ಕಿತ್ತಳೆ ಸಿಪ್ಪೆಗೂ, ಲವ್ವಿಗೂ ಆಮೇಲಿನ ಕ್ರಿಯೆಗೂ ಸಂಬಂಧ ಇದೆಯಾ?

ಆರೆಂಜ್ ಸಿಪ್ಪೆಗೂ ಪ್ರೇಮ, ಕಾಮಗಳಿಗೆ ಸಂಬಂಧ ಇದೆಯಾ? ಇದೆ ಅಂತೆ. ಅದು ಹೇಗೆ ಅನ್ನೋದನ್ನು ತಿಳಿಯಲು ಈ ಸ್ಟೋರಿ ನೋಡಿ

 

what is the relationship between love sex and orange peel know about intimate health bni

ಅವಳು ನನ್ನ ನಿಜಕ್ಕೂ ಲವ್ (love) ಮಾಡ್ತಾಳ? ಅವ್ನದ್ದು ತೋರಿಕೆಯ ಪ್ರೀತಿಯಾ? ಸೆಕ್ಸ್‌ಗೋಸ್ಕರ್ (sex) ಆತ ನನ್ನ ಹಿಂದೆ ಬಿದ್ದಿಲ್ಲ ತಾನೇ? ಪ್ರೇಮದಲ್ಲಿ ಬಿದ್ದೋರಿಗೆ ಕ್ಷಣ ಕ್ಷಣಕ್ಕೂ ಇಂಥದ್ದೊಂದು ಪ್ರಶ್ನೆ ಮನಸ್ಸನ್ನ ರಾಡಿ ಎಬ್ಬಿಸುತ್ತಲೇ ಇರುತ್ತದೆ. ಆದರೆ ಪ್ರತಿಯೊಬ್ಬರೂ ಪ್ರೇಮಕ್ಕಾಗಿ ಹಾತೊರೆಯುವವರೇ. ನಮ್ಮ ಜೊತೆಯಲ್ಲಿ ಇರುವ ಸಂಗಾತಿ, ಪ್ರೇಮಿ ನಮ್ಮ ಬಗ್ಗೆ ಕಾಳಜಿ (relation) ತೋರಿದರೆ, ಪ್ರೀತಿ ಮಾಡಿದರೆ ಅದರ ಮುಂದೆ ಜಗತ್ತಿನ ಬೇರೆಲ್ಲ ಸಂಗತಿಗಳು ಗೌಣ ಎಂದು ಎನಿಸೋದು ಸಹಜ. ಆದರೆ ನಮ್ಮ ಪ್ರೀತಿಪಾತ್ರರು ನಿಜಕ್ಕೂ ನಮ್ಮನ್ನು ಪ್ರೀತಿಸುತ್ತಾರಾ? ಈ ಲವ್‌ ಟೆಸ್ಟಿಗೆ ಏನಾದರೂ ಪರೀಕ್ಷೆ ಇದೆಯಾ ಅಂದರೆ ಇದೆ ಅನ್ನುತ್ತೆ ಕಿತ್ತಳೆ ಹಣ್ಣಿನ ಸಿಪ್ಪೆ!

ಆರೆಂಜ್ ಪೀಲ್ (orange peel) ಥಿಯರಿ ಅನ್ನೋದು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗ್ತಿದೆ. ಈ ಥಿಯರಿ ಪ್ರಕಾರ ನೀವು ಕೇಳದೆಯೆ ನಿಮ್ಮ ಸಂಗಾತಿ ನಿಮಗಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸುಲಿದು ನಿಮಗೆ ಕಿತ್ತಳೆಯನ್ನು ತಿನ್ನಲು ಕೊಟ್ಟರೆ ಆಗ ಅದು ನಿಜವಾದ ಪ್ರೀತಿ ಎಂದು ಅರ್ಥವಂತೆ. ಈ ಕಿತ್ತಳೆ ಸಿಪ್ಪೆ ಸಿದ್ಧಾಂತ ಸದ್ಯ ಸಖತ್ ಟ್ರೆಂಡ್ ಆಗಿದ್ದು ಎಲ್ಲರೂ ಇಂತದ್ದೊಂದು ಪರೀಕ್ಷೆಯನ್ನು ಮಾಡುತ್ತಿದ್ದಾರೆ. ನಿಮ್ಮ ಸಂಗಾತಿ ನಿಮಗಾಗಿ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಿಕೊಟ್ಟರೆ, ಸಣ್ಣ ಪುಟ್ಟ ವಿಚಾರಗಳಲ್ಲಿಯೂ ನಿಮ್ಮ ಬಗ್ಗೆ ಕಾಳಜಿ ತೋರಿದರೆ ಅದುವೇ ನಿಜವಾದ ಪ್ರೀತಿ ಅನ್ನೋದು ಈ ಹೊಸ ಟ್ರೆಂಡ್‌ನ ಹೊಸ ಸಿದ್ಧಾಂತ. 

ಹೊಸದಾಗಿ ಮದುವೆಯಾದವರಲ್ಲಿ ಕಾಡುವ ಆತಂಕ! ನಿಮಗೂ ಹೀಗಾಗ್ತಿದೆಯೇ?

