Asianet Suvarna News Asianet Suvarna News

Pet Care : ಚಳಿಗಾಲದಲ್ಲಿ ನಿಮ್ಮ ಮುದ್ದಾದ ಪ್ರಾಣಿಗಳ ಆರೈಕೆ ಹೀಗಿರಲಿ

ಮನೆಯಲ್ಲಿರುವ ಸಾಕುಪ್ರಾಣಿಯನ್ನು ಮುದ್ದಾಡಿದ್ರೆ ಮಾತ್ರ ಸಾಲುವುದಿಲ್ಲ. ಪ್ರಾಣಿಗಳು ಮನುಷ್ಯರಂತೆ. ಋತುವಿಗೆ ತಕ್ಕಂತೆ ಅವರ ಅಗತ್ಯತೆ ಬದಲಾಗುತ್ತದೆ. ಚಳಿಗಾಲದಲ್ಲಿ ಸಾಕು ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ಗೊತ್ತಿರಬೇಕು.

How To Do Pet Care In Winter Tips
Author
Bangalore, First Published Jan 21, 2022, 5:17 PM IST

ಮನುಷ್ಯ (Human )ಹಾಗೂ ಪ್ರಾಣಿ(Animal)ಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಇಬ್ಬರ ನಡುವಿನ ಸ್ನೇಹ (Friendship) ಶತ-ಶತಮಾನಗಳಷ್ಟು ಹಿಂದಿನದು. ಹಿಂದಿನ ಕಾಲದಲ್ಲಿ ಜನರು ತಮ್ಮ ಅನುಕೂಲಕ್ಕಾಗಿ ಪ್ರಾಣಿಗಳನ್ನು ಸಾಕುತ್ತಿದ್ದರು. ಹಾಲಿಗೆ ಹಸು, ರಕ್ಷಣೆಗೆ ನಾಯಿ, ಸವಾರಿಗೆ ಕುದುರೆ, ಇಲಿ ಹಿಡಿಯಲು ಬೆಕ್ಕು ಹೀಗೆ ಬೇರೆ ಬೇರೆ ಕಾರಣಕ್ಕೆ ಪ್ರಾಣಿಗಳನ್ನು ಸಾಕಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನು ಹವ್ಯಾಸ (Hobby)ಕ್ಕಾಗಿ ಸಾಕುವವರ ಸಂಖ್ಯೆ ಹೆಚ್ಚಿದೆ.  ಮನುಷ್ಯನಿಗಿಂತ ಎರಡು ಪಟ್ಟು ಪ್ರೀತಿಯನ್ನು ಪ್ರಾಣಿಗಳು ನೀಡ್ತವೆ. ಪ್ರಾಣಿಗಳನ್ನು ಸಾಕುವ ಜೊತೆಗೆ ಅದ್ರ ಬಗ್ಗೆ ವಿಶೇಷ ಗಮನ ನೀಡುವುದು ಬಹಳ ಮುಖ್ಯ.

