Relationship Tips: ಎಳ್ನೀರು ಕುಡಿದು ಅಜ್ಜಿಗೆ ದುಡ್ಡು ಕೊಡದ ಯುವತಿಗೆ ಯುವಕರಿಂದ ಪಾಠ! ಸದ್ಯ ಬಂತು ಬುದ್ಧಿ
ನ್ಯಾಯವಾಗಿ ಮತ್ತೊಬ್ಬರಿಗೆ ನೀಡಬೇಕಾದ ಹಣ ಕೊಡದೇ ಯಾರನ್ನಾದರೂ ಸತಾಯಿಸಿದ್ದೀರಾ? ಅವರಿಗೆ ಸಿಗಬೇಕಾದ ಹಣ ನೀಡದೆ “ಉಳಿಸಿದೆʼ ಎಂದು ಬೀಗಿದ್ದೀರಾ? ಹುಷಾರು, ನಾಳೆ ನಿಮಗೂ ಅಂಥದ್ದೇ ನೋವು ಎದುರಾಗುತ್ತದೆ. ಇಂಥ ಸಂದೇಶ ನೀಡುವ ಈ ವಿಡಿಯೋ ನೋಡಿ.
ಯಾರದ್ದಾದರೂ ನ್ಯಾಯದ ಹಣವನ್ನು ಕೊಡದೇ ಸತಾಯಿಸಿದ್ದೀರಾ? ಹಣ ಮಾತ್ರವಲ್ಲ, ನ್ಯಾಯವಾಗಿ ಅವರಿಗೆ ಸೇರಬೇಕಾದ ಯಾವುದೇ ವಸ್ತು, ವಿಷಯವನ್ನು ಅವರಿಗೆ ಕೊಡಮಾಡದಿರುವುದು ಸರಿಯಾದ ವರ್ತನೆಯಲ್ಲ. ಅದು ಮತ್ತೆ ಯಾವುದಾದರೊಂದು ರೂಪದಲ್ಲಿ ನಮಗೇ ತಿರುಗುಬಾಣವಾಗಬಲ್ಲದು. ಇದನ್ನೇ ನಾವು ಪಾಪದ ಕೆಲಸ ಎಂದೂ ಕರೆಯುತ್ತೇವೆ. ಆಸ್ತಿಕರು ಈ ಜನ್ಮದಲ್ಲಿ ಮಾಡಿದ ಪಾಪ ಮುಂದಿನ ಜನ್ಮದಲ್ಲಾದರೂ ಕಾಡಿಸುತ್ತದೆ ಎಂದು ಹೇಳುತ್ತಾರೆ. ಅಂದರೆ, ಅದು ಯಾವತ್ತಾದರೂ ನಮ್ಮ ಬೆನ್ನು ಬಿಡದೇ ಕಾಡುತ್ತದೆ ಎಂದರ್ಥ. ಹಾಗೆಯೇ ಇಂಥ ಅನ್ಯಾಯಗಳು ಕಂಡಾಗ ಅವುಗಳನ್ನು ಕಂಡೂ ಸುಮ್ಮನಿರುವುದು ಸಹ ಸರಿಯಲ್ಲ. ತಪ್ಪು ಮಾಡಿದವರಿಗೆ ಅದರ ಬಗ್ಗೆ ಅರಿವು ಮೂಡಿಸುವುದು ಉತ್ತಮ ಕೆಲಸ. ಇಂಥದ್ದೇ ಸಂದೇಶ ಬಿಂಬಿಸುವ ವಿಡಿಯೋವೊಂದನ್ನು ವರುಣ್ ಪೃಥಿ ಎನ್ನುವವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಯಾವುದಾದರೊಂದು ಸಾಮಾಜಿಕ ಕಳಕಳಿ ಕುರಿತು ವಿಡಿಯೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುವ ವರುಣ್ ಪೃಥಿ ಈ ಬಾರಿ ಎಳನೀರು ಮಾರುವ ಅಜ್ಜಿ ಹಾಗೂ ಅವಳಿಗೆ ಮೋಸ ಮಾಡುವ ಯುವತಿಯರ ಕುರಿತು ವಿಡಿಯೋ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕ್ಯಾಬ್ (Cab) ನಲ್ಲಿ ಪ್ರಯಾಣಿಸುವ ಯುವತಿಯೊಬ್ಬಳು (Girl) ಎಳನೀರು ಮಾರಾಟ ಮಾಡುವ ಅಜ್ಜಿಯಿಂದ ಎರಡು ಎಳನೀರು ಕೊಳ್ಳುತ್ತಾಳೆ. ಕ್ಯಾಬ್ ಚಲಿಸುವ ಸಮಯದಲ್ಲಿ ಆಕೆ ದುಡ್ಡು (Money) ಕೊಡದೇ ಸತಾಯಿಸುತ್ತಾಳೆ. ಅಜ್ಜಿ ಎಷ್ಟು ಬೇಡಿಕೊಂಡರೂ ನೀಡುವುದಿಲ್ಲ. ಮಾರನೆಯ ದಿನವೂ ಅಜ್ಜಿಯ ಬಳಿ ಎಳನೀರು ಕೇಳಿದಾಗ ಖುಷಿಯಾಗಿ “ನಿನ್ನೆದು, ಇವತ್ತಿಂದು ಸೇರಿ ಇಷ್ಟಾಗುತ್ತೆʼ ಎಂದು ಹೇಳಿದಾಗ ಯುವತಿ ಜೋರು ಮಾಡಿ ಅಜ್ಜಿಯ (Old Woman) ಬಾಯಿ ಮುಚ್ಚಿಸುತ್ತಾಳೆ.
ಅಜ್ಜಿ, “ನಾವು ಬಡವರು (Poor). ದಿನದ ಕೂಲಿಯನ್ನು ಆಧರಿಸಿ ಬದುಕುತ್ತೇವೆ. ದುಡ್ಡು ಕೊಡಿʼ ಎಂದು ಮನವಿ ಮಾಡಿದರೂ ಮತ್ತೆ ನೀಡದೆ ಹೋಗುತ್ತಾರೆ. ಅಷ್ಟೇ ಅಲ್ಲ, ಆಕೆ ತನ್ನ ಗೆಳತಿಗೆ (Friend) “ನೋಡು, ಇವತ್ತೂ ಅಜ್ಜಿಯಿಂದ ಫ್ರೀ ಆಗಿ ಎಳನೀರು ಪಡೆದೆ, ಮಜಾ ಮಾಡೋಣʼ ಎಂದು ಮಾತಾಡಿಕೊಂಡು ನಗುತ್ತಾರೆ.
ಇದನ್ನೆಲ್ಲಾ ಮಾಡೋದು ಬಿಟ್ರೆ ಪತ್ನಿಯಾಗಿ ನೀವು ಹ್ಯಾಪಿಯಾಗಿರಲು ಸಾಧ್ಯ!
ಮಾರನೆಯ ಸನ್ನಿವೇಶದಲ್ಲಿ, ಆ ಹುಡುಗಿ ಕೆಫೆಯೊಂದನ್ನು ನಡೆಸುತ್ತಿರುತ್ತಾಳೆ. ಅಲ್ಲಿಗೆ ಬರುವ ಮೂರು ಯುವಕರು (Youth) ಹಣ ನೀಡದೆ ಹಾಗೆಯೇ ಪರಾರಿಯಾಗುತ್ತಾರೆ. ಬರ್ಗರ್, ಸ್ಯಾಂಡ್ ವಿಚ್ ತಿಂದು ಹಣ ನೀಡದೇ ಹೋದಾಗ ಯುವತಿ ಪರಿತಪಿಸುತ್ತಾಳೆ. “ಇಂದಿನ ದಿನಗಳಲ್ಲಿ ಯಾರಿಗೂ ಮೌಲ್ಯವೇ (Values) ಇಲ್ಲ, ಮೊದಲ ದಿನವೇ ಹೀಗಾದರೆ ನಾನು ಕೆಫೆ ಹೇಗೆ ನಡೆಸಲಿ? ಎಲ್ಲ ಬರೀ ಮೋಸಗಾರರು (Cheat)ʼ ಎಂದೆಲ್ಲ ಹಲುಬುತ್ತಾಳೆ.
