ಸಂಗಾತಿ ಹುಡುಕಲು ಟಿಂಡರ್ ಅಪ್ಲಿಕೇಷನ್ ಬಳಸ್ತಾರೆ ಜನ. ಆದರೆ ಈಗಿನ ಯುವಕರು ತಮ್ಮ ಲಾಭಕ್ಕೆ ಅಪ್ಲಿಕೇಷನ್ ರೂಲ್ಸ್ ಬ್ರೇಕ್ ಮಾಡ್ತಾರೆ. ಈ ಹುಡುಗಿ ಟಿಂಡರ್ ಅಪ್ಲಿಕೇಷನ್ ನಲ್ಲಿ ಹಾಕಿದ ಪೋಸ್ಟ್ ಸದ್ಯ ಎಲ್ಲರನ್ನು ಬೆರಗುಗೊಳಿಸಿದೆ.  

ಜನರ ಅಗತ್ಯತೆಗೆ ತಕ್ಕಂತೆ ಸಾಮಾಜಿ ಫ್ಲಾಟ್ಫಾರ್ಮ್ ರಚನೆ ಆಗ್ತಿದೆ. ನೀವು ಫೇಸ್ಬುಕ್, ಇನ್ಸ್ಟಾಗ್ರಾಮ್, ಲಿಂಕ್ಡ್ ಇನ್ , ಟಿಂಡರ್ ಹೀಗೆ ಬೇರೆ ಬೇರೆ ಫ್ಲಾಟ್ಫಾರ್ಮ್ ಇದ್ದು, ಅವು ತಮ್ಮದೇ ಮಿತಿಯನ್ನು ಹೊಂದಿವೆ. ಜನರು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು, ಡೇಟಿಂಗ್‌ಗಾಗಿ ಈ ಡೇಟಿಂಗ್ ಅಪ್ಲಿಕೇಷನ್ ಟಿಂಡರ್ ಬಳಸುತ್ತಾರೆ. ಪ್ರತಿ ದಿನ ಟಿಂಡರ್ ಅಪ್ಲಿಕೇಷನ್ ಬಳಸುವವರ ಸಂಖ್ಯೆ ಹೆಚ್ಚುವ. ಹಾಗೆ ಅಲ್ಲಿ ನಡೆಯುವ ಮೋಸಗಳ ಬಗ್ಗೆಯೂ ಅನೇಕರು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಳ್ತಾರೆ. ಈಗ ಯುವತಿಯೊಬ್ಬಳ ಟಿಂಡರ್ ಪೋಸ್ಟ್ ವೈರಲ್ ಆಗಿದೆ. ಆಕೆ ಜೊತೆ ಡೇಟ್ ಗೆ ಹೋಗ್ಬೇಕು ಅಂದ್ರೆ ಹುಡುಗ ಸುಂದರವಾಗಿರಬೇಕಾಗಿಲ್ಲ, ಹೆಚ್ಚು ಸಂಬಳ ಬರಬೇಕಾಗಿಲ್ಲ. ಆತನಿಗೆ ಹುಡುಗಿ ಹೇಳಿದ ಕೆಲಸ ಬರಬೇಕು. ಆಕೆಗೆ ಆತ ಸಹಾಯ ಮಾಡಿದ್ರೆ ಸಾಕು. ಹುಡುಗಿ ಆತನ ಜೊತೆ ಡೇಟ್ ಗೆ ಬರುತ್ತೇನೆ ಎಂದು ಪೋಸ್ಟ್ ಹಾಕಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡಲು ಶುರು ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ವಂದನಾ ಹೆಸರಿನ ಯುವತಿ ಟಿಂಡರ್ (Tinder) ಅಪ್ಲಿಕೇಷನ್ ನಲ್ಲಿ ಪೋಸ್ಟ್ ಹಾಕಿದ್ದಾಳೆ. ಆಕೆ ಪೋಸ್ಟನ್ನು @pythoncoding4u ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ಸ್ಟಾದ ಈ @pythoncoding4u ಖಾತೆಯಲ್ಲಿ ಕಂಪ್ಯೂಟರ್, ಸಾಫ್ಟ್ ವೇರ್ (Software) ಗೆ ಸಂಬಂಧಿಸಿದ ತಮಾಷೆ ಪೋಸ್ಟ್ ಹಾಕಲಾಗ್ತಿರುತ್ತದೆ. ಈಗ ವಂದನಾ ಹಾಕಿರುವ ಪೋಸ್ಟ್ @pythoncoding4u ನಲ್ಲಿ ವೈರಲ್ ಆಗಿದೆ. ಪೋಸ್ಟ್ ಪ್ರಕಾರ ವಂದನ ವಯಸ್ಸು 27 ವರ್ಷ. ಆಕೆ ಸಾಫ್ಟ್ವೇರ್ ಡೆವಲಪರ್. ಕಳೆದ ಮೂರು ದಿನಗಳಿಂದ ವಂದನಾ ಕೋಡಿಂಗ್ (Coding) ನಲ್ಲಿ ಸಿಕ್ಕಿಬಿದ್ದಿದ್ದಾಳೆ. ಅದ್ರಿಂದ ಹೊರಗೆ ಬರಲು ವಂದನಾ ಟಿಂಡರ್ ಅಪ್ಲಿಕೇಷನ್ (Application) ಮೊರೆ ಹೋಗಿದ್ದಾಳೆ.

