ಗರ್ಲ್‌ಫ್ರೆಂಡ್, ಸಹೋದ್ಯೋಗಿ ಜೊತೇನೆ ಹೆಚ್ಚು ಓಡಾಡ್ತಾಳೆ, ಇಬ್ಬರ ಮಧ್ಯೆ ಏನಾದ್ರೂ ನಡೀತಿದ್ಯಾ ?
ಸಂಬಂಧ ಅನ್ನೋದು ತುಂಬಾ ಸೂಕ್ಷ್ಮವಾದುದು. ಅದು ಸರಿಯಾಗಿ ಮುನ್ನಡೆಯಬೇಕಾದರೆ ಸಮರ್ಪಕವಾದ ರೀತಿಯಲ್ಲಿ ನಿಭಾಯಿಸುವುದು ತುಂಬಾ ಮುಖ್ಯ. ಕೆಲವೊಮ್ಮೆ ವಿನಾಕಾರಣ ಕಾಣಿಸಿಕೊಳ್ಳುವ ಅನುಮಾನಗಳು ಸಹ ಸಂಬಂಧ ಹಾಳು ಮಾಡುತ್ತವೆ. ಹಾಗೆ ಇಲ್ಲೊಬ್ಬನಿಗೆ ಅಂಥಹದ್ದೇ ಸಮಸ್ಯೆ ಎದುರಾಗಿದೆ. ಗರ್ಲ್‌ಫ್ರೆಂಡ್ ಕೊಲೀಗ್ ಜೊತೆ ಕ್ಲೋಸ್ ಆಗಿರೋದಕ್ಕೆ ಭಯವಾಗ್ತಿದ್ಯಂತೆ.
ಪ್ರೀತಿ ಮಾಡುವುದು ಸುಲಭ. ಆದ್ರೆ ಆ ಪ್ರೀತಿಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಪ್ರೀತಿಯನ್ನು ನಿಭಾಯಿಸಲು ನಂಬಿಕೆ, ವಿಶ್ವಾಸ ಎಲ್ಲವೂ ಜೊತೆಗಿರಬೇಕು. ಅನುಮಾನ ಕಾಡಲು ಶುರುವಾದರೆ ಪ್ರೀತಿಯ ಅಡಿಪಾಯ ಕುಸಿಯಲು ಆರಂಭವಾಗುತ್ತದೆ. ಇಲ್ಲೊಬ್ಬನಿಗೆ ಹಾಗೆಯೇ ಆಗಿದೆ.ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿರೋ ಗೆಳತಿ ಸಹೋದ್ಯೋಗಿ ಜೊತೇನೆ ಹೆಚ್ಚು ಓಡಾಡ್ತಾಳಂತೆ. ಆತನಿಗಾಗ್ತಿರೋ ಸಮಸ್ಯೆಯೇನು ? ಅದಕ್ಕೆ ತಜ್ಞರು ಏನ್ ಉತ್ತರ ನೀಡಿದ್ದಾಳೆ ತಿಳಿಯೋಣ.
ಪ್ರಶ್ನೆ: ನಾನು ಅವಿವಾಹಿತ ವ್ಯಕ್ತಿ. ನಾನು ಕಳೆದ ಒಂದು ವರ್ಷದಿಂದ ಹುಡುಗಿಯ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಬದುಕುತ್ತಿದ್ದೇನೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಅವಳಿಗೂ ನಾನೆಂದರೆ ಇಷ್ಟ. ಆದರೆ ಸಮಸ್ಯೆಯೆಂದರೆ ಅವಳು ತನ್ನೊಬ್ಬಳು ಸಹೋದ್ಯೋಗಿಯೊಂದಿಗೆ ಅತಿ ಹೆಚ್ಚು ಆಪ್ತವಾಗಿದ್ದಾಳೆ. ನಮ್ಮ ನಡುವೆ ಎಲ್ಲವೂ ಸರಿಯಾಗಿತ್ತು. ಆದರೆ ನನ್ನ ಗೆಳತಿ ತನ್ನ ಸಹೋದ್ಯೋಗಿಗಳೊಂದಿಗೆ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ, ವಿಷಯಗಳು ಹದಗೆಡಲು ಪ್ರಾರಂಭಿಸಿದವು. ಗೆಳತಿಯ ಸಹೋದ್ಯೋಗಿ ತುಂಬಾ ಒಳ್ಳೆಯ ವ್ಯಕ್ತಿ. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವೂ ಇದೆ. ಅವರ ಗಾಢವಾದ ಗೆಳೆತನವನ್ನು ನೋಡಿ ನನಗೆ ಸ್ವಲ್ಪವೂ ಒಳ್ಳೆಯದೆನಿಸದಿರಲು ಇದೂ ಒಂದು ಕಾರಣ.
