ಯಪ್ಪಾ..! ಪುರುಷರು ಮಹಿಳೆ ಬಗ್ಗೆ ಹೀಗೆಲ್ಲಾ ಗೂಗಲ್‌ ಮಾಡ್ತಾರಂತೆ !

ಇವತ್ತಿನ ದಿನಗಳಲ್ಲಿ ಗೂಗಲ್‌ (Google) ಅನ್ನೋದು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಕ್ವಿಕ್ ಮೆಥಡ್‌. ಮನಸ್ಸಿನಲ್ಲಿ ಏನು ಡೌಟ್ ಬಂದ್ರೂ ಎಲ್ರೂ ತಕ್ಷಣಕ್ಕೆ ಗೂಗಲ್ ಮಾಡಿ ಆನ್ಸರ್ ಪಡೀತಾರೆ. ಮೂರೂ ಹೊತ್ತು ಮೊಬೈಲ್‌ (Mobile)ನಲ್ಲಿರೋ ಪುರುಷರು (Men) ಮಹಿಳೆ (Women)ಯರ ಬಗ್ಗೆ ಏನೆಲ್ಲಾ ವಿಚಾರಗಳನ್ನು ಸರ್ಚ್ ಮಾಡ್ತಾರೆ ಗೊತ್ತಾ ? 

What Do Boys Search The Most On Google, Shocking Revelation Vin

ಇವತ್ತಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಏನಿಲ್ಲದಿದ್ದರೂ ಮೊಬೈಲ್‌ (Mobile) ಅಂತೂ ಇರುತ್ತೆ. ಅದ್ರಲ್ಲೂ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇದ್ರಂತೂ ಮುಗೀತು. ಮೂರು ಹೊತ್ತೂ ಮೊಬೈಲ್‌ನಲ್ಲಿ ಸ್ಕ್ರಾಲ್ ಮಾಡೋದೆ ಕೆಲ್ಸ. ಅದ್ರಲ್ಲೂ ಸೋಷಿಯಲ್ ಮೀಡಿಯಾ (Social Media)ಗಳು ಆರಂಭವಾದಾಗಿನಿಂದ ಜನ್ರು ಯಾವಾಗ್ಲೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ವೀಡಿಯೋ, ಚಾಟ್ಸ್, ಫೋಟೋಸ್ ಅಪ್‌ಲೋಡ್‌, ಕಾಮೆಂಟ್ ಅಂತಾನೇ ಸಮಯ ಹೋಗುತ್ತೆ. ಅದಲ್ಲದೆ ಮೊಬೈಲ್‌ನಿಂದ ಆಗೋ ಅತಿ ದೊಡ್ಡ ಪ್ರಯೋಜನವೆಂದರೆ ನಮಗೆ ಗೊತ್ತಿಲ್ಲದ ಯಾವುದೇ ವಿಷ್ಯವನ್ನು ಗೂಗಲ್ (Google) ಮಾಡಿ ಸುಲಭವಾಗಿ ತಿಳ್ಕೋಬೋದು. ಬೇರೆಯವರತ್ರ ಕೇಳಿದ್ರೆ ಏನ್ ಅಂದ್ಕೊತಾರೋ ಅನ್ನೋ ಚಿಂತೆಯಿಲ್ಲ. ಅಯ್ಯೋ ಇಷ್ಟು ಚಿಕ್ಕ ವಿಷ್ಯಾನೇ ಗೊತ್ತಿಲ್ವಾ ಅಂತ ಗೂಗಲ್ ಏನೂ ಅಣಕಿಸಲ್ಲ. ಹೀಗಾಗಿ ಯಾವುದೇ ಭಯವಿಲ್ಲದೆ ಆರಾಮವಾಗಿ ಗೂಗಲ್‌ನಿಂದ ಮಾಹಿತಿ ಪಡ್ಕೊಳ್‌ಬೋದು. 

