Asianet Suvarna News Asianet Suvarna News

ಬ್ರೇಕ್ ಅಪ್ ನಂತ್ರ AI ಬಾಯ್ ಫ್ರೆಂಡ್ ಮಾಡ್ಕೊಂಡ ಹುಡುಗಿ!

ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಜನರು ತಮ್ಮ ಅನುಕೂಲಕ್ಕೆ ಇದನ್ನು ಬಳಕೆ ಮಾಡ್ತಿದ್ದಾರೆ. ಈ ಹುಡುಗಿ ಈಗ ಮಾಜಿ ಬಾಯ್ ಫ್ರೆಂಡ್ ಹೊಟ್ಟೆ ಉರಿಸೋಕೆ ತಂತ್ರಜ್ಞಾನದ ಮೊರೆ ಹೋಗಿದ್ದಾಳೆ.
 

Girl Use Ai Boyfriend In Selfie To Make Ex Jealous Social Media Video Viral roo
Author
First Published Dec 14, 2023, 3:18 PM IST

ಬ್ರೇಕ್ ಅಪ್ ನಂತ್ರ ಜನರ ಮನಸ್ಸು ಅಲ್ಲೋಲ ಕಲ್ಲೋಲಗೊಂಡಿರುತ್ತದೆ. ಪ್ರೀತಿಯನ್ನು ಕಳೆದುಕೊಂಡ ನೋವಿನಲ್ಲಿ ಕೆಲವರು ಸದಾ ಅಳ್ತಿದ್ದರೆ ಮತ್ತೆ ಕೆಲವರು ಸಂಗಾತಿ ಮೇಲೆ ದ್ವೇಷ ಬೆಳೆಸಿಕೊಂಡು ಸೇಡು ತೀರಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಚಾಕು- ಚೂರಿ ಇರಿದು ಕೊಲೆ ಮಾಡೋದು ಮಾತ್ರ ದ್ವೇಷ ತೀರಿಸಿಕೊಳ್ಳುವ ವಿಧಾನವಲ್ಲ. ಮಾಜಿ ಸಂಗಾತಿ ಸ್ವಲ್ಪ ಉರಿದುಕೊಂಡ್ರು ಇವರಿಗೆ ಸಮಾಧಾನ. ನಾನಿಲ್ಲದೆ ಹೇಗಿರ್ತಾರೆ ಎಂದುಕೊಂಡಿದ್ದವರ ಮುಂದೆ ಸಂತೋಷವಾಗಿ, ಇನ್ನೊಬ್ಬ ಸಂಗಾತಿ ಜೊತೆ ತಿರುಗಾಡಿದಾಗ ಮಾಜಿಗೆ ಹೊಟ್ಟೆಯಲ್ಲಿ ಬೆಂಕಿ ಹಚ್ಚಿದಂತಾಗುತ್ತದೆ.  ಅವರನ್ನು ನೋಡಿ ಇವರು ಮಜಾ ತೆಗೆದುಕೊಳ್ತಾರೆ. ಬ್ರೇಕ್ ಅಪ್ ನೋವನ್ನು ಮರೆಯುತ್ತಾರೆ. ಈ ಹುಡುಗಿ ಕೂಡ ಬ್ರೇಕ್ ಅಪ್ ಆದ್ಮೇಲೆ ಸುಮ್ಮನೆ ಕುಳಿತಿಲ್ಲ. ಮಾಜಿ ಬಾಯ್ ಫ್ರೆಂಡ್ ಕಣ್ಮುಂದೆ ತಾನು ಸಂತೋಷವಾಗಿದ್ದೇನೆ, ನನಗೆ ಈಗಾಗಲೇ ಒಬ್ಬ ಬಾಯ್ ಫ್ರೆಂಡ್ ಸಿಕ್ಕಿದ್ದಾನೆ ಎಂಬುದನ್ನು ತೋರಿಸುವ ಪ್ರಯತ್ನ ನಡೆಸಿದ್ದಾಳೆ.  ಆದ್ರೆ ಆಕೆ ಹೊಸ ಬಾಯ್ ಫ್ರೆಂಡ್ ಹುಡುಕುವ ಬದಲು ತಂತ್ರಜ್ಞಾನದ ಮೊರೆ ಹೋಗಿದ್ದಾಳೆ.  ಎಐ ರಚಿತ ಗೆಳೆಯನೊಂದಿಗೆ ಇರುವ ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ವಿಶೇಷ ಅಂದ್ರೆ ಆಕೆಯ ಒಂದು ವೀಡಿಯೊ ಟಿಕ್‌ಟಾಕ್‌ನಲ್ಲಿ 55 ಮಿಲಿಯನ್ ವೀಕ್ಷಣೆ ಪಡೆದಿದೆ. 

