Relationship Tips : 30ರ ಹರೆಯದಲ್ಲೂ ಒಂಟಿಯಾಗಿರುವವರಿಗೆ ಕಿವಿಮಾತು

ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎಂಬ ಹಾಡನ್ನು ನೀವು ಕೇಳಿರ್ತೀರಿ. ಒಂಟಿತನ ಬೇಸರದ ಜೀವನವಲ್ಲ. ಒಬ್ಬಂಟಿಯಾಗಿದ್ದು ಖುಷಿಯನ್ನು ಆನಂದಿಸಬಹುದು. ಅದಕ್ಕೆ ಒಂದಿಷ್ಟು ಟ್ರಿಕ್ಸ್ ಪಾಲಿಸ್ಬೇಕು.  
 

How To  Be Single And Happy In Your 30s

ಕೆಲವರು ಚಿಕ್ಕ ವಯಸ್ಸಿ (Age)ನಲ್ಲಿಯೇ ಜಂಟಿಯಾಗಿರ್ತಾರೆ. ಮತ್ತೆ ಒಂದಿಷ್ಟು ಮಂದಿಗೆ ವಯಸ್ಸು 30 ಆಗ್ತಿದ್ದರೂ ಸಂಗಾತಿ (Partner )ಸಿಕ್ಕಿರುವುದಿಲ್ಲ. ಅವರ ಸ್ನೇಹಿತರು, ಸಹಪಾಠಿಗಳು ಮದುವೆಯಾಗಿ ಸಂಸಾರ ನಡೆಸುತ್ತಿರುವುದನ್ನು ಅಥವಾ ಪ್ರೀತಿಯ ಗುಂಗಿನಲ್ಲಿರುವದನ್ನು ನೋಡಿದ ಇವರಿಗೆ ಬೇಸರವಾಗುವುದು ಸಾಮಾನ್ಯ. ಆ ಜೀವನದಲ್ಲಿ ಸುಖವಿದೆ, ನೋವು, ಸಂತೋಷ ಹಂಚಿಕೊಳ್ಳಲು ಪ್ರೀತಿ ಪಾತ್ರರಿದ್ದಾರೆ. ನನಗೆ ಯಾರೂ ಇಲ್ಲ ಎಂಬ ನೋವು ಕಾಡುತ್ತದೆ. ಆದ್ರೆ 30 ವರ್ಷದಲ್ಲಿ ನೀವೂ ಒಂಟಿಯಾಗಿದ್ದರೆ ಅದಕ್ಕೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಜೀವನ ಸಾಧಿಸಲು ನಿಮಗೊಂದಿಷ್ಟು ಅವಕಾಶ ಸಿಕ್ಕಿದೆ ಎಂದುಕೊಳ್ಳಿ. ಇಷ್ಟು ವರ್ಷ ಮಾಡಲಾಗದ ಕೆಲಸಕ್ಕೆ ಈಗ ಸಮಯ ಸಿಕ್ಕಿದೆ ಎಂದು ಭಾವಿಸಿ. ಒಂಟಿತನವನ್ನು ಎಂಜಾಯ್ ಮಾಡಿ. ನಿಮ್ಮಿಷ್ಟದಂತೆ ಜೀವಿಸಲು ಅವಕಾಶ ಸಿಕ್ಕಿದೆ ಎಂಬುದನ್ನು ಅರಿತು ಒಬ್ಬಂಟಿ ಲೈಫ್ ಆನಂದಿಸಿ. ಇಂದು ನಾವು 30ರ ಹರೆಯದಲ್ಲಿ ಒಂಟಿಯಾಗಿರುವ ವ್ಯಕ್ತಿಗಳು ಹೇಗೆ ಜೀವನದ ಸುಖ ಸವಿಯಬಹುದು ಎಂಬುದನ್ನು ಹೇಳ್ತೇವೆ.

