ಹಿಂದೂಗೆ ಇಬ್ಬರು ಮುಸ್ಲಿಂ ಪತ್ನಿಯರು, ನಮಾಜ್ ಜೊತೆ ಪಠಿಸ್ತಾರೆ ಹನುಮಾನ್ ಚಾಲೀಸ್

ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪತ್ನಿಯರ ಮುದ್ದಿನ ಗಂಡನ ವಿಡಿಯೋ ವೈರಲ್ ಆಗಿದೆ. ಇಲ್ಲಿ ಪತ್ನಿಯರು ಮುಸ್ಲಿಂ ಧರ್ಮಕ್ಕೆ ಸೇರಿದವರಾದ್ರೆ ಪತಿ ಹಿಂದು.  
 

Hindu dharm man marries two muslim women

ಅದೆಂಥ ಕಷ್ಟ ಬಂದ್ರೂ ಎದುರಿಸುವ ಶಕ್ತಿ ಪ್ರೀತಿ (Love)ಗಿದೆ. ಹಿಂದೆ ಮದುವೆ ಮುನ್ನ ಜಾತಿ ನೋಡಲಾಗ್ತಿತ್ತು. ಆದ್ರೀಗ ಜ್ಯಾತ್ಯಾತೀತ ರಾಷ್ಟ್ರದಲ್ಲಿ ಬೇರೆ ಜಾತಿ, ಧರ್ಮ (religion) ಕ್ಕಿಂತ ಪ್ರೀತಿ, ನಂಬಿಕೆ ಮುಖ್ಯ ಎಂದು ಜನರು ನಂಬ್ತಾರೆ. ಹಾಗಾಗಿಯೇ ಬೇರೆ ಧರ್ಮದವರನ್ನು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಅನೇಕರು ನಮ್ಮ ಮುಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಹೆಂಡಿರ ಮುದ್ದಿನ ಗಂಡನೊಬ್ಬ ವೈರಲ್ ಆಗಿದ್ದಾನೆ. ಆತ ಹಿಂದು, ಆತನ ಪತ್ನಿಯರು ಮುಸ್ಲಿಂ ಅನ್ನೋದೇ ಇಲ್ಲಿ ವಿಶೇಷ. ತರುಣ್ ಗುಪ್ತಾ (Tarun Gupta) ಎನ್ನುವ ವ್ಯಕ್ತಿ, ತಾನು ಇಬ್ಬರು ಮುಸ್ಲಿಂ (Muslim) ಹುಡುಗಿಯರನ್ನು ಮದುವೆ ಆಗಿರೋದಾಗಿ ಹೇಳಿದ್ದಾನೆ. ಮೂವರು ಸೇರಿ ತಮ್ಮ ಲವ್ ಸ್ಟೋರಿಯನ್ನು ಜನರ ಮುಂದೆ ಹಂಚಿಕೊಂಡಿದ್ದಾರೆ. 

