Asianet Suvarna News Asianet Suvarna News

Relationship Tips : ಸಮಯ ನೀಡದ ಪತಿಗೆ ಹೀಗೆ ಬುದ್ದಿ ಕಲಿಸಿ

ಕೆಲಸದ ಒತ್ತಡದಲ್ಲಿ ಜನರು ಸಂಬಂಧ ಮರೆಯುತ್ತಿದ್ದಾರೆ. ಇದೇ ಕಾರಣಕ್ಕೆ ದಾಂಪತ್ಯ ಮುರಿದು ಬೀಳ್ತಿದೆ. ಪತಿ ಸಮಯ ನೀಡ್ತಿಲ್ಲ ಎಂಬ ದೂರು ಮಹಿಳೆಯರಲ್ಲಿ ಕಾಮನ್ ಆಗಿದೆ. ಕೆಲ ಟ್ರಿಕ್ಸ್ ಬಳಸಿ, ಪತಿಯನ್ನು ದಾರಿಗೆ ತರ್ಬಹುದು. 
 

If Your Husband Is Not Giving You Time Then Follow These 4 Easy Tips
Author
Bangalore, First Published Jun 16, 2022, 7:48 PM IST

ಸಂಬಂಧ (Relationship) ದಲ್ಲಿ ಒಬ್ಬರಿಗೊಬ್ಬರು ಸಮಯ ನೀಡುವುದು ಬಹಳ ಮುಖ್ಯ. ಇಬ್ಬರ ಮಧ್ಯೆ ಎಷ್ಟೇ ಪ್ರೀತಿ ಇದ್ದರೂ, ಪರಸ್ಪರ ಕ್ವಾಲಿಟಿ ಟೈಂ ಸ್ಪೆಂಡ್ ಮಾಡಿಲ್ಲವೆಂದ್ರೆ ಆ ಪ್ರೀತಿ (Love) ಅರ್ಥವಾಗುವುದಿಲ್ಲ. ಹಾಗೆಯೇ ಇಬ್ಬರ ಮಧ್ಯೆ ಇರುವ ಬಂಧ ಬಿಗಿಯಾಗುವುದಿಲ್ಲ. ಅನೇಕ ಬಾರಿ ಕೆಲಸದ ಒತ್ತಡದಲ್ಲಿ ಇದಕ್ಕೆ ಸಮಯ ಸಿಗುವುದಿಲ್ಲ. ದೀರ್ಘ ಕಾಲದ ದಾಂಪತ್ಯದಲ್ಲಿ ಇದು ಹೆಚ್ಚು. ಪರಸ್ಪರ ಅರಿತುಕೊಂಡಿದ್ದೇವೆ ಎನ್ನುವ ಕಾರಣವೊಂದಾದ್ರೆ, ಜವಾಬ್ದಾರಿ ಹಾಗೂ ಕೆಲಸದ ಒತ್ತಡ (Stress) ದಿಂದಾಗಿ ಸಂಗಾತಿಗೆ ಸಮಯ ನೀಡಲು ಮರೆಯುತ್ತಾರೆ.

ಇದ್ರಲ್ಲಿ ಗಂಡಸರು ಮುಂದೆ. ಕೆಲ ಗಂಡಸರಿಗೆ ತಾವು, ಸಂಗಾತಿಗಾಗಿ ಸ್ವಲ್ಪ ಸಮಯವನ್ನೂ ನೀಡ್ತಿಲ್ಲ ಎಂಬುದು ಅರಿವಿಗೆ ಬರುವುದೇ ಇಲ್ಲ. ಮತ್ತೆ ಕೆಲವರು ಇದನ್ನು ನಿರ್ಲಕ್ಷ್ಯಿಸುತ್ತಾರೆ. ನಿಮ್ಮ ಸಂಗಾತಿ ಕೂಡ ನಿಮಗೆ ಸಮಯ ನೀಡದೆ, ಸದಾ ಕೆಲಸದಲ್ಲಿದ್ದರೆ ಅವರನ್ನು ಬದಲಿಸುವ ಅಗತ್ಯವಿದೆ.

