Asianet Suvarna News Asianet Suvarna News

ಗೆಳತಿ ಇನ್ನೊಬ್ಬನನ್ನು ಮದ್ವೆಯಾಗ್ತಿದ್ದಾಳೆ, ಮೂವ್ ಆನ್ ಆಗೋಕಾಗ್ತಿಲ್ಲ ಏನ್ಮಾಡ್ಲಿ ?

ಪ್ರೀತಿ (Love) ಮಾಡೋದು ಸುಲಭ. ಆದ್ರೆ ಸಂಗಾತಿ (Partner) ದೂರವಾದಾಗ ಆ ಭಾವನೆಯಿಂದ ಹೊರಬರುವುದು ಕಷ್ಟ. ಇಲ್ಲೊಬ್ಬ ವ್ಯಕ್ತಿ ಅಂಥದ್ದೇ ಸಮಸ್ಯೆಯಿಂದ ನೋವನ್ನು ಅನುಭವಿಸುತ್ತಿದ್ದಾರೆ. ಪ್ರೀತಿಸಿದ ಹುಡುಗಿ ಇನ್ನೊಬ್ಬನ ಕೈ ಹಿಡಿಯಲು ಸಿದ್ಧವಾಗಿದ್ದಾಳೆ. ಈತ ಮಾತ್ರ ಆಕೆಯನ್ನು ಮರೆಯೋಕಾಗ್ತಿಲ್ಲ ಅನ್ತಿದ್ದಾನೆ. ಆತನ ಸಮಸ್ಯೆಗೆ ತಜ್ಞರು (Experts) ಏನ್‌ ಉತ್ತರ ಹೇಳಿದ್ದಾರೆ. ತಿಳಿಯೋಣ.

Girlfriend Ready To Marry Another Man, But I Cant Forget Her Vin
Author
Bengaluru, First Published Jul 8, 2022, 3:54 PM IST

ಜೀವನ (Life)ದಲ್ಲಿ ಅತ್ಯಂತ ಕಷ್ಟವಾದ ವಿಚಾರಗಳಲ್ಲೊಂದು ಸೂಕ್ತವಾದ ಸಂಗಾತಿ (Partner)ಯನ್ನು ಆಯ್ಕೆ ಮಾಡಿಕೊಳ್ಳುವುದು. ಪ್ರತಿಯೊಬ್ಬರೂ ಜೀವನದಲ್ಲಿ ತಮಗೆ ಸೂಕ್ತವಾದ ಅತ್ಯುತ್ತಮ ಸಂಗಾತಿಯನ್ನು ಪಡೆಯಬೇಕೆಂದೇ ಬಯಸುತ್ತಾರೆ. ಆದರೆ ಪ್ರೀತಿಯ ಈ ಖುಷಿಯ ಕ್ಷಣದಲ್ಲಿ ಕೆಲವೊಮ್ಮೆ ಹಿನ್ನಡೆಯಾಗುತ್ತದೆ. ಪ್ರೀತಿಸಿದವರು ದೂರವಾಗಿಬಿಡುತ್ತಾರೆ. ಹೀಗಾದಾಗ ಏನ್ಮಾಡಲಿ ಎಂದು ವ್ಯಕ್ತಿಯೊಬ್ಬರು ಸಮಸ್ಯೆ ಹೇಳಿಕೊಂಡಿದ್ದಾರೆ.

