ಕ್ಷಮಿಸುವುದು ದೊಡ್ಡ ಗುಣ, Sorry ಕೇಳಿದರೆ ಮನ್ನಿಸಿ ಬಿಡಿ

ಮನುಷ್ಯ ಅಂತಾದ್ಮೇಲೆ ಆತನಿಂದ ತಪ್ಪುಗಳಾಗುವುದು ಸಹಜ. ಹೀಗಾದಾಗ ಹಲವು ಬಾರಿ ಮನಸ್ಸಿಗೆ ನೋವಾದ ವ್ಯಕ್ತಿಗಳಿಗೆ ಅಂಥವರನ್ನು ಕ್ಷಮಿಸಿ ಬಿಡಲು ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಏನು ಮಾಡ್ಬೋದು. ಕ್ಷಮಿಸಲು ಇಲ್ಲಿದೆ ಕೆಲವೊಂದು ಸಿಂಪಲ್ ಟ್ರಿಕ್ಸ್.

Have Trouble Forgiving People, Follow These Tricks Vin

ಜೀವನದಲ್ಲಿ ತಿಳಿದೋ ತಿಳಿಯದೆಯೋ ನಮ್ಮನ್ನು ನೋಯಿಸುವ ಅನೇಕ ಜನರಿದ್ದಾರೆ. ಅಂಥಾ ನೋವಿನಿಂದ ಹೊರಬರಲು ತುಂಬಾ ಕಷ್ಟವಾಗುತ್ತದೆ. ಹಾಗಿದ್ದೂ ಅಂಥಾ ತಪ್ಪನ್ನು, ಜನರನ್ನು ಕ್ಷಮಿಸಲು ಕಲಿಯುವುದು ತುಂಬಾ ಮುಖ್ಯ. ಇತರರನ್ನು ಕ್ಷಮಿಸುವ ಗುಣ ನಿಮ್ಮ ವ್ಯಕ್ತಿತ್ವವನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಸಂಬಂಧಗಳಲ್ಲಿ ಯಾವುದೇ ಅಸಮಾಧಾನ ಇಲ್ಲದಂತೆ ಮಾಡುತ್ತದೆ. ಈ ಎಲ್ಲಾ ವಿಚಾರಗಳು ಗೊತ್ತಿದ್ದರೂ ಹಲವರಿಗೆ, ಹಲವು ಸಂದರ್ಭಗಳಲ್ಲಿ ಇನ್ನೊಬ್ಬರ ತಪ್ಪನ್ನು ಕ್ಷಮಿಸುವುದು ಕಷ್ಟವಾಗುತ್ತದೆ. ಆದ್ರೆ ಸಾರಿ ಕೇಳುವ ಜನರನ್ನು ಕ್ಷಮಿಸುವುದರಿಂದ ಸಿಗೋ ಪ್ರಯೋಜನಗಳು ಒಂದೆರಡಲ್ಲ. ಹಾಗಿದ್ರೆ ಮನಸ್ಸಿಗೆ ಬೇಜಾರಾಗಿದ್ದರೂ ಇನ್ನೊಬ್ಬರನ್ನು ಕ್ಷಮಿಸಲು ಏನು ಮಾಡ್ಬೇಕು. ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್.

ಕ್ಷಮಿಸುವುದು ಒಳ್ಳೆಯ ಗುಣ: ತಪ್ಪು ಎಲ್ಲರಿಂದಲೂ ನಡೆಯುತ್ತದೆ. ಆದರೆ ತಪ್ಪನ್ನು (Mistake) ಮನ್ನಿಸಿ ಕ್ಷಮಿಸುವುದಿದೆಯಲ್ಲ ಅದು ದೊಡ್ಡ ಗುಣ. ಇನೊಬ್ಬರ ಮನಸ್ಸನ್ನು ಅರಿತುಗೊಂಡಾಗ ಸುಲಭವಾಗಿ ತಪ್ಪನ್ನು ಕ್ಷಮಿಸಲು ಸಾಧ್ಯವಾಗುತ್ತದೆ. ಅದೆಷ್ಟೋ ಬಾರಿ ತಪ್ಪು ಮಾಡಿದವರಿಗೆ ತಕ್ಷಣಕ್ಕೆ ಅದರ ಅರಿವಾಗುತ್ತದೆ. ಹೀಗಾಗಿ ಇಂಥಾ ಸಂದರ್ಭದಲ್ಲಿ ಕ್ಷಮೆ (Pardon) ನೀಡಿ ಅವರನ್ನು ಜೀವನದಲ್ಲಿ ಮುಂದೆ ಸಾಗಲು ಬಿಡಬೇಕಾದುದು ತುಂಬಾ ಮುಖ್ಯ.