ಪೋಷಕರು ಮಕ್ಕಳಿಗೆ ಯಾವತ್ತೂ ಹೇಳಲೇ ಬಾರದ ಮಾತುಗಳಿವು!

ಕಳೆದ ಮೂರು ದಿನಗಳಿಂದ ನಾನು ಪೈಥಾನ್ ಬಳಸಿ ಪರ್ಫೋರ್ಸ್‌ನೊಂದಿಗೆ ಫೈಲ್‌ಗಳನ್ನು ಹುಡುಕುವ ಪ್ರಯತ್ನದಲ್ಲಿದ್ದೇನೆ. ಕೋಡ್ ವಿಂಡೋಸ್ ಮತ್ತು ಲಿನಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮ್ಯಾಕ್‌ನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ವಂದನ ಪೋಸ್ಟ್ ಹಾಕಿದ್ದಾರೆ. ನನಗೆ ಈ ಕೆಲಸ ಮಾಡಲು ಸಹಾಯ ಮಾಡುವವರನ್ನು ಹುಡುಕುತ್ತಿದ್ದೇನೆ. ನನ್ನ ಈ ಪ್ರೊಫೈಲ್ ಗೆ ಹುಡುಗ ಮ್ಯಾಚ್ ಆಗ್ಬೇಕು. ಸುಮ್ಮನೆ ಟೈಂ ಪಾಸ್ ಗೆ ನನ್ನ ಜೊತೆ ಚಾಟ್ ಮಾಡ್ಬೇಡಿ. ನನ್ನ ಹೆಸರೇನು, ಎಲ್ಲಿ ವಾಸವಾಗಿದ್ದೇನೆ ಎಂಬ ವಿಷ್ಯ ಕೇಳಿ ಸಮಯ ಹಾಳು ಮಾಡ್ಬೇಡಿ, ಕೋಡಿಂಗ್ ಬಗ್ಗೆ ಮಾತನಾಡಿ ಎಂದು ವಂದನ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಯಾರಾದ್ರೂ ನನ್ನ ಕೋಡಿಂಗ್ ಗೆ ಸಹಾಯ ಮಾಡಿದ್ರೆ ನಾನು ಅವರ ಜೊತೆ ಡೇಟ್ ಗೆ ಹೋಗ್ತೇನೆ ಎಂದು ವಂದನ ಹೇಳಿದ್ದಾರೆ. ಇದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ, ನೋಡಿ ಬೆಂಗಳೂರಿನ ಟಿಂಡರ್ ಪ್ರೊಫೈಲ್ ಹೇಗಿರುತ್ತೆ ಎಂದು ಶೀರ್ಷಿಕೆ ಹಾಕಲಾಗಿದೆ. 

ಈ ರಾಶಿಗೆ ಯಾರನ್ನ ಪ್ರೀತಿಸಬೇಕೆಂದು ಗೊತ್ತಾಗಲ್ಲ, ಲವ್‌ ಅಲ್ಲಿ ಎಡವುದು ಜಾಸ್ತಿ

ಇನ್ಸ್ಟಾಗ್ರಾಮ್ ನ ಈ ಪೋಸ್ಟ್ ವೈರಲ್ ಆಗಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಜಾಬ್ ಭದ್ರತೆ ಸಮಸ್ಯೆಯನ್ನು ಇದು ತೋರಿಸುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನನಗೆ ಡೇಟಿಂಗ್ ಹೋಗಲು ಅವಕಾಶವಿದ್ದಂತೆ ಕಾಣುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇವರು ಕಂಪ್ಯೂಟರ್ ತಜ್ಞನನ್ನು ಹುಡುಕ್ತಾ ಇದ್ದಾಳೆಯೇ ವಿನಃ ಸಂಗಾತಿಯನ್ನಲ್ಲ ಎಂದು ಮತ್ತೊಬ್ಬರು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಅನೇಕರು ಹುಡುಗಿ ಐಡಿಯಾವನ್ನು ಮೆಚ್ಚಿದ್ದಾರೆ. 

View post on Instagram