ಮನೆಯಲ್ಲಿರುವ ಅಜ್ಜ – ಅಜ್ಜಿಯ ಖುಷಿಗೆ ಹೀಗೆ ಮಾಡಿ

ಒಂದೆರಡು ದಿನ ಮನೆಯಲ್ಲಿದ್ರೆ ನಮಗೆ ಬೋರ್ ಆಗುತ್ತೆ. ಇನ್ನು ಸದಾ ಮನೆಯಲ್ಲಿರುವ ಅಜ್ಜ – ಅಜ್ಜಿಗೆ ಎಷ್ಟು ಬೇಸರವಾಗಲ್ಲ ಹೇಳಿ. ಅವರ ಬೇಸರ ದೂರ ಮಾಡಿ ಸದಾ ಅವರನ್ನು ಖುಷಿಯಾಗಿಡಲು ಏನು ಮಾಡ್ಬೇಕು ಗೊತ್ತಾ?
 

Fun Activities For Seniors to keep them happy

ವಯಸ್ಸು (Age) 60 ದಾಟುತ್ತಿದ್ದಂತೆ ಜನರು (People) ನಿವೃತ್ತಿಯ ಘೋಷಣೆ ಮಾಡ್ತಾರೆ. ಜವಾಬ್ದಾರಿಗಳನ್ನು ಮಕ್ಕಳಿ (Children) ಗೆ ವಹಿಸಿ ವಿಶ್ರಾಂತಿ (Relax) ಪಡೆಯಲು ಬಯಸ್ತಾರೆ. ಆದ್ರೆ ಇಷ್ಟು ವರ್ಷಗಳ ಕಾಲ ಬ್ಯುಸಿಯಿದ್ದವರಿಗೆ ಏಕಾಏಕಿ ಸಿಗುವ ವಿಶ್ರಾಂತಿ ಖುಷಿ ನೀಡುವ ಬದಲು ಉಸಿರುಗಟ್ಟಿಸಿದಂತಾಗುತ್ತದೆ. ಕೊರೊನಾ ನಂತ್ರ ಹಿರಿಯ ನಾಗರಿಕರು ಮತ್ತಷ್ಟು ಹಿಂಸೆ ಅನುಭವಿಸುತ್ತಿದ್ದಾರೆ. ಕೊರೊನಾ ಅಪಾಯದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಬಂಧಿಯಾಗುವುದು ಅನಿವಾರ್ಯವಾಗಿದೆ. ಇದ್ರ ಜೊತೆಗೆ ಬೇಸಿಗೆ ಬಿಸಿಲು ಮನೆಯಿಂದ ಹೊರ ಹೋಗಲು ಅವಕಾಶ ನೀಡ್ತಿಲ್ಲ. ಅಪರೂಪಕ್ಕಾದರೂ ಸ್ನೇಹಿತರನ್ನು ಭೇಟಿಯಾಗ್ತಿದ್ದ, ಹೊರಗೆ ಸುತ್ತಾಡುತ್ತಿದ್ದವರಿಗೆ ಮನೆ ವಾಸ ಕಿರಿಕಿರಿ ಎನ್ನಿಸುತ್ತಿರುತ್ತದೆ. ಸದಾ ಮನೆಯಲ್ಲಿರುವ ವೃದ್ಧರಿಗೆ ಸಮಯ ಕಳೆಯುವುದು ಕಷ್ಟವಾಗುತ್ತದೆ. ಬೇರೆಯವರಿಗೆ ನಾವು ಹೊಣೆಯಾಗಿದ್ದೇವೆ ಎಂಬ ಭಾವ ಅವರನ್ನು ಕಾಡುತ್ತದೆ.

