Asianet Suvarna News Asianet Suvarna News

ಅವನು ಹೆಂಡತಿಯಿಂದ ತಾಳಿ ಕಟ್ಟಿಸಿಕೊಂಡ! ಆಮೇಲೇನಾಯ್ತು?

ಅವನು ಸ್ತ್ರೀವಾದಿ. ಮದುವೆಯಲ್ಲಿ ಪತ್ನಿಯೇ ಯಾಕೆ ತಾಳಿ ಕಟ್ಟಿಸಿಕೊಳ್ಳಬೇಕು ಎಂದು ವಾದ ಮಾಡಿ ತಾನೂ ಕಟ್ಟಿಸಿಕೊಂಡ. ಆಮೇಲಾದ್ದು ಮಾತ್ರ ಊಹೆಗೂ ನಿಲುಕದ್ದು.

He bonded by Mangalasutra in his marriage
Author
Bengaluru, First Published May 7, 2021, 4:27 PM IST

ಮದುವೆಯಲ್ಲಿ ವಧುವಿಗೆ ವರ ತಾಳಿ ಕಟ್ಟುವುದು ಸಂಪ್ರದಾಯ. ವರನಿಗೆ ವಧು ತಾಳಿ ಕಟ್ಟಿದರೆ? ಇದು ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್ ಬಾಂಬೇ ಜನಪ್ರಿಯ ಪುಟದಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡ ಜೀವನ ಕಥನ.

ನಾನು ಮತ್ತು ತನುಜಾ ಕಾಲೇಜು ಜೀವನದಲ್ಲೇ ಕ್ಲಾಸ್‌ಮೇಟ್‌ಗಳು. ಆದರೆ ಆಗೆಲ್ಲ ನಾವು ಜಾಸ್ತಿ ಒಡನಾಡಿದವರೇ ಅಲ್ಲ. ಮಾತನಾಡಿದ್ದೇ ಕಡಿಮೆ. ಆದರೆ, ನಾವು ಗ್ರಾಜುಯೇಟ್ ಆಗಿ ನಾಲ್ಕು ವರ್ಷಗಳ ಬಳಿಕ ಅನಿರೀಕ್ಷಿತವಾಗಿ ನಮ್ಮ ಭೇಟಿಯಾಯಿತು. ಆಕೆ ಹಿಮೇಶ್ ರೇಶ್ಮಿಯಾದ ಒಂದು ಹಾಡನ್ನು ಹಂಚಿಕೊಂಡು 'ಚಿತ್ರಹಿಂಸೆ' ಎಂದು ಬರೆದಿದ್ದಳು. ನಾನು ಅದಕ್ಕೆ 'ಮಹಾ ಚಿತ್ರಹಿಂಸೆ' ಎಂದು ಪ್ರತಿಕ್ರಿಯೆ ನೀಡಿದೆ. ಹೀಗೆ ನಾವು ಚಾಟ್ ಮಾಡಲು ಆರಂಭಿಸಿದೆವು.

“Tanuja and I were in the same college but hardly interacted with each other. 4 years after we graduated, we reconnected...

Posted by Humans of Bombay on Wednesday, May 5, 2021

ಕೆಲವು ವಾರಗಳ ಬಳಿಕ ಆಕೆ ನನ್ನನ್ನು ಚಾಯ್‌ಗೆ ಕರೆದಳು. ಅಲ್ಲಿ ನಾವು ಸಿನೆಮಾ, ಫ್ಯೂಚರ್ ಪ್ಲಾನ್‌ಗಳು ಸೇರಿದಂತೆ ಎಲ್ಲವನ್ನೂ ಮಾತಾಡಿದೆವು. ಸ್ತ್ರೀವಾದದ ಕುರಿತೂ ಮಾತು ಬಂತು. ಆಗ ನಾನು, 'ನಾನು ಹಾರ್ಡ್‌ಕೋರ್‌ ಸ್ತ್ರೀವಾದಿ' ಎಂದೆ. ಆಕೆ ಅದನ್ನು ನಿರೀಕ್ಷಿಸಿರಲಿಲ್ಲ. ನಂತರ ಆ ಕುರಿತು ಮಾತು ಮುಂದುವರಿಯಿತು. ನಾನು ಅಭಿಪ್ರಾಯಗಳನ್ನು ತಿಳಿಸಿದೆ.

