Asianet Suvarna News Asianet Suvarna News

World Sexual Health Day 2022: 30ರ ನಂತರದ ಲೈಂಗಿಕ ಜೀವನ ಹೇಗಿರುತ್ತೆ?

ಕಾಲ ಬದಲಾಗಿದೆ. ಮದುವೆಯಾದ ಮೇಲೆ ಲೈಂಗಿಕ ಜೀವನ ಆರಂಭಿಸುತ್ತಿದ್ದವರು ಇದೀಗ ಕಾಲೇಜು ಮೆಟ್ಟಿಲು ಹತ್ತುವ ಮುನ್ನವೇ ಸಂಗಾತಿಯನ್ನು ಹುಡುಕಿ ಕೊಂಡಿರುತ್ತಾರೆ. ಸಹಜವಾಗಿಯೇ ಸೆಕ್ಸ್ ಲೈಫಲ್ಲಿ 30 ಆಗುತ್ತಿದ್ದಂತೆ ಸಾಕಷ್ಟು ಬದಲಾವಣೆ ಆಗಿರುತ್ತವೆ. ಅಷ್ಟಕ್ಕೂ ಹೇಗಿರುತ್ತೆ ಆ ಬದಲಾವಣೆಗಳು?

How sexual life will be after 30 years know on world sexual health day
Author
First Published Sep 4, 2022, 11:32 AM IST

ಪುರುಷರಾಗಲಿ, ಮಹಿಳೆಯರಾಗಲಿ ಮುಂಚೆ ಜೀವನದಲ್ಲಿ ಸಂಪೂರ್ಣ ಸೆಟಲ್ ಆಗುತ್ತಿದ್ದಿದ್ದು 30ರ ಆಸುಪಾಸಿನಲ್ಲಿಯೇ. ಆ ಟೈಮಲ್ಲೇ ಮದುವೆಯಾಗುತ್ತಿತ್ತು. ಆದರೆ, ಕಾಲ ಬದಲಾಗಿದೆ. ಬೇಗ ಸೆಟಲ್ ಆಗುತ್ತಾರೆ. ಜೀವನದಲ್ಲಿ ಸೆಟಲ್ ಆಗೋ ಮುನ್ನವೇ ಸಂಗಾತಿ ಹುಡುಕಿಕೊಂಡಿರುತ್ತಾರೆ. ಲೈಂಗಿಕ ಜೀವನವೂ ಆರಂಭಿಸುತ್ತಾರೆ. 

ಕಾಲೇಜು ದಿನಗಳಲ್ಲಿ (College Days) ಹುಡುಕಿಕೊಂಡವರನ್ನೇ ವರಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಮದುವೆ ಆದ ಮೇಲೆ ಸೆಕ್ಸ್ ಬಗ್ಗೆ ಇರೋ ಕುತೂಹಲ ಕಡಿಮೆಯಾಗಿರುತ್ತದೆ. ತಮ್ಮಿಷ್ಟ ಬಂದಂತೆ ವರ್ತಿಸಲು ಕಷ್ಟವಾಗುತ್ತದೆ. ಇನ್ನು ಮುಂದೆ ಈ ಲೈಂಗಿಕತೆ ಬಗ್ಗೆ ಜನರ ಅಭಿಪ್ರಾಯ ಮತ್ತಷ್ಟು ಬದಲಾಗೋ ಸಾಧ್ಯತೆ ಇದ್ದು, ಇನ್ನೇನು ಆಗುತ್ತೋ ಗೊತ್ತಿಲ್ಲ. 

