ಮದ್ವೆ ಆಗೋದು ಅಷ್ಟು ಈಸಿ ಅಲ್ಲಮ್ಮ: ವೈರಲ್ ಆಯ್ತು ಮದ್ವೆ ಬಗ್ಗೆ ಪುಟ್ಟ ಪೋರಿಯ ಮಾತು
ಪುಟ್ಟ ಪೋರಿಯೊಬ್ಬಳು ಮದ್ವೆಯಾಗಲು ಏನೇನು ಬೇಕು ಎಂದು ಹೇಳಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ಇಷ್ಟು ಸಣ್ಣ ಪ್ರಾಯದಲ್ಲಿ ಮಗು ಎಷ್ಟೊಂದು ತಿಳ್ಕೊಂಡಿದೆ ಎಂಬುದನ್ನು ಯೋಚಿಸುವಂತೆ ಮಾಡಿದೆ.
ಮದ್ವೆ ಯಾವಾಗ? ಇದು ಬಹುತೇಕ ಅವಿವಾಹಿತರನ್ನು ಕಾಡುವ ಪ್ರಶ್ನೆಗಳು. ಈ ಪ್ರಶ್ನೆಯಿಂದ ಪಾರಾಗುವ ಕಾರಣಕ್ಕೆ ಬಹುತೇಕ ಅವಿವಾಹಿತರು ಈ ಕುಟುಂಬದ ಸಮಾರಂಭಗಳಿಗೆ ಭೇಟಿ ನೀಡುವುದನ್ನೇ ನಿಲ್ಲಿಸುತ್ತಾರೆ. ಇತ್ತ ಮನೆಯಲ್ಲಿ ಪ್ರಾಯಕ್ಕೆ ಬಂದ ಮಕ್ಕಳಿದ್ದರೆ ಅಪ್ಪ ಅಮ್ಮನಿಗೂ ಇದೇ ಹಾವಳಿ, ಸಂಬಂಧಿಗಳ ನೆಂಟರಿಷ್ಟರಿಂದ ತೂರಿ ಬರುವ ಪ್ರಶ್ನೆಗಳಿಂದ ಒತ್ತಡಕ್ಕೊಳಗಾಗುವ ಪೋಷಕರು ಈ ಒತ್ತಡವನ್ನು ಮಕ್ಕಳ ಮೇಲೆ ಹೇರಿ ಅವರಿಂದ ಬೈಗುಳ ತಿನ್ತಾರೆ. ಆದರೆ ಎನ್ನುವುದು ಒಂದು ಅನುಬಂಧ, ಕಾಲ ಕೂಡಿ ಬಂದಾಗ ಯೋಗವಿದ್ದಾಗ ಮದ್ವೆ ತನ್ ತಾನೇ ಆಗಿ ಹೋಗುತ್ತದೆ. ಆದರೆ ಈಗ ಪುಟ್ಟ ಪೋರಿಯೊಬ್ಬಳು ಮದ್ವೆಯಾಗಲು ಏನೇನು ಬೇಕು ಎಂದು ಹೇಳಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ಇಷ್ಟು ಸಣ್ಣ ಪ್ರಾಯದಲ್ಲಿ ಮಗು ಎಷ್ಟೊಂದು ತಿಳ್ಕೊಂಡಿದೆ ಎಂಬುದನ್ನು ಯೋಚಿಸುವಂತೆ ಮಾಡಿದೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳು ತಮ್ಮ ಸುತ್ತಲಿನ ಪ್ರತಿಯೊಂದು ಆಗು ಹೋಗುಗಳನ್ನು ಸದಾ ಗಮನಿಸುತ್ತಿರುತ್ತಾರೆ. ಹಾಗೂ ಅದನ್ನು ಅನುಕರಣೆ ಮಾಡಲು ನೋಡುತ್ತಾರೆ. ಅದೇ ರೀತಿ ದೊಡ್ಡವರ ಮಾತುಗಳನ್ನು ಕೇಳಿಸಿಕೊಳ್ಳುವ ನೆರೆಹೊರೆಯವರನ್ನು ಗಮನಿಸುವ ಈ ಮಗು ಕೂಡ ಮದ್ವೆ (Marriage) ಬಗ್ಗೆ ದೊಡ್ಡದಾದ ಕಲ್ಪನೆಯನ್ನೇ ಹೊಂದಿದೆ. ಮದ್ವೆ ಆಗೋದು ಅಷ್ಟು ಈಸಿ ಅಲ್ಲ, ಆಮೇಲೆ ಸ್ಯಾಲರಿ (Salary) ತಗೋಬೇಕು, ಆಮೇಲೆ ಕುಕ್(ಅಡುಗೆ) ಮಾಡೋದು ಕಲ್ತ್ಕೋಬೇಕು, ಇಷ್ಟೆಲ್ಲಾ ಇದ್ರೆನೇ ನಾವು ಮದ್ವೆ ಆಗೋದು, ಸುಮ್ನೇ ಟೈಮ್‌ಪಾಸಿಗಲ್ಲ ಮದ್ವೆ ಆಗೋದು, ಅಷ್ಟ ಈಸಿ ಅಲ್ಲಮ್ಮ ಮದ್ವೆ ಆಗೋದು ಎಂದು ಪುಟಾಣಿ ಹೇಳ್ತಿದ್ರೆ ಜೊತೆಯಲ್ಲಿದ್ದವರು ಜೋರಾಗಿ ನಗ್ತಿರೋದು ವೀಡಿಯೋದಲ್ಲಿ ಕೇಳಿಸುತ್ತಿದೆ.
ಹೆಣ್ಣಿನ ಮದ್ವೆಗೆ ವಯಸ್ಸಲ್ಲ ಮನಸ್ಸು ಮುಖ್ಯ; ಪೆಪ್ಸಿ ಜಾಹೀರಾತಿನಲ್ಲಿ ಸಮಂತಾ
ಇನ್ಸ್ಟಾಗ್ರಾಮ್‌ನಲ್ಲಿ (Instagram) ಈ ವಿಡಿಯೋವನ್ನು ಮಗುವಿನ ಹೆಸರಲ್ಲೇ ಪೋಸ್ಟ್ ಮಾಡಲಾಗಿದೆ. ಮಗು ಮಾತಾಡ್ತಿದ್ರೆ ತಾಯಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬಾನ್ವಿ ಗೌಡ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಈ ಮಗುವಿನ ಮಾತನ್ನು ಒಪ್ಪಿ ಕಾಮೆಂಟ್ ಮಾಡಿದ್ದು, ನಿಜ ಪುಟ್ಟ, ನಾನಿದ್ದೀನಿ ವೇಸ್ಟ್ ಇದೇನು ಮಾಡದೇ ಮದ್ವೆ ಅದೇ ಈಗ ಒದ್ದಾಡ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಮಗು ಹೇಳಿದಂತೆ ಹೌದಮ್ಮ ಟೈಮ್ ಪಾಸ್‌ಗೆ ಮದ್ವೆ ಆಗ್ಬಾರ್ದು ಎಂದು ಹೇಳಿ ಮಗುವಿನ ಮಾತಿಗೆ ತಲೆ ತೂಗಿದ್ದಾರೆ.