ಟಿವಿ ನೋಡ್ತಾ ಮೊಮ್ಮಕ್ಕಳ ಜೊತೆ ಆಟವಾಡ್ತಾ ಸಮಯ ನೂಕಲು ಪ್ರಯತ್ನಿಸಿದ್ರೂ ಒಂಟಿತನ ಬಿಡುವುದಿಲ್ಲ. ಪತಿ-ಪತ್ನಿ ಇಬ್ಬರೂ ಒಟ್ಟಿಗಿದ್ದರೆ ಸ್ವಲ್ಪ ಸಮಯ ಹೋಗ್ಬಹುದು. ಆದ್ರೆ ಅದ್ರಲ್ಲಿ ಒಬ್ಬರು ಮಾತ್ರ ಬದುಕಿದ್ದರೆ ಬೇಸರ ಅವರನ್ನು ಮತ್ತಷ್ಟು ಕಾಡುತ್ತದೆ. ಮನೆಯಲ್ಲಿರುವ ಯುವಕರು ಸದಾ ಬ್ಯುಸಿಯಾಗಿರ್ತಾರೆ. ಅವರ ಕೆಲಸದ ಮಧ್ಯೆ ಹಿರಿಯರಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಆದ್ರೆ ಮನೆಯಲ್ಲಿರುವ ಹಿರಿಯ ವ್ಯಕ್ತಿಗಳನ್ನು ಖುಷಿಯಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳಿಗೆ ಸಮಯ ನೀಡುವಂತೆ ಹಿರಿಯರಿಗೂ ಕೆಲ ಸಮಯವನ್ನು ನಾವು ತೆಗೆದಿಡಬೇಕು. ಅವರು ವೃದ್ಧಾಪ್ಯವನ್ನು ನಗ್ತಾ ನಗ್ತಾ ಕಳೆಯುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. 

ಆಟಕ್ಕೆ ಪ್ರೋತ್ಸಾಹ : ಆಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಹಿರಿಯರನ್ನು ಯಾವುದಾದ್ರೂ ಆಟಕ್ಕೆ ಸೇರಿಸಿ. ಆಟ ಆಡುವಂತೆ ಅವರನ್ನು ಪ್ರೋತ್ಸಾಹಿಸಿ. ಮನೆಯಲ್ಲಿಯೇ ಅವರ ಜೊತೆ ನೀವು ಕೆಲ ಆಟಗಳನ್ನು ಆಡಬಹುದು. ನಿಮಗೆ ಸಾಧ್ಯವಿಲ್ಲವೆಂದಾದ್ರೆ ಅವರನ್ನು ಗಾಲ್ಫ್, ಕೇರಂ, ಬ್ಯಾಡ್ಮಿಂಟನ್, ಚೆಸ್‌ನಂತಹ ಆಟಗಳಿಗೆ ಸೇರಿಸಬಹುದು. ಅಲ್ಲಿ ಅವರಿಗೆ ಆಟದ ಜೊತೆ ಕೆಲ ಸ್ನೇಹಿತರು ಸಿಗ್ತಾರೆ. ಇದ್ರಿಂದ ಸಮಯ ಆರಾಮಾಗಿ ಕಳೆಯುತ್ತದೆ.

ಗರ್ಭಿಣಿ ಗರ್ಲ್‌ಫ್ರೆಂಡ್ ಆಸ್ಪತ್ರೆಯಲ್ಲಿ, ಬಾಯ್‌ಫ್ರೆಂಡ್ ಮತ್ತೊಬ್ಬಳ ತೆಕ್ಕೆಯಲ್ಲಿ..!