ನಿಮ್ಮಿಬ್ಬರ ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ಇಬ್ಬರು ಒಟ್ಟಿಗೆ ಸ್ವಲ್ಪ ಟೈಂ ಸ್ಪೆಂಡ್ ಮಾಡ್ಲೇಬೇಕು. ನನ್ನ ಬಗ್ಗೆ ಪತಿ ಗಮನ ನೀಡ್ತಿಲ್ಲ, ನನಗೆ ಸಮಯ ಕೊಡ್ತಿಲ್ಲ, ಸದಾ ಕೆಲಸದಲ್ಲಿ ಬ್ಯುಸಿಯಿರ್ತಾರೆ ಎನ್ನುವ ಪತ್ನಿಯಂದಿರುವ ಇದನ್ನು ಓದಿ. ಕೆಲವೇ ಕೆಲವು ಟ್ರಿಕ್ಸ್ ಮೂಲಕ ನಿಮ್ಮ ಪತಿಯನ್ನು ಟ್ರ್ಯಾಕ್ ಗೆ ತನ್ನಿ.

ಅಚಾನಕ್ ಕಚೇರಿಗೆ ಹೋಗಿ: ನಿಮ್ಮ ಪತಿ ನಿಮಗೆ ಟೈಂ ನೀಡ್ತಿಲ್ಲ, ಸದಾ ಕಚೇರಿಯಲ್ಲಿರ್ತಾರೆ ಎನ್ನುವವರು ಒಂದು ದಿನ ಪತಿಯ ಕಚೇರಿಗೆ ಹೋಗಿ. ಇಂದು ನಾನು ಬ್ಯುಸಿ ಇರ್ತೇನೆ. ಕಾಲ್ ಮಾಡ್ಬೇಡ ಎಂದು ನಿಮ್ಮ ಪತಿ ಹೇಳಿದ ದಿನವೇ ನೀವು ಅಲ್ಲಿಗೆ ಹೋಗಿ. ಆಗ ನಿಮ್ಮ ಪತಿ ನಿಜವಾಗ್ಲೂ ಕೆಲಸದಲ್ಲಿ ಬ್ಯುಸಿಯಿದ್ದಾರಾ ಇಲ್ಲ ಬೇರೆ ಏನಾದ್ರೂ ಕಾರಣವಿದ್ಯಾ ಎಂಬುದು ನಿಮಗೆ ಗೊತ್ತಾಗುತ್ತದೆ. ಆ ನಂತ್ರ ನೀವು ನಿಮ್ಮ ಪತಿಯನ್ನು ದಾರಿಗೆ ತರುವ ಕೆಲಸ ಮಾಡ್ಬಹುದು.

ಫೋನ್ ಕರೆ ಮಾಡೋದನ್ನು ನಿಲ್ಲಿಸಿ: ಸಾಮಾನ್ಯವಾಗಿ ಪತ್ನಿಯಾದವಳು ಪತಿಗೆ ಆಗಾಗ ಕರೆ ಮಾಡ್ತಿರುತ್ತಾಳೆ. ಕಚೇರಿಯಲ್ಲಿ ಎಷ್ಟು ಕೆಲಸವಿದೆ ಎಂಬುದನ್ನು ತಿಳಿಯದೆ ಊಟವಾಯ್ತಾ? ತಿಂಡಿಯಾಯ್ತಾ ಎಂಬೆಲ್ಲ ವಿಷ್ಯ ಕೇಳಲು ಕರೆ ಮಾಡ್ತಾಳೆ. ನೀವು ಕರೆ ಮಾಡಿದಾಗ್ಲೆಲ್ಲ ಪತಿ ನಿರ್ಲಕ್ಷ್ಯದಿಂದ ಉತ್ತರ ನೀಡಿರ್ತಾನೆ. ಅದೇ ಒಂದು ದಿನ ಆತನಿಗೆ ಕರೆ ಮಾಡ್ಬೇಡಿ. ಹಾಗೆಯೇ ಆತ ಮನೆಗೆ ಬರುವವರೆಗೆ ಕಾದು, ಆತನಿಗೆ ಊಟ ಬಡಿಸಿ, ಆರೈಕೆ ಮಾಡುವುದನ್ನು ನಿಲ್ಲಿಸಿ. ಆತ ಮನೆಗೆ ಬರುವ ಮೊದಲೇ ಊಟ ಮಾಡಿ ನೀವು ಮಲಗಿ. ನಿಮ್ಮ ಅತಿಯಾದ ಅಟೆನ್ಷನ್ ಅವರಿಗೆ ಅಭ್ಯಾಸವಾಗಿರುತ್ತದೆ. ನಿಮ್ಮ ಈ ನಿರ್ಲಕ್ಷ್ಯವನ್ನು ಅವರು ನೊಟೀಸ್ ಮಾಡ್ತಾರೆ. ನಿಮ್ಮ ಬಳಿ ಬಂದು ಕಾರಣ ಕೇಳಬಹುದು. ಆಗ ಅವರಿಗೆ ನಿಮ್ಮ ಸಮಸ್ಯೆಯನ್ನು ವಿವರವಾಗಿ ಹೇಳ್ಬಹುದು.  

