Asianet Suvarna News Asianet Suvarna News

ಲೈಂಗಿಕ ಸಂಪರ್ಕದಿಂದ ಗೌಪ್ಯ ರೋಗಗಳೂ ಹರಡುತ್ತೆ,ಹುಷಾರ್!

ಸೆಕ್ಸ್ ಜೀವನದ ಒಂದು ಪ್ರಮುಖ ಭಾಗ. ಆದರೆ ಲೈಂಗಿಕ ಸಂಪರ್ಕದಿಂದ ಗೌಪ್ಯ ರೋಗಗಳೂ ಕಾಡುತ್ತ ಅನ್ನೋದು ನಿಮ್ಗೆ ಗೊತ್ತಾ ? ಹಾಗಿದ್ರೆ ಆ ರೋಗಗಳು ಯಾವುವು, ಅವುಗಳನ್ನು ತಡೆಯುವುದು ಹೇಗೆ ಎಂಬ ಬಗ್ಗೆ ತಿಳಿಯೋಣ.

Secret Diseases Will Be Caused By Sexual Contact Vin
Author
Bengaluru, First Published Aug 21, 2022, 2:19 PM IST

-ಡಾ.ಶಿವಮೂರ್ತಿ ಎನ್, ಔಷಧಶಾಸ್ತ್ರಜ್ಞರು

ಅನೇಕ ರೋಗಗಳು ಲೈಂಗಿಕ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಗಂಡನಿಂದ ಹೆಂಡತಿಗೆ ಹಾಗೂ ಹೆಂಡತಿಯಿಂದ
ಗಂಡನಿಗೂ ಹರಡಬಹುದಾಗಿವೆ. ಈ ರೋಗಗಳಿಗೆ ಸೆಕ್ಸುಯಲಿ ಟ್ರಾನ್ಸಮಿಟ್ಟೆಡ್ ಡಿಸೀಸ್ (ಎಸ್.ಟಿ.ಡಿ) ಎಂದು ಕರೆಯಲಾಗುತ್ತದೆ. ಈ
ರೋಗಗಳಿಗೆ ಗೌಪ್ಯ ರೋಗಗಳು, ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳು ಎಂತಲೂ ಕರೆಯಲಾಗುತ್ತದೆ. ಇವತ್ತಿನ ದಿನಗಳಲ್ಲಿ ಹಲವು ಲೈಂಗಿಕ ರೋಗಗಳು ಯುವಕ ಯುವತಿಯರನ್ನು ಕಾಡುತ್ತವೆ. ಬನ್ನಿ ಈ ರೋಗಗಳು ಯಾವುವು, ಅವುಗಳನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ಪಡೆಯೋಣ.

ಯಾವ ರೋಗಗಳು ಲೈಂಗಿಕ ಸಂಪರ್ಕದಿಂದ ಹರಡುವ ಸಾಧ್ಯತೆ ಇದೆ ?
- ಕ್ಲಮೈಡಿಯಾಸಿಸ್
- ಗೊನೊರಿಯಾ,
- ಟ್ರೈಕೊಮೋನಿಯಾಸಿಸ್
- ಜನನಾಂಗ ದ ಪ್ಯಾಪಿಲೋಮ ಸೋಂಕು
- ಜನನಾಂಗದ ಹರ್ಪಿಸ್ ಸೋಂಕು
- ಸಿಫಿಲಿಸ್
- ಎಚ್ ಐ ವಿ / ಏಡ್ಸ್
- ಹೆಪಟೈಟಿಸ್ ಬಿ
- ಇ ಕೋಲೈ
- ಸ್ಕೇಬೀಸ್

