ಡೇಟಿಂಗ್ ಮಾಡಿ ಮುಂಚಿನಂತೆ ಹೆಣ್ಮಕ್ಕಳನ್ನು ದಾರಿ ತಪ್ಪಿಸೋದು ಅಷ್ಟು ಸುಲಭ ಅಂದು ಕೊಳ್ಳಬೇಡಿ ಈಗ!
ಜೆನ್ ಝೆಡ್ ಜನರು ಸದಾ ಸುದ್ದಿಯಲ್ಲಿರ್ತಾರೆ. ಅವರ ಆಲೋಚನೆ, ಅವರ ಜೀವನ ವಿಧಾನದಲ್ಲಿ ಅನೇಕ ಬದಲಾವಣೆಯನ್ನು ನಾವು ಕಾಣ್ಬಹುದು. ಜೆನ್ ಝೆಡ್ ಮಹಿಳೆಯರು ಕೂಡ ಹಿಂದೆ ಬಿದ್ದಿಲ್ಲ. ಅವರ ಸಂಗಾತಿ ಆಯ್ಕೆ ಭಿನ್ನವಾಗಿದೆ.
ಭಾರತದಲ್ಲಿ ಮದುವೆ, ಸಂಬಂಧ, ಡೇಟಿಂಗ್ ವಿಷ್ಯದಲ್ಲಿ ಅನೇಕ ಕ್ರಾಂತಿಯಾಗಿರೋದನ್ನು ನೀವು ನೋಡಬಹುದು. ಡೇಟಿಂಗ್ ಅಪ್ಲಿಕೇಷನ್ ಗಳ ಸಂಖ್ಯೆ ಇದೇ ಕಾರಣಕ್ಕೆ ನಿರಂತರವಾಗಿ ಏರಿಕೆ ಆಗ್ತಿದೆ. ಜೆನ್ ಝೆಡ್ ಎಂದು ಕರೆಯಲ್ಪಡುವ ಮಹಿಳೆಯರು ಈ ಬದಲಾವಣೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದ್ರೆ ತಪ್ಪಾಗಲಾರದು. ಹೆಚ್ಚಿನ ತಂತ್ರಜ್ಞಾನ ಬಳಕೆ ಹಾಗೂ ಬದಲಾಗುತ್ತಿರುವ ಸಾಮಾಜಿಕ ಮಾನದಂಡದ ಜೊತೆಗೆ ಅವರು ಡಿಜಿಟಲ್ ಡೇಟಿಂಗ್ ಅಪ್ಲಿಕೇಷನ್ ಬಳಕೆಯನ್ನು ಹೆಚ್ಚಿಸಿಕೊಳ್ತಿದ್ದಾರೆ. ಇದೆ ಜೊತೆಗೆ ಸಂಬಂಧದಲ್ಲಿ ಸಮಾನತೆ ಬಯಸುತ್ತಿದ್ದಾರೆ.
ಜೆನ್ ಝೆಡ್ (GenZ) ಮಹಿಳೆಯರು ಮುಕ್ತ ಸಂವಹನ, ಒಪ್ಪಿಗೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಆದ್ಯತೆ ನೀಡುತ್ತಿದ್ದಾರೆ. ಅವರು ತಮ್ಮ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಹಂಚಿಕೊಳ್ಳುವ ಪಾಲುದಾರರನ್ನು ಹುಡುಕುತ್ತಿದ್ದಾರೆ. ಇದ್ರ ಜೊತೆಗೆ ಸಾಂಪ್ರದಾಯಿಕ ನಿರೀಕ್ಷೆಗಳಿಗೆ ಸವಾಲು ಹಾಕುತ್ತಿದ್ದಾರೆ. ಜೆನ್ ಝೆಡ್ ಮಹಿಳೆಯರು ಧೈರ್ಯದಿಂದ ತಮ್ಮ ಆಸೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದುವ ಆಯ್ಕೆಗೆ ಆದ್ಯತೆ ನೀಡುವ ಮೂಲಕ ಡೇಟಿಂಗ್ ಅನ್ನು ಮರು ವ್ಯಾಖ್ಯಾನಿಸುತ್ತಿದ್ದಾರೆ. ಡೇಟಿಂಗ್ (Dating) ಅಪ್ಲಿಕೇಷನ್ ಬಂಬಲ್ ಇದ್ರ ಬಗ್ಗೆ ಸಂಶೋಧನೆ ನಡೆಸಿದೆ. ಅದ್ರಲ್ಲಿ ಜೆನ್ ಝೆಡ್ ಮಹಿಳೆಯರು ತಮ್ಮ ಆಯ್ಕೆ ಮೂಲಕ ಹೇಗೆ ಡೇಟಿಂಗ್ ಮರು ವ್ಯಾಖ್ಯಾನಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದೆ.