ಫೋನ್ ಹಿಡಿದು ಬಾತ್ ರೂಮಿಗೆ ಹೋಗ್ತಾನೆ ಗಂಡ, ಏನ್ಮಾಡ್ತಾನೋ ಗೊತ್ತಿಲ್ಲ!
ಬಹುಶಃ ಇದಕ್ಕೆ ಒಂದು ಕಾರಣವೆಂದರೆ ನನ್ನ ಗೆಳತಿ (Girlfriend) ಆ ಹುಡುಗನೊಂದಿಗೆ ತುಂಬಾ ಸಂತೋಷವಾಗಿರುವುದು. ಅವನು ಅವಳನ್ನು ನಗುವಂತೆ ಮಾಡುತ್ತಾನೆ. ಅವಳಿಗೆ ಅಡುಗೆಯನ್ನೂ ಮಾಡುತ್ತಾನೆ. ಇಬ್ಬರೂ ಒಟ್ಟಿಗೆ ಮೋಜು ಮಾಡುತ್ತಾರೆ. ಆಗಾಗ ಮನೆಗೆ ಕರೆ ಮಾಡುತ್ತಲೇ ಇರುತ್ತಾಳೆ. ನಾನು ಈ ಆಪ್ತತೆಯ ಬಗ್ಗೆ ಗೆಳತಿಯ ಬಳಿ ಕೇಳಿದರೆ, ಆತನ ಬಗ್ಗೆ ಅಂಥಾ ಭಾವನೆ (Feelings) ಇಲ್ಲವೆಂದು ತಿಳಿಸಿದಳು. ಆದರೆ ನನಗೆ ಸಮಾಧಾನವಾಗುತ್ತಿಲ್ಲ. ಮನೆಗೆ ಬಂದಾಗಲ್ಲೆಲ್ಲಾ ಇದೇ ವಿಚಾರವಾಗಿ ಗೆಳತಿಯೊಡನೆ ಜಗಳವಾಡುತ್ತೇನೆ. ನನ್ನ ಈ ನಡವಳಿಕೆಯಿಂದ ಅವಳು ನನ್ನಿಂದ ದೂರವಾಗುತ್ತಾಳೆ ಎಂಬ ಭಯ ಶುರುವಾಗಿದೆ.
ತಜ್ಞರ ಉತ್ತರ: ಹಿರಿಯ ಸಂಬಂಧ ಸಲಹೆಗಾರ ವಿಶಾಲ್ ಭಾರದ್ವಾಜ್ ಈ ಬಗ್ಗೆ ಮಾತನಾಡಿ ಸಲಹೆ (Suggestion) ನೀಡಿದ್ದಾರೆ. ನಿಮ್ಮ ಸಂಬಂಧದಲ್ಲಿ ನೀವು ಎಷ್ಟು ಅಭದ್ರತೆಯನ್ನು ಅನುಭವಿಸುತ್ತೀರಿ ಎಂದು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಇದಾದ ನಂತರವೂ ನಿಮ್ಮ ಗೆಳತಿಯನ್ನು ನಂಬಿ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ನೀವು ಅವರನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲು ಯಾವುದೇ ದೃಢವಾದ ಪುರಾವೆಗಳಿಲ್ಲ. ನಿಮ್ಮ ಸಂಬಂಧದ (Relationship) ಬಗ್ಗೆ ನೀವು ಚಿಂತೆ ಮಾಡುವುದು ತುಂಬಾ ಸಹಜ. ಆದರೆ ನಿಮ್ಮ ಸಂಗಾತಿಯನ್ನು ಅನಾವಶ್ಯಕವಾಗಿ ಅನುಮಾನಿಸುವುದು ಕೂಡ ಸರಿಯಲ್ಲ ಎಂದು ತಿಳಿಸಿದ್ದಾರೆ.
ನಾದಿನಿ ಜೊತೆ ಜಗಳವಾಡ್ತೀರಾ? ಸಂಬಂಧವನ್ನು ಸೂಕ್ಷ್ಮವಾಗಿ ನಿಭಾಯಿಸೋದು ಹೇಗೆ?