ಅರೆ ಇಸ್ಕಿ..ವಿಸ್ಕಿ ತಗೊಳ್ಳೋದು ಕೋವಿಡ್ ವ್ಯಾಕ್ಸಿನ್ ಇಮ್ಯುನಿಟಿಗೆ ನಾಟ್ ರಿಸ್ಕಿ! ...

ನಂತರ ನನ್ನ ಬರ್ತ್‌ಡೇಗೆ ಆಕೆ ಗಿಫ್ಟ್‌ಗಳನ್ನು ಕೊಟ್ಟಳು. ಆಗ ನಮ್ಮಿಬ್ಬರ ನಡುವೆ ಕಾರ್ಡ್‌ಗಳ ವಿನಿಮಯವಾಯಿತು. ನಾವಿಬ್ಬರೂ ಪರಸ್ಪರ ಇಷ್ಟಪಡುತ್ತಿದ್ದೇವೆ ಎಂಬುದನ್ನು ಆ ಕಾರ್ಡ್‌ಗಳ ಮೂಲಕ ಹೇಳಿಕೊಂಡಿದ್ದೆವು. ಹಾಗೆ ನಾವು ಡೇಟಿಂಗ್ ಶುರುಮಾಡಿದೆವು. ಮದುವೆಯಾಗೋಣ ಎಂದು ನಿರ್ದರಿಸಿದೆವು. ಅಷ್ಟರಲ್ಲಿ ಕೋವಿಡ್‌ ಬಂತು. ಒಂದಷ್ಟು ಸಮಯ ಹಾಗೇ ಕಳೆಯಿತು. ಸೆಪ್ಟೆಂಬರ್‌ನಲ್ಲಿ ಕೋವಿಡ್ ಏರಿ ಇಳಿದ ಬಳಿಕ ನಾವಿಬ್ಬರೂ ಮದುವೆಯಾಗಲು ನಿರ್ಧರಿಸಿದೆವು.

ಮದುವೆಯಲ್ಲಿ ನಾನೂ ಮಂಗಲಸೂತ್ರ ಧರಿಸುತ್ತೇನೆ ಅಂತ ನಾನು ತನುಜಾಗೆ ಹೇಳಿದೆ. ಆಕೆ ಚಕಿತಗೊಂಡಳು. ಆಕೆಯ ಮತ್ತು ನನ್ನ ಹೆತ್ತವರೂ ಆಶ್ಚರ್ಯಗೊಂಡರು. ಹಾಗೇ ನಮ್ಮಲ್ಲಿ ಮದುವೆಯ ಖರ್ಚನ್ನು ನಾನೂ ಶೇರ್ ಮಾಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟೆ. ಸಂಪ್ರದಾಯ ಪ್ರಕಾರ ವಧುವಿನ ಕಡೆಯವರೇ ಅದನ್ನು ಮಾಡಬೇಕಿತ್ತು. ತನುಜಾ ನನ್ನಲ್ಲಿ ಕೇಳಿದಳು- ಮಂಗಲಸೂತ್ರ ಮದುವೆ ದಿನ ಮಾತ್ರವಾ ಅಥವಾ ಪ್ರತಿದಿನ ಧರಿಸುತ್ತೀಯಾ? ನಾನು ಅದನ್ನು ಪ್ರತಿದಿನವೂ ಧರಿಸಲಿದ್ದೇನೆ ಎಂದು ಆಕೆಗೆ ಭರವಸೆ ನೀಡಿದೆ.

ಮದುವೆಯಲ್ಲಿ ನಾನು ಆಕೆಗೆ ಹಾಗೂ ಆಕೆ ನನಗೂ ಮಂಗಲಸೂತ್ರ ಕಟ್ಟಿದೆವು. ಅದು ನನಗೆ ಬಹಳ ಸಂತೋಷ ಕೊಟ್ಟಿತು. ಆದರೆ ನನ್ನ ಎಷ್ಟೋ ಮಂದಿ ಸಹೋದ್ಯೋಗಿಗಳಿಗೇ ಅದು ಖುಷಿ ಕೊಟ್ಟಿರಲಿಲ್ಲ. ಅದನ್ನು ಅವರು ಬಾಯಿ ಬಿಟ್ಟು ಹೇಳದಿದ್ದರೂ, ಅವರ ವರ್ತನೆಯಲ್ಲಿ ವ್ಯಕ್ತವಾಗಿತ್ತು.

ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದೇನು ಪ್ರಯೋಜನ? ...

ಮರುದಿನ ನಮಗೆ ಆಘಾತ ಕಾದಿತ್ತು. ಒಂದು ಸುದ್ದಿ ವೆಬ್‌ಸೈಟ್ ನಮ್ಮ ಮದುವೆಯ ಸುದ್ದಿ ಛಾಪಿಸಿ, 'ವರನಿಗೂ ಮಂಗಲಸೂತ್ರ' ಎಂದು ದೊಡ್ಡದಾಗಿ ಹೆಡ್ಡಿಂಗ್‌ ಕೊಟ್ಟಿತ್ತು. ಅದರ ಜೊತೆಗೇ ಜನರಿಂದ ಕಮೆಂಟ್‌ಗಳ ಸುರಿಮಳೆ ಆಗತೊಡಗಿತು. 'ಓಹ್, ಹಾಗಿದ್ದರೆ ಇನ್ನು ಆತ ಸೀರೆಯನ್ನೂ ಉಡಲಿ' 'ಓಹೋ, ಹಾಗಿದ್ರೆ ಆತ ಇನ್ನು ಪ್ರತಿ ತಿಂಗಳೂ ಮುಟ್ಟಾಗ್ತಾನಾ ಹೇಗೆ?' ಇವೇ ಮುಂತಾದ ರೀತಿಯಲ್ಲಿ ಕೆಟ್ಟದಾಗಿ ಟ್ರೋಲ್‌ ಮಾಡಲು ತೊಡಗಿದರು. ಲಿಬರಲ್ ಎನಿಸಿಕೊಂಡವರಿಂದ ನನ್ನ ಪರವಾಗಿ ಬೆಂಬಲ ಸಿಗಬಹುದು ಎನಿಸಿಕೊಂಡರೆ, ಅವರಿಂದಲೂ ವ್ಯತಿರಿಕ್ತವಾಗಿ ಕಮೆಂಟ್‌ಗಳು ಬಂದವು. 'ಇದು ಸ್ತ್ರೀವಾದವನ್ನು ಬೆಂಬಲಿಸುವ ರೀತಿ ಅಲ್ಲ' ಎಂದು ಅವರ ಹೇಳಿದರು. ಇದು ನನಗೆ ನಿಜಕ್ಕೂ ಆಶ್ಚರ್ಯ ತಂದ ಅಂಶ.

ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲ.. ವಿಮಾನದಲ್ಲೇ ಹೆರಿಗೆ! ...

ಇದೆಲ್ಲ ಆಗಿ ನಾಲ್ಕು ತಿಂಗಳೇ ಆಗಿವೆ. ನಾವು ಹೊಸ ಜೀವನಕ್ಕೆ ಹೊಂದಿಕೊಂಡಿದ್ದೇವೆ. ನಾನು ಸದಾ ತಾಳಿಯನ್ನು ಧರಿಸುತ್ತೇನೆ. ಆಕೆಯೂ ಧರಿಸುತ್ತಾಳೆ. ನಾವಿಬ್ಬರೂ ನನ್ನ ಕನಸಿನ ಪ್ರಯಾಣವನ್ನು ಜೊತೆಯಾಗಿ ಮುನ್ನಡೆಸಿದ್ದೇವೆ. ಜಗತ್ತು ಏನೇ ಅಂದರೂ ಸರಿ, ನಾವು ಅದರಿಂದ ವಿಚಲಿತರಾಗುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಮ್ಮ ಜೀವನಕ್ಕೆ ಯಾರ ಹಂಗೇನು ಬೇಕು, ಅಲ್ಲವೇ?

Follow Us:
Download App:
  • android
  • ios