ಆಗ ಮತ್ತೆ ಆ ಯುವಕರು ಪ್ರವೇಶಿಸುತ್ತಾರೆ. ಅವರನ್ನು ಕಂಡ ಯುವತಿ, “ನೀವೇ ತಿಂಡಿ ತಿಂದು ಹಣ ನೀಡದೇ ಹಾಗೆಯೇ ಹೋಗಿರುವವರು. ಹೀಗೆ ಮಾಡೋದು ನ್ಯಾಯವಾ (Justice)? ಎಂದೆಲ್ಲ ಪ್ರಶ್ನಿಸುತ್ತಾಳೆ. ಆಗ ಯುವಕರು, “ನೀವೂ ಸಹ ಎಳನೀರು ಮಾರಾಟ ಮಾಡುವ ಅಜ್ಜಿಗೆ ಹಣ ಕೊಡದೇ ಸತಾಯಿಸಿದ್ದಿರಲ್ಲವೇ? ನ್ಯಾಯದ ಹಣ ದೊರೆಯದೇ ಹೋದಾಗ, ಕಷ್ಟಪಟ್ಟು ದುಡಿದ ಹಣ ಲಭಿಸದಿದ್ದಾಗ ಎಷ್ಟು ನೋವಾಗುತ್ತದೆ ಎನ್ನುವುದು ನಿಮಗೀಗ ತಿಳಿಯಿತಲ್ಲವೇ?ʼ ಎಂದು ಪ್ರಶ್ನಿಸುತ್ತಾರೆ. ಹಣ ನೀಡಲು ಮುಂದೆ ಬರುತ್ತಾರೆ. ಹಣ ತೆಗೆದುಕೊಳ್ಳದೆ “ಹೌದು, ಆ ನೋವು (Pain) ನನಗೀಗ ಅರ್ಥವಾಯಿತುʼ ಎಂದು ಬಿಕ್ಕುತ್ತಾಳೆ ಯುವತಿ.
Real Story: ನಾನು ಗೇ ಅಂದ್ಕೊಂಡ ಕುಟುಂಬಸ್ಥರು ಮದುವೆ ಮಾಡ್ತಿಲ್ಲ!
ಮಾರನೆಯ ಬೆಳಗ್ಗೆ ಎಳನೀರು ಮಾರಾಟ ಮಾಡುವ ಅಜ್ಜಿಯ ಬಳಿಗೆ ಹೋಗಿ “ತಪ್ಪಾಯಿತು (Sorry)ʼ ಎಂದು ಹೇಳಿ ಹಣ ನೀಡುತ್ತಾಳೆ. ಆಗ ಅಜ್ಜಿ, “ನಾವು ಬಡವರು ಕಷ್ಟಪಟ್ಟು ದುಡಿದ ಹಣವನ್ನು ಕಸಿಯಬಾರದು. ಯಾವ ಬಡವರಿಗೂ ಹೀಗೆ ಮಾಡಬೇಡʼ ಎಂದು ಬುದ್ಧಿ ಹೇಳುತ್ತಾಳೆ. ಮತ್ತೊಬ್ಬರನ್ನು ನೋವಿಗೆ ಗುರಿಮಾಡಿದರೆ ನಮಗೂ ನೋವು ಎದುರಾಗುತ್ತದೆ ಎನ್ನುವ ಪಾಠ ಹೇಳುವ ವಿಡಿಯೋ (Video) ಸಾಕಷ್ಟು ಕಾಮೆಂಟ್ ಗಳನ್ನೂ ಗಳಿಸಿದೆ.