ಪೋಷಕರು ಮಕ್ಕಳಿಗೆ ಯಾವತ್ತೂ ಹೇಳಲೇ ಬಾರದ ಮಾತುಗಳಿವು!

ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಹಲವು ವಿಷಯಗಳ ಬಗ್ಗೆ, ತಪ್ಪು-ಸರಿಗಳ ಬಗ್ಗೆ ಅವರಿಗೆ ತಿಳಿಸಿಕೊಡಬೇಕಾಗುತ್ತದೆ. ಆದ್ರೆ ಪೋಷಕರು ಕೆಲವೊಂದು ವಿಷಯಗಳನ್ನು ಮಕ್ಕಳಿಗೆ ಹೇಳಲೇಬಾರದು. ಆ ಬಗ್ಗೆ ಮಾಹಿತಿ ಇಲ್ಲಿದೆ.

Parenting tips, Never Say these things to your children Vin

ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಹಲವು ವಿಷಯಗಳ ಬಗ್ಗೆ, ತಪ್ಪು-ಸರಿಗಳ ಬಗ್ಗೆ ಅವರಿಗೆ ತಿಳಿಸಿಕೊಡಬೇಕಾಗುತ್ತದೆ. ಪೋಷಕರು ಮಕ್ಕಳಿಗೆ ಏನನ್ನು ಹೇಳಿಕೊಡುತ್ತಾರೆ ಎಂಬುದರ ಮೇಲೆ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಮಕ್ಕಳ ಬಿಹೇವಿಯರ್‌ ಉತ್ತಮವಾಗಲು ಅವರಿಗೆ ಕೆಲವೊಂದು ವಿಷಯಗಳನ್ನು ಹೇಳಿಕೊಡುವುದರ ಜೊತೆಗೆ ಹೇಳಿ ಕೊಡಲೇಬಾರದ ಕೆಲವು ವಿಷಯಗಳೂ ಇವೆ. ಆ ಬಗ್ಗೆ ಸಹ ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಇದು ಮಕ್ಕಳ ವ್ಯಕ್ತಿತ್ವ ಕೆಟ್ಟದಾಗಿ ರೂಪುಗೊಳ್ಳಲು ಕಾರಣವಾಗಬಹುದು. ಹೀಗಾಗಿ ಮಕ್ಕಳಿಗೆ ಹೇಳಬಾರದ ವಿಷಯಗಳ ಬಗ್ಗೆ ತಿಳಿಯೋಣ.

ಕೆಟ್ಟ ಪದಗಳ ಬಳಕೆ 
ಕೆಲವು ಪೋಷಕರು ಮಕ್ಕಳನ್ನು ಕಟುವಾದ ಪದಗಳಿಂದ ನಿಂದಿಸುತ್ತಾರೆ. ಇನ್ನು ಕೆಲವರು.. ಮಕ್ಕಳನ್ನು ಗದರಿಸದಿದ್ದರೂ, ಮಕ್ಕಳ ಮುಂದೆ ಇತರರಿಗೆ ಇಂತಹ ಪದಗಳನ್ನು ಬಳಸುತ್ತಾರೆ. ಆದರೆ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು. ಮಕ್ಕಳೆದುರು ಅತಿಯಾದ ಕೋಪವನ್ನು ತೋರಿಸಬಾರದು. ಇದು ಮಕ್ಕಳನ್ನು ಭಾವನಾತ್ಮಕವಾಗಿ ಒತ್ತಡಕ್ಕೆ ಕಾರಣವಾಗುತ್ತದೆ. ಮಕ್ಕಳ ಮನಸ್ಸಲ್ಲಿ ಭಯ, ಒತ್ತಡ ಹೆಚ್ಚುತ್ತದೆ. ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗುತ್ತದೆ.

ಮಕ್ಕಳು ಸುಮ್‌ ಸುಮ್ನೆ ದುಡ್ಡು ಖರ್ಚು ಮಾಡ್ತಾರಾ, ಹಣ ಉಳಿಸಲು ಕಲಿಸುವುದು ಹೇಗೆ..?

ಉಡುಗೊರೆ ಕೊಡುವುದು ಸರಿಯಲ್ಲ
ಅನೇಕ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ವಿಷಯಕ್ಕೂ ಉಡುಗೊರೆಗಳನ್ನು ನೀಡುತ್ತಾರೆ. ಹಾಗೆ ಮಾಡಿದರೆ, ಹೀಗೆ ಮಾಡಿದರೆ ಉಡುಗೊರೆ ಕೊಡುತ್ತೇವೆ ಎಂದು ಹೇಳುತ್ತಲೇ ಇರುತ್ತಾರೆ. ಇದರಿಂದ ಮಕ್ಕಳು ಉತ್ತಮ ಮೌಲ್ಯಗಳನ್ನು ಕಲಿಯುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು. ಹೀಗೆ ಮಾಡುವುದರಿಂದ ಮಕ್ಕಳು ತುಂಬಾ ಭೌತಿಕವಾಗುತ್ತಾರೆ. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಲು ಉಡುಗೊರೆಗಳನ್ನು ನೀಡಬಾರದು. ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ಮಾತಿನಲ್ಲಿ ಶ್ಲಾಘಿಸಿ ಮತ್ತು ಪ್ರಶಂಸಿಸಿ.