ಇದನ್ನೂ ಓದಿ: ಮಗುವಾದ ಮೇಲೆ ಗಂಡನಿಗೆ ಲೈಂಗಿಕಾಸಕ್ತಿಯೇ ಇಲ್ಲ, ಏನ್ಮಾಡ್ಲಿ?

ಎಮೋಷನಲ್ ಡೈಲಾಗ್ ಮೂಲಕ ಭಾವನೆ ವ್ಯಕ್ತಪಡಿಸಿ : ಪತಿ ಸಮಯ ನೀಡದೆ ಹೋದಾಗ ಹಾಗೂ ಇದು ಮುಂದುವರೆದ್ರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು.  ಪತಿ ಮನೆಯಲ್ಲಿದ್ದ ದಿನ, ಅವರಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡಿ. ಡಿನ್ನರ್ ಲೈಟ್ ವ್ಯವಸ್ಥೆ ಮಾಡಿ. ಅವರಿಗಿಷ್ಟದ ಊಟ ಸಿದ್ಧಪಡಿಸಿ. ಇಬ್ಬರೇ ಈ ಕ್ಷಣವನ್ನು ಅನುಭವಿಸಿ. ಆ ವೇಳೆ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಿ. ಹಿಂದಿನ ದಿನಗಳನ್ನು ನೆನಪು ಮಾಡಿಕೊಡಿ. ಆಗ ಅವರಿಗೆ ಹಿಂದೆ ಒಂದಾಗಿ ಕಳೆದ ದಿನಗಳು ನೆನಪಾಗುತ್ತವೆ. ಇದ್ರಿಂದ ಅವರು ತಮ್ಮ ಸ್ವಭಾವದಲ್ಲಿ ಸುಧಾರಣೆ ತರುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ: ಪ್ರೀತಿಯಲ್ಲಿ ಬಿದ್ದಿದ್ದೀರಾ? ಪಾಲಕರನ್ನು ಒಪ್ಪಿಸಲು ಇಲ್ಲಿವೆ ಟಿಪ್ಸ್

ದೂರವಾಗುವ ಧಮಕಿ : ಈ ಎಲ್ಲ ಪ್ರಯತ್ನದ ನಂತ್ರವೂ ಪತಿ ದಾರಿಗೆ ಬಂದಿಲ್ಲವೆಂದ್ರೆ ತವರಿಗೆ ಹೋಗುವ ಧಮಕಿ ನೀಡ್ಲೇಬೇಕು. ಅವರಿಗೆ ತಪ್ಪಿನ ಅರಿವಾದ್ರೆ ನಿಮ್ಮ ಬಳಿ ಕ್ಷಮೆ ಕೇಳುತ್ತಾರೆ. ಇಲ್ಲ ಕೆಲ ದಿನಗಳ ಕಾಲ ಒಂಟಿಯಾಗಿ ಬದುಕಿ ನಂತ್ರ ನಿಮ್ಮನ್ನು ಕರೆದೊಯ್ಯಲು ಬರ್ತಾರೆ.  

Follow Us:
Download App:
  • android
  • ios