ಡ್ಯಾನ್ಸ್ ಮಾಡೋಕೆ ವಧುವಿನ ಕೈ ಹಿಡಿದು ಎಳೆದ ವರನ ಸ್ನೇಹಿತ, ಮದ್ವೆ ಕ್ಯಾನ್ಸಲ್!
ಮದ್ವೆ ಮನೆ ಅಂದ್ರೆ ಸಾಕು ಪಕ್ಕಾ ಮನರಂಜನೆ..ಅಲ್ಲಿ ಹೆಣ್ಮಕ್ಕಳ ಹಾಡು, ಡ್ಯಾನ್ಸ್, ಮಸ್ತಿ ಎಲ್ಲಾನೂ ಇರುತ್ತೆ. ಅದರಲ್ಲೂ ಈಗಿನ ಜನರೇಷನ್‌ನವರಂತೂ ಫನ್ ಮಾಡೋದನ್ನು ಬಿಡೋದಿಲ್ಲ. ಹಾಗೆಯೇ ಇಲ್ಲೊಂದೆಡೆ ಮದ್ವೆ ಮನೆಯಲ್ಲಿ ಹುಡುಗನ ಸ್ನೇಹಿತರು ಮಾಡಿದ ಫನ್‌ಗೆ ವಧು ಮದ್ವೇನೆ ಕ್ಯಾನ್ಸಲ್ ಮಾಡಿದ್ದಾಳೆ.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದ್ರೆ ಹಬ್ಬವಿದ್ದಂತೆ. ಹೂವು, ಹಣ್ಣು, ಡೆಕೊರೇಷನ್, ಜನಜಂಗುಳಿ, ಹಾಡು, ಡ್ಯಾನ್ಸ್, ಮಸ್ತಿ ಅಂತ ಸಿಕ್ಕಾಪಟ್ಟೆ ಸಡಗರ, ಸಂಭ್ರಮ ಇರುತ್ತೆ. ಮದ್ವೆಯನ್ನು ಸ್ಪೆಷಲ್ ಆಗಿಸಲು ಮನೆ ಮಂದಿ ಇನ್ನಿಲ್ಲದ ಪ್ರಯತ್ನವನ್ನು ಸಹ ಮಾಡ್ತಾರೆ. ಡಿಫರೆಂಟ್ ಆಗಿ ಕ್ರಿಯೇಟಿವ್ ಆಗಿ ಏನನ್ನಾದರೂ ಪ್ಲಾನ್ ಮಾಡಿ ಆ ದಿನವನ್ನು ಮೆಮೊರೆಬಲ್ ಆಗಿಸುತ್ತಾರೆ. ಹಾಗೆಯೇ ಮದುಮಕ್ಕಳು ಸೀರಿಯಸ್ ಆಗಿ ಮಂಟಪದಲ್ಲಿ ಕುಳಿತುಕೊಳ್ಳೋ ಸೀನ್ ಈಗಿಲ್ಲ. ವಧು-ವರರು ಸಹ ತಮ್ಮ ಮದುವೆಯಲ್ಲಿ ಫನ್ ಮಾಡ್ತಾರೆ. ಅವರ ಸ್ನೇಹಿತರು ಸಹ ಹಲವು ಆಕ್ಟಿವಿಟಿ ಆರೇಂಜ್ ಮಾಡಿ ಮದುವೆ ಮನೆಗೆ ಕಳೆಗೆ ತರುತ್ತಾರೆ.
ಹಿಂದಿನ ಕಾಲದಲ್ಲೆಲ್ಲಾ ಮದುವೆ (Marriage) ಅಂದ್ರೆ ಗುರುಹಿರಿಯರ ಸಮ್ಮುಖದಲ್ಲಿ ಶಿಸ್ತುಬದ್ಧವಾಗಿ ನಡೆಯುತ್ತಿತ್ತು. ಆದ್ರೆ ಈಗೆಲ್ಲಾ ಶಾಸ್ತ್ರಗಳು ಯಥಾಪ್ರಕಾರ ನಡೆದರೂ ಎಲ್ಲರೂ ಮದುವೆಯ ಕ್ಷಣವನ್ನು ಎಂಜಾಯ್ ಮಾಡೋಕೆ ಇಷ್ಟಪಡುತ್ತಾರೆ. ಅದರಲ್ಲೂ ವಧು-ವರರ ಸ್ನೇಹಿತರಂತೂ ಮದುಮಕ್ಕಳ ಕಾಲೆಳೆಯೋದನ್ನು ಬಿಡೋದಿಲ್ಲ. ಎಲ್ಲಾ ಶಾಸ್ತ್ರಗಳಲ್ಲಿ ಕೀಟಲೆ ಮಾಡ್ತಾ ಮದುವೆ ಮನೆಯಲ್ಲಿ ಫನ್ ಕ್ರಿಯೇಟ್ ಮಾಡ್ತಾರೆ, ಹಾಗೆಯೇ ಬಿಹಾರದಲ್ಲಿ ನಡೆದ ಮದುವೆಯೊಂದರಲ್ಲಿ ವರನ ಸ್ನೇಹಿತ (Grooms friend) ಫನ್ ಮಾಡಲು ಹೋಗಿ ಮದ್ವೆಯೇ ಕ್ಯಾನ್ಸಲ್ ಆಗಿದೆ.
