Child Care: ಮನೇಲಿದ್ರೆ ಮೊಬೈಲ್ ಬಿಡೋಲ್ಲ ಅಂತ ಬೋರ್ಡಿಂಗ್ ಸ್ಕೂಲಿಗೆ ಸೇರಿಸ್ತೀರಾ?
ಮನೆಯಲ್ಲಿ ಮಕ್ಕಳು ಮಾತು ಕೇಳ್ತಿಲ್ಲ, ಸರಿಯಾಗಿ ಓದುತ್ತಿಲ್ಲ, ಮಕ್ಕಳಿಗೆ ಶಿಸ್ತಿಲ್ಲ ಎಂದಾಗ ಪಾಲಕರ ತಲೆಯಲ್ಲಿ ಬರೋದು ಬೋರ್ಡಿಂಗ್ ಸ್ಕೂಲ್ (Boarding School). ಅಲ್ಲಿ ಕಲಿಕೆ ಚೆನ್ನಾಗಿರುತ್ತೆ ಎಂಬ ನಂಬಿಕೆಯಲ್ಲಿ ಮಕ್ಕಳನ್ನು ಅಲ್ಲಿಗೆ ಸೇರಿಸ್ತಾರೆ. ಆದ್ರೆ ಅದು ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನೂ ಆಲೋಚಿಸೋದೆ ಇಲ್ಲ.
ತಂದೆ – ತಾಯಿ (Parents) ಮಕ್ಕಳಿಗೆ ಕೆಟ್ಟದ್ದು ಬಯಸಲು ಸಾಧ್ಯವೇ ಇಲ್ಲ. ಸದಾ ಮಕ್ಕಳ ಒಳಿತಿಗಾಗಿ ಅವರು ಶ್ರಮಿಸ್ತಾರೆ. ತಮ್ಮ ಹೊಟ್ಟೆ ಕಟ್ಟಿ ಮಕ್ಕಳಿಗೆ ಅನ್ನ – ಬಟ್ಟೆ ಜೊತೆ ಶಿಕ್ಷಣ (Education) ನೀಡಲು ಎಲ್ಲ ಪಾಲಕರು ಪಣತೊಟ್ಟಿರುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂಬುದು ಬಹುತೇಕ ಪಾಲಕರ ಆಸೆ. ಶಿಕ್ಷಣದ ಜೊತೆ ಜೀವನದ ಮೌಲ್ಯಗಳು, ಶಿಸ್ತನ್ನು ಮಕ್ಕಳು ತಮ್ಮ ಬದುಕಿನಲ್ಲಿ ರೂಢಿಸಿಕೊಂಡ್ರೆ ಅವರ ಜೀವನ ಮತ್ತಷ್ಟು ಹಸನಾಗುತ್ತದೆ ಎಂಬುದು ಕೆಲ ಪಾಲಕರ ನಂಬಿಕೆ. ಇದೇ ಕಾರಣಕ್ಕೆ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿನ (Boarding School) ಗೆ ಹಾಕಲು ಬಯಸ್ತಾರೆ. ಬೋರ್ಡಿಂಗ್ ಸ್ಕೂಲಿನಲ್ಲಿ ಕಲಿತು ಸಾಧನೆ ಮಾಡಿದ ಮಕ್ಕಳನ್ನು ಉದಾಹರಣೆಯಾಗಿ ತೆಗೆದುಕೊಂಡು ತಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸುವ ತೀರ್ಮಾನ ಮಾಡ್ತಾರೆ. ಮಕ್ಕಳಿಂದ ದೂರವಿರುವುದು ಪಾಲಕರಿಗೆ ಸುಲಭವೇನಲ್ಲ. ಆದ್ರೆ ಮಕ್ಕಳ ಸಾಧನೆಗೆ ತಮ್ಮ ಪ್ರೀತಿ ಅಡ್ಡಿಯಾಗ್ಬಾರದು ಎಂಬ ಕಾರಣಕ್ಕೆ ಅವರು ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿಗೆ ಕಳಿಸ್ತಾರೆ. ಆದ್ರೆ ಎಲ್ಲ ಮಕ್ಕಳಿಗೂ ಬೋರ್ಡಿಂಗ್ ಸ್ಕೂಲ್ ಪ್ರಿಯವಲ್ಲ. ಇತ್ತೀಚಿನ ದಿನಗಳಲ್ಲಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಸಮಸ್ಯೆಯೊಂದು ಕಾಡ್ತಿದೆ. ಮಕ್ಕಳು ಅದನ್ನು ಜೈಲಿ (Jail) ನಂತೆ ಭಾವಿಸ್ತಿದ್ದಾರೆ. ಇತ್ತೀಚೆಗೆ ಬೋರ್ಡಿಂಗ್ ಸ್ಕೂಲ್ ಸಿಂಡ್ರೋಮ ಬಗ್ಗೆ ಚರ್ಚೆಯಾಗ್ತಿದೆ. ಬೋರ್ಡಿಂಗ್ ಸ್ಕೂಲ್ ಸಿಂಡ್ರೋಮ್ (Boarding School Syndrome) ಎಂದರೇನು ಮತ್ತು ಅದು ಮಗುವಿಗೆ ಹೇಗೆ ಹಾನಿ ಮಾಡುತ್ತದೆ ಎಂದು ನಾವು ಹೇಳ್ತೇವೆ.
ಬೋರ್ಡಿಂಗ್ ಸ್ಕೂಲ್ ಸಿಂಡ್ರೋಮ್ಎಂದರೇನು ? : ಬೋರ್ಡಿಂಗ್ ಸ್ಕೂಲ್ ಸಿಂಡ್ರೋಮ ಎಂಬ ಪದವನ್ನು ಮೊದಲು ಬಳಸಿದ್ದು ಮನೋವಿಶ್ಲೇಷಕ ಮತ್ತು ಮಾನಸಿಕ ಚಿಕಿತ್ಸಕ ಪ್ರೊಫೆಸರ್ ಜಾಯ್ ಸ್ಕಾವೆರಿಯನ್. ಆದ್ರೆ ಇದ್ರ ವೈದ್ಯಕೀಯ ಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆತಂಕ, ಮಾತನಾಡಲು ತೊಂದರೆ ಹಾಗೂ ಭಾವನಾತ್ಮಕ ಸಂಪರ್ಕದ ಕೊರತೆಯನ್ನು ಇದ್ರ ಲಕ್ಷಣಗಳಲ್ಲಿ ಸೇರಿಸಬಹುದು.
PARENT LOVE : 17ನೇ ವರ್ಷಕ್ಕೇ ಲವ್ವಲ್ಲಿ ಬಿದ್ದ ಬಾಲೆ, ಏನ್ಮಾಡ್ಲಿ ಅಂತ ತಲೆ ಬಿಸಿಯಂತೆ!
ಅಧ್ಯಯನದಲ್ಲಿ ಬಹಿರಂಗವಾಯ್ತು ಆಘಾತಕಾರಿ ಸಂಗತಿ : ಒಂದು ಅಧ್ಯಯನದ ಪ್ರಕಾರ, ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸುವುದು ಆಘಾತಕಾರಿಯಾಗಿದೆ. ಇದು ಚಿಕ್ಕ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹೊಡೆತ ನೀಡುತ್ತದೆ. ಹೆತ್ತವರು, ಒಡಹುಟ್ಟಿದವರು, ಮನೆ ಮತ್ತು ಆಟಿಕೆಗಳಿಂದ ದೂರವಿರುವುದು ಮಕ್ಕಳಿಗೆ ಸುಲಭವಲ್ಲ. ಅವರು ದುಃಖಿತರಾಗ್ತಾರೆ. ಬೋರ್ಡಿಂಗ್ ಸ್ಕೂಲಿನಲ್ಲಿ ಮಗುವಿಗೆ ಮನೆಯ ಪ್ರೀತಿ ಮತ್ತು ಕಾಳಜಿ ಸಿಗೋದಿಲ್ಲ. ಇದ್ರಿಂದ ಮಕ್ಕಳ ನೋವು ದುಪ್ಪಟ್ಟಾಗುತ್ತದೆ.
