ನನ್ನ ತಮ್ಮನಿಗೂ ನನ್ನ ಗೆಳತಿಗೂ ಲೈಂಗಿಕ ಸಂಬಂಧ, ಸಹಿಸಿಕೊಳ್ಳೋಕೆ ಆಗ್ತಿಲ್ಲ ಅಂತಿದ್ದಾಳೆ ಅಕ್ಕ
Relationship News: ಗೆಳತಿಯನ್ನು ಮನೆಗೆ ಕರೆದುಕೊಂಡು ಬಂದಳಂತೆ, ಅದಾದ ನಂತರ ತಮ್ಮನಿಗೆ ಪರಿಚಯ ಮಾಡಿಸಿದಳಂತೆ. ಈಗ ನೋಡಿದ್ರೆ, ಗೆಳತಿ ಇವಳನ್ನು ಬಿಟ್ಟು ತಮ್ಮನೊಡನೆ ಹೆಚ್ಚು ಸಮಯ ಕಳೆಯುತ್ತಾಳೆ. ಜತೆಗೆ ಇಬ್ಬರ ನಡುವೆಯೂ ದೈಹಿಕ ಸಂಬಂಧವೂ ಇದೆಯಂತೆ.
ಪ್ರಶ್ನೆ: ನನಗೆ ಇಪ್ಪತ್ತೆರಡು ವರ್ಷ. ನನ್ನ ತಮ್ಮನಿಗೆ ಇಪ್ಪತ್ತು ವರ್ಷ. ನನ್ನ ಕ್ಲಾಸ್‌ಮೇಟ್ ಒಬ್ಬಳು ನನ್ನ ಆತ್ಮೀಯ ಗೆಳತಿ. ಆಕೆ ಒಮ್ಮೆ ನಮ್ಮ ಮನೆಗೆ ಬಂದಳು. ಆಕೆಯನ್ನು ನನ್ನ ತಮ್ಮನಿಗೆ ಪರಿಚಯ ಮಾಡಿಕೊಟ್ಟೆ. ಅಂದಿನಿಂದ ಅವರಿಬ್ಬರೂ ಪರಿಚಯವಾಗಿದ್ದಾರೆ ಎಂದು ನನಗೆ ಗೊತ್ತಾಗಿದೆ. ಅವರಿಬ್ಬರ ಮಧ್ಯೆ ಮೆಸೇಜ್‌ಗಳು ಓಡಾಡುವುದನ್ನು ನಾನು ನೋಡಿದ್ದೇನೆ. ಆದರೆ ಇತ್ತೀಚೆಗೆ ನನಗೆ ಇನ್ನೊಂದು ಅನುಮಾನ ಶುರುವಾಗಿದೆ. ಅವರಿಬ್ಬರೂ ನಾನು ಜೊತೆಗಿಲ್ಲದೆ ಹೋದಾಗ ಸೇರುತ್ತಾರೆ. ಗೆಳತಿಯ ತಂದೆ ತಾಯಿ ಅವಳ ಮನೆಯಲ್ಲಿ ಇಲ್ಲದೆ ಹೋದಾಗ ಸಾಮಾನ್ಯವಾಗಿ ನನ್ನನ್ನು ಮನೆಗೆ ಕರೆಯುತ್ತಿದ್ದಳು. ಈಗ ಕರೆಯುವುದಿಲ್ಲ. ಅವಳೊಬ್ಬಳೇ ಇರುತ್ತಾಳೆ. ಆದರೆ ಅದೇ ಹೊತ್ತಿಗೆ ನನ್ನ ತಮ್ಮನೂ ಮನೆಯಿಂದ ಮಿಸ್ಸಿಂಗ್ ಆಗಿರುತ್ತಾನೆ. ಇಬ್ಬರ ನಡುವೆಯೂ ಸೆಕ್ಸ್ ಸಂಬಂಧ ಶುರುವಾಗಿದೆ ಎಂಬುದು ನನ್ನ ಅನುಮಾನ. ಇಬ್ಬರೂ ಲವ್ ಮಾಡಿಕೊಳ್ತಿದ್ದಾರಾ ಅಂತ ಕೇಳಿದೆ. ಹಾಗೇನೂ ಇಲ್ಲ ಅಂದ್ಳು ನನ್ನ ಗೆಳತಿ. ನನ್ನ ತಮ್ಮನ ಓದಿಗೆ ಇದರಿಂದ ಹಿನ್ನಡೆ ಉಂಟಾಗಬಹುದು ಅಂತ ನಂಗೆ ಭಯ. ನಂಗೆ ಅನುಮಾನದಿಂದ ಹುಚ್ಚು ಹಿಡಿದಂತಾಗಿದೆ. ಗದರಿಸಿ ಕೇಳೋಣ ಅಂದರೆ ನಂಗೆ ತಮ್ಮನ ಜೊತೆಗಾಗಲೀ, ಗೆಳತಿಯ ಜೊತೆಗಾಗಲೀ ವಿರಸ ಸೃಷ್ಟಿಸಿಕೊಳ್ಳುವುದು ಇಷ್ಟವಿಲ್ಲ. ಈ ವಿಚಾರ ನಮ್ಮ ತಂದೆ- ತಾಯಿ ಬಳಿಗೆ ಹೋಗವುದು ನಂಗೆ ಇಷ್ಟವಿಲ್ಲ. ಪರಿಹಾರ ಸೂಚಿಸಿ.
ಉತ್ತರ: ಇಲ್ಲಿ ಹಲವು ವಿಚಾರಗಳಿವೆ, ಒಂದು, ಅವರಿಬ್ಬರ ನಡುವೆ ಸೆಕ್ಸ್ ಸಂಬಂಧ ಇದೆ ಅಂತ ಯಾಕೆ ಅಂದುಕೊಳ್ತಿದೀರಿ ಎಂಬುದು ಸ್ಪಷ್ಟವಾಗಿಲ್ಲ. ಅವರೇನಾದರೂ ಸೆಕ್ಸ್ ಮಾಡುತ್ತಿರುವಾಗಲೇ ನಿಮ್ಮ ಕೈಗೆ ಸಿಕ್ಕಿಬಿದ್ದಿದ್ದಾರೆಯೇ? ನಮಗೆ ಸಂಬಂಧ ಇದೆ ಎಂದು ನಿಮ್ಮ ತಮ್ಮನಾಗಲೀ, ಗೆಳತಿಯಾಗಲೀ ಹೇಳಿಕೊಂಡರೇ? ಇಲ್ಲವಲ್ಲ. ಹಾಗಿರುವಾಗ ಅವರ ಸಂಬಂಧವನ್ನು ಊಹಿಸಿಕೊಳ್ಳುವ ಹಿಂಸೆ ನಿಮಗೆ ಯಾಕೆ? ಅಥವಾ, ಒಂದು ವೇಳೆ ಅವರ ನಡುವೆ ಸಂಬಂಧ ಇದ್ದರೂ, ನಡುವೆ ಏನಾದರೂ ಸಮಸ್ಯೆ ತಲೆದೋರಿದೆಯೇ? ಅದನ್ನು ಬಿಡಿಸಲು ನಿಮ್ಮನ್ನು ಕೋರಿಕೊಂಡಿದ್ದಾರೆಯೇ? ಅವರು ಬಿಡಿಸಲು ನಿಮ್ಮಲ್ಲಿ ಕೇಳಿಕೊಳ್ಳದೆ ಇರುವಾಗ, ಮಧ್ಯೆ ತಲೆ ತೂರಿಸಲು ಯಾಕೆ ಬಯಸುತ್ತಿದ್ದೀರಿ?
