ಶಾದಿ ಭಾಗ್ಯ, ಈ ಹಳ್ಳಿ ಜನರನ್ನು ಮದ್ವೆಯಾದ್ರೆ ಸರ್ಕಾರದಿಂದ ಸಿಗುತ್ತೆ 3.5 ಲಕ್ಷ ರೂ ಜೊತೆಗೆ ಖರ್ಚು ವೆಚ್ಚ!

ಹಳ್ಳಿ ಮಂದಿಯನ್ನು ಮದುವೆಯಾದರೆ ಸಾಕು ಸರ್ಕಾರದಿಂದ 3.52 ಲಕ್ಷ ರೂಪಾಯಿ, ಮದುವೆ ಖರ್ಚು ವೆಚ್ಚ, ಪ್ರಯಾಣ ವೆಚ್ಚ ಸೇರಿದಂತೆ ಎಲ್ಲವೂ ಸಿಗಲಿದೆ. ಇದು ಹಳ್ಳಿಯ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸರ್ಕಾರ ಮಾಡಿದ ಯೋಜನೆ. ಪ್ರಯತ್ನಿಸುವುದಾದರೆ ಒಂದೇ ಕಂಡೀಷನ್.
 

Govt offers women to rs 3 lakh cash award for marrying japan rural areas ckm

ಟೊಕಿಯೋ(ಸೆ.14) ಹೇಗಪ್ಪಾ ಮದುವೆಯಾಗಲಿ? ಖರ್ಚು, ಸಾಲ, ರಜೆ ಎಲ್ಲಾ ಲೆಕ್ಕಾಚಾರ ಮಾಡಿ ಮದುವೆಯಿಂದ ದೂರ ಉಳಿದಿದ್ದರೆ ಇಲ್ಲೊಂದು ಅವಕಾಶವಿದೆ. ಕಂಡೀಷನ್ ಈ ಹಳ್ಳಿ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ 3.52 ಲಕ್ಷ ರೂಪಾಯಿ ನಗದು, ಮದುವೆ ಖರ್ಚು ವೆಚ್ಚ, ನೀವು ಎಲ್ಲೆ ಇದ್ದರೂ ಪ್ರಯಾಣದ ವೆಚ್ಚ ಎಲ್ಲವನ್ನೂ ಸರ್ಕಾರ ನೀಡಲಿದೆ. ಇದರ ಜೊತೆ ಮದುವೆಯಾಗಿ ಸಂಸಾರ ನಡೆಸಲು ಬೇಕಾದ ಮನೆ ಸಾಮಾಗ್ರಿಗಳು ಸೇರಿದಂತೆ ಉಡುಗೊರೆಗಳನ್ನು ಸರ್ಕಾರವೇ ನೀಡಲಿದೆ. ಈ ಆಫರ್ ಪ್ರಯತ್ನಿಸುವುದಾದರೆ ಒಂದು ಕಂಡೀಷನ್,ಈ ಯೋಜನೆ ಜಪಾನ್ ಜಾರಿ ಮಾಡಿದೆ. ಜಪಾನ್‌ಗೆ ತೆರಳಿ ಮದುವೆಯಾಗಿ ಅಲ್ಲೆ ಸೆಟ್ಲ್ ಆಗುವ ಯೋಚನೆ ಇದ್ದರೆ ಈ ಸ್ಕೀಮ್ ಲಾಭ ಪಡೆದುಕೊಳ್ಳಬಹುದು. 

ಅಷ್ಟಕ್ಕೂ ಜಪಾನ್ ಈ ರೀತಿಯ ಯೋಜನೆ ಜಾರಿ ಮಾಡಿದ್ದೇಕೆ ಅನ್ನೋ ಕುತೂಹಲ ಕಾಡಬಹುದು. ಇದಕ್ಕೆ ಉತ್ತರವೂ ಇದೆ. ಪ್ರಮುಖವಾಗಿ ಯುವತಿಯರಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಜಪಾನ್‌ನ ಬಹುತೇಕ ಹಳ್ಳಿಯಲ್ಲಿ ಜನಸಂಖ್ಯೆ ಭಾರಿ ಕುಸಿತ ಕಾಣುತ್ತಿದೆ. ಪ್ರಮುಖವಾಗಿ ಕೆಲ ಸಮುದಾಯಗಳಲ್ಲಿ ಜನಸಂಖ್ಯೆ ಅಳಿವಿನತ್ತ ಸಾಗುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ. ಹೀಗಾಗಿ ಹಳ್ಳಿಗಾಡಿನ ಜನಸಂಖ್ಯೆ ಹೆಚ್ಚಿಸಲು ಈ ಯೋಜನೆ ಜಾರಿಗೆ ತರಲಾಗಿದೆ. 

