Asianet Suvarna News Asianet Suvarna News

ರಾಮನ ಪ್ರಕಾರ ಪತ್ನಿಯಾದವಳು ಪತಿಯೊಂದಿಗೆ ಹೇಗಿರಬೇಕು?

 ಸತಿಯಾದವಳು ಪತಿಗೆ ಏನು, ಪತಿ ಪತ್ನಿ ಸಂಬಂಧ ಹೇಗಿರಬೇಕು ಎಂಬ ಬಗ್ಗೆ ರಾಮ ಹೇಳುವುದೇನು? ತಾನು ರಾಮನ ದಾಸಿ ಎನ್ನುವ ಸೀತೆಗೆ ರಾಮನ ಹಿತವಚನವೇನು ಎಂಬುದನ್ನು ಕೇಳಿದರೆ ದಂಪತಿ ಹೇಗಿರಬೇಕು ಎಂಬ ಅರಿವು ಮೂಡುತ್ತದೆ.

How the bonding must be with husband and wife according to Rama skr
Author
First Published Jan 23, 2024, 2:55 PM IST

ರಾಮ ಸೀತೆಯನ್ನು ಈ ಜಗತ್ತು ಕಂಡ ಅತ್ಯುತ್ತಮ ಪತಿ ಪತ್ನಿ ಎಂದು ನಂಬಲಾಗುತ್ತದೆ. ಅವರಿಬ್ಬರೂ ಪರಸ್ಪರರ ಮನಸ್ಸನ್ನು ಚೆನ್ನಾಗಿ ಅರಿತಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ಪತ್ನಿ ಪತಿಯ ದಾಸಿಯಲ್ಲ, ಸ್ನೇಹಿತೆ ಎಂಬಂತೆ ನಡೆಸಿಕೊಂಡು ಅದೇ ಸಂದೇಶವನ್ನು ಜಗತ್ತಿಗೆ ಹಂಚಿದವನು ರಾಮ. 

ಇದೇ ಸಂದೇಶವನ್ನು ಹಿಂದಿ ವಾಹಿನಿಯ ಜನಪ್ರಿಯ ರಾಮಾಯಣದ ರಾಮ ಸೀತೆಯ ಪಾತ್ರಧಾರಿಗಳಾದ ಅರುಣ್ ಗೋವಿಲ್ ಹಾಗೂ ದೀಪಿಕಾ ಚಿಕ್ಲಿಯಾ ಹಿಂದಿಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿಯೂ ರಾಮ ಸೀತೆಯ ಪಾತ್ರಧಾರಿಗಳಾಗಿ ಅಭಿನಯಿಸಿದ ಅವರು, ಸತಿಯಾದವಳು ಪತಿಗೆ ಏನು, ಪತಿ ಪತ್ನಿ ಸಂಬಂಧ ಹೇಗಿರಬೇಕು ಎಂಬ ಸಂದೇಶ ನೀಡಿದ್ದಾರೆ. ಅಂದರೆ ರಾಮನು ಸೀತೆಗೆ ತನ್ನ ಸತಿಯಾದವಳಿಗೆ ಏನು ಸ್ಥಾನ ಕೊಟ್ಟಿದ್ದನೆಂಬುದನ್ನು ಈ ಪ್ರದರ್ಶನ ತೋರಿಸುತ್ತದೆ.

97 ವರ್ಷದಲ್ಲೂ ಗಾಗಲ್ಸ್ ಹಾಕಿ ಗಗನಕ್ಕೆ ಹಾರಿದ ಈ ಫ್ಲೈಯಿಂಗ್ ಅಜ್ಜಿ ಯಾ ...

ಪತ್ನಿ ದಾಸಿಯೇ?
ಅದರಂತೆ, ಸೀತೆ ಬಂದು ರಾಮನ ಕಾಲಿಗೆ ನಮಸ್ಕರಿಸುತ್ತಾಳೆ. ಅದನ್ನು ಅರ್ಧದಲ್ಲೇ ತಡೆದ ರಾಮ ಇದೇಕೆ ಎಂದು ಕೇಳುತ್ತಾನೆ.
ಅದಕ್ಕೆ ಸೀತೆ ಹೇಳುತ್ತಾಳೆ, 'ಅಮ್ಮ ಹೇಳಿದ್ದಾಳೆ, ಈಗ ನೀವೇ ನನ್ನ ಪರಮೇಶ್ವರ. '
'ಅಮ್ಮನ ಉಪದೇಶ ಕೇಳಿದ್ದಿ, ಈಗ ನನ್ನ ಉಪದೇಶ ಕೇಳುವೆಯಾ?'
'ಹೇಳಿ, ನಾನಂತೂ ನಿಮ್ಮ ದಾಸಿಯಾಗಿದ್ದೇನೆ'
'ನನ್ನ ಮೊದಲ ಉಪದೇಶವೆಂದರೆ ನನ್ನ ದಾಸಿಯಾಗಿರಬೇಡ, ನನ್ನ ಸಖಿ, ಅರ್ಧಾಂಗಿ, ಸಹವರ್ತಿಯಾಗಿ ಜೊತೆಗಿರು. ನನ್ನ ಎಲ್ಲ ಒಳ್ಳೆ ಕೆಲಸಗಳಲ್ಲಿ ನನ್ನೊಂದಿಗೆ ಕೈಜೋಡಿಸು. ನಾನು ಭ್ರಾಂತಿಯಲ್ಲಿರುವಾಗ ಅದರಿಂದ ಹೊರ ಕರೆದುಕೊಂಡು ಬಾ. ಉತ್ತಮ ಅರ್ಧಾಂಗಿ, ಸ್ನೇಹಿತೆಯ ಕರ್ತವ್ಯ ಇದೇ ಆಗಿರುತ್ತದೆ.'