ಎಚ್ಚರ..! ಸೆಕ್ಸ್ ಲೈಫ್ ಹಾಳೋ ಮಾಡುತ್ತೆ ಟೋಕೋಫೋಬಿಯಾ

ಲೈಂಗಿಕ ಸಂಭೋಗದಿಂದ ಮಾತ್ರ ಈ ರೋಗಗಳು ಹರಡುತ್ತವೆಯೇ ?
ಯಾವುದೇ ರೀತಿಯ ಲೈಂಗಿಕ ಕ್ರಿಯೆ (Sex)ಯಿಂದಲೂ ಈ ರೋಗಗಳು ಹರಡಬಹುದಾಗಿದೆ. ಅದು ಹೆಣ್ಣು ಮತ್ತು ಗಂಡಿನ ನೈಸರ್ಗಿಕ ಜನನಾಂಗ ಒಳಗೊಂಡ ಲೈಂಗಿಕ ಕ್ರಿಯೆ ಆಗಿರಬಹುದು ಅಥವಾ ವಾಮ ಮಾರ್ಗ ಬಳಸಿ ಆಗುವ ಲೈಂಗಿಕ ಕ್ರಿಯೆ ಆಗಿರಬಹುದು. ಎಲ್ಲಾ ತರಹದ ಲೈಂಗಿಕ ಕ್ರಿಯೆಯಿಂದ ಈ ರೋಗಗಳು (Disease) ಹರಡಬಹುದಾಗಿದೆ. ಸಲಿಂಗ ಕಾಮಿಗಳು ಮಾಡುವ ಓರಲ್ (ಬಾಯಿ), ರೆಕ್ಟಲ್ (ಗುದ), ಹೀಗೆ ಯಾವುದೇ ರೀತಿಯ ಲೈಂಗಿಕ ಕ್ರಿಯೆಯಿಂದಲೂ ಎಸ್. ಟಿ.ಡಿ ಹರಡುವ ಸಾಧ್ಯತೆ ಇದೆ.

ರೋಗಗಳು ಹರಡಲು ಲೈಂಗಿಕ ಸಂಭೋಗದ ಕ್ರಿಯೆಗಳ ಅವಶ್ಯಕತೆ ಇಲ್ಲ. ಸೂಕ್ಷ್ಮ ಜೀವಿಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು
ಅವಕಾಶಕ್ಕಾಗಿ ಕಾಯುತ್ತಿರುತ್ತವೆ. ತಮಗೆ ಸಿಕ್ಕ ಅವಕಾಶವನ್ನು ಬಳಸಿ ತಮ್ಮ ವಂಶಾಭಿವೃದ್ದಿ ಮಾಡಲು ಹಾತೊರೆಯುತ್ತಿರುತ್ತವೆ. ಆಗ
ಲೈಂಗಿಕ ಕ್ರಿಯೆಯ ಮೂಲಕ ಹರಡಲು ಅವಕಾಶ ಸಿಕ್ಕರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಹಸ್ತ ಲಾಘವ, ಸೊಂಕಿರುವ ಜಾಗವನ್ನು ಮುಟ್ಟುವುದು (ಗಾಯಗಳು, ಕಣ್ಣು, ಮೂಗು ಮುಟ್ಟುವುದು), ಸೊಂಕಿರುವ ವಸ್ತುಗಳನ್ನು ತಿನ್ನುವುದು (ಬಾಯಿಯ ಮೂಲಕ ರೋಗಾಣುಗಳು ಪ್ರವೇಶ ಪಡೆಯಬಹುದು), ಬೇರೆಯವರ ಬಟ್ಟೆಗಳನ್ನು ಹಂಚಿಕೊಳ್ಳುವುದು, ಬೇರೆಯವರ ಸೋಪು, ಟವಲ್ ಬಳಸುವುದು, ಬಾಚಿಣಿಗೆ ಹೀಗೆ ಬೇರೆಯವರ ವಸ್ತುಗಳನ್ನು ಬಳಸುವುದು ಮಾಡಿದಾಗ ಒಬ್ಬರಿಂದ ಮತ್ತೊಬ್ಬರಿಗೆ ರೋಗಾಣುಗಳು ಹರಡುತ್ತವೆ.

