ಚಳಿಯಲ್ಲಿ ಕೂದಲಿಗೆ ಏನಾಗುತ್ತದೆ? ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ ಸೋಷಿಯಲ್‌ ಇನ್‌ ಫ್ಲುಯೆನ್ಸರ್‌ ಎಲ್ವಿರಾ ಲಂಡ್‌ ಗ್ರೆನ್.‌ ಮೈನಸ್‌ ೩೦ ಡಿಗ್ರಿ ಉಷ್ಣಾಂಶದಲ್ಲಿ ಬಾಹ್ಯ ವಾತಾವರಣದಲ್ಲಿ ತಮ್ಮ ಕೂದಲು ಗಟ್ಟಿಯಾಗಿ ಕಡ್ಡಿಯಂತೆ ನೇರವಾಗಿ ಸೆಟೆದು ನಿಂತುಕೊಳ್ಳುವ ವೀಡಿಯೋವನ್ನು ಪ್ರದರ್ಶಿಸಿದ್ದಾರೆ. 

ಸ್ವೀಡನ್‌ ದೇಶದ ಸೋಷಿಯಲ್‌ ಇನ್‌ ಫ್ಲುಯೆನ್ಸರ್‌ ಒಬ್ಬರು ನಿಜಕ್ಕೂ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ. ಅತಿ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಜನರ ಜೀವನ ಎಷ್ಟು ಕಷ್ಟವಾಗಬಹುದು ಎನ್ನುವುದನ್ನು ಖುದ್ದಾಗಿ ಪ್ರದರ್ಶಿಸಿದ್ದಾರೆ. ಸೋಷಿಯಲ್‌ ಇನ್‌ ಫ್ಲುಯೆನ್ಸರ್‌ ಎಲ್ವಿರಾ ಲಂಡ್‌ ಗ್ರೆನ್‌ ಎನ್ನುವವರು ಅತಿ ಕಡಿಮೆ ಉಷ್ಣಾಂಶವಿರುವ ಸಮಯದಲ್ಲಿ ಜನರ ಮೇಲೆ ಅದು ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ತೋರಿಸಿರುವುದು ಇದೀಗ ವೈರಲ್‌ ಆಗಿದೆ. ಏಕೆಂದರೆ, ಈ ವೀಡಿಯೋ ಅತ್ಯಂತ ಅಚ್ಚರಿದಾಯಕ ಪ್ರಭಾವವನ್ನು ನೇರವಾಗಿ ತೋರಿಸುವಲ್ಲಿ ಸಫಲವಾಗಿದೆ. ನಾವೆಲ್ಲ ಅತಿ ಚಳಿಯ ಪ್ರದೇಶಗಳಲ್ಲಿ ಆರೋಗ್ಯದ ಮೇಲೆ ಎಂತಹ ಪ್ರಭಾವ ಉಂಟಾಗುತ್ತದೆ ಎನ್ನುವುದನ್ನು ಕೇಳಿದ್ದೇವೆ. ಕೈಕಾಲು ಮರಗಟ್ಟುವುದರಿಂದ ಹಿಡಿದು, ಕೊಳೆತು ಹೋಗುವ ಯಮಯಾತನೆಯ ವಿದ್ಯಮಾನದವರೆಗೆ ಹಲವು ಪರಿಣಾಮಗಳನ್ನು ಕೇಳಿದ್ದೇವೆ, ಕಂಡಿದ್ದೇವೆ. ಆದರೆ, ಮೈನಸ್‌ ೩೦ ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶ ಇರುವಾಗ ಮನುಷ್ಯನ ಕೂದಲು ಸಹ ಹಿಡಿತಕ್ಕೆ ಸಿಗದೆ ಹಾರಾಡುತ್ತದೆ ಎನ್ನುವ ಅಂಶ ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ, ಗೊತ್ತಿದ್ದರೂ ಅದನ್ನು ನೋಡಿರಲಿಕ್ಕಿಲ್ಲ. ಎಲ್ವಿರಾ ಲಂಡ್‌ ಗ್ರೆನ್‌ ಇದೀಗ ಇಂತಹ ವಿದ್ಯಮಾನವನ್ನು ಪ್ರದರ್ಶಿಸಿದ್ದಾರೆ. 

