Relationship Tips: ಸಂಗಾತಿ ಎತ್ತರ ಸೆಕ್ಸ್ ಮೇಲೆ ಪರಿಣಾಮ ಬೀರುತ್ತಾ?

ಎತ್ತರದ ವಿಷ್ಯ ಬಂದಾಗ ಮೊದಲು ನೆನಪಾಗೋದು ಜಯಾ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್. ವಿಷ್ಯ ಅವರದ್ದಲ್ಲ. ಈ ಎತ್ತರ ಇಂಟರ್ಕೋರ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದರ ಬಗ್ಗೆ. ಪತಿ ತುಂಬಾ ಹೈಟ್ ಇದ್ದಾನೆ ಏನು ಮಾಡೋದು ಅನ್ನೋರಿಗೆ.
 

How Partner Height Difference Can Affect Their Love Life

ಇಬ್ಬರು ಭಾವನಾತ್ಮಕ (Emotional) ವಾಗಿ ಹತ್ತಿರವಾಗ್ತಿದ್ದಂತೆ ಅವರ ದೈಹಿಕ ಬಯಕೆ ಜಾಗೃತಗೊಳ್ಳುತ್ತದೆ. ಸಂಗಾತಿ ಮಧ್ಯೆ ದೈಹಿಕ ಬಯಕೆ ಉಂಟಾಗುವುದು ಸಾಮಾನ್ಯ ಸಂಗತಿ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ (Physical Relationship) ಬೆಳೆದಾಗ್ಲೇ ದಾಂಪತ್ಯ ಮತ್ತಷ್ಟು ಗಟ್ಟಿಯಾಗಲು ಸಾಧ್ಯ. ಸಂಗಾತಿ ಮಧ್ಯೆ ಸಂಬಂಧ ಬೆಳೆಯುವ ಮೊದಲು ಅನೇಕ ಪ್ರಶ್ನೆ ಕಾಡುತ್ತದೆ. ಅದ್ರಲ್ಲಿ ಹೈಟ್ (Height) ಕೂಡ ಒಂದು. ಸಂಗಾತಿ ಮಧ್ಯೆ ಎತ್ತರದಲ್ಲಿ ವ್ಯತ್ಯಾಸವಿದ್ದರೆ  ಅದು ಅವರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೆ ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ಚುಂಬನದ ವೇಳೆ ಹಾಗೂ ಕೆಲ ಲೈಂಗಿಕ ಭಂಗಿಗೆ (Sexual Position) ಇದ್ರಿಂದ ತೊಂದರೆಯಿದೆ ಎಂದು ಕೆಲವರು ಹೇಳ್ತಾರೆ. ಮತ್ತೆ ಕೆಲವರು ಎತ್ತರದಲ್ಲಿ ಆಗುವ ವ್ಯತ್ಯಾಸ ರೋಮಾಂಚನ (Thrill) ನೀಡುತ್ತದೆ ಎನ್ನುತ್ತಾರೆ. ಲೈಂಗಿಕ ಸಮಯದಲ್ಲಿ ಎತ್ತರದಲ್ಲಿನ ವ್ಯತ್ಯಾಸವು ನಿಜವಾಗಿಯೂ ಮುಖ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ದಂಪತಿ ಮಧ್ಯೆ ಎತ್ತರದ ವ್ಯತ್ಯಾಸ ಹಾಗೂ ಲೈಂಗಿಕ ಸಂಬಂಧ ಬೆಳೆಸಲು ಸಮಸ್ಯೆ ಇದ್ರ ಬಗ್ಗೆ ನಾವಿಂದು ಹೇಳ್ತೇವೆ.

ಸಂಭೋಗಕ್ಕೆ ಎತ್ತರ ಅಡ್ಡಿಯೇ? : 

ಮಿಷನರಿ ಭಂಗಿ (Missionary Pose) : ಎತ್ತರದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೆ ಅದು ಸಾಮಾನ್ಯವಾಗಿ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ.  ಆದರೆ 6 ಅಡಿ 3 ಇಂಚು ಎತ್ತರವಿರುವ ಪುರುಷ  5 ಅಡಿ 1 ಇಂಚು ಎತ್ತರದ ಮಹಿಳೆ ಜೊತೆ ಮಿಷನರಿ ಭಂಗಿಯಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಮುಂದಾದಾಗ ಕೆಲ ಸಮಸ್ಯೆ ಎದುರಾಗುತ್ತದೆ. ಎತ್ತರದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದಾಗ ಇಬ್ಬರಿಗೂ ಇದು ಚಾಲೆಂಜಿಂಗ್ ಆಗಿರುತ್ತದೆ. ಈ ಭಂಗಿಯಲ್ಲಿ ಸಂಗಾತಿ ಮುಖ ನೋಡುವುದು ಕಷ್ಟವಾಗುತ್ತದೆ.