ನಿಮ್ಮನ್ನು ಹೋಲಿಸಿಕೊಳ್ಳಬೇಡಿ: ನೀವು ಹೇಳಿದಂತೆ ನಿಮ್ಮ ಗೆಳತಿ ತನ್ನಸಹೋದ್ಯೋಗಿ (Collegue)ಯನ್ನು ಮನೆಗೆ ಕರೆಯುತ್ತಲೇ ಇರುತ್ತಾಳೆ. ಅವರಿಬ್ಬರೂ ಒಟ್ಟಿಗೆ ತುಂಬಾ ಮೋಜು ಮಾಡುತ್ತಾರೆ. ಹಾಗೆಂದು ನೀವು ತಪ್ಪು ತಿಳಿಯಬೇಕಿಲ್ಲ. ಆಕೆ ಈಗಾಗಲೇ ಬೇರೆ ದೃಷ್ಟಿಯಿಂದ ಆತನನ್ನು ನೋಡುತ್ತಿಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಅವರ ಸ್ನೇಹ (Friendship)ವನ್ನು ಒಳ್ಳೆಯ ದೃಷ್ಟಿಯಿಂದ ನೋಡಿ. ಅನಾವಶ್ಯಕವಾಗಿ ಚಿಂತಿಸಬೇಡಿ. ಆಕೆ ನಿಮ್ಮನ್ನು ತುಂಬಾ ಪ್ರೀತಿಸುತ್ತಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅಭದ್ರತೆಯು ಸಮಯದ ಅವಧಿಯಲ್ಲಿ ಅನುಮಾನದ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಯಾವುದೇ ಸಂಬಂಧದ ಸ್ವಾತಂತ್ರ್ಯ ಮತ್ತು ನಂಬಿಕೆಯನ್ನು ನಾಶಪಡಿಸುತ್ತದೆ.
ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ: ನೀವು ಕಳೆದ ಒಂದು ವರ್ಷದಿಂದ ಜತೆಯಾಗಿ ವಾಸಿಸುತ್ತಿದ್ದೀರಿ ಎಂದಿದ್ದೀರಿ. ಆದರೆ ಇದರ ನಂತರವೂ ನಿಮ್ಮ ಸಂಬಂಧದಲ್ಲಿ ಪ್ರೀತಿ-ವಿಶ್ವಾಸ ಮತ್ತು ಸಂವಹನದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಟ್ರಸ್ಟ್ ಎಂದರೇನು ? ಯಾವುದೇ ಸಮಸ್ಯೆಯಿದ್ದರೂ ಪರಸ್ಪರ ನಂಬಿಕೆ ಇಟ್ಟುಕೊಳ್ಳುವುದು. ಇಬ್ಬರ ನಡುವೆ ನಂಬಿಕೆ (Trust) ಇಲ್ಲದಿದ್ದರೆ, ಸಂಬಂಧದಲ್ಲಿ ಪ್ರೀತಿ ಎಂದಿಗೂ ಸಂಭವಿಸುವುದಿಲ್ಲ ಎಂಬುದಕ್ಕೆ ಇದೂ ಒಂದು ಕಾರಣ.
Relationship Tips: ಮುಂಗೋಪಿ ಸಂಗಾತಿಯ ಹ್ಯಾಂಡಲ್ ಮಾಡೋದು ಹೇಗೆ?
ಸಂಗಾತಿ ಮೇಲೆ ನಂಬಿಕೆಯಿರಲಿ: ಪ್ರೀತಿ ಮತ್ತು ವಿಶ್ವಾಸ ಒಂದೇ ನಾಣ್ಯದ ಎರಡು ಮುಖಗಳು. ನಿಮ್ಮ ಸಂಬಂಧವು ಯಾವಾಗಲೂ ಉತ್ತಮವಾಗಿರಬೇಕೆಂದು ನೀವು ಬಯಸಿದರೆ, ನಿಮ್ಮ ಸಂಗಾತಿಯನ್ನು ನಂಬಲು ನೀವು ಕಲಿಯಬೇಕು. ನಿಮ್ಮ ಕಾಳಜಿ ಮತ್ತು ನಿಮ್ಮ ಭಯವನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ವ್ಯಕ್ತಪಡಿಸಿ. ನಿಮ್ಮ ಅನುಮಾನಗಳನ್ನು ತಿಳಿಸಿ ಮುಕ್ತವಾಗಿ ಮಾತನಾಡಿ. ಹೀಗೆ ಮಾಡಿದರೆ ನಿಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಬರಲು ಸಾಧ್ಯವಿಲ್ಲ.