ಪ್ರಶ್ನೆ: ನಾನು 20 ವರ್ಷದ ಅವಿವಾಹಿತ ಹುಡುಗ. ನಾನು ಪ್ರಸ್ತುತ ಬಿ.ಟೆಕ್ 3 ನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ನನಗಿಂತ ಎರಡೂವರೆ ವರ್ಷ ದೊಡ್ಡ ಗೆಳತಿ ಇದ್ದಾಳೆ. ನಾವಿಬ್ಬರೂ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದೇವೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ನಾವಿಬ್ಬರೂ ಮದುವೆಯಾಗಲು ಬಯಸುತ್ತೇವೆ. ಆದರೆ ಆಕೆಯ ಪೋಷಕರು ಆಕೆಯ ಸೋದರ ಸಂಬಂಧಿಯೊಂದಿಗೆ ಮದುವೆ ಮಾಡುತ್ತಿದ್ದಾರೆ. ಮನೆಯಲ್ಲಿ ಅವರಿಬ್ಬರ ಮದುವೆಯ ಮಾತುಗಳು ನಡೆಯುತ್ತಿರುವಾಗ, ನನ್ನ ಗೆಳತಿ ನಮ್ಮ ಬಗ್ಗೆ ಎಲ್ಲವನ್ನೂ ತನ್ನ ಹೆತ್ತವರಿಗೆ ಹೇಳಿದಳು. ಆದರೆ ಅವಳ ಕುಟುಂಬ ಸದಸ್ಯರು ನಮ್ಮ ಸಂಬಂಧವನ್ನು ನಿರಾಕರಿಸಿದರು. 

ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್‌ ಆಯ್ತು, ಆದ್ರೆ ಆಕೆ ನೆನಪಿನಿಂದ ಹೊರಬರೋಕೆ ಆಗ್ತಿಲ್ಲ. ಏನ್ಮಾಡ್ಲಿ ?

ಗೆಳತಿಯನ್ನು ಕೋಣೆಯಲ್ಲಿ ಕೂಡಿಹಾಕಿದರು. ನನ್ನೊಂದಿಗೆ ಮಾತನಾಡಲು ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದರು. ಅವರು ನನ್ನೊಂದಿಗೆ ಮಾತನಾಡಲು ತುಂಬಾ ಪ್ರಯತ್ನಿಸಿದಳು. ಆದರೆ ಇದ್ಯಾವುದೂ ಸಾಧ್ಯವಾಗಲ್ಲಿಲ್ಲ. ಈ ಮಧ್ಯೆ ಅವಳ ಮದುವೆಯನ್ನು ಒಂದು ವರ್ಷ ಮುಂದೂಡಿದರು. ಆದರೆ ಈ ವೇಳೆ ಗೆಳತಿಯ ಕುಟುಂಬಸ್ಥರು ಅಕೆಯನ್ನು ಪ್ರೀತಿಸುವುದನ್ನು ಮುಂದುವರೆಸಿದರೆ, ನನಗೆ ಹಾನಿ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅವಳು ನಿನ್ನ ಜೀವನವನ್ನು ಹಾಳುಮಾಡಲು ನಾನು ಬಯಸುವುದಿಲ್ಲ ಎಂದು ಹೇಳಿದಳು. ಅದಕ್ಕೇ ನಿನ್ನಿಂದ ದೂರ ಹೋಗುತ್ತಿದ್ದೇನೆ. ನನ್ನ ತಂದೆ ತಾಯಿಯ ಮಾತು ಕೇಳದಿದ್ದರೆ ನಿನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ಕರೆ ಕಟ್ ಮಾಡಿ ನನ್ನಿಂದ ದೂರವಾದಳು. ಆದರೆ ನಾನು ಅವಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೇನೆ. ಅವನಿಲ್ಲದ ನನ್ನ ಜೀವನದ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ನಾನು ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ.

ತಜ್ಞರ ಉತ್ತರ: ಫೋರ್ಟಿಸ್ ಹೆಲ್ತ್‌ಕೇರ್‌ನ ಮಾನಸಿಕ ಆರೋಗ್ಯ ಮತ್ತು ನಡವಳಿಕೆಯ ವಿಜ್ಞಾನ ವಿಭಾಗದ ಮುಖ್ಯಸ್ಥೆ ಕಾಮ್ನಾ ಛಿಬ್ಬರ್ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನೀವು ಗೆಳತಿಯ ನಿರ್ಧಾರವನ್ನು ಗೌರವಿಸಬೇಕು. ಯಾವುದೇ ರೀತಿಯ ಒತ್ತಡವನ್ನು ಸೃಷ್ಟಿಸಿ ಅವರ ನಿರ್ಧಾರವನ್ನು ಸಂಕೀರ್ಣಗೊಳಿಸಲು ಪ್ರಯತ್ನಿಸಬೇಡಿ ಎಂದಿದ್ದಾರೆ.