ಬೋರ್ಡಿಂಗ್ ಸ್ಕೂಲ್ ಮನೆಯಲ್ಲ : ಬೋರ್ಡಿಂಗ್ ಸ್ಕೂಲ್ ಮನೆಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇಲ್ಲಿ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೂ ಮನೆಯವರ ಪ್ರೀತಿ ಸಿಗುತ್ತಿಲ್ಲ.
ಹೊಂದಿಕೊಳ್ಳೋದು ಸುಲಭವಲ್ಲ. : ಬೋರ್ಡಿಂಗ್ ಸ್ಕೂಲ್ ನಲ್ಲಿ ಬೇರೆ ಬೇರೆ ಸ್ವಭಾವದ, ಜನಾಂಗದ, ಧರ್ಮದ ಮಕ್ಕಳಿರ್ತಾರೆ. ಪ್ರತಿಯೊಬ್ಬರ ನಡವಳಿಕೆ, ಸಂಸ್ಕೃತಿ ಭಿನ್ನವಾಗಿರುತ್ತದೆ. ಅವರ ಜೊತೆ ಮಕ್ಕಳು ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಸಾಮಾಜಿಕವಾಗಿ ಎಲ್ಲರ ಜೊತೆ ಬೆರೆಯುವ ಹಾಗೂ ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮಕ್ಕಳಾದ್ರೆ ಬೇಗ ಈ ಪರಿಸರಕ್ಕೆ ಹೊಂದಿಕೊಳ್ತಾರೆ. ಆದ್ರೆ ಸದಾ ಮನೆಯಲ್ಲಿ, ಪಾಲಕರ ಜೊತೆ ಬೆಳೆದ ಮಕ್ಕಳಿಗೆ ಬೋರ್ಡಿಂಗ್ ಸ್ಕೂಲ್ ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ.
Parenting Tips : ವರ್ಷ ನಾಲ್ಕಾದ್ರೂ ಮಗು ಬೆರಳು ಚೀಪ್ತಿದ್ಯಾ? ಇಲ್ಲಿದೆ ಟಿಪ್ಸ್
ಬೋರ್ಡಿಂಗ್ ಸ್ಕೂಲ್ ಒಂದು ಜೈಲಿದ್ದಂತೆ : ಬೋರ್ಡಿಂಗ್ ಸ್ಕೂಲ್ ತುಂಬಾ ಸುರಕ್ಷಿತವಾಗಿರುತ್ತದೆ. ಆದ್ರೆ ಅಲ್ಲಿನ ಶಿಸ್ತು ಮಕ್ಕಳಿಗೆ ಉಸಿರುಗಟ್ಟಿಸುತ್ತದೆ. ಜೈಲಿನ ಅನುಭವ ಮಕ್ಕಳಿಗಾಗುತ್ತದೆ. ನೋವಿನ ಸಂದರ್ಭದಲ್ಲಿ ಮನೆಯಲ್ಲಾದ್ರೆ ಪಾಲಕರು, ಸಂಬಂಧಿಕರಿರುತ್ತಾರೆ. ಆದ್ರೆ ಅಲ್ಲಿ ಯಾರೂ ಆಪ್ತರಿರುವುದಿಲ್ಲ. ಶಿಸ್ತು ಪಾಲಿಸದೆ ಹೋದ್ರೆ ಶಿಕ್ಷೆ ನೀಡ್ತಾರೆಂಬ ಭಯವಿರುತ್ತದೆ. ಈ ಭಯ ಅವರನ್ನು ಮತ್ತಷ್ಟು ಆತಂಕ, ಖಿನ್ನತೆಗೆ ತಳ್ಳುತ್ತದೆ.