ಸ್ವಾತಂತ್ರ್ಯವನ್ನು ಆನಂದಿಸಿ : ಒಂಟಿಯಾಗಿದ್ದಾಗ ಸಿಗುವು ಸ್ವಾತಂತ್ರ್ಯ ಜಂಟಿಯಾದಾಗ ಸಿಗುವುದಿಲ್ಲ. ಇಲ್ಲಿ ನಿಮ್ಮನ್ನು ಕಟ್ಟಿ ಹಾಕುವವರಿರುವುದಿಲ್ಲ. ನಿಮಗೆ ಬೇಕಾದ ಸಂದರ್ಭದಲ್ಲಿ ಬೇಕಾದ ಸ್ಥಳಕ್ಕೆ ನೀವು ಹೋಗಬಹುದು. ಇದಕ್ಕೆ ಬೇರೆಯವರ ಒಪ್ಪಿಗೆ ಅಥವಾ ಬೇರೆಯವರ ಸಮಯಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ವಿಶ್ರಾಂತಿ ಬೇಕೆನ್ನಿಸಿದಾಗ ನೀವು ರಜೆ ತೆಗೆದುಕೊಂಡು ಬೀಚ್,ಕಾಡು ಸೇರಿದಂತೆ ನಿಮಗಿಷ್ಟವಾದ ಪ್ರದೇಶಕ್ಕೆ ಹೋಗಿ ಬನ್ನಿ. ಹೊರಡುವ ಮೊದಲು ನಿಮ್ಮ ತಂದೆ-ತಾಯಿ ಅಥವಾ ನಿಮ್ಮ ಆಪ್ತರೊಬ್ಬರಿಗೆ ನೀವು ಎಲ್ಲಿಗೆ ಹೋಗ್ತಿದ್ದೀರಿ ಎಂಬುದನ್ನು ಹೇಳಿ ಹೋಗಲು ಮರೆಯಬೇಡಿ. ನಿಮಗೆ ಸಂಗಾತಿ ಇಲ್ಲದೆ ಇರಬಹುದು. ಕುಟುಂಬ, ಸ್ನೇಹಿತರಿರುತ್ತಾರೆ ಎಂಬುದು ನೆನಪಿಡಿ.

Relationship Tips: ಮುರಿದು ಬಿದ್ದ ಸ್ನೇಹ, ನೋವು ಸಹಿಸಲಿ ಹೇಗೆ?

ನಿಮಗಿಷ್ಟವಾದ ಮನೆ : ಒಂಟಿಯಾಗಿರುವವರು ಅವರಿಗಿಷ್ಟವಾಗುವಂತೆ ಮನೆಯನ್ನು ಇಟ್ಟುಕೊಳ್ಳಬಹುದು. ಮನೆ ಸ್ವಚ್ಛವಾಗಿರಬೇಕೆನ್ನುವವರು ಬಿಡುವಿನ ಸಮಯದಲ್ಲಿ ಮನೆ ಕ್ಲೀನ್ ಮಾಡಿ ಸಮಯ ಕಳೆಯಬಹುದು. ಸ್ವಲ್ಪ ಕೊಳಕಿದ್ದರೂ ನಡೆಯುತ್ತೆ ಎನ್ನುವವರು ಬೇಕೆನ್ನಿಸಿದಾಗ ಮನೆಯನ್ನು ಸ್ವಚ್ಛಗೊಳಿಸಬಹುದು. ಹಾಗೆ ಸಣ್ಣ ಮನೆ, ದೊಡ್ಡ ಮನೆ ಆಯ್ಕೆ ಕೂಡ ನಿಮ್ಮದೆ ಆಗಿರುತ್ತದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ನಿಮಗಿಷ್ಟವಾದ ಮನೆಯಲ್ಲಿ ನೀವು ವಾಸ ಮಾಡಿ.

ನಿಮ್ಮನ್ನ ನೀವು ಪ್ರೀತಿಸಿ : ಇದು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಒಂಟಿಯಾಗಿರುವುದೆಂದ್ರೆ ಬೋರಿಂಗ್ ಜೀವನ ಕಳೆಯುವುದಲ್ಲ. ಇದ್ರಲ್ಲೂ ಸಾಕಷ್ಟು ಆನಂದ ಪಡೆಯಬಹುದು ಎಂಬುದು ನಿಮಗೆ ಗೊತ್ತಿರಬೇಕು. ಆಗಾಗ ಹೊಟೇಲ್ ಗೆ ಹೋಗಿ ಆಹಾರ ಸೇವನೆ ಮಾಡಿ. ಪ್ರತಿ ದಿನ ಹೊಟೇಲ್ ನಲ್ಲಿಯೇ ಆಹಾರ ಸೇವನೆ ಮಾಡ್ತೇವೆ ಎನ್ನುವವರು ಮನೆಯಲ್ಲಿ ರುಚಿಯಾದ ಅಡುಗೆ ಮಾಡಲು ಪ್ರಯತ್ನಿಸಿ.  ನಿಮಗೆ ಇಷ್ಟವಾದ ಕೆಲಸ ಮಾಡಿ. ನಿಮ್ಮ ಸ್ವಭಾವ, ನಿಮ್ಮ ಆಸಕ್ತಿ ಅರಿಯಲು ಸಮಯ ನೀಡಿ. ಪ್ರತಿ ದಿನ ವ್ಯಾಯಾಮ, ಯೋಗಕ್ಕೆ ಸಮಯ ಮೀಸಲಿಡಿ. ಸರಿಯಾದ ನಿದ್ರೆ ಮಾಡಿ. ಇದು ನಿಮ್ಮ ಆರೋಗ್ಯ ವೃದ್ಧಿಸುವ ಜೊತೆಗೆ ನಿಮ್ಮ ಫಿಟ್ನೆಸ್ ಗೆ ಸಹಕಾರಿ.