ಇಂದಿನ ಯುವ ಜನಾಂಗ (Youth) 20ರ ಹರೆಯದಲ್ಲಿಯೇ ಲೈಂಗಿಕ ಸುಖ (Sexual Pleasure) ಅನುಭವಿಸುತ್ತಾರೆ. ಆಗಲೇ ತೀವ್ರ ಉದ್ರೇಕ, ಉತ್ಸಾಹ, ಸುಖಗಳನ್ನು ಅನುಭವಿಸಿಯಾಗಿರುತ್ತದೆ. ಸಹಜವಾಗಿಯೇ ವಯಸ್ಸು 30 ಆದ ಮೇಲೆ ಈ ತೀವ್ರೋದ್ರೇಕಗಳು ಕಡಿಮೆಯಾಗುತ್ತದೆ. ವಯಸ್ಸಾದಂತೆ ಮತ್ತಷ್ಟು ಕುಂಠಿತವಾಗುತ್ತದೆ. 30 ಹರೆಯದವರಾದರೆ ಲೈಂಗಿಕ ಜೀವನದಲ್ಲಿ (Sexual Life) ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ಬಗ್ಗೆ ಕೆಲವು ಮಾಹಿತಿ. 

ಲೈಂಗಿಕ ಸಂಪರ್ಕದಿಂದ ಗೌಪ್ಯ ರೋಗಗಳೂ ಹರಡುತ್ತೆ,ಹುಷಾರ್!

ಪ್ರಚೋದನೆ ಕಡಿಮೆ: 
ಇಪ್ಪತ್ತರ ಹರೆಯದಲ್ಲಿಯೇ ಸೆಕ್ಸ್ ಆರಂಭಿಸುವವರು ಪ್ರತಿದಿನ ಸಂಭೋಗ ಮಾಡುವ ಉತ್ಸಾಹ ಹಾಗೂ ಶಕ್ತಿ (Stamina) ಎರಡನ್ನೂ ಪ್ರದರ್ಶಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಟೈಮಲ್ಲಿ ಸಂಗಾತಿಯೂ (Companion) ಹೊಸಬರಾಗಿರುವುದರಿಂದ,  ದೇಹವನ್ನು ಅನ್ವೇಷಿಸುವ ಉತ್ಸಾಹ ಇರುತ್ತೆ. ಮದುವೆಯಾದ ಹೊಸದರಲ್ಲಿ ಕೆಲವೊಮ್ಮೆ ದಿನಕ್ಕೆ ಎರಡು ಬಾರಿ ಕೂಡ ಸಂಭೋಗಿಸುವ ಶಕ್ತಿ ಇರುತ್ತದೆ. ಮೂವತ್ತು ದಾಟುತ್ತಿದ್ದಂತೆ ಅದು ಸಾಧ್ಯವಾಗುವುದಿಲ್ಲ. ಆಗ ದೇಹ ಮೊದಲಿನಂತೆ ಸ್ಪಂದಿಸುವುದಿಲ್ಲ. 

ಒಣಗಿದ ಜನನಾಂಗ
ಲೈಂಗಿಕ ಜೀವನ ಬೇಗ ಆರಂಭಿಸಿದರೆ ಸಹಜವಾಗಿ ಜನನ ನಿಯಂತ್ರಣ ಮಾತ್ರೆ, ಔಷಧಿಗಳನ್ನು ಸೇವಿಸಬೇಕು. ಇದು ಬರ್ತಾ ಬರ್ತಾ ಮನುಷ್ಯನ ಆರೋಗ್ಯದ ಮೇಲೂ ಒಂದಲ್ಲೊಂದು ರೀತಿಯಲ್ಲಿ ಪರಿಣಾಮ ಬೀರಬಹುದು. ಕೆಲವು ಮಾತ್ರೆಗಳು ಅಂಡೋತ್ಪತ್ತಿಯನ್ನೇ ತಡೆಯುತ್ತವೆ. ಟೆಸ್ಟೋಸ್ಟೆರಾನ್ ಕಡಿಮೆಯಾಗುತ್ತದೆ. ಇದು ಜನನಾಂಗವನ್ನು ಒಣಗಿಸುತ್ತದೆ. ಸಾಕಷ್ಟು ತೇವ ಉತ್ಪತ್ತಿಯಾಗದೆ ಸೆಕ್ಸ್ ಮಾಡಿದರೆ ನೋವು (Pain) ಅನುಭವಿಸಬೇಕಾಗಬಹುದು. ಸೆಕ್ಸ್ ಹಿಂಸೆ ಅನಿಸುತ್ತದೆ. ಇಂಥ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮನ ಬಿಚ್ಚಿ (Speak Openly) ಮಾತನಾಡಬೇಕು. 

