Asianet Suvarna News Asianet Suvarna News

ವರದಕ್ಷಿಣೆಯಾಗಿ ಬೈಕ್ ಕೇಳಿದ ಮಗನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ!

ಹುಡುಗರಿಗೆ ಬೈಕ್ ಶೋಕಿ ಇರೋ ವಿಷ್ಯ ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗೆಯೇ ಇಲ್ಲೊಬ್ಬ ವರ, ವಧುವಿನ ಕುಟುಂಬದವರ ಬಳಿ ವರದಕ್ಷಿಣೆಯಾಗಿ ಬೈಕ್ ಕೇಳಿದ್ದು, ವಿಷ್ಯ ತಿಳಿದ ವರನ ತಂದೆ ಆತನಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

Groom hit with slippers by father for demanding bike in dowry, watch the consequences Vin
Author
First Published May 11, 2023, 12:39 PM IST

ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟವಾಗಿದ್ದು, ಹಲವಾರು ಕುಟುಂಬಗಳನ್ನು ಧ್ವಂಸಗೊಳಿಸಿದೆ. ಅಸಂಖ್ಯಾತ ಮಹಿಳೆಯರು ವರದಕ್ಷಿಣೆಯ ಪಿಡುಗಿನಿಂದ ಬಳಲುತ್ತಿದ್ದಾರೆ, ಅದು ಅವರ ವಿರುದ್ಧ ಊಹಿಸಲಾಗದ ಚಿತ್ರಹಿಂಸೆ ಮತ್ತು ಅಪರಾಧಗಳಿಗೆ ಕಾರಣವಾಗುತ್ತದೆ. ಆದರೆ, ಭಾರತದಾದ್ಯಂತ ಈ ಪದ್ಧತಿ ಮುಂದುವರಿದಿದೆ. ಭಾರತದಲ್ಲಿ ವರದಕ್ಷಿಣೆ ನಿಷೇಧಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆ 1961ರ ಪ್ರಕಾರ ಡೌರಿ ಕೊಡುವುದು ಹಾಗೂ ಕೊಳ್ಳುವುದು ಅಪರಾಧವಾಗಿದೆ. ಆದರೂ ಎಲ್ಲಾ ಕಡೆ ವರದಕ್ಷಿಣೆ ಕೊಡುವುದು, ಪಡೆದುಕೊಳ್ಳುವುದು ಈಗಲೂ ಚಾಲ್ತಿಯಲ್ಲಿದೆ. ಇದೇ ವರದಕ್ಷಿಣೆ ಹಲವು ರೂಪದಲ್ಲಿ ಬೆಳೆದು ನಿಂತಿದೆ. ಕೆಲವರು ಗಿಫ್ಟ್ ಅನ್ನೋ ಹೆಸರಿನಲ್ಲಿ, ಮತ್ತೆ ಕೆಲವರು ಸಂಪ್ರದಾಯ ಅನ್ನೋ ಹೆಸರಿನಲ್ಲಿ ವರದಕ್ಷಿಣೆ ಪದ್ಧತಿಯನ್ನು ಮುಂದುವರಿಸಿದ್ದಾರೆ. 

ಧನದಾಹಿಗಳು ಬಂಗಲೆ, ಕಾರು ಅಂತ ವರದಕ್ಷಿಣೆ (Dowry) ಹೆಸರಲ್ಲಿ ನಾನಾ ಬೇಡಿಕೆ ಇಡುತ್ತಾರೆ. ಹಾಗೆಯೇ ಇಲ್ಲೊಂದು ಮದುವೆ (Marriage) ಮನೆಯಲ್ಲಿ ವರ, ವಧುವಿನ ಕುಟುಂಬದವರಲ್ಲಿ ವರದಕ್ಷಿಣೆ ರೂಪದಲ್ಲಿ ಬೈಕ್ ಕೇಳಿದ್ದು, ವರನ ತಂದೆಯೇ ಆತನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗ್ತಿದೆ.