ಗೆಳತಿಯನ್ನು ಬಿಡುವುದು ಉತ್ತಮ: ನೀವಿಬ್ಬರೂ ಪರಸ್ಪರ ಡೇಟಿಂಗ್ ಆರಂಭಿಸಿದಾಗ ಇಂತಹ ನಿರ್ಧಾರವನ್ನು ನೀವು ನಿರೀಕ್ಷಿಸಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿಮ್ಮ ಗೆಳತಿ ಪ್ರತಿದಿನ ಏನನ್ನು ಅನುಭವಿಸುತ್ತಿದ್ದಾಳೆಂದು ನಿಮಗೆ ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಅವರಿಂದ ದೂರವಿರುವುದು ಬಹಳ ಮುಖ್ಯ. ನೀವು ಇದನ್ನು ಮಾಡುವುದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನೀವು ಎಲ್ಲವನ್ನೂ ತಿಳಿದಿದ್ದರೂ ನಿಮ್ಮ ಗೆಳತಿಯೊಂದಿಗೆ ಸಂಬಂಧವನ್ನು ಮುರಿದುಕೊಳ್ಳದಿದ್ದರೆ ತುಂಬಾ ತೊಂದರೆಯಾಗಬುದು.

ಯಪ್ಪಾ..! ಪುರುಷರು ಮಹಿಳೆ ಬಗ್ಗೆ ಹೀಗೆಲ್ಲಾ ಗೂಗಲ್‌ ಮಾಡ್ತಾರಂತೆ !

ವೃತ್ತಿಯ ಮೇಲೆ ಗಮನ ಕೇಂದ್ರೀಕರಿಸಿ: ಪ್ರಸ್ತುತ ಬಿ.ಟೆಕ್ ಮೂರನೇ ವರ್ಷದಲ್ಲಿ ಓದುತ್ತಿದ್ದೀರಿ ಎಂದು ತಿಳಿಸಿದರಂತೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿ. ಮದುವೆಯಾಗುವ ಮೊದಲು ಜೀವನದಲ್ಲಿ ಸಾಧಿಸಲು ಹಲವು ವಿಷಯಗಳಿವೆ. ಆದರೆ ಇದಕ್ಕಾಗಿ ನಿಮ್ಮ ವೃತ್ತಿಜೀವನವನ್ನು ಹಾಳುಮಾಡುವುದು ಮೂರ್ಖತನವಾಗಿದೆ.

ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ:  ಪ್ರೀತಿಸಿದವರು ದೂರವಾದರು ಎಂದ ಮಾತ್ರಕ್ಕೆ ಲೈಫ್ ಮುಗಿಯಿತೆಂದು ಅರ್ಥವಲ್ಲ. ಜೀವನದಲ್ಲಿ ಇನ್ನೂ ಹಲವಾರು ಖುಷಿಯ ವಿಚಾರಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೀವು ನಿಮ್ಮನ್ನು ನಿಮ್ಮಂತೆಯೇ ಪ್ರೀತಿಸುವ ಸಂಗಾತಿಯನ್ನು ಪೆಡೆಯುವಿರಿ. ಹೀಗಾಗಿ ಎಲ್ಲವನ್ನೂ ಮರೆಯಲು ಪ್ರಯತ್ನಿಸಿ. ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಪುಸ್ತಕ ಓದಿ, ಸಂಗೀತ ಆಲಿಸಿ. ಟ್ರಾವೆಲಿಂಗ್ ಮಾಡಿ. ಇದು ನಿಮ್ಮಲ್ಲಿ ಹೊಸ ನಗುವನ್ನು ತರುತ್ತದೆ. 

ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

Follow Us:
Download App:
  • android
  • ios