ವಯಸ್ಸಿಗೆ ತಕ್ಕಂತೆ ಜನರು ಗೂಗಲ್‌ನಲ್ಲಿ ತಮಗೆ ಬೇಕಾದ್ದನ್ನು ಸರ್ಚ್ (Search) ಮಾಡಿ ನೋಡುತ್ತಾರೆ. ಪುಟ್ಟ ಮಕ್ಕಳು ರೈಮ್ಸ್‌ ನೋಡಿದ್ರೆ, ಕಾಲೇಜಿಗೆ ಹೋಗೋ ಸ್ಟೂಡೆಂಟ್ಸ್ ಅಸೈನ್‌ಮೆಂಟ್‌, ನೋಟ್ಸ್ ಹುಡುಕಿಕೊಳ್ತಾರೆ. ಹುಡುಗೀರು ತಮ್ಮ ಹೈಟ್‌, ವೈಟ್‌ಗೆ ಸೂಟ್ ಆಗೋ ಟ್ರೆಂಡೀ ಡ್ರೆಸ್ ಯಾವ್ದು ಅಂತ ನೋಡ್ತಾರೆ. ವಯಸ್ಸಾದವರು ಮೊಣಕಾಲು ನೋವಿಗೆ. ಸೊಂಟ ನೋವಿಗೆ ಪರಿಹಾರವೇನು ತಿಳ್ಕೊತಾರೆ. ಆದ್ರೆ ಪುರುಷರು ಮಹಿಳೆಯರ ಬಗ್ಗೆ ಗೂಗಲ್‌ನಲ್ಲಿ ಏನು ಹುಡುಕ್ತಾರೆ ನಿಮಗೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್‌ ವಿಚಾರ.

ಹೆಚ್ಚು ಹೈಟ್ ಇರೋ ಪುರುಷರನ್ನು ಕಾಡುತ್ತೆ ನರ ನೋವಿನ ಸಮಸ್ಯೆ !

ಲೈಂಗಿಕತೆಯ ಬಗ್ಗೆ ಅತಿ ಹೆಚ್ಚು ಸರ್ಚಿಂಗ್‌: ಫ್ರಮ್ ಮಾರ್ಸ್‌ ಡಾಟ್‌ ಕಾಮ್‌ ವರದಿಯ ಪ್ರಕಾರ ಪುರುಷರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕುವ ವಿಷಯವೆಂದರೆ ಲೈಂಗಿಕತೆಯ ಬಗ್ಗೆಯಾಗಿದೆ. ವರದಿಯ ಪ್ರಕಾರ ಪ್ರತಿ ವರ್ಷ ಸುಮಾರು 68 ಸಾವಿರ ಪುರುಷರು ತಾವು ದುರ್ಬಲರೇ  ಎನ್ನುವ ವಿಚಾರದ ಬಗ್ಗೆ ಸರ್ಚ್ ಮಾಡುತ್ತಾರಂತೆ.  ಮಾತ್ರವಲ್ಲ ಲೈಂಗಿಕ ಕ್ರಿಯೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು. ಹುಡುಗಿಯರನ್ನು ಹೇಗೆ ಖುಷಿಪಡಿಸಬೇಕು ಮೊದಲಾದ ಮಾಹಿತಿಗಳನ್ನು ಓದಿ ತಿಳಿದುಕೊಳ್ಳುತ್ತಾರಂತೆ.