ಮದ್ವೆಯಾಗಿ 6 ವರ್ಷದ ಬಳಿಕ ಗೊತ್ತಾಯ್ತು ಪತಿ ಕಪ್ಪಗಿದ್ದಾರೆ ಎಂದು, ರಾತ್ರೋರಾತ್ರಿ ಪತ್ನಿ ಪರಾರಿ!

ಹಳ್ಳಿಯಿಂದ ಬಹುತೇಕರು ಕೆಲಸ, ಆದಾಯಕ್ಕಾಗಿ ನಗರದತ್ತ ಮುಖ ಮಾಡಿದ್ದಾರೆ. ಇನ್ನು ಹಳ್ಳಿಯಲ್ಲಿ ವ್ಯವಸಾಯ, ಕೃಷಿ, ಉದ್ಯೋಗ ಮಾಡಿಕೊಂಡಿರುವ ಯುವಕರನ್ನು ಮದುವೆಯಾಗಲು ಬಹುತೇಕರು ಒಪ್ಪುತ್ತಿಲ್ಲ. ಒಪ್ಪಿದ್ದರೂ ನಗರದಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗುತ್ತಿದೆ. ಅದೇ ಹಳ್ಳಿಯ ಯುವತಿಯರು ನಗರವಾಸಿಗಳಾಗುತ್ತಿದ್ದಾರೆ. ಹೀಗಾಗಿ ಜಪಾನ್ ಸರ್ಕಾರ ಯುವತಿಯರಿಗೆ ಈ ವಿಶೇಷ ಪ್ಯಾಕೇಜ್ ನೀಡುತ್ತಿದೆ. 

ಹಳ್ಳಿಯಲ್ಲಿನ ಸಮುದಾಯಗಳ ಜನಸಂಖ್ಯೆ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಜನಸಂಖ್ಯಾ ಅಸಮತೋಲನ ಜಪಾನ್ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಗದು ಹಣ, ಉಡುಗೊರೆ, ಖರ್ಚು ವೆಚ್ಚ ಸೇರಿದಂತೆ ಹಲವು ರೀತಿಯ ಪ್ರಯೋಜನಗಳನ್ನು ಈ ಯೋಜನೆ ಅಡಿ ನೀಡಲಾಗುತ್ತಿದೆ. ಆದರೆ ಈ ಯೋಜನೆಗೆ ಜಪಾನ್ ವಿರೋಧ ಪಕ್ಷಗಳು ಗರಂ ಆಗಿದೆ. ಈ ಯೋಜನೆಯಿಂದ ಪ್ರಯೋಜನಕ್ಕಿಂತ ಸಮಸ್ಯಗಳೇ ಹೆಚ್ಚು. ಹೀಗಾಗಿ ಸಾಹಸ ಮಾಡುವುದು ಉಚಿತವಲ್ಲ ಎಂದಿದೆ.

ಜಗತ್ತಿನಲ್ಲಿ ಈ ಯೋಜನೆ ಹೊಸದೇನಲ್ಲ. ಇದಕ್ಕೂ ಮೊದಲು ಚೀನಾ ಇದೇ ರೀತಿ ಜನಸಂಖ್ಯಾ ಕುಸಿತ ತಪ್ಪಿಸಲು ಯೋಜನೆ ಜಾರಿ ಮಾಡಿದೆ. ಚೀನಾಗ ಗಾಂಗ್ಡೌನ್ ಪ್ರಾಂತ್ಯದಲ್ಲಿ ಮಾರ್ಚ್ ತಿಂಗಳಲ್ಲಿ ಇದೇ ರೀತಿ ಯೋಜನೆ ಜಾರಿ ಮಾಡಿದೆ. ಮದುವೆಯಾಗಿ ಮಕ್ಕಳು ಮಾಡಿಕೊಳ್ಳುವ ಜೋಡಿಗಳಿಗೆ ನಗದು ಹಣ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುತ್ತಿದೆ. ಈ ಮೂಲಕ ಯುವ ಸಮೂಹ ಮದುವೆಯಾಗಿ ಕುಟುಂಬ ವಿಸ್ತರಣೆಯಲ್ಲಿ ತೊಡಗುವು ಮೂಲಕ ಜನಸಂಖ್ಯಾ ವಯಸ್ಸಿನ ಅಸಮತೋಲನ, ಯುವ ಸಮೂಹದ ಕೊರತೆಯ ಅಸಮತೋಲನ ತಪ್ಪಿಸಲು ಮುಂದಾಗಿದೆ. 

30 ಲಕ್ಷ ರೂ ವೇತನ,ಪೋಷಕರಿಂದ ದೂರ: ಭಾವಿ ಪತಿಗೆ ಇರಬೇಕಾದ ಅರ್ಹತೆ ಲಿಸ್ಟ್ ನೀಡಿದ ಮಹಿಳೆ!
 

Latest Videos
Follow Us:
Download App:
  • android
  • ios