ವಯಸ್ಸಿಗೆ ಬಂದ್ರೂ ಪಾಲಕರು ಮದುವೆ ಮಾಡ್ತಿಲ್ಲ ಏನು ಮಾಡ್ಲಿ?

ಮಕ್ಕಳು ಎಷ್ಟೇ ದೊಡ್ಡವರಾಗಿರಲಿ, ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ,  ಸಂಗಾತಿ ಹುಡುಕಿಕೊಳ್ಳುವ ಹಕ್ಕು ಮಾತ್ರ ಅವರಿಗಿರೋದಿಲ್ಲ. ಪಾಲಕರು ತೋರಿಸಿದ ಹುಡುಗನ ಜೊತೆ ಮದುವೆಯಾಗ್ಬೇಕು ಎಂಬ ನಿಯಮ ಭಾರತದಲ್ಲಿ ಇನ್ನೂ ಮರೆಯಾಗಿಲ್ಲ. ಇದು ಅನೇಕರ ಪ್ರೀತಿ ಜೀವನಕ್ಕೆ ಅಡ್ಡಿಯಾಗಿದೆ.
 

How Should I Convince My Parents For An Intercaste Marriage

ಭಾರತದಲ್ಲಿ ಈಗ್ಲೂ ಲವ್ ಮ್ಯಾರೇಜ್ ಗೆ ಮಾನ್ಯತೆ ಸಿಗ್ತಿಲ್ಲ. ಜಾತಿ ಪದ್ಧತಿ ಇನ್ನೂ ಜಾರಿಯಲ್ಲಿರುವ ಕಾರಣ ಅಂತರ್ ಜಾತಿ ವಿವಾಹವನ್ನು ಜನರು ಒಪ್ಪಿಕೊಳ್ತಿಲ್ಲ. ಮಕ್ಕಳು ಅಂತರ್ಜಾತಿ ವಿವಾಹವಾಗ್ತಿದ್ದಾರೆ ಎಂಬುದು ಗೊತ್ತಾದ್ರೆ ಮಕ್ಕಳನ್ನು ಹತ್ಯೆ ಮಾಡಲು ಹಿಂಜರಿಯದ ಜನರಿದ್ದಾರೆ. ಪ್ರೇಮ ವಿವಾಹ ಹಾಗೂ ಅಂತರ್ಜಾತಿ ವಿವಾಹ, ಅವಮಾನದ ಕೆಲಸವೆಂದು ಜನರು ನಂಬಿದ್ದಾರೆ. ಇದೇ ಕಾರಣಕ್ಕೆ ಮುಂಬೈನ ಯುವತಿಯೊಬ್ಬಳ ಮದುವೆ ಕನಸು ಇನ್ನೂ ನನಸಾಗಿಲ್ಲ. ಮನೆಯಲ್ಲಿ ತಂದೆ – ತಾಯಿ ಮದುವೆಗೆ ಒಪ್ಪುತ್ತಿಲ್ಲ. ನನಗೆ ಮದುವೆಯಾಗಿ, ಸಂಸಾರ ಮಾಡುವ ಆಸೆಯಿದ್ರೂ ಎಲ್ಲ ಬಯಕೆಯನ್ನು ಅದುಮಿಟ್ಟು ಜೀವನ ನಡೆಸುತ್ತಿದ್ದೇನೆ ಎಂದು ಯುವತಿ ಹೇಳಿದ್ದಾಳೆ. ಆಕೆ ಬೇರೆ ಜಾತಿ ವ್ಯಕ್ತಿಯನ್ನು ಪ್ರೀತಿಸಿದ್ದೇ ಇದಕ್ಕೆ ಕಾರಣವಾಗಿದೆ. ಮಗಳು ಮದುವೆಯಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುವ ಪಾಲಕರು ಒಂದು ಕಡೆಯಾದ್ರೆ, ಪ್ರೀತಿಸಿದ ವ್ಯಕ್ತಿಯನ್ನು ಬಿಟ್ಟುಕೊಡಲು ಮನಸ್ಸಿಲ್ಲದ ಸ್ಥಿತಿ ಮತ್ತೊಂದು ಕಡೆ ಎನ್ನುತ್ತಾಳೆ ಯುವತಿ. ಅಷ್ಟಕ್ಕೂ ಆಕೆ ಸಂಕಷ್ಟಕ್ಕೆ ತಜ್ಞರು ಏನು ಹೇಳಿದ್ದಾನೆ ಎಂಬುದು ಇಲ್ಲಿದೆ.

ಪ್ರೀತಿ (Love) ಸಿದ ವ್ಯಕ್ತಿ ಮದುವೆ (Wedding) ಯಾಗುವ ಭಾಗ್ಯವಿಲ್ಲ: ಭಾರತ (India) ದಲ್ಲಿ ಪ್ರೇಮ ವಿವಾಹಕ್ಕೆ ಒಪ್ಪಿಗೆ ಸಿಗೋದು ಕಷ್ಟ. ಹಾಗಾಗಿಯೇ ಶೇಕಡಾ 95ರಷ್ಟು ಹುಡುಗಿಯರು ಅರೆಂಜ್ ಮ್ಯಾರೇಜ್ ಆಗ್ತಾರೆ. ಈಕೆ ಕೂಡ ಅವಿವಾಹಿತೆ. ಮುಂಬೈನಲ್ಲಿ ಕೆಲಸ ಮಾಡ್ತಿದ್ದಾಳೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸವಿದೆ. ಕೈನಲ್ಲಿ ಉದ್ಯೋಗವಿದ್ದರೂ, ಸ್ವಾವಲಂಬಿಯಾಗಿದ್ದರೂ ಮೆಚ್ಚಿದ ಯುವಕನ ಜೊತೆ ಮದುವೆಯಾಗುವ ಭಾಗ್ಯವಿಲ್ಲ. ಆಕೆ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆತ ಬೇರೆ ಜಾತಿಯವನು. ಇಬ್ಬರ ಮಧ್ಯೆ ಆಳವಾದ ಪ್ರೀತಿ ಬೇರೂರಿದೆ. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗ್ತಿಲ್ಲ. ಮದುವೆ ಮಾಡಿಕೊಂಡು ಸುಂದರ ಸಂಸಾರ ಶುರು ಮಾಡುವ ಕನಸು ಆಕೆಯದ್ದು. ಮದುವೆಗೆ ಆಕೆ ಪಾಲಕರೇ ವಿಲನ್ ಆಗಿದ್ದಾರೆ. ಪಾಲಕರಿಗೆ ಮಗಳ ಆಯ್ಕೆ ಇಷ್ಟವಿಲ್ಲ. ಮಗಳು ಬೇರೆ ಜಾತಿಯ ವ್ಯಕ್ತಿ ಮದುವೆಯಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಾಲಕರು ಹೆದರಿಸಿದ್ದಾರೆ. ಪಾಲಕರ ಈ ಮೊಂಡುತನದಿಂದ ನನಗೆ ಮದುವೆಯಾಗ್ತಿಲ್ಲ. ನನಗೆ ಬೇರೆ ವ್ಯಕ್ತಿ ಮದುವೆಯಾಗಲು ಇಷ್ಟವಿಲ್ಲ. ಹಾಗಂತ ಪಾಲಕರ ಆಶೀರ್ವಾದ ಪಡೆಯದೆ ಮದುವೆಯಾಗುವ ಮನಸ್ಸಿಲ್ಲ ಎನ್ನುತ್ತಾಳೆ ಯುವತಿ.

ತಜ್ಞರ ಸಲಹೆ : ಭಾರತದಲ್ಲಿ ಪ್ರೇಮ ವಿವಾಹವನ್ನು ಒಪ್ಪುವುದು ಕಷ್ಟ. ಅದರಲ್ಲೂ ನಿಮ್ಮದು ಅಂತರ್ ಜಾತಿ ವಿವಾಹ. ಹಾಗಂತ ನೀವು ಭರವಸೆ ಕಳೆದುಕೊಳ್ಳಬಾರದು ಎನ್ನುತ್ತಾರೆ ತಜ್ಞರು. 