ಟಿಕ್‌ಟಾಕ್‌ (tik Tok) ಬಳಸುತ್ತಿದ್ದ ಮಹಿಳೆಯೊಬ್ಬರು ಇಂತದ್ದೇ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜೆನ್ನಿ ಎಂಬ ಹೆಸರಿನ ಆ ಮಹಿಳೆಯ ಸಂಗಾತಿಯು (Companion) ಆಕೆಗಾಗಿ ಒಂದು ಕಂಟೇನರ್ ತುಂಬಾ ಇದ್ದ ಮೊಟ್ಟೆಯಿಂದ ಅದರ ಹಳದಿ ಹಾಗೂ ಬಿಳಿ ಭಾಗವನ್ನು ಬೇರ್ಪಡಿಸಿ ಕೊಟ್ಟಿದ್ದರು. ಇದೂ ಒಂದು ರೀತಿಯಲ್ಲಿ ಕಿತ್ತಳೆ ಸಿಪ್ಪೆ ಸಿದ್ಧಾಂತವೆಂದು ಎಂದು ಆಕೆ ಹೇಳಿಕೊಂಡಿದ್ದಾರೆ. ಇಂಥದ್ದೊಂದು ಟ್ರೆಂಡ್ ಶುರುವಾಗುತ್ತಿದ್ದಂತೆಯೇ ಅನೇಕರು ಕುಟುಂಬ ಸದಸ್ಯರ (Family Members) ಸಣ್ಣಪುಟ್ಟ ಕೆಲಸಗಳನ್ನು ಅವರು ಕೇಳದೆಯೇ ನಾವು ಹೇಗೆ ಮಾಡಿಕೊಡುತ್ತೇವೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡುವ ಮೂಲಕ ತಮ್ಮ ಬಂಧ ಎಂತದ್ದು ಅನ್ನೋದನ್ನು ಪ್ರದರ್ಶಿಸಿದ್ದಾರೆ. ನಿಮ್ಮ ಮಗು ಮಲಗುವ ಮುನ್ನ ನಿಮ್ಮ ಬಳಿ ಎತ್ತಿಕೊಳ್ಳಲು ಹೇಳುತ್ತಿದ್ದರೆ ಅದೂ ನಿಮ್ಮ ಜೊತೆ ಆ ಮಗು ಸಂಬಂಧವನ್ನು ಇನ್ನಷ್ಟು ಬಿಗಿಗೊಳಿಸಲು ಮಾಡುತ್ತಿರುವ ಪ್ರಯತ್ನವಾಗಿದೆ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಶಿಕ್ಷಕರೊಬ್ಬರು ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಅವರು ತಮ್ಮ ವಿದ್ಯಾರ್ಥಿಗಳ ಶೂ ಲೇಸ್‌ಗಳನ್ನು (Shoe Lace) ಪ್ರೀತಿಯಿಂದ ಕಟ್ಟಿ ಕೊಟ್ಟಿದ್ದಾರೆ. ಇಂಥಾ ಚಿಕ್ಕಪುಟ್ಟ ಕೆಲಸಗಳು ನನಗೆ ಖುಷಿ ಕೊಡುತ್ತವೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕ ಇದೇ ಮಾದರಿಯ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟ್ರೆಂಡ್‌ ನೆಪದಲ್ಲಾದರೂ ಅನೇಕರು ತಮ್ಮ ಕುಟುಂಬಸ್ಥರ , ಪ್ರೀತಿಪಾತ್ರರ ಚಿಕ್ಕಪುಟ್ಟ ಕಾಳಜಿ ವಹಿಸುತ್ತಾ ಇರೋದನ್ನು ನೋಡುತ್ತಿದ್ದರೆ ಎಂಥವರಿಗಾದರೂ ಖುಷಿ ಅನಿಸುತ್ತೆ. ಆದರೆ ಈ ಟೆಸ್ಟ್‌ಗಳನ್ನು ಪೂರ್ತಿ ನಂಬಿ ಪ್ರೇಮವನ್ನು ನ್ಯಾಯದ ತಕ್ಕಡಿಯಲ್ಲಿ ಇಡೋದೂ ಸರಿಯಲ್ಲ. ಯಾಕೆಂದರೆ ಒಬ್ಬೊಬ್ಬರ ಲವ್‌ ಎಕ್ಸ್‌ಪ್ರೆಷನ್ನೂ ಡಿಫರೆಂಟ್‌. ಒಬ್ಬ ವ್ಯಕ್ತಿ ಲವ್‌ ತೋರ್ಪಡಿಸಿದಂತೆ ಮತ್ತೊಬ್ಬ ತೋರ್ಪಡಿಸಲಾರ. ಹೀಗಾಗಿ ಇದನ್ನು ಸಾರಾಸಗಟಾಗಿ ಒಪ್ಪಿಕೊಳ್ಳೋದು ಕಷ್ಟ. ಆದರೂ ಸುಮ್‌ ಸುಮ್ನೆ ಟೈಮ್‌ ಪಾಸಿಗೆ ಟ್ರೈ ಮಾಡಬಹುದು. ಆದರೆ ರಿಸಲ್ಟ್‌ ಏನೇ ಬಂದರೂ ಮನಸ್ಸಿಗೆ ಹಚ್ಚಿಕೊಳ್ಳದೇ ಇದ್ದರೆ ನಿಮ್ಮ ಪ್ರೇಮದ ಆರೋಗ್ಯಕ್ಕೆ ಉತ್ತಮ. 

ಹ್ಯಾಪಿ ಮ್ಯಾರೇಜ್ ಅಂದ್ರೆ ಇದಂತೆ..ಗಂಡ ಹೆಂಡತಿ ನಡುವೆ ಪ್ರೀತಿ ಹೆಚ್ಚಾಗಲು ಏನು ಮಾಡಬೇಕು ಗೊತ್ತಾ..?
 

Latest Videos
Follow Us:
Download App:
  • android
  • ios