Relationship Tips: ಸಂಗಾತಿಗೆ ಮೋಸ ಮಾಡಿದ್ರಾ? ಹೀಗೆ ಕ್ಷಮೆ ಕೇಳ್ಬೋದು

ಪರಿಸ್ಥಿತಿ ಅರ್ಥಮಾಡಿಕೊಳ್ಳಿ: ಅನೇಕ ಬಾರಿ ಯಾರಾದರೂ ಈಗಾಗಲೇ ಅಸಮಾಧಾನಗೊಂಡಿದ್ದರೆ ಮಾತಿನ ಭರದಲ್ಲಿ ಏನೋ ಹೇಳಿ ಬಿಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮನಸ್ಸಿಗೆ ಬೇಜಾರಾಗುವುದು ಸಹಜ. ಯಾರಾದರೂ ಕೆಟ್ಟದ್ದನ್ನು ಹೇಳಿದಾಗ, ನಿಮ್ಮ ಮನಸ್ಸಿಗೆ ನೋವಾದಾಗ ಎಲ್ಲಕ್ಕಿಂತಲೂ ಮೊದಲು ಇನ್ನೊಬ್ಬ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಅವರು ಯಾವುದೋ ಒತ್ತಡ (Pressure)ವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ಹೀಗೆ ಮಾಡಿದಾಗ ಕ್ಷಮಿಸುವುದು ತುಂಬಾ ಸುಲಭವಾಗುತ್ತದೆ.  

ಕ್ಷಮಿಸುವುದರಿಂದ ಮನಸ್ಸು ಶಾಂತವಾಗುತ್ತದೆ: ತಪ್ಪು ಯಾರದ್ದೇ ಆಗಿರಲಿ ಜಗಳವಾದಾ ತಕ್ಷಣ ಸಾರಿ ಕೇಳುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಈ ವಿಷಯವನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಳ್ಳಿ, ನೀವು ಇತರರ ವಿರುದ್ಧ ಯಾವುದೇ ದ್ವೇಷವನ್ನು ಇಟ್ಟುಕೊಳ್ಳದಿದ್ದರೆ, ನಿಮ್ಮ ಮನಸ್ಸು ಅತ್ಯಂತ ಶಾಂತವಾಗಿರುತ್ತದೆ. ನೀವು ಅನೇಕ ನಕಾರಾತ್ಮಕ ಆಲೋಚನೆ (Negative thinking)ಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಇದು ನಿಮ್ಮ ಕೆಲಸದ ಮೇಲೆ ಉತ್ತಮವಾಗಿ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಸಾಧ್ಯವಾದರೆ, ಜನರನ್ನು ಕ್ಷಮಿಸಲು ಪ್ರಯತ್ನಿಸಿ ಮತ್ತು ನಿಮ್ಮ ಸಂಬಂಧವನ್ನು ಉತ್ತಮವಾಗಿರಿಸಲು ಇದು ಕಾರಣವಾಗುತ್ತದೆ.

Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ

ಸ್ನೇಹಿತರಿಂದ ಸಹಾಯ ಪಡೆಯಿರಿ: ನಿಮ್ಮನ್ನು ನೋಯಿಸಿದ ವ್ಯಕ್ತಿಯ ಮೇಲೆ ನೀವು ತುಂಬಾ ಕೋಪ (Angry)ಗೊಂಡಿದ್ದರೆ ಮತ್ತು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ಸ್ನೇಹಿತರು ಅಥವಾ ನಿಮಗೆ ಹತ್ತಿರವಿರುವ ಜನರ ಸಹಾಯವನ್ನು ಪಡೆಯಿರಿ. ಅಂತಹ ಜನರು ನಿಮ್ಮನ್ನು ಪ್ರೇರೇಪಿಸುತ್ತಾರೆ ಮತ್ತು ನಿಮಗೆ ಸರಿಯಾದ ದಾರಿಯನ್ನು ತೋರಿಸುತ್ತಾರೆ. ದ್ವೇಷವನ್ನು ಉತ್ತೇಜಿಸಲು ಅವರು ನಿಮಗೆ ಎಂದಿಗೂ ಹೇಳುವುದಿಲ್ಲ, ಆದರೆ ವಿಷಯವನ್ನು ಹೇಗೆ ಕೊನೆಗೊಳಿಸಬೇಕೆಂದು ವಿವರಿಸುತ್ತಾರೆ.

Latest Videos
Follow Us:
Download App:
  • android
  • ios