ಈ ರಾಶಿಗಳ ಜನ ಸಂಗಾತಿಯೊಂದಿಗೆ ಮಕ್ಕಳಂತೆ ಬಿಹೇವ್‌ ಮಾಡ್ತಾರೆ

ಪ್ರೇಮಿ ಬಗ್ಗೆ ಮನೆಯವರಿಗೆ ಹೇಳಿ : ನಿಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ನೀವು ಪಾಲಕರಿಗೆ ಅರ್ಥ ಮಾಡಿಸುವ ಅನಿವಾರ್ಯತೆಯಿದೆ. ಪ್ರೀತಿಸಿದ ವ್ಯಕ್ತಿಯ ವ್ಯಕ್ತಿತ್ವ, ಅವರ ಸ್ವಭಾವ ಹಾಗೂ ಅವರು ಮುಂದೆ ನಿಮ್ಮನ್ನು ಸುಖವಾಗಿ ನೋಡಿಕೊಳ್ಳಬಲ್ಲರು ಎಂಬುದನ್ನು ನೀವು ಪಾಲಕರಿಗೆ ತಿಳಿಸಿ ಹೇಳಬೇಕು. ಪಾಲಕರ ಜೊತೆ ಮಾತುಕತೆ ನಡೆಸುವುದು ಮುಖ್ಯ. ಒಮ್ಮೆ ಮಾತನಾಡಿ ಸೋತರೆ ಚಿಂತೆ ಬೇಡ. ನಿರಂತರ ಪ್ರಯತ್ನವಿರಬೇಕು ಎನ್ನುತ್ತಾರೆ ತಜ್ಞರು.

ಪತ್ನಿ ಇನ್ನೊಬ್ಬನಿಗೆ ಮುತ್ತಿಟ್ಟರೂ ಪ್ರಶ್ನಿಸದ ಪತಿ

ಆಪ್ತರ ಸಹಾಯ : ನಿಮ್ಮ ಪಾಲಕರು ಅತಿಯಾಗಿ ಪ್ರೀತಿಸುವ ಅಥವಾ ಗೌರವಿಸುವ ವ್ಯಕ್ತಿಯ ಸಹಾಯವನ್ನು ನೀವು ಪಡೆಯಬಹುದು ಎನ್ನುತ್ತಾರೆ ತಜ್ಞರು. ಅವರ ಮೂಲಕ ನಿಮ್ಮ ಪ್ರೀತಿ ಬಗ್ಗೆ ನೀವು ಪಾಲಕರ ಮನವೊಲಿಸುವ ಪ್ರಯತ್ನ ನಡೆಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿರುವ ಪಾಲಕರ ಮುಂದೆ, ನಿಮ್ಮ ಮದುವೆಗೆ ಅವರ ಒಪ್ಪಿಗೆ ಎಷ್ಟು ಮುಖ್ಯ ಎಂಬುದನ್ನು ಹೇಳಿ. ಅವರ ಆಶೀರ್ವಾದವಿಲ್ಲದೆ ಮದುವೆ ಸಾಧ್ಯವಿಲ್ಲವೆಂದು ಅವರಿಗೆ ತಿಳಿಸಿ. ಇದರ ಜೊತೆ ಭಾರತದ ಕಾನೂನು, ಈಗಿನ ಬದಲಾದ ಪರಿಸರದ ಬಗ್ಗೆ ಅವರಿಗೆ ಮನವರಿಕೆ ಮಾಡುವ ಯತ್ನ ನಡೆಸಿ ಎನ್ನುತ್ತಾರೆ ತಜ್ಞರು.
 

Latest Videos
Follow Us:
Download App:
  • android
  • ios