Wedding Olympics: ಇಲ್ಲಿ ನಡೆಯುತ್ತೆ ಮದುವೆಯ ಒಲಿಂಪಿಕ್ಸ್!

ವೃತ್ತಿ ಜೀವನ : ವೃತ್ತಿಯಲ್ಲಿ ಉನ್ನತಿಗೇರುವ ಅವಕಾಶ ನಿಮಗಿದೆ. ತಡರಾತ್ರಿ ಮನೆಗೆ ಬಂದ್ರೂ ಕೇಳುವವರಿರುವುದಿಲ್ಲ. ಹಾಗೆಯೇ ಭಾನುವಾರ ಕೂಡ ನೀವು ಕೆಲಸ ಮಾಡಬಹುದು. ನಿಮ್ಮ ವೃತ್ತಿಯಲ್ಲಿ ಏಳ್ಗೆ ಬಯಸುವವರು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಒಂದರ ಜೊತೆ ಇನ್ನೊಂದು ಕೆಲಸವನ್ನು ನೀವು ಮಾಡಬಹುದು. ಈಗ ಮಾಡ್ತಿರುವ ವೃತ್ತಿಯಲ್ಲಿ ಸಂತೋಷವಿಲ್ಲವೆಂದ್ರೆ ಆರಾಮವಾಗಿ ಬದಲಿಸಬಹುದು.  

ಪ್ರವಾಸ ಮತ್ತು ಶಿಕ್ಷಣ : ಇವೆರಡು ಮುಗಿಯುವುದಿಲ್ಲ. ದೇಶ ಸುತ್ತುವ ಆಸೆ ಅಥವಾ ವಿದೇಶಕ್ಕೆ ಹೋಗುವ ಬಯಕೆಯಿದ್ದರೆ ಹಣ ಹೊಂದಿಸಿ ಪ್ರಯಾಣ ಬೆಳೆಸಬಹುದು. ಸ್ನೇಹಿತರ ಜೊತೆ ಇಲ್ಲವೆ ಒಂಟಿಯಾಗಿ ನೀವು ಹೋಗಬಹುದು. ಈವರೆಗೆ ಕಲಿಯಲು ಸಾಧ್ಯವಾಗದ,ಆಸಕ್ತಿಯಿರುವ ವಿಷ್ಯಕ್ಕೆ ಸಮಯ ಹೊಂದಿಸಿಕೊಂಡು ನೀವು ಕಲಿಕೆ ಕೂಡ ಶುರು ಮಾಡಬಹುದು. ಅದು ಮುಂದೆ ನಿಮ್ಮ ನೆರವಿಗೆ ಬರಬಹುದು.

ಸಮಾಜ ಸೇವೆ : ಸಮಾಜ ಸೇವೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸ್ಥಳೀಯ ಆಶ್ರಮಗಳಿಗೆ ಭೇಟಿ ನೀಡಿ ನೀವು ಅವರಿಗೆ ನೆರವು ನೀಡಬಹುದು. ಬಡವರ ಸಹಾಯಕ್ಕೆ,ಪರಿಸರ ಸ್ವಚ್ಛತೆಗೆ ಮುಂದಾಗಬಹುದು.

ಸ್ನೇಹಕ್ಕೆ ಬಲ ನೀಡಿ : ಓದು,ವೃತ್ತಿಯಿಂದಾಗಿ ಹಳೆ ಸ್ನೇಹಿತರು ದೂರವಾಗಿರುತ್ತಾರೆ. ಅವರನ್ನು ಭೇಟಿಯಾಗಲು ಇದು ಒಳ್ಳೆಯ ಸಮಯ. ಹಳೆ ಸ್ನೇಹಿತರನ್ನು ಒಟ್ಟುಗೂಡಿಸಿ ಅವರ ಜೊತೆ ನೀವು ಸಮಯ ಕಳೆಯಬಹುದು.

Latest Videos
Follow Us:
Download App:
  • android
  • ios