?
ಪತ್ನಿಯ ಸಮಸ್ಯೆ ಅರ್ಥ ಮಾಡಿಕೊಳ್ಳಿ : ಅನೇಕ ಪುರುಷರಿಗೆ ಅವರ ಸಮಸ್ಯೆಯೇ ದೊಡ್ಡದಾಗಿರುತ್ತದೆ. ಮುಟ್ಟಿನ ದಿನಗಳಲ್ಲಿ ಅಥವಾ ಮಕ್ಕಳನ್ನು ಸಂಭಾಳಿಸುವಾಗ ಪತ್ನಿ ಏನೆಲ್ಲ ಕಷ್ಟ ಅನುಭವಿಸ್ತಾಳೆ ಎಂಬುದನ್ನು ಅವರು ಅರಿಯುವುದಿಲ್ಲ. ಆದ್ರೆ ಪತ್ನಿ ಕಷ್ಟ ತಿಳಿದು ಅದಕ್ಕೆ ನೀವು ಸ್ಪಂದಿಸಿದ್ರೆ ಆಟೋಮ್ಯಾಟಿಕ್ ಆಗಿ ಆಕೆ ನಿಮ್ಮ ಬಳಿ ಬರ್ತಾಳೆ.
ಮಾತಿನಲ್ಲಿ ಪ್ರೀತಿ ಇರಲಿ : ಪ್ರೀತಿ ಎಲ್ಲವನ್ನೂ ಮರೆಸುತ್ತದೆ. ಹೆಂಡತಿಯೊಂದಿಗೆ ಪ್ರೀತಿಯಿಂದ ಮಾತನಾಡುವುದು ಮುಖ್ಯ. ಆಕೆಯನ್ನು ಕರೆಯುವುದ್ರಿಂದ ಹಿಡಿದು, ಆಕೆ ತಪ್ಪನ್ನು ತಿದ್ದುವವರೆಗೂ ನೀವು ಪ್ರೀತಿ ತೋರಿಸಬೇಕು. ಪತ್ನಿ ಮೇಲೆ ರೇಗಾಡದೆ ಪ್ರೀತಿಯಿಂದ ಆಕೆಯನ್ನು ಕರೆದ್ರೆ, ಪ್ರೀತಿಯ ಪದಗಳನ್ನು ಬಳಸಿದರೆ ಆಕೆ ಯಾವಾಗ್ಲೂ ಸಂತೋಷವಾಗಿರುತ್ತಾಳೆ.
ಪತ್ನಿ ಸೌಂದರ್ಯದ ವರ್ಣನೆ : ಪತಿ ತನ್ನ ಸೌಂದರ್ಯವನ್ನು ಹೊಗಳಲಿ ಎಂದು ಪತ್ನಿ ಬಯಸ್ತಾಳೆ. ಪತಿಗಾಗಿಯೇ ವಿಶೇಷವಾಗಿ ಸಿಂಗಾರಗೊಳ್ಳುತ್ತಾಳೆ. ಪತ್ನಿ ಬಯಸಿದಂತೆ ಆಕೆ ಸೌಂದರ್ಯವನ್ನು ಪತಿ ಹೊಗಳಿದರೆ ಆಕೆ ತುಂಬಾ ಸಂತೋಷಪಡುತ್ತಾಳೆ. ಪತಿ ತನ್ನನ್ನು ಗಮನಿಸುತ್ತಿದ್ದಾನೆಂದು ಆಕೆ ಭಾವಿಸ್ತಾಳೆ.
Relationship Tips : ಹೆಂಡ್ತಿ ಮನೇಲಿ ಬ್ರಾ ಹಾಕ್ತಿಲ್ಲ, ಗಂಡನ ಸಮಸ್ಯೆಗೆ ನೆಟ್ಟಿಗರು ತಬ್ಬಿಬ್ಬು!
ಸಣ್ಣಪುಟ್ಟ ಉಡುಗೊರೆ : ಪತ್ನಿಯನ್ನು ಖುಷಿಪಡಿಸಲು ಆಗಾಗ ಸಣ್ಣ ಉಡುಗೊರೆಗಳನ್ನು ನೀಡ್ತಿರಿ. ಅದಕ್ಕೆ ಅವಳ ಬರ್ತ್ ಡೇ, ವಿವಾಹದ ದಿನವೇ ಆಗ್ಬೇಕೆಂದೇನೂ ಇಲ್ಲ. ಆಗಾಗ ಉಡುಗೊರೆ ನೀಡಿ.
ತಬ್ಬಿಕೊಳ್ಳಿ : ಪತಿ ರೋಮ್ಯಾಂಟಿಕ್ ಆಗಿರಬೇಕೆಂದು ಪತ್ನಿ ಬಯಸ್ತಾಳೆ. ಆಕೆ ಅಡುಗೆ ಮಾಡುವಾಗ ನೀವು ಹಿಂದಿನಿಂದ ಹೋಗಿ ಆಕೆಯನ್ನು ತಬ್ಬಿಕೊಳ್ಳಬಹುದು. ಸಂಶೋಧನೆಯೊಂದರ ಪ್ರಕಾರ, ಯಾರನ್ನಾದರೂ ತಬ್ಬಿಕೊಂಡಾಗ ಎದುರಿನ ವ್ಯಕ್ತಿಗೆ ನಮ್ಮ ಮೇಲೆ ಸಕಾರಾತ್ಮಕ ಚಿಂತನೆ ಉಂಟಾಗುತ್ತದೆ.
ಇತರೆ ಐಡಿಯಾ : ಪತ್ನಿಯನ್ನು ಸಂತೋಷವಾಗಿಡಲು ಆಕೆಯನ್ನು ಹೊರಗೆ ಕರೆದುಕೊಂಡು ಹೋಗ್ಬಹುದು. ವಾರದಲ್ಲಿ ಒಂದು ದಿನ ಹೊಟೇಲ್ ನಲ್ಲಿ ಡಿನ್ನರ್ ಮಾಡ್ಬಹುದು. ಆಕೆಗೆ ಮನೆ ಕೆಲಸದಲ್ಲಿ ಸಹಾಯ ಮಾಡ್ಬಹುದು. ಹೀಗೆ, ನಿಮ್ಮ ಪತ್ನಿಗೆ ಯಾವುದು ಖುಷಿ ನೀಡುತ್ತದೆ ಎಂಬುದನ್ನು ಗಮನಿಸಿದ ನೀವು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.
