ನಿಮ್ಮ ಸಂಗಾತಿಯೊಡನೆ ಮೊಬೈಲ್‌ನಲ್ಲಿ ವಾದಿಸುತ್ತೀರಾ? ಈ ಸ್ಟೋರಿ ಓದಿ!
ಕೆಲವೊಮ್ಮೆ ಗಂಡ-ಹೆಂಡತಿ ಮನೆಯಲ್ಲಿ ಮಾತನಾಡೋಲ್ಲ. ಆದರೆ, ಫೋನಿನಲ್ಲಿ ಗಂಟೆ ಗಟ್ಟಲೆ ಜಗಳವಾಡುತ್ತಾರೆ.ಸಂಬಂಧವನ್ನು ಸುಧಾರಿಸಬೇಕಾದ ಕೆಲವು ವಿಷಯಗಳು ಬಾಂಧವ್ಯವೇ ಎಕ್ಕಟ್ಟು ಹೋಗುವಂತೆ ಮಾಡುತ್ತದೆ. ಅಷ್ಟಕ್ಕೂ ಫೋನಿನಲ್ಲಿ ಸಂಭಾಷಣೆ ಹೇಗಿರಬೇಕು?
ಈಗಿನ ಜನರೇಶನ್‌ನಲ್ಲಿ(Generation) ಯಾರ ಬಳಿ ಸ್ಮಾರ್ಟ್‌ಫೋನ್ (Smartphone) ಇಲ್ಲ ಹೇಳಿ. ಸೆಲ್ ಫೋನ್(Cell Phone) ಒಂದಿದ್ದರೆ ಸಾಕು ಪ್ರಪಂಚನೇ ಮುಳುಗಿದರೂ ಅದರ ಅರಿವು ಇರುವುದಿಲ್ಲ. ಏಕೆಂದರೆ ಕೆಲವರಿಗೆ ಅವರ ಪ್ರಪಂಚವೇ ಸೆಲ್‌ಫೋನ್ ಆಗಿರುತ್ತದೆ. ಸೆಲ್‌ಫೋನ್ ಇತ್ತೀಚೆಗೆ ಹೊಸ ಟ್ರೆಂಡ್ ಸೃಷ್ಟಿಸಿದೆ. ಕಪಲ್‌ಗಳಲ್ಲಿ ಇತ್ತೀಚೆಗೆ ಫೆಕ್ಸಟಿಂಗ್ ಎಂಬುದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ದಾಂಪತ್ಯದಲ್ಲಿನ ಸಂಭಾಷಣೆಯು ಫೋನ್‌ನ ಮೆಸೇಜ್ (Message) ಮೂಲಕ ನಡೆಯುತ್ತಿದೆ. 2021ರಲ್ಲಿ ಮೀಡಿಯಾ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್ ಸ್ಟೇಟ್ಸ್(Media Marketing Platform States) ಅಧ್ಯಯನ ನಡೆಸಿದೆ. ಈ ಪ್ರಕಾರ ಭಾರತದ ಬಹುತೇಕ ಯುವಕರು (youngers) ಫೋನ್ ಕಾಲ್ ಮಾಡುವುದಕ್ಕಿಂತ ಮೆಸೇಜ್ ಮಾಡುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಈ ಮೆಸೇಜ್ ಬರೆಯುವ ಪ್ರಕ್ರಿಯೆಯು ದೊಡ್ಡ ಅಥವಾ ಸಣ್ಣ ವಿಷಯದ ಸಮಸ್ಯೆಗಳನ್ನೂ ಒಳಗೊಂಡಿದೆ. ಈ ಬಗ್ಗೆ ತಜ್ಷರು ವರದಿಯನ್ನು ನೀಡಿದ್ದಾರೆ.
ಇಬ್ಬರ ನಡುವಿನ ಸಂಭಾಷಣೆಯು(Communication) ಕೇವಲ ಒಂದು ಸೆಲ್ ಫೋನ್‌ನಲ್ಲಿ ಮೆಸೇಜ್ ಮಾಡುವ ಮೂಲಕ ನಡೆಯುವುದಾಗಿದೆ. ಫೋನ್ ಮಾಡುವುದಕ್ಕಿಂತ ಈ ಮೆಸೇಜ್ ಹೆಚ್ಚು ವೇಗವಾಗಿ ತಲುಪುತ್ತದೆ. ಮುಖಾಮುಖಿಯನ್ನು(Face to Face) ತಪ್ಪಿಸಲು ಸಂದೇಶದ ಮೂಲಕ ನೀವು ವಾದಿಸಿದರೆ(Confrontation) ಅದಕ್ಕೆ ಫೆಕ್ಸಟಿಂಗ್ ಎಂದು ಕರೆಯುತ್ತಾರೆ.