ಮದ್ವೆ ಫಿಕ್ಸ್ ಆದ್ಮೇಲೆ ಅಪಘಾತ: ವಧುನ ಎತ್ತಿಕೊಂಡೆ ಸಪ್ತಪದಿ ತುಳಿದ ವರ
ಮತ್ತೊಬ್ಬರು ಈ ಮಗು ತಿಳ್ಕೊಂಡಿರೋಷ್ಟು ಪೋಷಕರು ಹಾಗೂ ಮದ್ವೆ ಆಗೋಕೆ ಹೊರಟಿರುವವರು ತಿಳ್ಕೊಂಡಿದ್ರೆ ಭಾರಿ ಚೆಂದ ಇರ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಅದೇನೆ ಇರಲಿ ಕಾಲ ಬದಲಾದಂತೆ ಮದುವೆಯ ಕಲ್ಪನೆಯೂ ಬದಲಾಗಿದೆ.. ಗಂಡು ಹೆಣ್ಣಿನ ಆಸೆ ಆಕಾಂಕ್ಷೆ ನೀರಿಕ್ಷೆಗಳು ಬದಲಾಗಿವೆ. ಹುಡುಗನಿಗೆ ಒಳ್ಳೆ ಜಾಬ್ ಇರ್ಬೇಕು, ನಾನ್ ಮಾತು ಕೇಳ್‌ಬೇಕು, ವೀಕೆಂಡ್‌ಲ್ಲಿ ಅವನೇ ಅಡುಗೆ ಮಾಡ್ಬೇಕು, ರಜೆ ಇದ್ದಾಗ ಹೊರಗೆ ಸುತ್ತಿಸ್ಬೇಕು, ಪಾತ್ರ ತೊಳಿಬೇಕು, ಬಟ್ಟೆ ಓಗಿಬೇಕು ಎಂದೆಲ್ಲಾ ಈಗಿನ ವಿದ್ಯಾವಂತ ಉದ್ಯೋಗದಲ್ಲಿರುವ ಹೆಣ್ಣು ಮಕ್ಕಳು ನಿರೀಕ್ಷಿಸಿದ್ರೆ (ಎಲ್ಲರೂ ಅಲ್ಲ ಒಬ್ಬೊಬ್ಬರ ಯೋಚನೆ ಒಂದೊಂದು ತರ) ಇತ್ತ ಗಂಡು ಮಕ್ಕಳು ಕೂಡ ತಾನು ಮದ್ವೆಯಾಗಿರುವ ಹುಡುಗಿ ಬಹಳ ಸುಂದರವಾಗಿರಬೇಕು, ವಿದ್ಯಾವಂತೆಯಾಗಿರಬೇಕು, ಚೆನ್ನಾಗಿ ಇಂಗ್ಲೀಷ್ ಮಾತಾಡ್ಬೇಕು, ಅಪ್ಪ ಅಮ್ಮನಿಗೆ ಹೊಂದಿಕೊಂಡು ಹೋಗಬೇಕು, ಪಬ್ ಬಾರ್‌ಗೆ ಹೋದ್ರು ಪರವಾಗಿಲ್ಲ, ಅಪ್ಪ ಅಮ್ಮ ಬಂದಾಗ ಮರ್ಯಾದಿಯಾಗಿ ಡ್ರೆಸ್ ಮಾಡ್ಬೇಕು, ಕೈ ತುಂಬಾ ಸಂಪಾದನೆ ಮಾಡಬೇಕು, ಅಡುಗೆ ಮಾಡ್ಬೇಕು ಎಂದೆಲ್ಲಾ ನಿರೀಕ್ಷೆ ಮಾಡುತ್ತಾರೆ. ಕಾಲಕ್ಕೆ ತಕ್ಕಂತೆ ಯುವಕ ಯುವತಿಯರ ನಿರೀಕ್ಷೆಗಳು ಬದಲಾಗಿದೆ. ಇದರಿಂದ ಮಕ್ಕಳಿಗೆ ಆರೆಂಜ್ಡ್ ಮ್ಯಾರೇಜ್ (Arranged Marriage) ಮಾಡಲು ಬಯಸಿ, ಮದ್ವೆ ಮಾಡಲು ವಧು ವರನನ್ನು ಹುಡುಕುತ್ತಿರುವ ಪೋಷಕರಿಗೆ ಮಾತ್ರ ಹುಡುಗಿ ಹುಡುಗ ಹುಡುಕುವುದೇ ದೊಡ್ಡ ತಲೆನೋವಾಗಿರುವುದಂತೂ ಸುಳ್ಳಲ್ಲ.