ಕಡಿಮೆ ಆವರ್ತನ
ದಿನಾಲೂ ಸೆಕ್ಸ್ ಮಾಡೋ ಬಯಕೆ ಸಹಜವಾಗಿಯೇ ಕಡಿಮೆಯಾಗುತ್ತದೆ. ಅಲ್ಲದೇ ಮದ್ಯ ವಯಸ್ಸಿಗೆ ಮನುಷ್ಯ ಕಚೇರಿ, ಸಂಸಾರ (Family), ಮಕ್ಕಳು ಎನ್ನುವ ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒತ್ತಡ (Stress) ತುಂಬಿದ ಜೀವನ ನಡೆಸುತ್ತಿರುತ್ತಾನೆ. ಲೈಂಗಿಕ ತೃಷೆ ಕಡಿಮೆಯಾಗುತ್ತದೆ. ಒತ್ತಡದಿಂದ ಆರೋಗ್ಯವೂ (Health) ಕೈ ಕೊಡುವಂತಾಗುತ್ತದೆ. ದಿನವಿರಲಿ, ವಾರಕ್ಕೆರಡು, ಮೂರು ಸಾರಿ ಸೆಕ್ಸ್ ಮಾಡುವುದೇ ಆಯಾಸ ಎನಿಸುತ್ತದೆ. 

ಯಾವುದು ಅತಿಯಾದರೂ ಅಪಾಯವೇ, ಸೆಕ್ಸ್ ಸಹ ಇದಕ್ಕೆ ಹೊರತಲ್ಲ

ಸುಲಭ ಪರಾಕಾಷ್ಠೆ
ವಯಸ್ಸಾಗುತ್ತಿದ್ದಂತೆ ಮಹಿಳೆಯರು ತಮಗೇನು ಬೇಕು, ಏನು ಮಾಡಿದರೆ ತೃಪ್ತಿಯಾಗುತ್ತದೆ ಎಂಬುದನ್ನು ಪೂರ್ತಿ ಅರಿತುಕೊಳ್ಳುತ್ತಾರೆ. ಸರಿಯಾದ ಜಾಗದಲ್ಲಿ, ಸರಿಯಾದ ಹೊತ್ತಿನಲ್ಲಿ, ಏನನ್ನು ಹೇಗೆ ಮಾಡಿದರೆ ಸೆಕ್ಸ್‌ನ ಪರಾಕಾಷ್ಠೆ ಮುಟ್ಟಬಹುದು ಎಂಬುವುದೂ ಅರಿವಿಗೆ ಬಂದಿರುತ್ತದೆ. ದೇಹ ಸುಖದ ಬಿಂದುಗಳೂ ಯಾವುದೆಂಬುದು ಗೊತ್ತಾಗಿರುತ್ತದೆ. ಆದ್ದರಿಂದ ಪರಾಕಾಷ್ಠೆ ಪಡೆಯುವುದು ಸುಲಭ. 20ರ ಹರೆಯದಲ್ಲಿ ದೇಹಕ್ಕಿನ್ನು ಇಷ್ಟ ಕಷ್ಟಗಳು ಗೊತ್ತಾಗಿರೋಲ್ಲ. 

ಪ್ರಾಯೋಗಿಕತೆ ಹೆಚ್ಚು 
ಹರೆಯದಲ್ಲಿ ಸಾಮಾನ್ಯವಾಗಿ ಸೆಕ್ಸ್‌ನ ಉತ್ತುಂಗ ತಲುಪುವುದೇ ಮುಖ್ಯ. ಆದರೆ ಮೂವತ್ತರ ಹೊತ್ತಿಗೆ ದೇಹ ಹೆಚ್ಚು ಪರಿಚಯವಾಗಿರುತ್ತದೆ. ಹೊಸ ಹೊಸ ಪ್ರಯೋಗಗಳನ್ನು ಆರಂಭಿಸುವ ಸಾಧ್ಯತೆ ಇರುತ್ತದೆ. 

Follow Us:
Download App:
  • android
  • ios