ಮದುವೆಯಾದ ನಂತರ ಹೊಸ ಮನೆಯಲ್ಲಿ ಹೇಗಿದ್ರೆ ಲೈಫ್ ಚೆನ್ನಾಗಿರುತ್ತೆ
ಫೆಕ್ಸಟಿಂಗ್ ಎಂದರೇನು?
ಮನೆಯ ಜನರೆದುರು ನಿಮ್ಮ ಸಂಗಾತಿಯೊಡನೆ ಮುಕ್ತವಾಗಿ ವಾದಿಸಲು ಆಗದಿರುವ ಸಂದರ್ಭದಲ್ಲಿ ಸೆಲ್‌ಫೋನ್ ಮೂಲಕ ಮೆಸೇಜ್ ಮಾಡಿ ವಾದಿಸಿದರೆ(Confrontation) ಅದಕ್ಕೆ ಫೆಕ್ಸಟಿಂಗ್(Fexting) ಎಂದು ಕರೆಯುತ್ತಾರೆ. ಅಂದರೆ ಮೆಸೇಜ್ ಮೂಲಕ ಜಗಳವಾಡುವುದು ಅಥವಾ ವಾದಿಸುವುದು ಎಂದು ಅರ್ಥ ಎಂದು ಯುಎಸ್(US)ನ ಜಿಲ್ ಬಿಡನ್(Jill Bidden) ಎಂಬ ಯುವತಿ ಹೇಳಿದ್ದಾಳೆ. ಆಕೆ ತನ್ನ ಗಂಡನ ಬಳಿ ಮುಕ್ತವಾಗಿ ವಾದಿಸಲಾಗದೇ ಇದ್ದ ಸಂದರ್ಭದಲ್ಲಿ ಮೆಸೇಜ್ ಮೂಲಕ ಜಗಳವಾಡುತ್ತಾಳಂತೆ.
ತಪ್ಪಾಗಿ ಅರ್ಥೈಸಬಹುದು
ಮೆಸೇಜ್ ಮೂಲಕ ನಿಮ್ಮ ಆತ್ಮೀಯರಿಗೆ ಹಾಯ್ ಹೇಳುತ್ತಿದ್ದೀರಿ ಎಂದಾದರೆ ಅದು ಹೇಗೆ ಅವರಿಗೆ ಕನ್ವೇ(Convey) ಆಗುತ್ತದೆ ಎಂಬುದು ಬಹಳ ಮುಖ್ಯ. ಏಕೆಂದರೆ ಮಸೇಜ್ ಕಳುಹಿಸುವಾಗ ನಿಮ್ಮ ಭಾವನೆ(Emootions) ಹಾಗೂ ಅದೇ ಮೆಸೇಜ್ ಅನ್ನು ನಿಮ್ಮ ಆತ್ಮೀಯರು ಓದಿದಾಗ ಅವರ ಭಾವನೆ ಕೆಲವೊಮ್ಮೆ ಭಿನ್ನವಾಗಿರಬಹುದು. ಗುಡ್ ಮಾರ್ನಿಂಗ್(Good Morning) ಎಂದು ಒಳ್ಳೆಯ ಭಾವನೆಯಿಂದ ನೀವು ಕಳುಹಿಸಿರುತ್ತೀರಿ. ನಿಮ್ಮ ಆತ್ಮೀಯರು ಓದುವಾಗ ಯಾವುದೋ ಮೂಡ್‌ನಲ್ಲಿ(Mood) ಕೋಪಗೊಂಡAತೆ(Angry) ಅದನ್ನು ಗ್ರಹಿಸಬಹುದು. ಆಗ ವಾದ ಮುಂದುವರೆಯುವುದನ್ನು ಬಿಡುವುದು ಒಳ್ಳೆಯದು. ಮೆಸೇಜ್‌ಗಾಗಿ ಕಾಯುವ ಮತ್ತು ಅದರ ಧ್ವನಿಯನ್ನು ನಿರ್ಣಯಿಸುವುದಕ್ಕಿಂತ ವೈಯಕ್ತಿಕವಾಗಿ ಸಂಭಾಷಣೆ ಮಾಡುವುದು ಉತ್ತಮ. ಏಕೆಂದರೆ ಒಂದು ಮೆಸೇಜ್ ಮೂಲಕ ನೀವು ಏನನ್ನು ತಿಳಿಸಲು ಬಯಸುತ್ತಿದ್ದೀರಿ ಎಂಬುದರ ಭಾವನಾತ್ಮಕ ಸಾರವನ್ನು ಕಳೆದುಕೊಳ್ಳುತ್ತೀರಿ.