ಸಂಪ್ರದಾಯ ಉಳಿಸಲು ಎತ್ತಿನ ಗಾಡಿ ಏರಿ ಬಂದ ವಧು, ನವಜೋಡಿಯ ಕಾರ್ಯಕ್ಕೆ ಭೇಷ್ ಎಂದ ನೆಟ್ಟಿಗರು
ವಧುವಿನ ಜೊತೆ ಡ್ಯಾನ್ಸ್ ಮಾಡಲು ಯತ್ನಿಸಿದ ವರನ ಸ್ನೇಹಿತ
ಬಿಹಾರದ ಅರಾಹ್‌ನ ಬಿಹಿಯಾ ನಗರದ ಡಾಕ್ ಬಂಗಲೆ ಚೌಕ್‌ನಲ್ಲಿರುವ ಲಾಡ್ಜ್‌ನಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಮೆರವಣಿಗೆಯು ಬಕ್ಸಾರ್‌ನ ಇಟಾಧಿಯಿಂದ ರಾತ್ರಿ 11 ಗಂಟೆಗೆ ಅಲ್ಲಿಗೆ ತಲುಪಿತು. ಜಯಮಾಲಾ ಜೊತೆಯಲ್ಲಿ ಬ್ಯಾಂಡ್-ಬಾಜಾ, ನೃತ್ಯ ವಿನೋದ. ವಧು-ವರರು ಪರಸ್ಪರ ಹಾರ ಹಾಕಿದರು. ಇದಾದ ನಂತರ ಡಿಜೆ ಪ್ಲೇ ಶುರುವಾಯಿತು. ಎಲ್ಲರೂ ನೃತ್ಯ (Dance) ಮಾಡಲು ಪ್ರಾರಂಭಿಸಿದರು. ಆಗ ವರನ ಸ್ನೇಹಿತ ವೇದಿಕೆ ತಲುಪಿ ವಧುವಿನ ಕೈ ಹಿಡಿದಿದ್ದಾನೆ. ಅವಳ ಕೈ ಹಿಡಿದು ಕುಣಿಯತೊಡಗಿದ್ದಾನೆ. ಅಷ್ಟೇ ಅಲ್ಲ ವಧುವಿನ ಜೊತೆ ಡ್ಯಾನ್ಸ್ ಮಾಡಲು ಯತ್ನಿಸಿದ್ದಾನೆ. ವರನ ಗೆಳೆಯನ ಈ ಕೃತ್ಯ ವಧುವಿಗೆ ಇಷ್ಟವಾಗಲಿಲ್ಲ. ಹೀಗಾಗಿ ಆಕೆ ಈ ಮದುವೆಯನ್ನು ಕ್ಯಾನ್ಸಲ್ ಮಾಡಿದಳು.
ಮದ್ವೆ ಮನೆಯಲ್ಲಿ ಗಲಾಟೆಗೆ ಕಾರಣವಾಯ್ತು ಹುಡುಗನ ಸ್ನೇಹಿತರ ಫನ್
ಈ ತಮಾಷೆಯ ಕೃತ್ಯವು ಮದುವೆ ಮನೆಯಲ್ಲಿ ಗಲಾಟೆಗೆ ಕಾರಣವಾಯಿತು. ಹುಡುಗಿ ಮತ್ತು ಹುಡುಗನ ನಡುವೆ ವಾಗ್ವಾದ ನಡೆಯಿತು. ವಧು ಮದುವೆಯಾಗಲು ನಿರಾಕರಿಸಿದ ವಿಷಯದಿಂದ ಎಲ್ಲರೂ ಗೊಂದಲಕ್ಕೊಳಗಾದರು. ವಧು ತನಗೆ ಅಂಥಾ ಸ್ನೇಹಿತರು ಇರೋ ಹುಡುಗನ ಜೊತೆ ಮದುವೆ ಬೇಡವೆಂದಳು. ಎರಡೂ ಕಡೆಯವರು ಮನವೊಲಿಸಲು ಯತ್ನಿಸಿದರೂ, ಆಕೆ ಮದುವೆಯ ಉಳಿದ ಸಮಾರಂಭಗಳನ್ನು ಮಾಡಲು ಸಿದ್ಧರಿರಲಿಲ್ಲ. ನಂತರ ವಧುವನ್ನು (Bride) ಕರೆದೊಯ್ಯದೆ ಮೆರವಣಿಗೆ ಮರಳಿತು. ವರ, ಮದುಮಗಳಿಲ್ಲದೆ ಬರಿಗೈಯಲ್ಲಿ ತನ್ನೂರಿಗೆ ಹಿಂತಿರುಗಬೇಕಾಯಿತು.
ಇಬ್ಬರು ಹೆಂಡಿರ ಮುದ್ದಿನ ಗಂಡ: ಇಬ್ಬರ ಜೊತೆಗೂ ವಾರದಲ್ಲಿ 3 ದಿನ ಕಳೆಯಲು ಆದೇಶಿಸಿದ ಕೋರ್ಟ್..!
ವಧುವಿನ ಮನವೊಲಿಸುವ ಯತ್ನ ಮುಂದುವರಿದಿದೆ ಎಂದು ತಿಳಿದುಬಂದಿದೆ. ಆದರೆ ಹುಡುಗರ ಕಡೆಯಿಂದ ಅಥವಾ ಹುಡುಗಿಯರ ಕಡೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಮದುವೆ ಮನೆಯಲ್ಲಿ ಮೋಜು-ಮಸ್ತಿ ಇದ್ದರೆ ಚೆಂದ. ಆದರೆ ಅದೇ ಅತಿಯಾದರೆ ಏನೆಲ್ಲಾ ಎಡವಟ್ಟಾದೀತು ಎಂಬುದಕ್ಕೆ ಈ ಘಟನೆಯೊಂದು ಉದಾಹರಣೆಯಾಗಿದೆ.
ಕನ್ಯಾದಾನ ಮಾಡಿದ ಮಂಗಳಮುಖಿ ತಾಯಿ: ಅಪರೂಪದ ಘಟನೆಗೆ ಸಾಕ್ಷಿಯಾದ ಹರ್ಯಾಣ