Asianet Suvarna News Asianet Suvarna News

ಮೂವರು ಸೇರಿ ಸ್ಕಿಪ್ಪಿಂಗ್ ಮಾಡೋಕೆ ಸಾಧ್ಯವಾ? ಮೈ ಜುಮ್ ಅನ್ನಿಸೋ ಸಾಕ್ಷಿ ಇಲ್ಲಿದೆ ನೋಡಿ

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿರುವ ಝೊರಾವರ್ ಸಿಂಗ್ ಮತ್ತು ಅವರ ಪತ್ನಿ, ಮಗ ಸೇರಿಕೊಂಡು ಮಾಡಿರುವ ಸಾಹಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಭಾರೀ ಹವಾ ಸೃಷ್ಟಿಸಿದೆ. ಮೂವರೂ ಸೇರಿ ಸ್ಕಿಪ್ಪಿಂಗ್ ಮಾಡಿರುವುದು ವಿಶೇಷ. ಸಾಹಸದ ಹುಚ್ಚುತನ ಹೀಗೂ ಇರುತ್ತದೆ ಎಂದು ಹೇಳೋ ಈ ದೃಶ್ಯ ಮೈ ಜುಮ್ ಎನಿಸದೇ ಇರುವುದಿಲ್ಲ.

How to do skipping with three person
Author
First Published Jan 18, 2024, 6:15 PM IST

ಫಿಟ್ ನೆಸ್ ಪ್ರಿಯರ ಖುಷಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ವೀಡಿಯೊವೊಂದು ಬಂದಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ವಿಜೇತ ಝೊರಾವರ್ ಸಿಂಗ್ ಅವರಿಗೆ ಸಂಬಂಧಿಸಿದ ವೀಡಿಯೋ ಇದಾಗಿದ್ದು, ನೋಡುಗರ ಮೈ ನವಿರೇಳಿಸುವಂತಿದೆ. ಹೀಗಾಗಿ, ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ದಾಖಲೆ ನಿರ್ಮಿಸಿರುವವರ ಕೆಲವು ಸಾಹಸಗಳನ್ನು ನೋಡಿದರೆ ಮೈ ಜುಮ್ ಎನ್ನುತ್ತದೆ. ಅಂತಹ ವಿಶಿಷ್ಟ ಸಾಹಸಗಳನ್ನು ಮಾಡುವವರಿದ್ದಾರೆ. ಯೋಗಾಭ್ಯಾಸದಲ್ಲಿ ಸಾಹಸ ಮಾಡಿದವರಿದ್ದಾರೆ. ನೃತ್ಯ ತಂಡದ ಮೂಲಕ ಸಾಹಸ ಪ್ರದರ್ಶಿಸಿದವರಿದ್ದಾರೆ. ಅಸಾಧ್ಯ ಎನ್ನುವಂತಹ ಕೃತ್ಯಗಳನ್ನು ಮಾಡಿದವರಿದ್ದಾರೆ, ಪ್ರಯಾಣದ ಮೂಲಕ, ತಿನ್ನುವುದು, ಕುಡಿಯುವುದು, ಗಡ್ಡ, ಉಗುರುಗಳ ಮೂಲಕವೂ ದಾಖಲೆ ನಿರ್ಮಿಸುವವರಿದ್ದಾರೆ. ಅದರಲ್ಲೂ ಜೀವಕ್ಕೆ ಸಂಚಕಾರ ತರುವ ಸಾಹಸಗಳನ್ನು ಸಹ ಬಹಳಷ್ಟು ಜನ ಮಾಡುತ್ತಾರೆ. ಹೊಟ್ಟೆಯ ಮೇಲೆ ಕಲ್ಲನ್ನಿಟ್ಟು ಒಡೆಯುವುದು, ಅಂಥದ್ದೇ ಸಾಹಸದಲ್ಲಿ ಇದೂ ಒಂದು ಎನ್ನಲು ಅಡ್ಡಿಯಿಲ್ಲ. ಈ ವೀಡಿಯೊದಲ್ಲಿ ಝೊರಾವರ್ ಸಿಂಗ್ ಮಾತ್ರವಲ್ಲದೆ ಅವರ ಪತ್ನಿ ಹಾಗೂ ಮಗನೂ ಇರುವುದು ವಿಶೇಷ. 