ಇನ್ನು ಕೆಲವರು ಎದುರು ದುರ್ಬಲ ಭಾವನೆಗಳಿದ್ದರೂ ಬಹಳ ಮುಳುಗಿರುತ್ತಾರೆ. ಅಂತಹವರು ತಮ್ಮ ವೈಯಕ್ತಿಕ ಶಾಂತತೆಯನ್ನು(Calmness) ಕಳೆದುಕೊಳ್ಳಬಹುದು ಅಥವಾ ಅದರಿಂದ ಚಿಂತೆಗೆ ಒಳಗಾಗಬಹುದು. ಮತ್ತೆ ಕೆಲವರು ವಾದಿಸುತ್ತಲೇ ಅಳುವುದಕ್ಕೆ(Crying) ಆರಂಭಿಸುತ್ತಾರೆ. ಇದು ಬಹಳ ವ್ಯಕ್ತಿನಿಷ್ಠ ವಿಷಯವಾಗಿದೆ. ಯಾರಾದರೂ ಜಗಳವಾಡಿದರೆ ನಡುಕ ಮೂಡುತ್ತದೆ ಇದರಿಂದ ಅಳುವೂ ಹೆಚ್ಚುತ್ತದೆ. ಎಷ್ಟೆಂದರೆ ಸಿರಿಯಲ್ ಹಾಗೂ ಸಿನಿಮಾಗಳಲ್ಲಿನ ವಾದದ ಬಿಸಿಯೂ ಸಹ ಸಹಿಸಲು ಸಾಧ್ಯವಾಗುವುದಿಲ್ಲ.
ಮಾತೇ ಆಡೋಲ್ವಾ ವೈಫು, ಹೀಗ್ ಮಾಡಿದ್ರೆ ಕಮ್ಯೂನಿಕೇಷನ್ ಸೇಫ್
ಸೈಕಾಲಜಿಸ್ಟ್ ಏನು ಹೇಳುತ್ತಾರೆ?
ದಾಂಪತ್ಯದಲ್ಲಿರಲಿ ಅಥವಾ ಆತ್ಮೀಯರ ನಡುವಿನ ಸಂಭಾಷಣೆ (Communication) ಎಂಬುದು ಕೇವಲ ಅಕ್ಷರಕ್ಕಷ್ಟೇ ಸೀಮಿತವಲ್ಲ. ಮೆಸೇಜ್‌ನಲ್ಲಿ ಕೇವಲ ಅಕ್ಷರಗಳಲ್ಲಿರುತ್ತವೆ. ಆದರೆ ಎದುರು ಬದಿರು ಮಾತನಾಡಿದಾಗ, ವಾದಿಸಿದಾಗ, ಜಗಳವಾಡಿದಾಗ ನಮ್ಮ ದೃಷ್ಟಿ(Eye contact), ಮಾತಿನ ನಡತೆ (Talking Style), ಶೈಲಿ, ಟೋನ್ (Tone), ಹಾಗೂ ಬಾಡಿ ಲಾಂಗ್ವೇಜ್(Body Language) ಎಲ್ಲವೂ ಗಣನೆಗೆ ಬರುತ್ತದೆ. ಇದೆಲ್ಲಾ ಮೆಸೇಜ್‌ನಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಕೆಲವೊಮ್ಮೆ ಮೆಸೇಜ್‌ನಲ್ಲಿ ಗ್ರಹಿಕೆಗಳು, ಟೋನ್‌ಗಳು ಮಿಸ್‌ಲೀಡ್ (Miss Lead) ಆಗಬಹುದು.
ಒಂದು ಸಂಬAಧದಲ್ಲಿ ಒಬ್ಬ ವ್ಯಕ್ತಿಗೆ ನೇರವಾಗಿ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಲು ಇಷ್ಟವಿರುತ್ತದೆ. ಆದರೆ ಎದುರಿಗಿರುವ ವ್ಯಕ್ತಿ ಮೆಸೇಜ್ ಮೂಲಕ ಪರಿಹಾರ ಕಂಡುಕೊಳ್ಳಲು ಜಾರಿಕೊಳ್ಳಲು ಪ್ರಯತ್ನಿಸುತ್ತಾನೆ. ಹಾಗಾಗಿ ನಿಮ್ಮ ಪ್ರಚೋದಕ ಅಂಶಗಳನ್ನು ಅರಿತುಕೊಳ್ಳುವುದು ಮತ್ತು ನಂತರ ಆತ್ಮಾವಲೋಕನ ಮಾಡುವುದು ಆರೋಗ್ಯಕರ ಮಾರ್ಗವಾಗಿದೆ. ಮೊದಲು ನಿಮ್ಮೊಂದಿಗೆ ವ್ಯವಹರಿಸಿ ಮತ್ತು ನಂತರ ಸಂವಹನ ನಡೆಸುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.