ಎಐ (AI) ಫೋಟೋ ಬಳಸಿಕೊಂಡ ಹುಡುಗಿ : ಎಐ ಜೊತೆ ಫೋಟೋ (Photo) ಹಂಚಿಕೊಂಡ ಹುಡುಗಿ ಹೆಸರು ಮೆಡೆಲೀನ್ ಸಲಾಜರ್ . ಆಕೆ ವಯಸ್ಸು 29 ವರ್ಷ. ಆಕೆ ಪ್ರಕಾರ, ಆಕೆ ಬಾಯ್ ಫ್ರೆಂಡ್ (Boy friend) ಸಂಬಂಧ ಮುರಿದುಕೊಂಡಿದ್ದಾನೆ. ಆತ ಅಸೂಯೆಪಟ್ಟುಕೊಳ್ಳುವಂತೆ ಏನಾದ್ರೂ ಮಾಡ್ಬೇಕಾಗಿತ್ತು. ಆಗಾಗಿ ನನ್ನ ಹೊಸ ಬಾಯ್ ಫ್ರೆಂಡ್ ಪರಿಚಯ ಮಾಡಿದೆ ಎನ್ನುತ್ತಾಳೆ ಮೆಡೆಲೀನ್ ಸಲಾಜರ್. ಟಿಕ್ ಟಾಕ್ ನಲ್ಲಿ ವಿಡಿಯೋ ಹಂಚಿಕೊಂಡ ಹುಡುಗಿ, ನಾನು ಎಲ್ಲ ಬ್ರೇಕ್ ಅಪ್ ನಲ್ಲೂ ಜಯ ಸಾಧಿಸಿದ್ದೇನೆ ಎಂದಿದ್ದಾಳೆ. ಹೇಗೆ ಎಐ ಜೊತೆ ಫೋಟೋ ಕ್ಲಿಕ್ಕಿಸಿಕೊಂಡೆ ಎಂಬುದನ್ನೂ ಹೇಳಿದ್ದಾಳೆ.

ತೃಪ್ತಿ ಡಿಮ್ರಿ ಬಾಯ್‌ಫ್ರೆಂಡ್ ಅನುಷ್ಕಾ ಸೋದರ: ಕರ್ನೇಶ್ ಶರ್ಮಾ ಜೊತೆ ಲವ್ವಲ್ಲಿದ್ರು ಅನಿಮಲ್ ನಟಿ

ಮೊದಲು ಮೆಡೆಲೀನ್ ಸಲಾಜರ್ ಸೆಲ್ಫಿ ತೆಗೆದುಕೊಂಡಿದ್ದಾಳೆ. ನಂತ್ರ ಎಐ ಫೋಟೋ ಜೊತೆ ಆಡ್ ಮಾಡಿದ್ದಾಳೆ. ಆದ್ರೆ ಈ ಫೋಟೋ ಸಹಜವಾಗಿ ತೆಗೆದ ಫೋಟೋದಂತೆ ಕಾಣ್ತಿದೆ. ನೀವೂ ಕೂಡ ಈ ಟೆಕ್ನಿಕ್ ಬಳಸಬಹುದು ಎನ್ನುತ್ತಾಳೆ ಮೆಡೆಲೀನ್. 

ಅಡೋಬ್ ಪ್ರೋಗ್ರಾಂನಲ್ಲಿ ನಿಮಗೆ ಬೇಕಾದಂತೆ ನೀವು ಟೈಪ್ ಮಾಡಬೇಕು. ಉದಾಹರಣೆಗೆ ಹೆಗಲ ಮೇಲೆ ತಲೆಯಿಟ್ಟ ವ್ಯಕ್ತಿ ಅಂತ ಟೈಪ್ ಮಾಡಿದ್ರೆ ಅಂಥ ವ್ಯಕ್ತಿಯ ಫೋಟೊ ನಿಮಗೆ ಸಿಗುತ್ತದೆ. ನಂತ್ರ ಅದೇ ನಿಮ್ಮ ಸೆಲ್ಫಿ ಜೊತೆ ಮರ್ಜ್ ಮಾಡುತ್ತದೆ. ಹೀಗೆ ನಿಮಗೆ ಬೇಕಾದ ಯಾವುದೇ ಫೋಟೋವನ್ನು ನೀವು ಪಡೆಯಬಹುದು. ಮೆಡಿಲೀನ್, ಕಾಫಿ ಶಾಪ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಕುಳಿತಿರುವಂತೆ, ಟ್ರೈನ್ ನಲ್ಲಿ ಇಬ್ಬರು ಪ್ರಯಾಣ ಬೆಳೆಸುತ್ತಿರುವಂತ ಅನೇಕ ಫೋಟೋಗಳನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ. ಮೂರು ಕ್ಲಿಪ್‌ಗಳನ್ನು ಒಂದು ವೀಡಿಯೊದಲ್ಲಿ ಸಂಯೋಜಿಸಲು 2.5 ಗಂಟೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಮೆಡೆಲೀನ್ ಹೇಳಿದ್ದಾಳೆ.

ಬೇರೆಯವರು ಅಸೂಯೆಪಡಲು ಎಐ ತಂತ್ರಜ್ಞಾನ ಒಳ್ಳೆ ವಿಧಾನ ಎಂದು ಮೆಡೆಲೀನ್ ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ಈ ವಿಷ್ಯವನ್ನು ಹಂಚಿಕೊಳ್ತಿದ್ದಂತೆ ಅನೇಕರು ಕಮೆಂಟ್ ಮಾಡಿದ್ದಾರೆ. ಮೆಡೆಲಿನ್ ಉಪಾಯ ಅಚ್ಚರಿ ಮೂಡಿಸಿದ್ರೂ ಇದನ್ನು ಬಳಸಬಹುದು ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು, ಮೆಡೆಲೀನ್ ಜೀವನದ ಭಾಗವೇ ಅಲ್ಲದ ವ್ಯಕ್ತಿಯ ಬಗ್ಗೆ ತಲೆ ಕೆಡಿಸಿಕೊಂಡು ಆಕೆ ಸಮಯ ಹಾಳು ಮಾಡ್ತಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ. 

ನಿಮ್ಮ ಸಂಗಾತಿ ಬೆಡ್ಡಲ್ಲಿ ಗುಡ್ ಅಲ್ಲವೆನ್ನೋದನ್ನು ಹೇಳುತ್ತೆ ಈ ಚಿಹ್ನೆಗಳು!

Follow Us:
Download App:
  • android
  • ios