Asianet Suvarna News Asianet Suvarna News

Personality Development: ಸ್ವಭಾವ ಬದಲಾಯಿಸ್ಕೊಳ್ಳಿ ಎಲ್ಲಾ ಸರಿಯಾಗುತ್ತೆ

ಕೆಲವೊಬ್ಬರು ಎಲ್ಲರಿಗೂ ಇಷ್ಟ (Like)ವಾಗುತ್ತಾರೆ. ಇನ್ನು ಕೆಲವೊಬ್ಬರು ಯಾರಿಗೂ ಇಷ್ಟವಾಗುವುದಿಲ್ಲ. ನೀವು ಅದೇ ಲಿಸ್ಟ್‌ನಲ್ಲಿದ್ದೀರಾ. ಯಾರೂ ನನ್ನನ್ನು ಇಷ್ಟಪಡ್ತಿಲ್ಲ ಅಂತ ಅನಿಸ್ತಿದ್ಯಾ ? ಹಾಗಿದ್ರೆ ಈ ಟಿಪ್ಸ್ (Tips) ಫಾಲೋ ಮಾಡಿ. ಎಲ್ರಿಗೂ ನೀವು ಇಷ್ಟವಾಗ್ತೀರಿ.
 

How Can You Change Your Behaviour For The Better
Author
Bengaluru, First Published Feb 16, 2022, 9:15 PM IST

ಪ್ರೀತಿ, ದ್ವೇಷ, ಮದ, ಮತ್ಸರ, ಅಹಂಕಾರ ಹೀಗೆ ಮನುಷ್ಯನಲ್ಲಿ ಎಲ್ಲಾ ಸದ್ದುಣಗಳೂ, ದುರ್ಗುಣಗಳೂ ಇವೆ. ಆದರೆ, ಕೆಲವೊಬ್ಬರು ಸದ್ಗುಣಗಳನ್ನೇ ತಮ್ಮ ಜೀವನ (Life)ವಾಗಿಸಿದರೆ, ಇನ್ನೊ ಕೆಲವೊಬ್ಬರ ಪಾಲಿಗೆ ದುರ್ಗುಣಗಳನ್ನೇ ತೋರಿಸಿಕೊಂಡು ಬದುಕುತ್ತಾರೆ. ಒಬ್ಬೊಬ್ಬ ಮನುಷ್ಯನ ವ್ಯಕ್ತಿತ್ವವೂ ಭಿನ್ನ-ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಎಲ್ಲರಿಗೂ ಇಷ್ಟವಾಗುತ್ತಾರೆ. ಇನ್ನು ಕೆಲವೊಬ್ಬರು ಯಾರಿಗೂ ಇಷ್ಟವಾಗುವುದಿಲ್ಲ. ವ್ಯಕ್ತಿಯಲ್ಲಿರುವ ಒಳ್ಳೆಯ ಗುಣಗಳು, ಕೆಟ್ಟ ಗುಣಗಳು ಇದನ್ನು ನಿರ್ಧರಿಸುತ್ತದೆ.

‘ಹ್ಯೂಮನ್ ಈಸ್ ಎ ಸೋಷಿಯಲ್ ಎನಿಮಲ್’ ಎಂಬ ಮಾತೇ ಇದೆ. ಮನುಷ್ಯ ಎಂದಾಗ ಸಮಾಜದಲ್ಲಿ ಬೆರೆಯುವುದು ಅತೀ ಮುಖ್ಯ. ಆದರೆ ಹಲವರಿಗೆ ನಾನಾ ಕಾರಣಗಳಿಂದ ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಭಯ, ಆತಂಕ ಉಂಟಾಗುತ್ತದೆ. ಈ ರೀತಿಯ ಸಾಮಾಜಿಕ ಆತಂಕವನ್ನು ನಿಭಾಯಿಸುವುದು ತುಂಬಾ ಕಠಿಣವಾಗಿದೆ. ಜನರೊಂದಿಗೆ ಚೆನ್ನಾಗಿ ಬೆರೆಯಲು ಸಾಧ್ಯವಾಗದಿರುವುದು ಜೀವನದಲ್ಲಿ ಹಲವು ಬಾರಿ ತೊಂದರೆಗೆ ಕಾರಣವಾಗುತ್ತದೆ. ಹೀಗಾಗಿ ಉತ್ತಮ ವ್ಯಕ್ತಿತ್ವ (Personality)ವನ್ನು ಬೆಳೆಸಿಕೊಳ್ಳುವುದು ಅತೀ ಮುಖ್ಯ.