ವೆನಿಲ್ಲಾ ಸೆಕ್ಸ್ (Vanilla Sex ) ನಲ್ಲಿ ನಿರಾಶೆ : ವೆನಿಲ್ಲಾ ಲೈಂಗಿಕತೆಯನ್ನು ಮೃದು ಲೈಂಗಿಕತೆ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ರಫ್ ಸೆಕ್ಸ್ ಗೆ ಅವಕಾಶವಿರುವುದಿಲ್ಲ. ಆದ್ರೆ ಇದ್ರಲ್ಲಿ ಹೊಸ ಪ್ರಯೋಗಕ್ಕೆ ಹಾಗೂ ಹೊಸ ಪ್ರಯತ್ನಕ್ಕೆ ಆದ್ಯತೆಯಿಲ್ಲ ಎಂದಲ್ಲ. ಹೊಸ ಪ್ರಯೋಗವಿದ್ದರೂ ಈ ಭಂಗಿಯಲ್ಲಿ ಇಬ್ಬರು ತಮ್ಮ ಭಾವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಸಾಮಾನ್ಯವಾಗಿ ಸಂಗಾತಿ ಇದ್ರಲ್ಲಿ ತಮ್ಮ ಸಂಗಾತಿ ಕಣ್ಣುಗಳನ್ನು ನೋಡಲು ಇಷ್ಟಪಡ್ತಾರೆ. ಆದ್ರೆ ಎತ್ತರದ ವ್ಯತ್ಯಾಸದಿಂದಾಗಿ ಮುಖ ನೋಡಲು ಸಾಧ್ಯವಾಗದೆ ಹೋಗಬಹುದು. ಇದ್ರಿಂದ ಲೈಂಗಿಕ ಸಂಬಂಧದ ವೇಳೆ ರೋಮ್ಯಾನ್ಸ್ ಕಡಿಮೆಯಾಗ್ಬಹುದು ಎನ್ನುತ್ತಾರೆ ತಜ್ಞರು.

ರಫ್ ಸೆಕ್ಸ್ ಗೆ ಇದು ಬೋನಸ್ : ರಫ್ ಸೆಕ್ಸ್ ಇಷ್ಟಪಡುವವರಿಗೆ, ಎತ್ತರದಲ್ಲಿನ ವ್ಯತ್ಯಾಸವು ಬೋನಸ್ ಆಗುತ್ತದೆ. ಇದ್ರಲ್ಲಿ ಸಂಗಾತಿಗಳಿಬ್ಬರೂ ಸಾಕಷ್ಟು ಎಂಜಾಯ್ ಮಾಡ್ತಾರೆಂದು ತಜ್ಞರು ಹೇಳ್ತಾರೆ.   

ಇದನ್ನೂ ಓದಿ: ವಯಸ್ಸಾಯಿತು ಮೂವತ್ತು, ತರುತ್ತಾ ಸೆಕ್ಸ್ ಲೈಫಿಗೆ ಆಪತ್ತು?

ಎತ್ತರದ ವ್ಯತ್ಯಾಸದಿಂದ ಸಿಗುತ್ತೆ ಸಂತೋಷ : ಕೆಲ ಸೆಕ್ಸ್ ಭಂಗಿಯಲ್ಲಿ ಎತ್ತರದ ವ್ಯತ್ಯಾಸವು ದಂಪತಿ ಸುಖವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಎತ್ತರದ ವ್ಯಕ್ತಿ ಮೇಲೆ ಸಣ್ಣ ಸಂಗಾತಿ ಬಂದಾಗ ಅದು ಮೋಜಿನಿಂದ ಕೂಡಿರುತ್ತದ. ಈ ಭಂಗಿಯನ್ನು ಹೆಚ್ಚಿನ ಮಹಿಳೆಯರು ಪರಾಕಾಷ್ಠೆಯನ್ನು ತಲುಪುತ್ತಾರೆ. ಜೊತೆಗೆ  ಸ್ಪೂನಿಂಗ್ ಅಥವಾ ಸ್ಟ್ಯಾಂಡಿಂಗ್ ಭಂಗಿಯಲ್ಲೂ ಎತ್ತರದ ವ್ಯತ್ಯಾಸ ರೋಮಾಂಚನಕಾರಿಯಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಿಮ್ಮ ಸಂಗಾತಿಯೊಡನೆ ಮೊಬೈಲ್‌ನಲ್ಲಿ ವಾದಿಸುತ್ತೀರಾ? ಈ ಸ್ಟೋರಿ ಓದಿ!

ಹೊಂದಾಣಿಕೆ ಮುಖ್ಯ : ಲೈಂಗಿಕ ಕ್ರಿಯೆಗೆ ಎತ್ತರ ಮಹತ್ವವಾಗುತ್ತದೆ ನಿಜ. ಆದ್ರೆ ಪ್ರೀತಿ ಇದ್ದಾಗ ಎತ್ತರಕ್ಕೆ ಆದ್ಯತೆ ನೀಡಲು ಸಾಧ್ಯವಾಗುವುದಿಲ್ಲ. ಆ ಅಂತರವನ್ನು ತುಂಬಲು ಮತ್ತು ಸಂಭೋಗವನ್ನು ಪೂರ್ಣವಾಗಿ ಆನಂದಿಸಲು ಲೈಂಗಿಕ ಸಮಯದಲ್ಲಿ ಹೊಸ ಭಂಗಿ ಹಾಗೂ ಹೊಸ ಪ್ರಯತ್ನಗಳನ್ನು ಸಂಗಾತಿಗಳು ಮಾಡ್ಬೇಕಾಗುತ್ತದೆ. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲಿ ಮುಖ್ಯವಾಗುತ್ತದೆ. 

Latest Videos
Follow Us:
Download App:
  • android
  • ios