ಸಾಮಾಜಿಕ ಜಾಲತಾಣದ (Social Media) ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಎಲ್ವಿರಾ ವೀಡಿಯೋವೊಂದನ್ನು (Video) ಅಪ್‌ ಲೋಡ್‌ (Upload) ಮಾಡಿದ್ದಾರೆ. ಈ ವೀಡಿಯೋವೀಗ ಜಗತ್ತಿನಾದ್ಯಂತ ವೈರಲ್‌ (Viral) ಆಗಿದೆ. ಇದನ್ನು ಎಚ್ಚರಿಕೆಯ ಗಂಟೆಯನ್ನಾಗಿಯೂ, ಅಚ್ಚರಿಯ ಸಂಗತಿಯನ್ನಾಗಿಯೂ ನೋಡಲಾಗುತ್ತಿದೆ. ಎಲ್ವಿರಾ ಲಂಡ್‌ ಗ್ರೆನ್‌ (Elvira Lundgren) ಈ ವೀಡಿಯೋವನ್ನು ಮೈನಸ್‌ ೩೦ ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶವಿರುವ ಪ್ರದೇಶದಲ್ಲಿ ಚಿತ್ರೀಕರಿಸಿದ್ದಾರೆ. “ಉಷ್ಣಾಂಶ ಮೈನಸ್‌ (Minus) 30 ಡಿಗ್ರಿಗೆ (Degree) ಇಳಿಕೆಯಾಗಿತ್ತು, ಈ ಸಮಯದಲ್ಲಿ ನಾನೊಂದು ಚಿಕ್ಕ ಪ್ರಯೋಗ (Experiment) ಮಾಡಿದ್ದೇನೆʼ ಎಂದು ಹೇಳಿಕೊಂಡಿದ್ದಾರೆ. ಅದರಲ್ಲಿ ಅವರು ಬಾಹ್ಯ ವಾತಾವರಣದಲ್ಲಿ ನಿಂತಿದ್ದಾರೆ. ಅತಿ ಕೆಟ್ಟ ಚಳಿಯ (Cold) ಹವಾಮಾನ ಇದೆ ಎನ್ನುವುದಕ್ಕೆ ಸುತ್ತಲಿನ ವಾತಾವರಣವೇ ಸಾಕ್ಷಿಯಾಗುವಂತಿದೆ. ಸುತ್ತಲೂ ದಪ್ಪನೆಯ, ದಟ್ಟವಾದ ಹಿಮ ಕವಿದಿದೆ. ಲಂಡ್‌ ಗ್ರೆನ್‌ ಅವರ ಕೂದಲು (Hair) ಸಹ ಅಕ್ಷರಶಃ ಮರಗಟ್ಟಿಹೋಗಿದೆ. ನೇರವಾಗಿ ಕಡ್ಡಿಯಂತೆ ನಿಲ್ಲುತ್ತದೆ. ಕೂದಲು ಸಹ ಮೃದುತ್ವ ಕಳೆದುಕೊಂಡು ಫ್ರೀಝ್ (Freeze) ಆಗಿಬಿಟ್ಟಿದೆ.

ಅಡುಗೆ ಕೆಲ್ಸ ಈಝಿ ಆಗ್ಲೀಂತ ಕುಕ್ಕರ್‌ನಲ್ಲಿ ಬೇಳೆ ಬೇಯಿಸ್ತಿರಾ? ಆರೋಗ್ಯಕ್ಕೆಷ್ಟು ಡೇಂಜರ್ ತಿಳ್ಕೊಳ್ಳಿ

ತೀವ್ರವಾದ ಉಷ್ಣಾಂಶ (Temperature) ಕುಸಿತವಾದ ಸಮಯದಲ್ಲಿ ಕೂದಲ ಮೇಲೆ ಅದರಿಂದ ಉಂಟಾದ ಪ್ರಭಾವವನ್ನೇ ಅವರು ತಮ್ಮ ವೀಡಿಯೋದಲ್ಲಿ ಪ್ರದರ್ಶಿಸಿದ್ದು, ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಿಕ್ಕಾಪಟ್ಟೆ ಲೈಕುಗಳೂ, ಕಾಮೆಂಟುಗಳೂ ಸಹಜವಾಗಿ ಹರಿದುಬಂದಿವೆ. 