ಇತರ ಮಕ್ಕಳೊಂದಿಗೆ ಹೋಲಿಸಬಾರದು
ಕೆಲವು ಪೋಷಕರು ತಮ್ಮ ಮಕ್ಕಳನ್ನು ಎಲ್ಲದರಲ್ಲೂ ಇತರ ಮಕ್ಕಳೊಂದಿಗೆ ಹೋಲಿಸುತ್ತಲೇ ಇರುತ್ತಾರೆ. ಪ್ರತಿ ಬಾರಿ ಹೀಗೆ ಮಾಡುವುದರಿಂದ ಮಕ್ಕಳು ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಬೇಡಿ. ಯಾವುದೇ ವಿಷಯದಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸಿ. ಬದಲಿಗೆ ಇತರರಿಗೆ ಹೋಲಿಸಿದರೆ ಮಕ್ಕಳು ತಪ್ಪಲ್ಲಿರುವ ಪ್ರತಿಭೆಯನ್ನು ತೋರಿಸಲು ಭಯ ಪಡುತ್ತಾರೆ.

ಎಲ್ಲಾ ವಿಷಯಕ್ಕೂ ಹೊಗಳಬೇಡಿ
ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಮಕ್ಕಳು ಬೇಗ ಬೆಳೆಯುತ್ತಾರೆ ನಿಜ. ಹೀಗಾಗಿ ಅಗತ್ಯವಿರಲಿ ಇಲ್ಲದಿರಲಿ ಎಲ್ಲದರಲ್ಲೂ ತಮ್ಮ ಮಕ್ಕಳನ್ನು ಹೊಗಳುತ್ತಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ಒಳ್ಳೆಯ ಕೆಲಸವನ್ನು ಮಾತ್ರ ಪ್ರಶಂಸಿಸಬೇಕು. ತಪ್ಪಾದಾಗ ತಿದ್ದಿ ಬುದ್ಧಿ ಹೇಳುವುದನ್ನು ಮರೆಯಬಾರದು.

ಊಟಕ್ಕೆ ಕೂತಾಗ ಮಕ್ಕಳೊಂದಿಗೆ ಮಾತಿಗೆ ತೊಡಗಲು ಈ ಪ್ರಶ್ನೆಗಳನ್ನು ಕೇಳಿ..

ಬೆದರಿಕೆ ಹಾಕಬಾರದು
ಕೆಲವು ಪೋಷಕರು ತಮ್ಮ ಮಕ್ಕಳನ್ನು ಎಲ್ಲ ರೀತಿಯಲ್ಲೂ ಹೆದರಿಸುತ್ತಾರೆ. ಹಾಗೆ ಮಾಡದಿದ್ದರೆ ಹೀಗೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ಮಕ್ಕಳಿಗೆ ಬೆದರಿಕೆ ಹಾಕಬಾರದು. ಅವರಿಗೆ ಅರ್ಥವಾಗುವಂತೆ ಪ್ರೀತಿಯಿಂದ ಹೇಳಲು ಪ್ರಯತ್ನಿಸಿ.

ಟೀಕಿಸುವುದು ಸರಿಯಲ್ಲ 
ಕೆಲವರು ಮಕ್ಕಳನ್ನು ಕೆಟ್ಟದಾಗಿ ಟೀಕಿಸುತ್ತಾರೆ, ನಿಂದಿಸುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಯಾವ ಕೆಲಸವನ್ನು ಮಾಡಲು ಸಹ ಅವರಿಗೆ ಮನಸ್ಸು ಇರುವುದಿಲ್ಲ. ಹೀಗಾಗಿ ಪೋಷಕರು ಮಕ್ಕಳಿಗೆ ಯಾವತ್ತೂ ಈ ರೀತಿ ಟೀಕಿಸುವುದು ಸರಿಯಲ್ಲ.

ನಕಲಿ ಭರವಸೆ ಕೊಡಬೇಡಿ
ಕೆಲವು ಪೋಷಕರು ನಕಲಿ ಭರವಸೆಗಳನ್ನು ನೀಡುತ್ತಾರೆ. ಆದರೆ ಯಾವತ್ತೂ ಅದನ್ನು ಈಡೇರಿಸುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಸ್ವಲ್ಪ ಸ್ವಲ್ಪವಾಗಿ ಮಕ್ಕಳು ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಯಾವತ್ತೂ ಹುಸಿ ಭರವಸೆಗಳನ್ನು ನೀಡಲು ಹೋಗಬೇಡಿ.

Latest Videos
Follow Us:
Download App:
  • android
  • ios