ಸರಿಯಾದ ಆಹಾರ,ಚಿಕಿತ್ಸೆ ನೀಡುವ ಜೊತೆಗೆ ಪ್ರಾಣಿಗಳಿಗೆ ವಿಶೇಷ ಆರೈಕೆ ಬೇಕು. ಪ್ರಾಣಿಗಳಿಗೆ ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಹಾಗಾದರೆ ಚಳಿಗಾಲದಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕೆಂಬುದನ್ನು ನಾವಿಂದು ಹೇಳುತ್ತೇವೆ. ಭಾರತದಲ್ಲಿ ಚಳಿ ವಿಪರೀತವಾಗಿರುತ್ತದೆ. ಚಳಿಗಾಲದಲ್ಲಿ ಸಾಕು ಪ್ರಾಣಿಗಳನ್ನು ಬೆಚ್ಚಗಿಡಲು ಫ್ಯೂರಿ ಕೋಟ್ ಸಾಕು ಎಂದು ನೀವು ಭಾವಿಸಿದರೆ ತಪ್ಪು. ಇನ್ನೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ತಾಪಮಾನ : ಮನುಷ್ಯರಂತೆ ಸಾಕು ಪ್ರಾಣಿಗಳು ಯಾವ ತಾಪಮಾನದಲ್ಲಿ ಆರಾಮದಾಯಕವಾಗಿರಬಲ್ಲರು ಎಂಬುದನ್ನು ನೀವು ತಿಳಿದಿರಬೇಕು. ಇದು ಬೇರೆ ಬೇರೆ ಪ್ರಾಣಿಗೆ ಬೇರೆ ಬೇರೆಯಾಗಿರುತ್ತದೆ. ಉದ್ದ ಕೂದಲು,ದಪ್ಪ ಚರ್ಮದ ಪ್ರಾಣಿಗಳು ಚಳಿಯನ್ನು ನಿಭಾಯಿಸಬಲ್ಲವು. ಆದ್ರೆ ಸಣ್ಣ ಕೂದಲಿನ,ಸಣ್ಣ ಕಾಲಿನ ಪ್ರಾಣಿಗಳಿಗೆ ಚಳಿ ತಡೆಯುವುದು ಕಷ್ಟ. ಅವಕ್ಕೆ ಮತ್ತಷ್ಟು ಆರೈಕೆ ಅಗತ್ಯವಿರುತ್ತದೆ.

Love Life : ಪ್ರೀತಿ ವ್ಯಕ್ತಪಡಿಸಲು ನಾಚಿಕೆ ಅಡ್ಡಿಯಾಗ್ತಿದ್ದರೆ ಹೀಗೆ ಮಾಡಿ

ಪ್ರಾಣಿಗಳಿಗೆ ವ್ಯಾಯಾಮ : ಮನುಷ್ಯರಂತೆ ಪ್ರಾಣಿಗಳು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ವ್ಯಾಯಾಮ ಮಾಡುತ್ತೇವೆ. ಅದೇ ರೀತಿ ಚಳಿಗಾಲದಲ್ಲಿ ಸಾಕುಪ್ರಾಣಿಗಳಿಗೂ ವ್ಯಾಯಾಮ ಅಗತ್ಯ. ಸಾಕುಪ್ರಾಣಿಗಳು ಮನೆಯಲ್ಲಿ ಇರುವ ಕಾರಣ ಅವುಗಳಿಗೆ ವ್ಯಾಯಾಮ ಸಿಗುವುದಿಲ್ಲ. ಸಾಧ್ಯವಾದಾಗ ಅವುಗಳನ್ನು ಹೊರಗೆ ಕರೆದುಕೊಂಡು ಹೋಗಿ ವ್ಯಾಯಾಮ ಮಾಡಿಸಿ. ಇದ್ರಿಂದ ಚಳಿ ಹೋಗುವ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ. ಮಧ್ಯಾಹ್ನ ಅಥವಾ ಸೂರ್ಯ ಬಂದ್ಮೇಲೆ ನೀವು ವಾಕಿಂಗ್ ಮಾಡಿಸುವುದು ಉತ್ತಮ. ಇದ್ರಿಂದ ದೇಹ ಬೆಚ್ಚಗಾಗುವ ಜೊತೆಗೆ ಪ್ರಾಣಿಗಳ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.