ಗಡ್ಡ, ಕೂದಲಿನ ಬೆಳವಣಿಗೆ ಬಗ್ಗೆ ಹುಡುಕಾಟ: ಕ್ಷೌರ ಮಾಡುವ ವಿಚಾರ, ಗಡ್ಡ ಕೂದಲು ಹೆಚ್ಚು ಬೆಳೆಯುತ್ತದೆಯೇ ಎನ್ನುವ ಬಗ್ಗೆಯೂ ತಿಳಿದುಕೊಳ್ಳಲು ಗೂಗಲ್ ನೆರವು ಪಡೆಯುತ್ತಾರಂತೆ. ಗಡ್ಡವನ್ನು ದಪ್ಪವಾಗಿಸುವ ಮಾರ್ಗಗಳು ಯಾವುವು ಎನ್ನುವುದನ್ನು ಕೂಡಾ ಹೆಚ್ಚಿನ ಹುಡುಗರು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ ಎಂಬುದು ವರದಿಯಿಂದ ತಿಳಿದುಬಂದಿದೆ. ಟೋಪಿ ಧರಿಸುವುದು ಕೂದಲಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಪೋನಿಟೇಲ್ ಮಾಡುವುದು ಅಥವಾ ಟೋಪಿ ಧರಿಸುವುದು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೇ ಎನ್ನುವುದನ್ನು ಕೂಡಾ  ಪುರುಷರು ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ. ವರ್ಕೌಟ್ ದಿನಚರಿ, ಬಾಡಿ ಬಿಲ್ಡಿಂಗ್ ಹೇಗೆ ಮಾಡಬೇಕು ಮತ್ತು ಯಾವ ಪ್ರೊಟೀನ್ ಶೇಕ್ ಕುಡಿಯಬೇಕು ಈ ಎಲ್ಲಾ ಪ್ರಶ್ನೆಗಳಿಗೆ ಹುಡುಗರು ಉತ್ತರ ಕಂಡು ಕೊಳ್ಳುವುದು ಗೂಗಲ್ ಸರ್ಚ್ ನಲ್ಲಿ.

ಸೆಕ್ಸ್ ಬಳಿಕ ಪುರುಷರ ತಲೇಲಿ ಏನೆಲ್ಲಾ ವಿಷ್ಯಗಳು ಓಡುತ್ತೆ?

ಮಹಿಳೆಯರ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ: ಈ ವರದಿಯಲ್ಲಿ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಪುರುಷರ ಟಾಪ್ ಗೂಗಲ್ ಸರ್ಚ್‌ನಲ್ಲಿ ಸ್ತನ ಕ್ಯಾನ್ಸರ್ ಕೂಡ ಸೇರಿದೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆದರೆ ಹುಡುಗರಿಗೆ ಸ್ತನ ಕ್ಯಾನ್ಸರ್ ಬರುತ್ತದೆಯೇ? ಒಂದು ವೇಳೆ ಹೌದು ಎಂದಾದಲ್ಲಿ ಇದು ಹೇಗೆ ಸಂಭವಿಸುತ್ತದೆ ಮತ್ತು ಶೇಕಡಾವಾರು ಸಂಭವನೀಯತೆ ಏನು? ಎನ್ನುವ ಬಗ್ಗೆ ಹುಡುಗರು ಸರ್ಚ್ ಮಾಡುತ್ತಾರೆ.  

ಹುಡುಗಿಯರ ಸೀಕ್ರೆಟ್ ವಿಚಾರಗಳ ಬಗ್ಗೆ ಕುತೂಹಲ:  ಇನ್ನು ಹುಡುಗಿಯರ ಬಗ್ಗೆ ಹುಡುಗರು ಗೂಗಲ್‌ನಲ್ಲಿ  ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.  ಈ ವರದಿಯ ಪ್ರಕಾರ ಹುಡುಗರು ಹುಡುಗಿಯರನ್ನು ಹೇಗೆ ಮೆಚ್ಚಿಸಬಹುದು ? ಹುಡುಗಿಯರು ಹೇಗೆ ಸಂತೋಷವಾಗಿರುತ್ತಾರೆ ಮತ್ತು  ಹುಡುಗಿಯರು ಏನನ್ನು ಇಷ್ಟಪಡುತ್ತಾರೆ ಮತ್ತು ಏನನ್ನು ಇಷ್ಟಪಡುವುದಿಲ್ಲ ಎನ್ನುವುದನ್ನು ಕೂಡಾ ಗೂಗಲ್‌ನಲ್ಲಿ ಹುಡುಕುತ್ತಾರೆ. ಮದುವೆಯ ನಂತರ ಹುಡುಗಿಯರು ಏನು ಮಾಡುತ್ತಾರೆ ಎಂಬ ವಿಷಯದ ಬಗ್ಗೆಗೂಗಲ್ ನಲ್ಲಿ  ಹುಡುಗರ  ಸರ್ಚ್ ಮಾಡುತ್ತಾರಂತೆ.

Latest Videos
Follow Us:
Download App:
  • android
  • ios