ಕಲೆಗೆ ಪ್ರೋತ್ಸಾಹಿಸಿ : ಕಲಿಕೆಗೆ ವಯಸ್ಸಿಲ್ಲ. ವೃದ್ಧಾಪ್ಯದಲ್ಲೂ ಸಾಧನೆ ಮಾಡಿದ ಅನೇಕರು ನಮ್ಮ ಮುಂದಿದ್ದಾರೆ. ಕೆಲಸದ ಕಾರಣಕ್ಕೆ ಯೌವನದಲ್ಲಿ ಆಸಕ್ತಿ ವಿಷ್ಯಗಳನ್ನು ಕಲಿಯಲಾಗಿರುವುದಿಲ್ಲ. ಅದ್ರ ಬಗ್ಗೆ ಅವರಿಗೆ ಈಗಲೂ ಆಸಕ್ತಿಯಿರುತ್ತದೆ. ಅವರಿಗೆ ಯಾವ ಕಲೆಯಲ್ಲಿ ಆಸಕ್ತಿಯಿದೆ ಎಂಬುದನ್ನು ನೀವು ಗುರುತಿಸಿ. ಈಗಾಗಲೇ ಯಾವುದಾದ್ರೂ ಕಲೆ ಕಲಿತಿದ್ದು, ಅದ್ರಲ್ಲಿ ಮುಂದುವರೆಯುವ ಬಯಕೆಯಿದ್ದರೆ ಆ ಗುಂಪಿನ ಪರಿಚಯ ಮಾಡಿ. ನೃತ್ಯ,ಸಂಗೀತ ಹೀಗೆ ಅವರಿಗೆ ಇಷ್ಟವಾಗುವ ಕೆಲಸ ಮಾಡಲು ಪ್ರೋತ್ಸಾಹಿಸಿ. ಪೇಂಟಿಂಗ್, ಡ್ರಾಯಿಂಗ್, ಪೇಪರ್ಕ್ರಾಫ್ಟ್, ಬೀಡಿಂಗ್, ಕಸೂತಿ ಹೀಗೆ ಅನೇಕ ತರಗತಿಗಳಿದ್ದು, ಅದಕ್ಕೆ ಅವರನ್ನು ಸೇರಿಸಬಹುದು. ಕೆಲವರಿಗೆ ಪುಸ್ತಕ ಓದುವು ಆಸಕ್ತಿಯಿರುತ್ತದೆ. ಅವರಿಗೆ ಇಷ್ಟವಾಗುವ ಪುಸ್ತಕ ತಂದುಕೊಡಿ. ಜೊತೆಗೆ ಲೈಬ್ರರಿಗೆ ಕಳುಹಿಸಿ.

ಓದು ಓದು ಅಂತಾ ಮಕ್ಕಳಿಗೆ ಒತ್ತಾಯ ಮಾಡೋ ಮುನ್ನ ಇದನ್ನೋದಿ

ಸಾಮಾಜಿಕ ಕೂಟ : ಇತ್ತೀಚಿನ ದಿನಗಳಲ್ಲಿ ವೃದ್ಧರಿಗಾಗಿಯೇ ಅನೇಕ ಸಾಮಾಜಿಕ ಕೂಟಗಳಿವೆ. ಪಾರ್ಕ್ ಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಂಥ ಕೂಟಗಳ ಪರಿಚಯವನ್ನು ನಿಮ್ಮ ಅಜ್ಜ- ಅಜ್ಜಿಗೆ ಮಾಡಿಕೊಡಿ. ಅಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ಲಾಫಿಂಗ್ ಕ್ಲಬ್, ಯೋಗ ಕ್ಲಾಸ್, ಪಾದಯಾತ್ರೆ ಸೇರಿದಂತೆ ಅನೇಕ ಅನೇಕ ಚಟುವಟಿಕೆಗಳಿರುತ್ತವೆ. ಅದ್ರಲ್ಲಿ ಪಾಲ್ಗೊಳ್ಳುವುದ್ರಿಂದ ಅವರಿಗೂ ಸಂತೋಷ ಸಿಗುತ್ತದೆ.  ಮೊಮ್ಮಕ್ಕಳ ಕೆಲ ಜವಾಬ್ದಾರಿಗಳನ್ನು ಅವರಿಗೆ ವಹಿಸುವುದು ಕೂಡಾ ಅವರ ಜೀವನಕ್ಕೆ ಅರ್ಥ ತರುತ್ತದೆ.

Latest Videos
Follow Us:
Download App:
  • android
  • ios