Mental Health: ದಿನಪೂರ್ತಿ ಟೆನ್ಶನ್ನಾ ? ಬಿ ಕೂಲ್, ಫ್ರೆಂಡ್ಸ್ ಜೊತೆ ಸಮಯ ಕಳೆಯಿರಿ

ಮನೆಯಲ್ಲಾಗಲೀ, ಕಚೇರಿಯಲ್ಲಾಗಲೀ ಅಥವಾ ಸಮಾಜದಲ್ಲಾಗಲೀ ನಾವು ಹೇಗೆ ವರ್ತಿಸುತ್ತೇವೆ, ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದು ಮುಖ್ಯವಾಗುತ್ತದೆ, ವೈಯಕ್ತಿಕ ಸಂಬಂಧಗಳು ಮತ್ತು ಕೆಲಸದ ಸ್ಥಳಗಳಲ್ಲಿ ನಮ್ಮ ಅಭ್ಯಾಸಗಳೇ ನಮಗೆ ಮುಜುಗರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ನಾವು ಮೂರ್ಖರಂತೆ ವರ್ತಿಸಬಹುದು, ಅತಿಯಾದ ಕೋಪವನ್ನು ತೋರಿಸಬಹುದು, ಸಂಯಮವನ್ನು ಕಳೆದುಕೊಳ್ಳಬಹುದು ಇದೆಲ್ಲವೂ ವ್ಯಕ್ತಿತ್ವಕ್ಕೇ ಕೆಟ್ಟ ಹೆಸರನ್ನು ತರುವ ವಿಚಾರಗಳಾಗಿವೆ. ಈ ನಡವಳಿಕೆಗಳನ್ನು ಬದಲಾಯಿಸಲು ಏನು ಮಾಡಬಹುದು?

ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ನರವಿಜ್ಞಾನಿ ಡಾ.ಟಾಲಿ ಶರೋಟ್ ಮತ್ತು ಅಫೆಕ್ಟಿವ್ ಬ್ರೈನ್ ಲ್ಯಾಬ್‌ನ ನಿರ್ದೇಶಕರು ವ್ಯಕ್ತಿತ್ವವನ್ನು ಉತ್ತಮಪಡಿಸಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಹಿರಿಯರು, ಕಿರಿಯೆರನ್ನದೆ ಎಲ್ಲರನ್ನೂ ಗೌರವಿಸಿ
ಜೀವನದಲ್ಲಿ ಜಾತಿ, ಧರ್ಮ, ದುಡ್ಡು, ಅಂತಸ್ತು, ಉದ್ಯೋಗ, ಹುದ್ದೆ ಯಾವುದೂ ಶಾಶ್ವತವಲ್ಲ. ಹೀಗಾಗಿ ಮನುಷ್ಯ ಮೊತ್ತ ಮೊದಲಿಗೆ ಪ್ರತಿಯೊಬ್ಬರಿಗೂ ಗೌರವ ನೀಡುವುದನ್ನು ಕಲಿಯಬೇಕು. ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೆ ಎಲ್ಲರನ್ನೂ ಗೌರವ (Respect)ದಿಂದ ಕಾಣಬೇಕು. ಇದರಿಂದ ನಾವು ಕಳೆದುಕೊಳ್ಳುವಂಥದ್ದೇನಿಲ್ಲ. ಬದಲಾಗಿ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಈ ಸ್ವಭಾವ ನಮ್ಮ ವ್ಯಕ್ತಿತ್ವವನ್ನು ಆಕರ್ಷಕಗೊಳಿಸುತ್ತದೆ.

Personality Development: ಗುಂಪಲ್ಲಿ ಮಾತನಾಡೋಕೆ ಹಿಂಜರಿಕೆನಾ ? ಕಾನ್ಫಿಡೆನ್ಸ್ ಹೆಚ್ಚಾಗಲು ಹೀಗೆ ಮಾಡಿ