View post on Instagram

ಅನೇಕರ ಎಚ್ಚರಿಕೆ
ಲಂಡ್‌ ಗ್ರೆನ್‌ ಅವರ ಈ ಸಾಹಸಕ್ಕೆ ಅನೇಕರು ಎಚ್ಚರಿಕೆಯನ್ನೂ ನೀಡಿದ್ದಾರೆ. “ಗಿಡ್ಡ ಕೂದಲನ್ನು ಹೊಂದುವುದಕ್ಕೆ ಇದೊಂದು ಗಂಭೀರವಾದ ಮಾರ್ಗʼ ಎಂದು ಹೇಳಿದ್ದಾರೆ. ಒಬ್ಬರು, “ಕೂದಲು ಕತ್ತರಿಸಿಹೋಗುತ್ತದೆʼ ಎಂದು ಸೂಚನೆ ನೀಡಿದ್ದರೆ, ಮತ್ತೊಬ್ಬರು, ಆನಿಮೇಷನ್‌ ಚಿತ್ರವೊಂದರ ಸಾಹಸಿ ಕ್ಯಾರೆಕ್ಟರ್‌ ಒಂದನ್ನು ಹೋಲಿಕೆ ಮಾಡಿದ್ದಾರೆ. “ಕೂದಲಿಗೆ ನಾನು ಎಣ್ಣೆಯನ್ನೇ (Oil) ಸೋಕಿಸದೇ ಬಹಳ ದಿನವಾದಾಗ ಹೀಗೆಯೇ ಇರುತ್ತದೆʼ ಎಂದೊಬ್ಬರು ಜೋಕ್‌ (Joke) ಮಾಡಿದ್ದಾರೆ. 

ಸ್ಟ್ರೋಕ್ ಆಗೋ ಮುನ್ನ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಇಗ್ನೋರ್ ಮಾಡ್ಬೇಡಿ!

ಉಷ್ಣಾಂಶ ಕುಸಿದಿದೆ
ಈ ವೀಡಿಯೋದ ಚಿತ್ರೀಕರಣವನ್ನು ಉತ್ತರ ಸ್ವೀಡನ್‌ (Sweden) ನಲ್ಲಿ ಮಾಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಸ್ವೀಡನ್‌ ಮತ್ತು ಫಿನ್ಲೆಂಡ್‌ ದೇಶಗಳು ಅತಿ ತೀವ್ರ ಚಳಿಯನ್ನು ಅನುಭವಿಸುತ್ತಿವೆ. ಈ ಬಾರಿ ಎಷ್ಟು ತೀವ್ರವಾಗಿ ಉಷ್ಣಾಂಶ ಕುಸಿದಿದೆ ಎಂದರೆ, ಕಳೆದ ಹಲವಾರು ವರ್ಷಗಳಿಂದ ದಾಖಲೆಯ ಚಳಿಯಾಗಿದೆ. ನಾರ್ಡಿಯಾಕ್‌ ಪ್ರದೇಶಗಳು ಅಕ್ಷರಶಃ ಹಿಮದ (Ice) ನಡುವೆ ಸಿಲುಕಿದಂತೆ ಫ್ರೀಝ್‌ ಆಗಿವೆ. ಮೈನಸ್‌ 40 ಡಿಗ್ರಿವರೆಗೂ ಉಷ್ಣಾಂಶ ಕುಸಿದಿದೆ.