Asianet Suvarna News Asianet Suvarna News

ಈ ರಾಶಿಗಳ ಜನ ಸಂಗಾತಿಯೊಂದಿಗೆ ಮಕ್ಕಳಂತೆ ಬಿಹೇವ್‌ ಮಾಡ್ತಾರೆ

ಸಂಗಾತಿಯನ್ನು ಡಾಮಿನೇಟ್‌ ಮಾಡುವವರು ಹಲವರು. ಸಂಗಾತಿಯೊಂದಿಗೆ ಸದಾಕಾಲ ವಾಗ್ವಾದ ಮಾಡುತ್ತಲೇ ಇರುವವರು ಕೆಲವರು. ಆದರೆ, ಸಂಗಾತಿಯೊಂದಿಗೂ ಮಕ್ಕಳಂತೆ ವರ್ತಿಸುವ ಜನರೂ ಇರುತ್ತಾರೆ. ಅವರು ಈ ರಾಶಿಗೆ ಸೇರುತ್ತಾರೆ. 
 

These zodiac sign people behaves like children in relationship
Author
Bangalore, First Published Jul 25, 2022, 5:27 PM IST

ಪ್ರೀತಿ-ಪ್ರೇಮ, ಸಂಬಂಧಗಳು ಜನರನ್ನು ವಿಚಿತ್ರವಾಗಿ ಆಡಿಸುತ್ತವೆ. ಅರ್ಥಾತ್‌, ಜನ ಬಗೆಬಗೆಯ ರೂಪದಲ್ಲಿ ವರ್ತಿಸುತ್ತಾರೆ. ಪ್ರೀತಿಯ ವಿಚಾರದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಬ್ಬೊಬ್ಬರ ವಿಧಾನ ಒಂದೊಂದು ರೀತಿ. ಹೀಗಾಗಿ, ಇದೊಂದು ಕುತೂಹಲಕಾರಿ ಸಂಗತಿ. ಕೆಲವರು ತಮ್ಮ ಸಂಗಾತಿ ತಾನು ಹೇಳಿದಂತೆ ಕೇಳಲಿ ಎಂದು ಡಾಮಿನೇಟ್‌ ಮಾಡಬಹುದು, ಸಂಬಂಧದಲ್ಲಿ ತಾವು ಹೇಳಿದಂತೆಯೇ ನಡೆಯಬೇಕು ಎಂದು ಭಾವಿಸಬಹುದು. ಕೆಲವರು ಸಂಗಾತಿಯನ್ನು ಟೇಕನ್‌ ಫಾರ್‌ ಗ್ರಾಂಟೆಡ್‌ ನಂತೆ ನೋಡಬಹುದು. ಅವರಿಗೆ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿಯೂ ಇರುವುದಿಲ್ಲ, ಆಳವಾದ ಬಾಂಧವ್ಯವೂ ಇರುವುದಿಲ್ಲ. ಇನ್ನು ಕೆಲವರು, ಸಂಗಾತಿ ತಮ್ಮನ್ನು ಮುನ್ನಡೆಸಲಿ ಎಂದು ಬಯಸುತ್ತಾರೆ. ತಾವು ಏನೊಂದೂ ನಿರ್ಧಾರವನ್ನು ತೆಗೆದುಕೊಳ್ಳದೆ ಮಕ್ಕಳಂತೆ ವರ್ತಿಸುತ್ತಾರೆ. ಕೆಲವು ರಾಶಿಗಳ ಜನ ಇದರಲ್ಲಿ ಎಕ್ಸ್‌ ಪರ್ಟ್. ಅವರು ಪ್ರೀತಿ ಸಾಂಗತ್ಯದಲ್ಲಿ ಮಕ್ಕಳಂತೆ ಆಗಿಬಿಡುತ್ತಾರೆ. ಕರ್ಕಾಟಕ ರಾಶಿ, ತುಲಾ, ವೃಷಭ ರಾಶಿಗಳ ಜನ ಪ್ರೀತಿಯ ವಿಚಾರದಲ್ಲಿ ಅಪ್ಪಟ ಮಕ್ಕಳು. ಸಂಗಾತಿಯೇ ಪ್ರೀತಿಯಲ್ಲಿ ಮೊದಲ ಹೆಜ್ಜೆ ಇಡಲಿ ಎಂದು ಬಯಸುವುದರಿಂದ ಹಿಡಿದು ವಿವಿಧ ವಿಚಾರಗಳಲ್ಲಿ ಮಕ್ಕಳಂತೆ ವರ್ತಿಸುತ್ತಾರೆ.  