ಸಂಯಮ ಕಳೆದುಕೊಳ್ಳಬೇಡಿ
ನಾಲ್ಕು ಜನರ ಮುಂದೆ ವರ್ತಿಸುವಾಗ ನಾವು ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು ಕಲಿಯಬೇಕು. ಮಾತಿನ ಮೇಲೆ ಹಿಡಿತ ಇರಬೇಕು. ಅತಿಯಾಗಿ ಸಿಟ್ಟು ಬಂದಾಗ ಸಂಯಮ (Patience)ವನ್ನು ತಂದುಕೊಳ್ಳಬೇಕು. ಮತ್ತೊಬ್ಬರಿಗೆ ನೋವಾಗುವಂತಹಾ ಮಾತುಗಳನ್ನು ಆಡದಂತೆ ನೋಡಿಕೊಳ್ಳಬೇಕು. ‘ಮುತ್ತು ಒಡೆದರೆ ಹೋಯಿತು, ಮಾತು ಆಡಿದರೆ ಹೋಯಿತು’ ಎಂಬ ಮಾತಿನಂತೆ ಒಂದು ಸಾರಿ ಆಡಿದ ಮಾತನ್ನು ಮತ್ತೆ ವಾಪಾಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಾತಿನಿಂದ ಮತ್ತೊಬ್ಬರ ಮನಸ್ಸಿನಲ್ಲಾಗುವ ಬದಲಾವಣೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಮಾತನಾಡುವ ಮೊದಲೇ ಸರಿಯಾಗಿ ಮಾತನಾಡುತ್ತಿದ್ದೇವಾ ಎಂಬುದನ್ನು ಯೋಚಿಸಬೇಕು.

ಕಷ್ಟದಲ್ಲಿರುವವರನ್ನು ಕಂಡಾಗ ಹೀಯಾಳಿಸದಿರಿ
ಕಷ್ಟ (Problem)ದಲ್ಲಿರುವವನ್ನು ಕಂಡಾಗ ಸಹಾಯ ಮಾಡುವುದನ್ನು ಮರೆಯಬಾರದು. ಸಹಾಯ ಮಾಡಲು ಸಾಧ್ಯವಾಗದಿದ್ದರೂ ಅವರನ್ನು ನೋಡಿ ಹೀಯಾಳಿಸಬಾರದು. ಕಷ್ಟ ಪ್ರತಿಯೊಬ್ಬರಿಗೂ ಬರುತ್ತದೆ. ಸಂದರ್ಭ, ಸನ್ನಿವೇಶಗಳು ಬಂದಾಗ ಎಲ್ಲರೂ ಅಸಹಾಯಕರಾಗುತ್ತಾರೆ. ಎಲ್ಲರಿಗೂ ನೆರವು ನೀಡಲು ಮತ್ತೊಬ್ಬರ ಸಹಕಾರ ಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಹೀಗಾಗಿ ಕಷ್ಟದಲ್ಲಿರುವವರನ್ನು ಕಂಡಾಗ ದಯೆ ತೋರಿಸಿ. ಕೈಲಾದ ರೀತಿಯಲ್ಲಿ ಅವರಿಗೆ ನೆರವು ನೀಡಿ.

ನಗು ಮುಖ ಎಲ್ಲರನ್ನೂ ಸೆಳೆಯುತ್ತದೆ
ಮನಸ್ಸಿನೊಳಗೆ ಸಿಟ್ಟಿರಲಿ, ನಿರಾಶೆಯಿರಲಿ, ಹತಾಶೆಯಿರಲಿ ಮುಖದ ಮೇಲೊಂದಿಷ್ಟು ನಗು (Smile)ವಿರಲಿ ಸಾಕು. ಇದು ನಿಮ್ಮ ಸುತ್ತಮುತ್ತಲ ವಾತಾವರಣವನ್ನು ಸುಂದರಗೊಳಿಸುತ್ತದೆ. ನಗು ಮುಖ ನಿಮ್ಮ ಸುತ್ತಮುತ್ತಲಿದ್ದವರಿಗೂ ಪಾಸಿಟಿವ್ ವೈಬ್ ನೀಡುತ್ತದೆ. ಇನ್ಯಾಕೆ ತಡ, ನೀವು ಸಹ ಕೋಪಿಷ್ಠ, ಸಿಡುಕುಮೂತಿ, ಶಾರ್ಟ್ ಟೆಂಪರ್ಡ್ ಆಗಿದ್ರೆ ನಿಮ್ಮ ಸ್ವಭಾವ ಬದಲಾಯಿಸ್ಕೊಳ್ಳಿ ಎಲ್ಲಾ ಸರಿಯಾಗುತ್ತೆ.

Follow Us:
Download App:
  • android
  • ios