ಸಹೋದರಿಯರಂತೆ ಬದುಕ್ತಾರೆ ಇಬ್ಬರು ಪತ್ನಿಯರು : ತರುಣ್ ಗುಪ್ತಾ ಲಕ್ನೋ ನಿವಾಸಿ. ಸನಾ ಹಾಗೂ ಫಿಜಾ ಮನ್ಸೂರಿ ಎಂಬ ಇಬ್ಬರು ಹುಡುಗಿಯರನ್ನು ಈತ ಮದುವೆ ಆಗಿದ್ದಾನೆ. ಇಬ್ಬರು ಪತ್ನಿಯರ ಜೊತೆ ಒಂದೇ ಮನೆಯಲ್ಲಿ ತರುಣ್ ಗುಪ್ತಾ ವಾಸವಾಗಿದ್ದಾನೆ. 2016ರಲ್ಲಿ ಮೊದಲ ಪತ್ನಿ ಸನಾಗೆ ತರುಣ್ ಪ್ರಪೋಸ್ ಮಾಡಿದ್ದ.  ಇಬ್ಬರು ಕಂಪ್ಯೂಟರ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದರಂತೆ. ಒಂದು ವರ್ಷ ಸ್ನೇಹಿತರಾಗಿದ್ದ ಇವರ ಮಧ್ಯೆ ನಿಧಾನವಾಗಿ ಪ್ರೀತಿ ಚಿಗುರಿತ್ತು. ತರುಣ್ ಗುಪ್ತಾ, ಸನಾಗೆ ವಾಟ್ಸ್ ಅಪ್ ಮೂಲಕ ಪ್ರಪೋಸ್ ಮಾಡಿದ್ದನಂತೆ. ಅದನ್ನು ಸನಾ ಒಪ್ಪಿಕೊಂಡಿದ್ದಳು. ನಂತ್ರ ಇಬ್ಬರ ಮದುವೆ ನಡೆದಿತ್ತು. 2022ರಲ್ಲಿ ಇವರಿಬ್ಬರು ಕೋರ್ಟ್ ಮ್ಯಾರೇಜ್ ಮಾಡ್ಕೊಂಡಿದ್ದಾರೆ. ಒಂದು ವರ್ಷದ ನಂತ್ರ ತರುಣ್, ಇನ್ನೊಬ್ಬ ಮುಸ್ಲಿಂ ಹುಡುಗಿಯನ್ನು ಭೇಟಿಯಾಗಿದ್ದ. ಐಎಎಸ್ಗೆ ತಯಾರಿ ನಡೆಸುತ್ತಿದ್ದ ಫಿಜಾ ಮನ್ಸೂರಿಯ ಪ್ರೀತಿಯಲ್ಲಿ ಬಿದ್ದಿದ್ದ. ಮೂರು ವರ್ಷ ವರ್ಕ್ ಫ್ರಂ ಹೋಮ್ ಮಾಡಿ ಮನೆಯಿಂದ ಹೊರಬಿದ್ದ ತರುಣ್ ಗೆ ಫಿಜಾ ಮನ್ಸೂರಿ ಮೇಲೆ ಮನಸ್ಸಾಗಿತ್ತು. ಆರಂಭದಲ್ಲಿ ಈ ವಿಷ್ಯ ಕೇಳಿ ಸನಾ ಶಾಕ್ ಆಗಿದ್ದಳು. ಇಬ್ಬರ ಮಧ್ಯೆ ಹೊಡೆದಾಡುವಷ್ಟು ಗಲಾಟೆ ನಡೆದಿತ್ತು. ತರುಣ್ ಪರಿಸ್ಥಿತಿ ಅರಿತು ಎರಡನೇ ಮದುವೆಗೆ ಒಪ್ಪಿಕೊಂಡೆ ಎಂದು ಸನಾ ಹೇಳಿದ್ದಾಳೆ. ಫಿಜಾ ಮನ್ಸೂರಿ ಹಾಗೂ ತರುಣ್ 2023ರಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ನಮಗೆ ಸಮಸ್ಯೆಯಾಗಿಲ್ಲ. ನಾವಿಬ್ಬರು ಸಹೋದರಿಯರಂತೆ ಬದುಕುತ್ತಿದ್ದೇವೆ. ನಮಗ
ೆ ಸ್ನೇಹಿತರ ಕೊರತೆ ಕಾಡಲಿಲ್ಲ ಎಂದು ಪತ್ನಿಯರು ಹೇಳಿದ್ದಾರೆ. ಎರಡು ಮದುವೆಯಾಗೋ ಅದೃಷ್ಟ ನನಗಿತ್ತು. ಹಾಗಾಗಿ ಇಬ್ಬರು ಪತ್ನಿಯರನ್ನು ಹೊಂದಿದ್ದೇನೆ ಎಂದು ತರುಣ್ ಹೇಳ್ತಿದ್ದಾನೆ. 

ಇವರಿಗೆ ಒಂದು ಮಗು ಕೂಡ ಇದೆ. ಇಬ್ಬರು ಪತ್ನಿಯರು ಒಂದೇ ಬಾರಿ ಗರ್ಭ ಧರಿಸಿದ್ರಂತೆ. ಒಬ್ಬರಿಗೆ ಗರ್ಭಪಾತವಾಗಿದ್ದು, ಇನ್ನೊಬ್ಬರಿಗೆ ಮಗು ಜನಿಸಿದೆ. ಆದ್ರೆ ಮಗು ಯಾರದ್ದು ಎಂಬುದನ್ನು ದಂಪತಿ ಮುಚ್ಚಿಟ್ಟಿದ್ದಾರೆ. ಮಗುವನ್ನು ಮೂವರೂ ಪ್ರೀತಿಯಿಂದ ನೋಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. 

ನಮಾಜ್ ಜೊತೆ ಹನುಮಾನ್ ಚಾಲೀಸ ಓದುತ್ತಾರೆ ಪತ್ನಿಯರು : ತರುಣ್ ಪತ್ನಿಯರು ಹಿಂದೂ ಧರ್ಮದ ಸಂಪ್ರದಾಯ ಹಾಗೂ ಮುಸ್ಲಿಂ ಧರ್ಮದ ಸಂಪ್ರದಾಯ ಎರಡನ್ನೂ ಪಾಲಿಸ್ತಾರೆ. ಮನೆಯಲ್ಲಿ ನಮಾಜ್ ಮಾಡೋದಲ್ಲದೆ ಹನುಮಾನ್ ಚಾಲೀಸ ಕೂಡ ಓದುತ್ತಾರೆ. ಇಬ್ಬರು ಪತ್ನಿಯರ ಜೊತೆ ತರುಣ್, ಅಯೋಧ್ಯೆಗೆ ಹೋಗಿ ಬಂದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಬಳಕೆದಾರರು, ಪ್ರಸಿದ್ಧಿ ಪಡೆಯಲು ಇವರು ಸುಳ್ಳು ಹೇಳ್ತಿದ್ದಾರೆ. ಇಬ್ಬರೂ ಹಿಂದೂ ಮಹಿಳೆಯರು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಎರಡು ಮದುವೆ ಆಗೋದು ಕಾನೂನು ಬಾಹಿರ ಎನ್ನುತ್ತಿದ್ದಾರೆ. 

Latest Videos
Follow Us:
Download App:
  • android
  • ios