ಇದನ್ನೂ ಓದಿ: #Feelfree: ವಯಾಗ್ರ ಸೇವಿಸಿದ ಮೇಲೆ ಹೀಗ್ಯಾಕಾಯ್ತು?
ಇದರಲ್ಲಿ ಇನ್ನೂ ಒಂದು ಆಯಾಮವಿದೆ ಎಂದು ನೀವು ಭಾವಿಸಿರಬಹುದು. ಈ ಸಂಬಂಧದಲ್ಲಿ ಪಾಲ್ಗೊಂಡ ಇಬ್ಬರೂ ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಕರು. ಒಬ್ಬಾತ ನಿಮ್ಮ ತಮ್ಮ, ಇನ್ನೊಬ್ಬಾಕೆ ನಿಮ್ಮ ಗೆಳತಿ. ಇಬ್ಬರ ಮೇಲೂ ನಿಮಗೆ ಹಕ್ಕಿದೆ ಎಂದು ನೀವು ಭಾವಿಸಿದ್ದೀರಿ. ಆದರೆ ಇಬ್ಬರೂ ಪ್ರಾಯಕ್ಕೆ ಬಂದವರು. ತಮ್ಮ ದೇಹ, ಭವಿಷ್ಯ, ಕಲಿಕೆ ಎಲ್ಲದರ ಬಗ್ಗೆಯೂ ತಮ್ಮದೇ ನಿರ್ಧಾರ ತೆಗೆದುಕೊಳ್ಳಲು ಸಮರ್ಥರು. ಕಾನೂನು ಕೂಡ ಇದನ್ನು ಒಪ್ಪುತ್ತದೆ. ಪ್ರಾಯಕ್ಕೆ ಬಂದ ಇಬ್ಬರೂ ಆರೋಗ್ಯಕರ ಸೆಕ್ಸ್ ಸಂಬಂಧ ಹೊಂದಿದ್ದರೆ, ಅದರಿಂದ ನಿಮ್ಮಿಬ್ಬರ ಫ್ಯಾಮಿಲಿಯ ಮೇಲೆ ಯಾವುದೇ ನೆಗೆಟಿವ್ ಪರಿಣಾಮ ಇಲ್ಲದಿದ್ದರೆ ಅದರಿಂದ ನಿಮಗೇನೂ ಬಾಧಕವಿಲ್ಲ. ನೀವು ಚಿಂತಿಸಬೇಕಾಗಿಯೂ ಇಲ್ಲ.
ಇದನ್ನೂ ಓದಿ: #Feelfree: ನನ್ ಗಂಡ ಪ್ಯಾಂಟಿ ಕದೀತಾರೆ..!
ಇಷ್ಟಿದ್ದರೂ ನಿಮ್ಮ ಮೇಲೆ ಒಂದು ಹೊಣೆ ಇದ್ದೇ ಇದೆ. ಅದು, ನಿಮ್ಮ ತಮ್ಮ ದಾರಿ ತಪ್ಪದಂತೆ ನೋಡಿಕೊಳ್ಳುವುದು. ಕಾಲೇಜು ಕಲಿಯುತ್ತಿರುವಾಗಲೇ ಸೆಕ್ಸ್ ಸಂಬಂಧದಲ್ಲಿ ಬಿದ್ದು ಮುಂದಿನ ಭವಿಷ್ಯದ ಹಾದಿಯನ್ನು ಕಂಟಕ ಮಾಡಿಕೊಳ್ಳಲೂ ಸಾಧ್ಯವಿದೆ. ಇದನ್ನು ನಿವಾರಿಸಬೇಕು. ಇದನ್ನು ಮೃದುವಾಗಿ, ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ಬಿಡಿಸಿಕೊಳ್ಳುವಂತೆ ನಾಜೂಕಾಗಿ ಬಿಡಿಸಬೇಕು. ಹೇಗೆ ಮಾಡುತ್ತೀರಿ ಎಂಬುದು ನಿಮಗೇ ಬಿಟ್ಟದ್ದು.