•    ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಜನ ಸಂಗಾತಿಯೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು (Share) ಇಷ್ಟಪಡುತ್ತಾರೆ. ಸಂಗಾತಿ (Partner) ತಮ್ಮ ಬಗ್ಗೆ ಹೆಚ್ಚಿನ ಗಮನ ತೋರದಿದ್ದರೆ ಕೋಪೋದ್ರಿಕ್ತರಾಗುವ ಮೂಲಕವಾದರೂ ಸರಿ, ತಮ್ಮ ಕಡೆಗೆ ಗಮನ (Attention) ಸೆಳೆದುಕೊಳ್ಳುತ್ತಾರೆ. ಪ್ರೀತಿಪಾತ್ರರು ತಮ್ಮ ಬಗ್ಗೆ ಗಮನ ಹರಿಸುವವರೆಗೂ ಅವರ ಇಂತಹ ಹಲವಾರು ಪ್ರಯತ್ನಗಳು ಮುಂದುವರಿದಿರುತ್ತವೆ. ಕರ್ಕಾಟಕ ರಾಶಿಯ ಜನರು ಹಲವಾರು ಮಕ್ಕಳಾಟದಂತಹ (Childish) ಗುಣಗಳನ್ನು ಹೊಂದಿರುತ್ತಾರೆ. ಜಲ (Water) ತತ್ವದ ಈ ರಾಶಿಯ ಜನ ಜಗತ್ತಿನ ಎದುರು ತಮ್ಮನ್ನು ತಾವು ತೆರೆದುಕೊಳ್ಳಲು ಮುಜುಗರ ತೋರುತ್ತಾರೆ. ವಯಸ್ಕರಾದ ಬಳಿಕವೂ ಅವರ ಈ ಗುಣ ಮುಂದುವರಿಯುತ್ತದೆ. ಮಗುವಿನಂತೆ ಮುಗ್ಧತೆಯನ್ನೂ (Innocence) ಹೊಂದಿರುತ್ತಾರೆ. ಈ ಗುಣವನ್ನು ಅವರ ಸಂಗಾತಿ ಅರ್ಥ ಮಾಡಿಕೊಂಡು ವರ್ತಿಸಿದರೆ ಸರಿ, ಇಲ್ಲವಾದರೆ ಸಂಬಂಧದಲ್ಲಿ ಸಮಸ್ಯೆ ಉಂಟಾಗಬಹುದು. 

ಈ ರಾಶಿ ನಕ್ಷತ್ರದವರು ಭಯಂಕರ ಕ್ರೇಜಿಗಳು

•    ತುಲಾ ರಾಶಿ (Libra)
ಈ ರಾಶಿಯ ಜನ ತಮ್ಮ ಬಾಲ್ಯಕಾಲವನ್ನು (Childhood) ಪದೇ ಪದೆ ನೆನಪಿಸಿಕೊಳ್ಳುತ್ತಾರೆ. ಅತ್ಯಂತ ಸ್ಮರಣೀಯ (Memorable) ಹಾಗೂ ಅತ್ಯುತ್ತಮ ಸಮಯವನ್ನು (Best Time) ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇಂತಹ ಘಟನಾವಳಿಗಳಲ್ಲಿ ಮುಳುಗುವುದೆಂದರೆ ಅವರಿಗೆ ಭಾರೀ ಇಷ್ಟ. ಬಹುಶಃ ಈ ಗುಣವೇ ಅವರನ್ನು ಮಗು(Child)ವಿನಂತೆ ರೂಪಿಸಿರುತ್ತದೆ. ಸಂಗಾತಿ ತಮ್ಮನ್ನು ಉಪಚರಿಸಲಿ ಎಂದು ಬಯಸುತ್ತಾರೆ. ವಯಸ್ಕರಾದ ಬಳಿಕವೂ ಈ ಗುಣ ಮುಂದುವರಿಯುತ್ತದೆ. ವಯಸ್ಕರಾಗಿದ್ದರೂ ತಾಳ್ಮೆ ಇಲ್ಲದವರಂತೆ ವರ್ತಿಸುತ್ತಾರೆ. ತಾವು ಆರಾಮಾಗಿರುವಾಗ ಇತರರು ಕೆಲಸ ಮಾಡುವಂತೆ ಮಾಡುತ್ತಾರೆ. ಹೀಗಿದ್ದರೂ ಕೆಲವೊಮ್ಮೆ ಅತಿಯಾದ ನಾಚಿಕೆಯುಳ್ಳ (Shy) ಮಗುವಿನಂತೆ ಇರುತ್ತದೆ ಅವರ ವರ್ತನೆ. ಪ್ರೀತಿ ವಿಚಾರದಲ್ಲಿ ಸಂಗಾತಿಯೇ ಮೊದಲ ಹೆಜ್ಜೆ ಇಡಲಿ ಎಂದು ನಿರೀಕ್ಷಿಸುತ್ತಾರೆ, ಕಾಯುತ್ತಾರೆ.

ಈ ರಾಶಿ ಸಂಗಾತಿಯಾದರೆ ಭಾವನೆಗಳೇ ಇರೋಲ್ಲ

•    ವೃಷಭ (Taurus)
ಹಳೆಯ ವಸ್ತುಗಳನ್ನು (Things) ಸಂಗ್ರಹಿಸುವುದು, ಹೊಸ ಹೊಸ ವಸ್ತುಗಳನ್ನು ಹೊಂದುವುದು ಎಂದರೆ ವೃಷಭ ರಾಶಿಯವರಿಗೆ ಭಾರೀ ಇಷ್ಟವಾದ ವಿಚಾರ. ಈ ನಿಟ್ಟಿನಲ್ಲಿ ಅವರದ್ದು ಮಗುವಿನ ಉತ್ಸಾಹ. ತಮ್ಮ ಈ ವಸ್ತು ಸಂಗ್ರಹದ ಬಗ್ಗೆ ಅವರಿಗೆ ಅತಿಯಾದ ಮಮಕಾರ ಇರುತ್ತದೆ. ಆದರೂ ತಮ್ಮ ಸಂಗಾತಿಗೆ ಅಥವಾ ಪ್ರೀತಿಪಾತ್ರರಿಗೆ ಇವುಗಳನ್ನು ತೋರಿಸಿ ಖುಷಿಪಡುತ್ತಾರೆ. ಮಗುವಿನಂತೆ ಅತ್ಯಂತ ಉಲ್ಲಾಸದಲ್ಲಿರುವ ಮನಸ್ಥಿತಿ ಕೆಲವೇ ಸಮಯದಲ್ಲಿ ಬದಲಾಗುತ್ತದೆ. ಅವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಅವರಿಗೆ ಇಷ್ಟವಾಗುವ ಅಡುಗೆಗಳನ್ನು ಮಾಡುವ ಮೂಲಕ ಅವರನ್ನು ಖುಷಿಪಡಿಸಬಹುದು. ಸಂಬಂಧದಲ್ಲೂ ಇಂಥದ್ದೇ ಮುಗ್ಧತೆಯನ್ನು ಅವರು ಹೊಂದಿರುತ್ತಾರೆ. ಮಕ್ಕಳಂತೆ ನಿರೀಕ್ಷೆ (Expectation) ಮಾಡುತ್ತಾರೆ. 
 

Follow Us:
Download App:
  • android
  • ios