ಯಾವುದು ಅತಿಯಾದರೂ ಅಪಾಯವೇ, ಸೆಕ್ಸ್ ಸಹ ಇದಕ್ಕೆ ಹೊರತಲ್ಲ

ಎಸ್ ಟಿ ಡಿ ರೋಗಗಳ ಲಕ್ಷಣಗಳು ಯಾವುವು ?
- ಮೂತ್ರ ವಿಸರ್ಜನೆ ಮಾಡುವಾಗ ತೀವ್ರವಾದ ಉರಿಯುವುದು, ಕಷ್ಟ ಎನಿಸುವುದು
- ಖಾಸಗಿ ಭಾಗದಲ್ಲಿ ತುರಿಕೆ ಮತ್ತು ನೋವಾಗುವುದು
- ಬಿಳಿ ಮೂಟ್ಟು ಬರುವುದು
- ಮೂತ್ರ ಮಾಡುವಾಗ ನೋವು ಹೆಚ್ಚಾಗುವುದು
- ಜ್ವರ, ಮೈತುರಿಕೆ, ಗಣ್ಣು/ಕೀಲು ನೋವು , ಮೈಮೇಲೆ ದದ್ದುಗಳು
- ತೋಡೆ ಸಂದಿಯ ದುಗ್ದರಸ ಗಂಥಿಗಳ ಊತ
- ಜನನಾಂಗದ ಗಾಯಗಳು, ಬಿರಿಯುವುದು, ರಕ್ತ ಶ್ರಾವ ಆಗುವುದು
- ಕಿಮಾಲೆ ರೋಗದ ಲಕ್ಷಣಗಳು,ಹಸಿವು ಕಡಿಮೆಯಾಗುವುದು, ದೇಹದ ತೂಕ ಕಡಿಮೆ ಆಗುವುದು, ನಿದ್ದೆ ಕಡಿಮೆ ಮಾಡುವುದು,
ಮಾನಸಿಕ ಅಸ್ತಿರತೆ
- ದೇಹದ ಮೇಲೆಲ್ಲಾ ಗುಳ್ಳೆಗಳು, ಮಚ್ಚೆಗಳು, ಆಲ್ಗಿ ಸೋಂಕಾಗಿರುವುದು
- ಹುಟ್ಟುವ ಮಕ್ಕಳಿಗೆ ಹುಟ್ಟು ದೋಷಗಳು, ಹುಟ್ಟು ಕುರುಡುತನ, ಹೃದಯ ನ್ಯೂನತೆಗಳು, ಮೆದುಳು ಮಂದ ಬೆಳವಣಿಗೆ, ಬೆನ್ನು
ಹುರಿ ನ್ಯೂನತೆಗಳು, ಇತರೆ

ಎಸ್ ಟಿ ಡಿ ರೋಗ ಬರದಂತೆ ಹೇಗೆ ಎಚ್ಚರ ವಹಿಸಬಹುದು?
ಜೀವನದಲ್ಲಿ ಲೈಂಗಿಕ ಶಿಸ್ತನ್ನು ಪಾಲಿಸಬೇಕು. ಹಲವು ಲೈಂಗಿಕ ಸಂಗಾತಿಗಳನ್ನು ಇಟ್ಟು ಕೊಳ್ಳಬಾರದು. ಲೈಂಗಿಕ ಬೇಟೆ ಹೊರಟವರಿಗೆ ಹೆಚ್ಚಾಗಿ ಏಡ್ಸ್ ನಂತಹ ಹೆಮ್ಮಾರಿಗಳು ಅಂಟಿರುವುದು ಸಾಬೀತಾಗಿದೆ. ಅದಲ್ಲದೇ ಅಂತಹವರ ಮಕ್ಕಳಿಗೆ (Children) ಹುಟ್ಟು ದೋಷಗಳು ಇರುವ ಸಾಧ್ಯತೆ ಹೇಚ್ಚಾಗುತ್ತದೆ.ಲೈಂಗಿಕ ಕ್ರಿಯೆಯಲ್ಲಿ ನೈಸರ್ಗಿಕ ಲೈಂಗಿಕ ಅಂಗಾಂಗಗಳನ್ನು ಬಳಸಿ ಮಾಡುವುದು ಒಳ್ಳೆಯದು. ವಾಮಮಾರ್ಗಗಳನ್ನು ಅಂದರೆ,ಬಾಯಿ, ಗುದ, ಸಲಿಂಗ ಹೀಗೆ ಇತರೆ ಅಂಗಗಳನ್ನು ಬಳಸಬಾರದು. ಇದರಿಂದ ಅಂಗಗಳಿಗೆ ಗಾಯಗಳಾಗಿ ಲೈಂಗಿಕ ರೋಗಗಳು ಹರಡಲು ಸಹಾಯ ಮಾಡುತ್ತವೆ.