ವರದಕ್ಷಿಣೆಗಾಗಿ ಮದ್ವೆ ಮನೆಯಾಯ್ತು ರಣಾಂಗಣ, ಚೇರ್, ಪಾತ್ರೆಯಲ್ಲಿ ಹೊಡೆದಾಟ

ವರದಕ್ಷಿಣೆ ಕೇಳಿದ ವರನಿಗೆ ತಂದೆಯಿಂದಲೇ ಚಪ್ಪಲಿ ಪೂಜೆ!
ವೀಡಿಯೋದಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬರು ವರನ ಕೊರಳಪಟ್ಟೆಯನ್ನು ಹಿಡಿದು ಆತನಿಗೆ ಚಪ್ಪಲಿಯಿಂದ ಹೊಡೆಯುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಅನೇಕ ವ್ಯಕ್ತಿಗಳು ಮಧ್ಯಪ್ರವೇಶಿಸಿ ಹಿರಿಯ ವ್ಯಕ್ತಿಯನ್ನು ಎಳೆದೊಯ್ಯುತ್ತಾರೆ. ವೀಡಿಯೋ ವೈರಲ್ ಆದ ನಂತರ ಈ ವ್ಯಕ್ತಿ ವರನ ತಂದೆಯೆಂದು ತಿಳಿದುಬಂದಿದೆ. ಮಗ, ವಧುವಿನ ಕುಟುಂಬದಿಂದ ವರದಕ್ಷಿಣೆ ಕೇಳಿದ್ದಕ್ಕಾಗಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

ಇಷ್ಟೇ ಅಲ್ಲದೆ, ಹಿರಿಯ  ವ್ಯಕ್ತಿ, ಮದುವೆಯಾದ ಬಳಿಕ ತನ್ನ ಹೆಂಡತಿಯನ್ನು ಸಂತೋಷವಾಗಿರಿಸಿಕೊಳ್ಳುವಂತೆ ಮಗನಿಗೆ ಎಚ್ಚರಿಕೆ ನೀಡುತ್ತಾನೆ. ಇಲ್ಲದಿದ್ದರೆ ನನ್ನ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾನೆ. ಹಮ್ ತುಮ್ಕೋ ಅಪ್ನಾ ಖೇತ್ ಬೆಚ್ ಕೆ ಮೋಟೋಸೈಕಲ್ ದಿಲ್ವಾತೆ ಹೈ ತುಮ್ ಮೇರಿ ಬಹು ಕೋ ಲೇ ಚಲೋ ಘರ್. (ನಾನು ನನ್ನ ಜಮೀನು ಮಾರಿ ನಿನಗೆ ಮೋಟಾರ್ ಸೈಕಲ್ ಕೊಡುತ್ತೇನೆ. ನೀನು ನನ್ನ ಸೊಸೆಯನ್ನು ಕರೆದುಕೊಂಡು ಮನೆಗೆ ಬಾ) ಎಂದು ವರನ ತಂದೆ ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದು.

ತಂಗಿ ಅದ್ಧೂರಿ ಮದುವೆ, ವೇದಿಕೆಯಲ್ಲೇ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ ಸಹದೋರರು!

ಅಳುತ್ತಲೇ ವರನೂ ಈ ಷರತ್ತನ್ನು ಒಪ್ಪಿಕೊಳ್ಳುತ್ತಾನೆ. ಅಂತಿಮವಾಗಿ, ವಧುವಿನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ವಧುವಿಗೆ ನಗು ನಗುತ್ತಲೇ ಹಾಡಿನ ಮೂಲಕ ವಿದಾಯ ಕೋರುತ್ತಾರೆ. ಹಸ್ನಾ ಜರೂರಿ ಹೈ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು  ಹಂಚಿಕೊಂಡಿದ್ದಾರೆ. 'ದಹೇಜ್ ಮೆನ್ ಸಿರ್ಫ್ ಮೋಟಾರ್ಸೈಕಿಲ್ ಹೀ ತೋ ಮಂಗಿ ಥೀ , ಸುಸುರ್ ಜೀ ನೆ ಕ್ಯಾ ಹಾಲ್ ಕರ್ ದಿಯಾ' (ವರದಕ್ಷಿಣೆ ರೂಪದಲ್ಲಿ ಮೋಟಾರ್‌ ಸೈಕಲ್‌ನ್ನಷ್ಟೇ ಕೇಳಿದ್ದು, ಮಾವ ಎಂಥಾ ಅವಸ್ಥೆ ಮಾಡಿಬಿಟ್ರು) ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋವನ್ನು ಈವರೆಗೆ 88 ಸಾವಿರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ ಅನೇಕರನ್ನು ಆಕರ್ಷಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವಾರು ಬಳಕೆದಾರರು ವರದಕ್ಷಿಣೆ ಬೇಡಿಕೆಯ ವಿರುದ್ಧ ತಕ್ಷಣದ ಕ್ರಮವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈ ಘಟನೆಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios