Kids Care: ಇಲ್ಲೆಲ್ಲಾ ಮಕ್ಕಳೂ ಮುಲಾಜಿಲ್ಲದೇ ವೈನ್ ಕುಡಿಯುತ್ತಾರೆ!

ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಸದಾ ಚಿಂತಿಸ್ತಾರೆ. ಉತ್ತಮ ಜೀವನ ಕಟ್ಟಿಕೊಡಲು ಪ್ರಯತ್ನ ನಡೆಸ್ತಾರೆ. ತಮ್ಮದೇ ರೀತಿಯಲ್ಲಿ ಮಕ್ಕಳನ್ನು ಬೆಳೆಸ್ತಾರೆ. ನಮ್ಮ ದೇಶಕ್ಕೆ ಹೋಲಿಕೆ ಮಾಡಿದ್ರೆ ವಿದೇಶಗಳಲ್ಲಿ ಮಕ್ಕಳನ್ನು ಬೆಳೆಸುವ ವಿಧಾನ ಭಿನ್ನವಾಗಿದೆ.
 

Here Are Few Parenting Tips From Around The Wold

ಪ್ರತಿಯೊಬ್ಬ ಪಾಲಕರು (Parents) ತಮ್ಮ ಮಕ್ಕಳ (Children) ನ್ನು ಬೆಳೆಸುವ ರೀತಿ ಭಿನ್ನವಾಗಿರುತ್ತದೆ. ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಏನು ಬೇಕು ಎಂಬುದನ್ನು ಗಮನಿಸಿ ಅದನ್ನು ನೀಡುವ ಪ್ರಯತ್ನ ನಡೆಸ್ತಾರೆ. ಪ್ರತಿಯೊಬ್ಬರಿಗೂ ತಾವು ಮಾಡಿದ್ದು ಸರಿ ಎನ್ನಿಸುತ್ತದೆ. ಆದ್ರೆ ಅದು ಬೇರೆಯವರಿಗೆ ತಪ್ಪಾಗಿ ಕಾಣಿಸುತ್ತದೆ. ನಾವು ನೋಡುವ ದೃಷ್ಟಿಕೋನವನ್ನು ಇದು ಆಧರಿಸಿದೆ. ಭಾರತ (India) ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಮಕ್ಕಳ ಪಾಲನೆ ಭಿನ್ನವಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಮಕ್ಕಳಿಗೆ ಬಹುಬೇಗ ಸ್ವಾತಂತ್ರ್ಯ (Freedom) ವನ್ನು ನೀಡೋದಿಲ್ಲ. ಕಾಲೇಜಿಗೆ ಕೂಡ ಮಕ್ಕಳನ್ನು ಒಂಟಿಯಾಗಿ ಕಳಿಸದ ಪಾಲಕರಿದ್ದಾರೆ. ಯಾವುದೇ ಕೆಲಸ ಮಾಡುವಾಗ ಹಾಗೂ ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳು ಪಾಲಕರನ್ನು ಕೇಳ್ಬೇಕು. ಆದ್ರೆ ಎಲ್ಲ ದೇಶಗಳಲ್ಲಿ ಈ ನಿಯಮವಿಲ್ಲ. ಕೆಲ ದೇಶ (Country) ಗಳಲ್ಲಿ ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸ್ತಾರೆ. ಇಂದು ನಾವು ಬೇರೆ ಬೇರೆ ದೇಶದಲ್ಲಿ ಮಕ್ಕಳನ್ನು ಬೆಳೆಸುವ ವಿಧಾನ ಹೇಗಿದೆ ಎಂಬುದನ್ನು ಹೇಳ್ತೇವೆ. ಕೆಲವು ನಿಮಗೆ ವಿಚಿತ್ರವೆನಿಸಿದ್ರೆ ಮತ್ತೆ ಕೆಲವು ಅಚ್ಚರಿ ಹುಟ್ಟಿಸುತ್ತವೆ.

ಯಾವ ದೇಶದಲ್ಲಿ ಯಾವ ಪದ್ಧತಿ : 
ಬಾಲಿ (Bali) :
ಭಾರತದಲ್ಲಿ ನವಜಾತ ಶಿಶುವನ್ನೇ ನೆಲದ ಮೇಲೆ ಮಲಗಿಸ್ತಾರೆ. ನೆಲವನ್ನು ಭೂತಾಯಿ ಎಂದು ಪೂಜೆ ಮಾಡ್ತಾರೆ. ಆದ್ರೆ ಬಾಲಿಯಲ್ಲಿ ಮಗುವಿಗೆ ಮೂರು ತಿಂಗಳಾಗುವವರೆಗೂ ನೆಲವನ್ನು ಸ್ಪರ್ಶಿಸಲು ಬಿಡುವುದಿಲ್ಲ. ಬಲಿನೀಸ್ ಸಂಸ್ಕೃತಿಯಲ್ಲಿ, ನೆಲವನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಶುದ್ಧ ಮತ್ತು ಮುಗ್ಧ ನವಜಾತ ಶಿಶು ನೆಲವನ್ನು ಸ್ಪರ್ಶಿಸುವುದು ಅಶುಭ ಸಂಕೇತವಾಗಿದೆ. ಇದಕ್ಕಾಗಿ ಕುಟುಂಬದವರೆಲ್ಲ ಸೇರಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. 

ಕೀನ್ಯಾ (Kenya) : ಕೀನ್ಯಾದಲ್ಲಿ ತಾಯಿಯಾದವಳು ಮಕ್ಕಳನ್ನು ಯಾವ ಸ್ಥಳಕ್ಕಾದ್ರೂ ಕರೆದುಕೊಂಡು ಹೋಗ್ಬಹುದು. ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಆದ್ರೆ ಮಗು ಅಳ್ತಿದ್ದರೆ ತಾಯಿ ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಮಗುವನ್ನು ಬೆದರಿಸಲು ಅಥವಾ ಅದ್ರ ಸಮಸ್ಯೆ ಕೇಳಲು ಅದ್ರ ಕಣ್ಣನ್ನು ನೋಡುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ ನಾನು ನಿನ್ನ ಮಾಲಿಕ ಎಂಬ ಅರ್ಥವನ್ನು ನೀಡುತ್ತದೆಯಂತೆ. ಯಾವುದೇ ಪಾಲಕರು, ತಮ್ಮ ಮಕ್ಕಳಿಗೆ ಇದನ್ನು ಹೇಳಲು ಬಯಸುವುದಿಲ್ಲ. ಹಾಗಾಗಿಯೇ ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ.     

ಸವಾಲಿನ ಜೊತೆ ಜೀವನ ನಡೆಸ್ತಾಳೆ Single Mother 

ಜಪಾನ್ (Japan) : ಜಪಾನ್‌ ಜನರು ಮಕ್ಕಳಿಗೆ ಸ್ವಾತಂತ್ರ ಮತ್ತ ಜವಾಬ್ದಾರಿಯನ್ನು ಕಲಿಸಲು ಬಯಸ್ತಾರೆ. ಇದೇ ಕಾರಣಕ್ಕೆ ಮಗುವಿಗೆ ನಾಲ್ಕು ವರ್ಷವಾಗ್ತಿದ್ದಂತೆ ಮಗುವಿನ ಆರೈಕೆ ಬಿಡ್ತಾರೆ. ಮಗುವೇ ತನ್ನೆಲ್ಲ ಕೆಲಸವನ್ನು ಮಾಡಿಕೊಳ್ಳುಬೇಕು. ಅವರೇ ಬಸ್ ಹತ್ತಿ ಸ್ಕೂಲಿಗೆ ಹೋಗ್ತಾರೆ. ಅಷ್ಟೇ ಅಲ್ಲ ಶಾಲೆಯಲ್ಲಿ ಅವರು ತಮ್ಮ ತರಗತಿಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ.   

ಜರ್ಮನಿ (German) : ಮಕ್ಕಳ ಜವಾಬ್ದಾರಿ ಪಾಲಕರ ಮೇಲಿರುತ್ತದೆ. ವಿದ್ಯಾಭ್ಯಾಸ, ಕೆಲಸ, ಮದುವೆ ಎಲ್ಲದರ ಹೊಣೆಯನ್ನು ಪಾಲಕರು ಹೊತ್ತುಕೊಳ್ಳೋದು ಭಾರತದಲ್ಲಿ ಸಾಮಾನ್ಯ. ಆದ್ರೆ ಜರ್ಮನಿಯಲ್ಲಿ ಹಾಗಿಲ್ಲ. ಇಲ್ಲಿ ಪಾಲಕರು ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸಹಾಯ ಪಡೆಯುತ್ತಾರೆ. ಜರ್ಮನಿಯಲ್ಲಿ 18 ವರ್ಷ ವಯಸ್ಸಾದ್ರೂ ವ್ಯಕ್ತಿ ಕೆಲಸ ಮಾಡದಿದ್ದರೆ ಹಾಗೂ ಆತನ ಓದು ಮುಂದುವರೆದಿದ್ದರೆ ಆತನಿಗೆ 21ರಿಂದ 25 ವರ್ಷ ವಯಸ್ಸಾಗುವವರೆಗೂ ಸರ್ಕಾರದಿಂದ ಮಾಸಿಕ ಆದಾಯ ನೀಡಲಾಗುತ್ತದೆ.

ಬದುಕಿನ ದೊಡ್ಡ ಅಲೆಗಳಿಗೆ ಬೆದರದೆ ಈಜೋದು ಹೇಳಿಕೊಟ್ಟ ಅಪ್ಪ! 

ಇಟಲಿ (Italy) : ಇಟಲಿಯಲ್ಲಿ ಮಕ್ಕಳಿಗೂ ವೈನ್ ಕುಡಿಯಲು ಅವಕಾಶವಿದೆ. ಇಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ರಾತ್ರಿ ಊಟದಲ್ಲಿ ವೈನ್ ನೀಡಲಾಗುತ್ತದೆ. ಹಾಗೆ ವೈನ್ ಸಂಸ್ಕೃತಿಯ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ತಿಳಿಸಿದ್ರೆ ಮಕ್ಕಳು ಜವಾಬ್ದಾರಿಯುತ ಡ್ರಿಂಕರ್ ಆಗ್ತಾರೆ ಹಾಗೇ ಕಡಿಮೆ ವೈನ್ ಸೇವನೆ ಮಾಡ್ತಾರೆಂದು ನಂಬಲಾಗಿದೆ.

 

Here Are Few Parenting Tips From Around The Wold


 

Latest Videos
Follow Us:
Download App:
  • android
  • ios