ಬಾಯ್‌ ಫ್ರೆಂಡಿನ ಮನದಲ್ಲಿ ಸೆಕ್ಸ್‌ ಬಯಕೆಯೊಂದೇ ಇದ್ಯಾ? ತಿಳ್ಕೊಳೋದು ಹೇಗೆ?

ಗರ್ಭಿಣಿಯೊಂದಿಗೆ ಲೈಂಗಿಕ ಕ್ರಿಯೆ ಮಾಡಬಾರದು. ಅಪ್ರಾಪ್ತ ವಯಸ್ಸಿನವರನ್ನು ಲೈಂಗಿಕ ಕ್ರಿಯೆಗೆ ದೂಡಬಾರದು. ಅಂಗಗಳು ಪ್ರೌಢಾವಸ್ಥೆಗೆ ಬಂದಿಲ್ಲದ ಕಾರಣ ಗಾಯಗಳಾಗಿ ಸೋಂಕಿಗೆ ಕಾರಣವಾಗಬಹುದು. ಬಲವಂತವಾಗಿ ಲೈಂಗಿಕ ಕಿರುಕುಳ ಕೊಡಬಾರದು. ಒಪ್ಪಿಗೆ ಇದ್ದು ಪರಸ್ಪರ ಸಂತೋಷವಾಗಿ ಮಾಡುವ ಕ್ರಿಯೆಯಲ್ಲಿ ಹಲವಾರು ಲೋಳೆ ರಸಗಳು ಶ್ರವಿಸುವ ಕಾರಣದಿಂದ ಗಾಯಗಳಾಗುವುದನ್ನು ತಡೆಯುತ್ತದೆ. ಅಪರಿಚಿತರು ಮತ್ತು ಅವಕಾಶವಾದಿಗಳೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು. ಲೈಂಗಿಕ ಕ್ರಿಯೆಯ ಮುನ್ನ ಮತ್ತು ನಂತರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿರೋಧ್ ಬಳಸುವುದರಿಂದ ಅನೇಕ ಲೈಂಗಿಕ ರೋಗಗಳನ್ನು ತಡೆಯಬಹುದು.

ಲೈಂಗಿಕ ರೋಗ ಗಂಡು ಅಥವಾ ಹೆಣ್ಣು ಯಾರಿಗಾದರೂ ಒಬ್ಬರಿಗೆ ಇದ್ದರೆ ಲೈಂಗಿಕ ಉಪವಾಸವನ್ನು ಇಬ್ಬರೂ ಕಾಯ್ದುಕೊಳ್ಳಬೇಕು. ಜೊತೆಗೆ ಇಬ್ಬರೂ ಚಿಕಿತ್ಸೆ ಪಡೆಯಬೇಕು. ಒಬ್ಬರು ಚಿಕಿತ್ಸೆ ಪಡೆದು ಇನ್ನೊಬ್ಬರು ಚಿಕಿತ್ಸೆ ಪಡೆಯದಿದ್ದರೆ ಆಗ ಮತ್ತೆ ಇಬ್ಬರಿಗೂ ರೋಗ ಹರಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ವೈದ್ಯರು ಸಲಹೆ ಮಾಡಿದ್ದನ್ನು ಇಬ್ಬರೂ ಪಾಲಿಸಬೇಕು.

Follow Us:
Download App:
  • android
  • ios