ಝೊರಾವರ್ ಸಿಂಗ್ (Zorawar Singh) ಶೇರ್ (Share) ಮಾಡಿರುವ ವೀಡಿಯೋದಲ್ಲಿ ಮೊದಲು ಝೊರಾವರ್ ನೆಲದ ಮೇಲೆ ಮಲಗುತ್ತಾರೆ. ಬಳಿಕ ಅವರ ಪತ್ನಿ (Wife) ಅವರ ಮೇಲೆ ನಿಂತು ಮಗನನ್ನು (Son) ತನ್ನ ಭುಜಗಳ ಮೇಲೆ ಕೂರಿಸಿಕೊಳ್ಳುತ್ತಾರೆ. ಬಳಿಕ, ಆಕೆ ಝೊರಾವರ್ ಅವರ ಹೊಟ್ಟೆಯ (Stomach) ಮೇಲೆ ನಿಲ್ಲುತ್ತಾರೆ. ಬಳಿಕ, ಅಮೇಜಿಂಗ್ ಎನ್ನುವಂತೆ ಆಕೆ ಕೈಯಲ್ಲಿ ಸ್ಕಿಪ್ಪಿಂಗ್ ರೋಪ್ (Rope) ಹಿಡಿದುಕೊಳ್ಳುತ್ತಾರೆ. ಹೊಟ್ಟೆಯ ಮೇಲೆ ಆಕೆ ಜಂಪ್ ಮಾಡಿದಾಗ ಝೊರಾವರ್ ಸಿಂಗ್ ಕೂಡ ತಮ್ಮ ಮೈಯನ್ನು ಮೇಲಕ್ಕೆ ಎತ್ತುತ್ತಾರೆ. ಆಕೆ, ತಾವು ಮೂವರನ್ನೂ ಸೇರಿಸಿ ಸ್ಕಿಪಿಂಗ್ ಮಾಡುತ್ತಾರೆ. ಪತಿಯ ಮೇಲೆ ನಿಂತು, ಮಗನನ್ನು ಭುಜಗಳ ಮೇಲೆ ಕೂರಿಸಿಕೊಂಡು ಆ ಹೆಣ್ಣುಮಗಳು ಮಾಡುವ ಸಾಹಸಕ್ಕೊಂದು ಸಲಾಂ ಎನ್ನಲೇಬೇಕು.

ಅಬ್ಬಬ್ಬಾ…ಮೈನಸ್‌ 30 ಡಿಗ್ರಿ ಚಳಿಯಲ್ಲಿ ಕೂದಲು ಸಹ ಫ್ರೀಝ್‌ ಆಗೋಯ್ತು!

ಇಂಥ ಸಾಹಸ ಸಾಧ್ಯವೆಂದು ಅವರು ಯಾವಾಗ, ಹೇಗೆ ಕಂಡುಹಿಡಿದರು ಎನ್ನುವುದನ್ನು ಊಹಿಸಲೂ ಅಸಾಧ್ಯ. ನೋಡುಗರು ಉಸಿರು ಬಿಗಿಹಿಡಿದು ನೋಡುವಂತೆ ಮಾಡುವಲ್ಲಿ ಈ ವೀಡಿಯೋ (Video)  ಯಶಸ್ವಿಯಾಗುತ್ತದೆ. 

ಹುಚ್ಚುತನದ ಮಟ್ಟ:  ಸ್ಟಂಟ್ (Stunt) ಮಾಡುವ ಅನೇಕ ವೀಡಿಯೋಗಳನ್ನು ನಾವು ನೋಡಿದ್ದೇವೆ. ಬಹಳಷ್ಟು ವೀಡಿಯೋಗಳಲ್ಲಿ ಒಬ್ಬೊಬ್ಬರೇ ಮಾಡುವ ಸಾಹಸಗಳು ಇರುತ್ತವೆ. ಆದರೆ, ಈ ವೀಡಿಯೋದಲ್ಲಿ ಮೂವರು ಒಳಗೊಂಡಿದ್ದಾರೆ. ಮಗನ ಪಾತ್ರ ಹೆಚ್ಚಾಗಿ ಇಲ್ಲವಾದರೂ ಆತ ಒಂದು ಬ್ಯಾಲೆನ್ಸ್ ನಿಂದ ಆಕೆಯ ಭುಜಗಳ ಮೇಲೆ ಕುಳಿತುಕೊಂಡಿರಬೇಕಾಗುತ್ತದೆ. ಈ ವೀಡಿಯೋ ಶೇರ್ ಮಾಡಿರುವ ಝೊರಾವರ್ ಸಿಂಗ್ ಇದಕ್ಕೆ “ಹುಚ್ಚುತನದ (Crazy) ಮಟ್ಟ’ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ.

 

ನಿಜಕ್ಕೂ ಇದು ಸಾಹಸದ ಹುಚ್ಚುತನದ ಮತ್ತೊಂದು ಹಂತವಾಗಿದೆ ಎನ್ನಬಹುದು.

ಸೆಂಟರ್ ಸೆಂಟರ್‌ ಎಂದು ಬೊಬ್ಬೆ ಹೊಡಿತಿದ್ದ ಪಪಾರಾಜಿ ಹೆಗಲಿಗೆ ಕೈ ಹಾಕಿ ಲೆಫ್ಟ್‌ ರೈಟ್ ತೋರಿಸಿದ ರವೀನಾ ಟಂಡನ್‌

ಫ್ಯಾಮಿಲಿ ಸ್ಟಂಟ್: ಈ ವೀಡಿಯೋ 44 ಲಕ್ಷಕ್ಕೂ ಅಧಿಕ ಮಂದಿಯನ್ನು ಸೆಳೆದಿದೆ. ಝೊರಾವರ್ ಅವರೇ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇವರ ಫುಇಟ್ ನೆಸ್ ಚಾಲೆಂಜ್ ವೀಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಪ್ರಸ್ತುತ ಸಾಹಸವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದು, ಅನೇಕರು ಇದನ್ನು “ಫ್ಯಾಮಿಲಿ (Family) ಸ್ಟಂಟ್’ ಎಂದು ಕರೆದಿದ್ದಾರೆ. 
 

Follow Us:
Download App:
  • android
  • ios