ಪ್ರಾಣಿಗಾಗಿ ಮನೆ,ಹೊದಿಕೆ : ಶೀತದಿಂದ ಅವುಗಳನ್ನು ರಕ್ಷಿಸುವುದು ಮುಖ್ಯ. ಪ್ರಾಣಿಗಳು ಮನೆತುಂಬ ಓಡಾಡಬಹುದು. ಆದ್ರೆ ಮಲಗಲು ಬೆಚ್ಚನೆಯ ಜಾಗ ಬೇಕಾಗುತ್ತದೆ. ಪ್ರಾಣಿಗಳನ್ನು ಮನೆಯಿಂದ ಹೊರಗೆ ಕಟ್ಟುವವರು ಅದಕ್ಕೊಂದು ಸಣ್ಣ ಗೂಡು ನಿರ್ಮಿಸಬೇಕು. ಅದರೊಳಗೆ ಕಂಬಳಿ,ಗಾದಿ,ಒಣಹುಲ್ಲಿನಲ್ಲಿ ಯಾವುದಾದರೂ ಒಂದನ್ನು ಹಾಕಿ, ಶೀತ ಕಾಡದಂತೆ ನೋಡಿಕೊಳ್ಳಿ. ಮನೆಯೊಳಗಿರುವ ಪ್ರಾಣಿಗಳಿಗೂ ಇದು ಅಗತ್ಯವಿರುತ್ತದೆ. ಮನೆಯಲ್ಲಿ ಹೀಟರ್ ಅಥವಾ ಫೈರ್ ಪ್ಲೇಸ್ ಹೊಂದಿದ್ದರೆ ಅದು ಪ್ರಾಣಿಗಳಿಗೆ ಸೂಕ್ತವಾಗಿದೆಯೇ ಎಂಬುದನ್ನು ಗಮನಿಸಿ. 

ಬಿಸಿ ನೀರಿನ ಸ್ನಾನ : ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ನಾನ ಬೇಡ. ಹಾಗೆಯೇ ತಣ್ಣನೆಯ ನೀರಿನ ಸ್ನಾನ ಅವರ ಅನಾರೋಗ್ಯಕ್ಕೆ ಕಾರಣವಾಗಬಹುದು. ಪ್ರಾಣಿಗಳಿಗೆ ಉಗುರು ಬೆಚ್ಚಗಿನ ನೀರು ಯೋಗ್ಯ. ಹಾಗೆ ಸ್ನಾನ ಮಾಡಿಸುವಾಗ ಅದರ ಕಿವಿಗೆ ಹತ್ತಿ ಹಾಕಿ. ಸ್ನಾನದ ನಂತ್ರ ಹತ್ತಿಯನ್ನು ತೆಗೆಯಿರಿ. 

ಸಂಬಂಧ ಕುರಿತ Anxiety ಬಗ್ಗೆ ನಿರ್ಲಕ್ಷ್ಯ ಬೇಡ; ದಾಂಪತ್ಯಕ್ಕೆ ಮುಳ್ಳಾಗ್ಬಹುದು ಈ ಖಾಯಿಲೆ

ಅತಿಯಾದ ಆಹಾರ : ಅನೇಕರು ಪ್ರೀತಿಯಿಂದ ಪ್ರಾಣಿಗಳಿಗೆ ಅತಿಯಾದ ಆಹಾರ ನೀಡುತ್ತಾರೆ. ಇದು ಅವುಗಳ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಮೊದಲು ಪ್ರಾಣಿಗಳ ತೂಕ ಪರೀಕ್ಷೆ ಮಾಡಿ. ತೂಕ ಹೆಚ್ಚಾಗಿದ್ದರೆ ಅದನ್ನು ಕಂಟ್ರೋಲ್ ಮಾಡುವ ಪ್ರಯತ್ನ ಮಾಡಿ. 

ಡಿಹೈಡ್ರೇಶನ್ : ಮನುಷ್ಯರಂತೆ ಪ್ರಾಣಿಗಳಿಗೂ ನೀರು ಅತ್ಯಗತ್ಯ. ಚಳಿಗಾಲವಿರಲಿ,ಬೇಸಿಗೆಯಿರಲಿ ಸಾಕು ಪ್ರಾಣಿಗಳಿಗೆ ಸಾಕಷ್ಟು ನೀರನ್ನು ನೀಡಿ. ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರನ್ನು ನೀವು ಸಾಕುಪ್ರಾಣಿಗಳಿಗೆ ನೀಡುವುದು ಯೋಗ್ಯ.

Follow Us:
Download App:
  • android
  • ios