ದಯಾಗುಣ : ಈಗಿನ ಕಾಲದಲ್ಲಿ ಒಳ್ಳೆಯವರನ್ನು ಹುಡುಕಬೇಕಾದ ಸ್ಥಿತಿ ಇದೆ. ಒಳ್ಳೆಯವರಾಗಿರುವುದು ಅಂದ್ರೆ ಇತರರ ಜೊತೆ ಸಭ್ಯವಾಗಿ ನಡೆದುಕೊಳ್ಳುವುದು ಸೇರುತ್ತದೆ. ಬೇರೆಯವರ ದುರ್ಬಲತೆಯನ್ನು ಗೌರವಿಸುವು, ಇತರರಿಗೆ ಸಹಾನುಭೂತಿ ತೋರಿಸುವ ಗುಣ ಕೂಡ ಇದರಲ್ಲಿ ಸೇರುತ್ತದೆ. ವ್ಯಕ್ತಿಯ ಈ ದಯಾಗುಣ ಎಲ್ಲರನ್ನು ಆಕರ್ಷಿಸೋದು ಸುಳ್ಳಲ್ಲ. ಜೆನ್ ಝೆಡ್ ಮಹಿಳೆಯರು ಕೂಡ ತಮ್ಮ ಪಾಲುದಾರರಲ್ಲಿ ಈ ದಯಾಗುಣವನ್ನು ಬಯಸುತ್ತಿದ್ದಾರೆ. ಶೇಕಡಾ 53 ಮಹಿಳೆಯರು ದೈಹಿಕ ಗುಣಲಕ್ಷಣಕ್ಕಿಂತ ದಯೆಯನ್ನು ಹೆಚ್ಚು ಗೌರವಿಸೋದಾಗಿ ಹೇಳಿದ್ದಾರೆ. ಡೇಟಿಂಗ್ ಸಂದರ್ಭದಲ್ಲಿ ಜೆನ್ ಝೆಡ್ ಮಹಿಳೆಯರು ದಯೆ ಮತ್ತು ಸಹಾನುಭೂತಿಗೆ ಹೆಚ್ಚು ಆದ್ಯತೆ ನೀಡ್ತಾರೆ.
ಕಿತ್ತಳೆ ಸಿಪ್ಪೆಗೂ, ಲವ್ವಿಗೂ ಆಮೇಲಿನ ಕ್ರಿಯೆಗೂ ಸಂಬಂಧ ಇದೆಯಾ?