'ಟಗರು' ನಟಿ ಭಾವನಾ ವಿವಾಹ ವಾರ್ಷಿಕೋತ್ಸವ; ಪತಿಗೆ ಲವ್ಯೂ ಹೇಳಿ ಮದುವೆ ಫೋಟೋ ಹಂಚಿಕೊಂಡ ಸುಂದರಿ

ರಾಮನು ಸೀತೆಗೆ ಹೇಳುವ ಈ ಮಾತು ಪ್ರತಿಯೊಬ್ಬ ದಂಪತಿಯ ಜೀವನದಲ್ಲೂ ಅನ್ವಯವಾದರೆ ಅವರ ಜೀವನ ಹಾಲುಜೇನಿನಂತೆ ಸಿಹಿಯಾಗಿರುವುದರಲ್ಲಿ ಅನುಮಾನವೇ ಇಲ್ಲ. ಪತ್ನಿಯನ್ನು ದಾಸಿಯಂತೆ ನಡೆಸಿಕೊಳ್ಳುತ್ತಿದ್ದ ಕಾಲ ಹೋಗಿದೆ. ಈಗ ಪತ್ನಿ ತನಗೆ ಸಮಾನಳು. ಆಕೆ ತನ್ನ ಸ್ನೇಹಿತೆ ಎಂದು ಪುರುಷ ಯೋಚಿಸಿದರೆ ಅವರಿಬ್ಬರ ಜೀವನವೂ ಸಂತೋಷದಿಂದ ತುಂಬಿರುತ್ತದೆ. ಇಷ್ಟಕ್ಕೂ ಮದುವೆಯ ಉದ್ದೇಶವೇ ಇಬ್ಬರು ವ್ಯಕ್ತಿಗಳ ಮನಸ್ಸನ್ನು ಹೆಣೆದು ಅವರನ್ನು ಒಬ್ಬರನ್ನಾಗಿಸುವುದು. ಪತಿ ಪತ್ನಿ ಇಬ್ಬರೂ ಎರಡು ದೇಹ, ಆತ್ಮವೊಂದೇ ಎಂದುಕೊಂಡರೆ ಸಂಬಂಧದಲ್ಲಿ ಬರುವ ಮುನಿಸು, ಸಿಿಟ್ಟು ಸೆಡವು, ಹಟ ಎಲ್ಲವೂ ಕ್ಷಣ ಮಾತ್ರದಲ್ಲಿ ನೀರಿನ ಗುಳ್ಳೆಗಳಂತೆ ಮಾಯವಾಗುತ್ತವೆ. ಮನಸ್ಸು ತಿಳಿಯಾಗುತ್ತದೆ.

ರಾಮ ಸೀತೆಯ ಕತೆಯನ್ನು ಆಳವಾಗಿ ಅಭ್ಯಸಿಸಿದಾಗ ಕೂಡಾ ಅವರಿಬ್ಬರ ಮನಸ್ಸೂ ಒಂದೇ ಆಗಿತ್ತು ಎಂಬುದು ಅರ್ಥವಾಗುತ್ತದೆ. ಸೀತೆಯ ಅಪಹರಣದ ನಂತರ, ರಾಮನು ಲಕ್ಷ್ಮಣನಿಗೆ, ತಾನು ಸೀತೆಯ ಜೊತೆ ಇರುವವರೆಗೂ ಕಾಡಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಮತ್ತು ಅವಳು ಹೋದ ನಂತರ ಬದುಕಲೇ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾನೆ. ಅತ್ತ ಸೀತೆ ಕೂಡಾ ರಾಮನು ತನ್ನನ್ನು ನೋಡಲು ಅಲ್ಲಿಲ್ಲದ ಕಾರಣ ಅವಳು ಕೊನೆಯದಾಗಿ ಉಟ್ಟಿದ್ದ ಸೀರೆಯನ್ನು ಬದಲಾಯಿಸಲು ಸಹ ಅವಳು ಚಿಂತಿಸುವುದಿಲ್ಲ. ರಾಮ ಸೀತೆಯನ್ನು ಆದರ್ಶ ದಂಪತಿ ಎನ್ನುವುದು ಇದೇ ಕಾರಣಕ್ಕೆ. 

 

Follow Us:
Download App:
  • android
  • ios