ಅವರಿಗೆ ಏನು ಬೇಕು ಎಂಬುದು ಗೊತ್ತು : ಜೆನ್ ಝೆಡ್ ಮಹಿಳೆಯರಿಗೆ ತಮಗೆ ಏನು ಬೇಕು ಎಂಬ ಬಗ್ಗೆ ಸ್ಪಷ್ಟ ಅರಿವಿದೆ. ಅವರು ಡೇಟಿಂಗ್ ಹೆಸರಿನಲ್ಲಿ ಆಟವಾಡಲು ಬಯಸೋದಿಲ್ಲ. ಶೇಕಡಾ 58 ಮಹಿಳೆಯರು ತಮ್ಮ ಸಂಬಂಧ ಮತ್ತು ಉದ್ದೇಶದಲ್ಲಿ ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿರಲು ಆದ್ಯತೆ ನೀಡುತ್ತಾರೆ. ಶೇಕಡಾ 39ರಷ್ಟು ಮಹಿಳೆಯರು ಭಾವನಾತ್ಮಕ ಅಲಭ್ಯತೆ ಅಥವಾ ಸಾಮರಸ್ಯವಿಲ್ಲದ ಜೀವನವನ್ನು ರೆಡ್ ಫ್ಲಾಗ್ ಎಂದು ಘೋಷಿಸುತ್ತಾರೆ.
ಪ್ರೀತಿಗಿದೆ (Love) ವಿಭಿನ್ನ ಆಕಾರ ಮತ್ತು ಗಾತ್ರ : ದೈಹಿಕ ಆಕಾರ, ಎತ್ತರ ಬಣ್ಣ ಮತ್ತು ಸುಂದರತೆಗೆ ಜೆನ್ ಝೆಡ್ ಮಹಿಳೆಯರು ಹೆಚ್ಚು ಮಹತ್ವ ನೀಡೋದಿಲ್ಲ. ಭೌತಿಕ ಆಕಾರದ ಆಲೋಚನೆ ಅತ್ಯಂತ ಸಣ್ಣದು ಎಂದು ಅವರು ಭಾವಿಸುತ್ತಾರೆ. ಶೇಕಡಾ 41 ರಷ್ಟು ಜೆನ್ ಝೆಡ್ ಮಹಿಳೆಯರು ಪ್ರೀತಿಯು ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತದೆ ಎಂದು ನಂಬುತ್ತಾರೆ.
ದೃಢ ನಿರ್ಧಾರ (Firm Decision) : ಹಿಂದೆ ಮಹಿಳೆಯರು ತಮ್ಮದೇ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಿದ್ದರು. ರಾಜಿಗೆ ಮುಂದಾಗುತ್ತಿದ್ದರು. ಆದ್ರೆ ಜೆನ್ ಝೆಡ್ ಮಹಿಳೆಯರು ವಿಷಕಾರಿ ನಡವಳಿಕೆಯನ್ನು ಸಹಿಸಿಕೊಳ್ಳುವುದಿಲ್ಲ. ಶೇಕಡಾ 46ರಷ್ಟು ಮಹಿಳೆಯರು ಇದನ್ನು ವಿರೋಧಿಸುವ ಸಂಕಲ್ಪ ಹೊಂದಿದ್ದಾರೆ.
ವಿಚ್ಛೇದನವಾಗಿ ಐದು ವರ್ಷವಾದ್ಮೇಲೆ ಮತ್ತವಳನ್ನೇ ಮದುವೆಯಾದ!
ಗಾರ್ಡ್ರೈಲಿಂಗ್ ಬಂಬಲ್‌ನ ಡೇಟಿಂಗ್ ಟ್ರೆಂಡ್ : ಮಹಿಳೆಯರು ಗಡಿಗಳನ್ನು ಹೊಂದಿಸುವುದನ್ನು ಗಾರ್ಡ್ರೈಲಿಂಗ್ ಸೂಚಿಸುತ್ತದೆ. ಅರ್ಧಕ್ಕಿಂತ ಹೆಚ್ಚು ಜೆನ್ ಝೆಡ್ ಮಹಿಳೆಯರು ಭಾವನಾತ್ಮಕ ಮತ್ತು ದೈಹಿಕ ಗಡಿ ಹೊಂದಿಸಲು ಆದ್ಯತೆ ನೀಡ್ತಾರೆ. ಇದನ್ನು ಡೇಟಿಂಗ್‌ನ ಹಸಿರು ಸಂಕೇತವೆಂದು ಅವರು ನಂಬುತ್ತಾರೆ.